೧. ಭಾರತದ ಒಂದು ನದಿಯ ಹೆಸರಿನಿಂದ ನಮ್ಮ ಮಹಾಕಾಯ ದೇಶದ ಎಲ್ಲರನ್ನೂ ಗುರುತಿಸುವುದು ಅಜ್ಞಾನವಾಗಿದೆ
‘ಹಿಂದೂ’ ಈ ಶಬ್ದವು ಭೌಗೋಲಿಕವಾಗಿದೆ. ಅದು ಸಿಂಧು ಈ ಶಬ್ದದ ಅಪಭ್ರಷ್ಟ (ಅಯೋಗ್ಯ) ರೂಪವಾಗಿದೆ. ಹಿಂದಿನ ಕಾಲದಲ್ಲಿ ಗ್ರೀಕರು ವಾಯುವ್ಯ ದಿಕ್ಕಿನಿಂದ ಭಾರತದ ಮೇಲೆ ಆಕ್ರಮಣ ಮಾಡಿದರು. ಆಗ ಸಿಂಧು ತೀರದ ಜನರನ್ನು ಅವರು ‘ಸಿಂಧು’ ಮತ್ತು ‘ಹಿಂದೂ’ ಎಂದು ಹೇಳಲು ಪ್ರಾರಂಭಿಸಿದರು. ‘ಹಪ್ತ ಹಿಂದೂ’ (ಯಾನೆ ಸಪ್ತಸಿಂಧು) ಈ ಶಬ್ದವು ಝೇಂದ್ ಅವೇಸ್ತಾದಲ್ಲಿ (ಪರ್ಷಿಯಾ) ಮತ್ತು ಒಂದು ಪರ್ಷಿಯನ್ ಶಿಲಾಲೇಖನದ ಮೇಲೆ ಮೊಟ್ಟಮೊದಲು ಕಂಡುಬಂದಿತು. ‘ಸಿಂಧು ತೀರದಲ್ಲಿನ ಜನರನ್ನು ಹಿಂದೂ’, ಎಂದು ತಿಳಿಯಲು ಆರಂಭವಾಯಿತು; ಆದರೆ ಇದು ಆ ಪರಕೀಯರು ಉಪಯೋಗಿಸಿದ ಶಬ್ದಪ್ರಯೋಗವಾಗಿದೆ. ಇದು ನಮ್ಮ ಧರ್ಮದ ಅಥವಾ ಜಾತಿಯ ಹೆಸರಲ್ಲವೇ ಅಲ್ಲ !
ನಮ್ಮ ಧರ್ಮ ‘ಸನಾತನ ಧರ್ಮ’ವಾಗಿದೆ ಹಾಗೂ ಅದು ಈಶ್ವರನಿರ್ಮಿತವಾಗಿದೆ. ‘ಪದಾರ್ಥಗಳ ನಿಶ್ಚಿತ ಗುಣಧರ್ಮಗಳನ್ನು ವಿಶ್ವಕಲ್ಯಾಣಕ್ಕಾಗಿ ಉಪಯೋಗಿಸುವುದು, ಜೀವವು ಈಶ್ವರನೊಂದಿಗೆ ಏಕರೂಪವಾಗುವ ಅಂತಿಮ ಸಾಧ್ಯ’, ಇದೇ ಈ ಧರ್ಮದ ಅಡಿಪಾಯವಾಗಿದೆ.
ನಮ್ಮ ಭಾರತದ ಒಂದು ನದಿಯ ಹೆಸರಿನಿಂದ ನಮ್ಮ ಮಹಾಕಾಯ ದೇಶದ ಎಲ್ಲ ಜನರನ್ನು ಗುರುತಿಸುವುದು ಹಾಗೂ ಅವರೆಲ್ಲರನ್ನೂ ‘ಹಿಂದೂ’ ಎನ್ನುವುದು, ಇದು ಆ ಪರಕೀಯರ ಅಜ್ಞಾನವಾಗಿದ್ದು ಇಂದು ಕೂಡ ಅದೇ ಭೌಗೋಲಿಕ ಅರ್ಥದ ಪದವನ್ನು ನಮ್ಮ ಧರ್ಮದ ಹೆಸರೆಂದು ಸ್ವೀಕರಿಸುವುದು, ಇದು ನಮ್ಮ ಅಜ್ಞಾನವೇ ಆಗಿದೆ.
