‘ಪರಾತ್ಪರ ಗುರು ಡಾಕ್ಟರ ಆಠವಲೆಯವರು ಉಚ್ಛ್ವಾಸದ ಮೂಲಕ ಮೂಗು ಮತ್ತು ಬಾಯಿಯಿಂದ ಹೊರಗೆ ಬಿಡುವ ಗಾಳಿಯು ಅವರ ಮುಂದೆ ೧-೨ ಸೆಂ.ಮೀ. ಅಂತರದಲ್ಲಿ ಬೆರಳು ಅಥವಾ ಅಂಗೈಯನ್ನು ಹಿಡಿದರೆ ಬಿಸಿ ಇರುವುದು ಅರಿವಾಗುತ್ತದೆ. ಹಾಗೆಯೇ ಮೂಗಿನ ಮೂಲಕ ದೀರ್ಘ ಶ್ವಾಸವನ್ನು ಬಿಟ್ಟರೆ ಮೂಗಿನ ಕೆಳಗಿನ ತ್ವಚೆಗೆ ಅನಪೇಕ್ಷಿತ ಬಿಸಿಯ ಅರಿವಾಗುತ್ತದೆ. ಇವುಗಳ ಹಿಂದಿನ ಕಾರಣಗಳನ್ನು ಇಲ್ಲಿ ಕೊಡಲಾಗಿದೆ.
೧. ಪರಾತ್ಪರ ಗುರು ಡಾಕ್ಟರ ಆಠವಲೆಯವರ ಮೂಗು ಮತ್ತು ಬಾಯಿಯಿಂದ ಉಚ್ಛ್ವಾಸದ ಮೂಲಕ ಹೊರ ಬೀಳುವ ಗಾಳಿಯು ಬಿಸಿಯಾಗಿರುವುದರ ಹಿಂದಿನ ಕಾರಣ
೧ ಅ. ದೇಹದಲ್ಲಿ ನಡೆಯುತ್ತಿರುವ ಸೂಕ್ಷ್ಮ ಯುದ್ಧದಿಂದ ದೇಹದ ತಾಪಮಾನ ಹೆಚ್ಚಾಗುವುದು ಮತ್ತು ಉಚ್ಛ್ವಾಸದ ಮೂಲಕ ವಾತಾವರಣದಲ್ಲಿ ಬಿಸಿಗಾಳಿ ಪ್ರಕ್ಷೇಪಿಸುವುದು : ‘ಪರಾತ್ಪರ ಗುರು ಡಾಕ್ಟರ ಆಠವಲೆಯವರು ವಾತಾವರಣವನ್ನು ಶುದ್ಧಗೊಳಿಸಲು ವಾತಾವರಣದಲ್ಲಿನ ತೊಂದರೆದಾಯಕ ಶಕ್ತಿಯನ್ನು ಶ್ವಾಸದ ಮೂಲಕ ತಮ್ಮ ದೇಹದಲ್ಲಿ ಎಳೆದುಕೊಳ್ಳುತ್ತಾರೆ. ಶ್ವಾಸದ ಮೂಲಕ ಅವರ ದೇಹದಲ್ಲಿ ಪ್ರವೇಶಿಸಿರುವ ತೊಂದರೆದಾಯಕ ಶಕ್ತಿಯು ಅವರ ದೇಹದಲ್ಲಿನ ಚೈತನ್ಯದಿಂದ ನಾಶವಾಗುತ್ತವೆ. ಪರಾತ್ಪರ ಗುರು ಡಾಕ್ಟರ ಆಠವಲೆಯವರು ತಮ್ಮ ದೇಹದಲ್ಲಿನ ಸಾತ್ತ್ವಿಕತೆ, ದೈವೀ ಶಕ್ತಿ ಮತ್ತು ಚೈತನ್ಯವನ್ನು ಉಚ್ಛ್ವಾಸದಿಂದ ವಾತಾವರಣದಲ್ಲಿ ಪ್ರಕ್ಷೇಪಿಸುತ್ತಾರೆ. ಈ ಪ್ರಕ್ರಿಯೆ ನಡೆಯುತ್ತಿರುವಾಗ ಅವರ ದೇಹದಲ್ಲಿ ಆಕರ್ಷಿಸಿದ ತೊಂದರೆದಾಯಕ ಶಕ್ತಿ ಮತ್ತು ಕಾರ್ಯನಿರತ ಚೈತನ್ಯ ಇವುಗಳಲ್ಲಿ ಸೂಕ್ಷ್ಮ ಯುದ್ಧವಾಗುತ್ತದೆ. ಇದರಿಂದ ಅವರ ದೇಹದ ತಾಪಮಾನ (ಉಷ್ಣತೆ) ಹೆಚ್ಚಾಗುತ್ತದೆ ಮತ್ತು ಅವರ ಉಚ್ಛ್ವಾಸದ ಮೂಲಕ ವಾತಾವರಣದಲ್ಲಿ ಬಿಸಿಗಾಳಿಯು ಪ್ರಕ್ಷೇಪಿಸುತ್ತದೆ.