೨. ಈಶ್ವರ ನಿರ್ಮಿತ ಧರ್ಮದ ಹೆಸರುಗಳು
೨ ಅ. ಮಾನವ ಧರ್ಮ : ನಿಜವಾಗಿ ನೋಡಿದರೆ ನಮ್ಮ ಧರ್ಮಕ್ಕೆ ‘ಮಾನವ ಧರ್ಮ’ ಈ ಹೆಸರೇ ಶೋಭಿಸಬಹುದು; ಏಕೆಂದರೆ, ಎಲ್ಲ ಮಾನವರಿಗಾಗಿ ಈ ಧರ್ಮವಿದೆ ಹಾಗೂ ಅದು ಮನು ಪುರಸ್ಕೃತವೂ ಆಗಿದೆ.
೨ ಆ. ಸನಾತನ ಧರ್ಮ : ಇದು ನಿತ್ಯ, ನೂತನ, ಸದಾ ಹಸಿರಾಗಿರುವ (ಎವರಗ್ರೀನ್) ಹಾಗೂ ಶಾಶ್ವತ ಸಿದ್ಧಾಂತವನ್ನು ಹೇಳುವುದಾಗಿರುವುದರಿಂದ ‘ಸನಾತನ ಧರ್ಮ’ ಆಗಿದೆ.
೨ ಇ. ಈಶ್ವರೀ ಧರ್ಮ : ಇದು ಈಶ್ವರನೇ ನಿರ್ಮಿಸಿದ ಧರ್ಮ ಆಗಿರುವುದರಿಂದ ‘ಈಶ್ವರೀ ಧರ್ಮ’ವಾಗಿದೆ.
೨ ಈ. ಶಾಶ್ವತ ಧರ್ಮ : ಶಾಶ್ವತ ಆಗಿರುವುದರಿಂದ ಇದು ‘ಶಾಶ್ವತ ಧರ್ಮ’ವಾಗಿದೆ.
೨ ಉ. ವೈದಿಕ ಧರ್ಮ : ಇದು ವೇದ ಪ್ರತಿಪಾದಿತ ಆಗಿರುವುದರಿಂದ ‘ವೈದಿಕ ಧರ್ಮ’ವಾಗಿದೆ.
೨ ಊ. ಆರ್ಯ ಸನಾತನ ವೈದಿಕ ಧರ್ಮ : ಹಿಂದೂ ಎಂಬ ಹೆಸರಿನ ಧರ್ಮ ಈ ವಿಶ್ವದಲ್ಲಿಲ್ಲ, ಆದರೂ ಕೆಲವರಿಗೆ ‘ಹಿಂದೂ’ ಈ ಶಬ್ದದ ಬಗ್ಗೆ ಪ್ರೇಮ ಇರಬಹುದು, ‘ಆದ್ದರಿಂದ ಹಿಂದೂ ಧರ್ಮವೆಂದು ಹೇಳಲ್ಪಡುವ ಆ ಧರ್ಮ ‘ಆರ್ಯ ಸನಾತನ ವೈದಿಕ ಧರ್ಮವೇ’ ಆಗಿದೆ. ಬೇರೆ ಏನೂ ಇಲ್ಲ; ಏಕೆಂದರೆ ಸಂಪೂರ್ಣ ಜಗತ್ತು ‘ಹಿಂದೂ’ ಎಂದು ಯಾವ ಮನುಷ್ಯನಿಗೆ ಸಂಬೋಧಿಸುತ್ತದೆಯೋ, ಅವನನ್ನು ವೇದಾನುಯಾಯಿ, ವರ್ಣಾಶ್ರಧರ್ಮಿ, ಗೋಪೂಜಕ, ಪುನರ್ಜನ್ಮವಾದಿ, ಮೂರ್ತಿ ಪೂಜಕ ಇತ್ಯಾದಿ ವೈದಿಕ ಲಕ್ಷಣಯುಕ್ತವೆಂದೆ ತಿಳಿಯುತ್ತದೆ.