೧ ಆ. ಸೂರ್ಯನಾಡಿಯು ಹೆಚ್ಚು ಸಮಯ ನಡೆಯುತ್ತಿರುವುದು ಮತ್ತು ಸೂರ್ಯನಂತೆ ತುಂಬಾ ದೈವೀ ಊರ್ಜೆ ಪ್ರಕಟವಾಗಿ ಕಾರ್ಯನಿರತವಾಗಿ ಉಸಿರಾಟದ ಮೂಲಕ ಬಿಸಿಗಾಳಿಯು ಪ್ರಕ್ಷೇಪಿಸುವುದು : ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮದಲ್ಲಿ ಯುದ್ಧವನ್ನು ಮಾಡುವಾಗ ಪರಾತ್ಪರ ಗುರು ಡಾಕ್ಟರ ಆಠವಲೆಯವರ ಸೂರ್ಯನಾಡಿ ಹೆಚ್ಚು ಸಮಯ ನಡೆಯುತ್ತಿರುತ್ತದೆ. ಇದರಿಂದ ಅವರ ದೇಹದಲ್ಲಿ ಸೂರ್ಯನಂತೆ ತುಂಬಾ ದೈವೀ ಊರ್ಜೆ ಪ್ರಕಟವಾಗಿ ಕಾರ್ಯನಿರತವಾಗುತ್ತದೆ ಮತ್ತು ಅದು ಅವರ ಪಂಚಜ್ಞಾನೇಂದ್ರಿಯಗಳಿಂದ ವಾತಾವರಣದಲ್ಲಿ ಪ್ರಕ್ಷೇಪಿಸುತ್ತದೆ. ಪ್ರಕಟ ಶಕ್ತಿ ಉಷ್ಣ ಸ್ವರೂಪದಲ್ಲಿರುವುದರಿಂದ ಅವರ ಮೂಗು ಮತ್ತು ಬಾಯಿಯಿಂದ ಉಚ್ಛ್ವಾಸದ ಮೂಲಕ ಹೊರಗೆ ಬರುವ ಗಾಳಿಯು ಬಿಸಿಯಾಗಿರುವುದು ಅರಿವಾಗುತ್ತದೆ. ಕಿವಿಯ ಹತ್ತಿರ ಕೈಯನ್ನು ಹಿಡಿದರೂ, ಕೈಗೆ ಉಷ್ಣತೆಯ ಅರಿವಾಗುತ್ತದೆ.