೩. ವೈದಿಕ ಧರ್ಮವು ವೇದಗಳಲ್ಲಿ ನಮೂದಿಸಿದ ಸಿದ್ಧಾಂತಗಳಿಗನುಸಾರ ನಡೆಯುತ್ತದೆ !
ಸಂಪೂರ್ಣ ಜಗತ್ತು ವೈದಿಕವೇ ಆಗಿದೆ. ‘ನಾವು ವೇದಗಳಲ್ಲಿನ ಸಿದ್ಧಾಂತಗಳನ್ನು ಸ್ವೀಕರಿಸುತ್ತೇವೆ’, ಇದು ತಿಳಿದಿಲ್ಲದಿದ್ದರೂ, ಜಗತ್ತಿನಲ್ಲಿನ ಎಲ್ಲರೂ ತಿಳಿದೋ ತಿಳಿಯದೆಯೊ, ವೈದಿಕ ಸಿದ್ಧಾಂತಗಳಿಗನುಸಾರವೆ ನಡೆಯುತ್ತಿದ್ದಾರೆ. ತಂದೆಯ ಧನ ಪುತ್ರನಿಗೆ ಸಿಗಬೇಕು, ಕುಟುಂಬ ಪ್ರಮುಖನು ಕುಟುಂಬದ ಹಿತ ಸಾಧಿಸಬೇಕು, ಅಜ್ಞಾನಿ ಬಾಲಕರನ್ನು ಹಾಗೂ ಅವರ ವೃದ್ಧ ತಾಯಿ-ತಂದೆಯರನ್ನು ಅವರ ಮಕ್ಕಳು ಜೋಪಾನ ಮಾಡಬೇಕು, ಇದು ಹಾಗೂ ಇಂತಹ ಎಲ್ಲ ಭೌತಿಕ ಜೀವನದಲ್ಲಿನ ವ್ಯವಹಾರವನ್ನು ಈ ವೈದಿಕ ಧರ್ಮ ಜಗತ್ತಿಗೆ ನೀಡಿದೆ. ಈಶ್ವರನ ವಿಷಯದ ಕಲ್ಪನೆ, ಭಕ್ತಿಯಿಂದ ಅವನಿಗೆ ಶರಣಾಗುವುದು, ಅವನ ಕೃಪೆಗಾಗಿ ಚಡಪಡಿಸುವುದು, ಪಾಪ-ಪುಣ್ಯ ಹಾಗೂ ಜೀವ-ಆತ್ಮಾ ಇತ್ಯಾದಿ ಎಲ್ಲ ಆಧ್ಯಾತ್ಮಿಕ ವಿಚಾರಗಳೂ ಇದೇ ಧರ್ಮದಿಂದ ಸಂಪೂರ್ಣ ಜಗತ್ತಿಗೆ ಲಭಿಸಿದೆ. ಜ್ಯೋತಿಷ್ಯಶಾಸ್ತ್ರ, ಗ್ರಹಗತಿ-ಶಾಸ್ತ್ರ, ಕಾಲಗಣನಾಶಾಸ್ತ್ರ, ವಿವಾಹ, ಇಷ್ಟು ಮಾತ್ರವಲ್ಲ, ಎಲ್ಲ ಮಾನವ ಜೀವನಕ್ಕೆ ಸಂಬಂಧಿಸಿದ ನಿಯಮ, ಶಾಸ್ತ್ರ, ಕಾನೂನು, ಸದಾಚಾರ, ಧರ್ಮ, ನೀತಿ ಇತ್ಯಾದಿಗಳ ಉಗಮಸ್ಥಾನ ವೇದಗಳೇ ಆಗಿವೆ; ಆದ್ದರಿಂದ ಸಂಪೂರ್ಣ ಜಗತ್ತು ವೈದಿಕವೆ ಆಗಿದೆ. ಮಾನವ ಜೀವನದ ಕಲ್ಯಾಣದ ರಾಜಮಾರ್ಗ ವೇದಗಳಲ್ಲಿದೆ. ಅವುಗಳ ಸುತ್ತಮುತ್ತಲಿರುವ ಕಾಲುದಾರಿಯಲ್ಲಿ ನಡೆಯುವವರು ಮುಕ್ಕರಿಸಿ ಬೀಳುತ್ತಿರುವರು; ಆದರೆ ಯೋಗ್ಯ ರಸ್ತೆಯಲ್ಲಿ ನಡೆಯುವವರ ಜೀವನ ಮಾತ್ರ ಸುಗಮವಾಗುವುದು.’
– ಭಾರತಾಚಾರ್ಯ ಸು. ಗ. ಶೇವಡೆಯವರ ಪ್ರವಚನ
ಗ್ರಂಥಗಳ ಮೇಲಿನ ನಿಷ್ಠೆ ಎಷ್ಟು ಯೋಗ್ಯವಾಗಿದೆ ? : ‘ಸಂಪೂರ್ಣ ಜಗತ್ತು ಗ್ರಂಥನಿಷ್ಠವೇ ಆಗಿರುತ್ತದೆ. ಮುಸಲ್ಮಾನರಿಗೆ ‘ಕುರಾನ್’ದ ಮೇಲೆ, ಕ್ರೈಸ್ತರಿಗೆ ‘ಬೈಬಲ್’ನ ಮೇಲೆ ಹಾಗೂ ಬೌದ್ಧರಿಗೆ ಧಮ್ಮಪದ’ದ ಮೇಲೆ ಶ್ರದ್ಧೆ ಇದೆ. ಜಗತ್ತಿನಲ್ಲಿ ಧರ್ಮ-ಗ್ರಂಥವಿಲ್ಲದ ಯಾವ ಧರ್ಮವಿದೆ ?
ಯಾವುದರ ಮೇಲೆ ನಮ್ಮ ನಿಷ್ಠೆ ಇದೆಯೊ, ಅದನ್ನು ಆಚರಿಸಿ ಕಲ್ಯಾಣವನ್ನು ಸಾಧಿಸಬೇಕು, ಅಂತಹ ಧರ್ಮಗ್ರಂಥ, ವೇದ, ಉಪನಿಷತ್ತುಗಳು ಹಾಗೂ ಭಗವದ್ಗೀತೆಯಂತಹ ಗ್ರಂಥಗಳು ನಮಗೆ ಲಭಿಸಿವೆ, ಇದು ನಮ್ಮ ಭಾಗ್ಯವೇ ಆಗಿದೆ ! ಯಾವ ಗ್ರಂಥಗಳಲ್ಲಿನ ಸಿದ್ದಾಂತಗಳಿಗೆ ವೈಜ್ಞಾನಿಕ ಪ್ರಗತಿಯಿಂದ ಅಡ್ಡಿ ಇಲ್ಲವೊ, ಯಾವುದರ ವಿಚಾರ ಪರಿಪಕ್ವ ಹಾಗೂ ಹಿತಕಾರಿಯಾಗಿದೆಯೊ, ಯಾವುದರ ಆಚರಣೆಯಿಂದ ಇಂದಿನವರೆಗೆ ಎಲ್ಲರಿಗೂ ಹಿತವಾಗಿದೆಯೋ, ಸಾವಿರಾರು ವರ್ಷಗಳಿಂದ ಒಂದು ಶ್ರೇಷ್ಠ ಸಂಸ್ಕೃತಿಯನ್ನು ಜೋಪಾನ ಮಾಡಿದೆಯೋ, ಅದರಿಂದ ದೂರವಾದರೆ ಸಾಂಸ್ಕೃತಿಕ ಅವನತಿ ಆರಂಭವಾಗುತ್ತದೆ, ಇಂತಹ (ವೇದಗಳಂತಹ) ಶ್ರೇಷ್ಠ ಗ್ರಂಥಗಳು ಪ್ರತಿ ಪಾದಿಸಿದ ವಿಚಾರಗಳು ‘ಕೇವಲ ಗ್ರಂಥನಿಷ್ಠೆಯ ಆರೋಪವಾಗಬಹುದೆಂಬ ಭಯದಿಂದ ತ್ಯಾಜ್ಯವಾಗಬಹುದೇ ?’
– ಶೇವಡೆಯವರ ಅಮೇರಿಕಾದ ಪ್ರವಚನಗಳು (ಹ್ಯೂಸ್ಟನ್ (ಟೆಕ್ಸಾಸ್) ೧.೯.೧೯೮೦)