೧ ಇ. ಶ್ರೀವಿಷ್ಣುವಿನ ಮಾರಕ ಶಕ್ತಿ ಅವರ ದೃಷ್ಟಿ ಮತ್ತು ಉಚ್ಛ್ವಾಸದ ಮೂಲಕ ವಾತಾವರಣದಲ್ಲಿ ಪ್ರಕ್ಷೇಪಿಸಿದ್ದರಿಂದ ಅವರ ಮೂಗು ಮತ್ತು ಬಾಯಿಯಿಂದ ಉಚ್ಛ್ವಾಸದ ಮೂಲಕ ಹೊರಗೆ ಬಿಟ್ಟಿರುವ ಗಾಳಿಯು ಬಿಸಿಯಾಗಿರುವುದು ಅರಿವಾಗುವುದು : ಪಾತಾಳದಲ್ಲಿನ ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳೊಂದಿಗೆ ಪರಾತ್ಪರ ಗುರು ಡಾಕ್ಟರ ಆಠವಲೆಯವರ ಭಯಂಕರ ಸೂಕ್ಷ್ಮ ಯುದ್ಧ ನಡೆಯುತ್ತಿದೆ. ಈ ಯುದ್ಧವನ್ನು ಮಾಡುವಾಗ ಅವರು ದೇಹದಿಂದ ಪಂಚತತ್ತ್ವಗಳಿಂದ ಸಗುಣ ಸ್ತರದಲ್ಲಿ ಮತ್ತು ಅವರ ಸೂಕ್ಷ್ಮ ಅಸ್ತಿತ್ವದ ಮಾಧ್ಯಮದಿಂದ ನಿರ್ಗುಣ ಸ್ತರದಲ್ಲಿ ಕೆಟ್ಟ ಶಕ್ತಿಗಳೊಂದಿಗೆ ಹೋರಾಡುತ್ತಾರೆ. ಈ ಯುದ್ಧದಿಂದ ಅವರ ದೇಹದಲ್ಲಿನ ಶ್ರೀವಿಷ್ಣುವಿನ ಮಾರಕ ಶಕ್ತಿ ಅವರ ದೃಷ್ಟಿ ಮತ್ತು ಉಚ್ಛ್ವಾಸದ ಮೂಲಕ ವಾತಾವರಣದಲ್ಲಿ ಪ್ರಕ್ಷೇಪಿಸುತ್ತದೆ. ಶ್ರೀವಿಷ್ಣುವಿನ ಮಾರಕ ಶಕ್ತಿಯು ಉಷ್ಣ ಸ್ವರೂಪದ್ದಾಗಿರುವುದರಿಂದ ಅವರ ಮೂಗು ಮತ್ತು ಬಾಯಿಯಿಂದ ಉಚ್ಛ್ವಾಸದ ಮೂಲಕ ಹೊರಬೀಳುವ ಗಾಳಿಯು ಬಿಸಿಯಾಗಿರುವುದು ಅರಿವಾಗುತ್ತದೆ.
೨. ಉಚ್ಛ್ವಾಸದ ಮೂಲಕ ಬಿಸಿಗಾಳಿ ಹೊರಗೆ ಹೋಗುವುದರ ಹಿಂದಿನ ಮೂರು ಕಾರಣಗಳು
ಸೂಕ್ಷ್ಮ ಯುದ್ಧ ನಡೆಯುವುದು, ಸೂರ್ಯನಾಡಿ ಕಾರ್ಯನಿರತವಾಗುವುದು ಮತ್ತು ಶ್ರೀವಿಷ್ಣುವಿನ ಮಾರಕ ಶಕ್ತಿ ಪ್ರಕ್ಷೇಪಿಸುವುದು, ಇವು ಉಚ್ಛ್ವಾಸದ ಮೂಲಕ ಬಿಸಿ ಗಾಳಿ ಅರಿವಾಗುವುದರ ಹಿಂದಿನ ಮೂರು ಮುಖ್ಯ ಕಾರಣಗಳಿವೆ. ಈ ಮೂರು ಕಾರಣಗಳಲ್ಲಿನ ವ್ಯತ್ಯಾಸವನ್ನು ಇಲ್ಲಿ ಕೊಡಲಾಗಿದೆ.
೨ ಅ. ಸೂಕ್ಷ್ಮ ಯುದ್ಧ ನಡೆಯುತ್ತಿರುವುದು, ಸೂರ್ಯನಾಡಿ ಕಾರ್ಯನಿರತವಾಗಿರುವುದು ಮತ್ತು ಶ್ರೀವಿಷ್ಣುವಿನ ಮಾರಕ ಶಕ್ತಿ ಪ್ರಕ್ಷೇಪಿಸುವುದು
೩. ಪರಾತ್ಪರ ಗುರು ಡಾಕ್ಟರ ಆಠವಲೆಯವರಿಗೆ ಮೂಗಿನಿಂದ ದೀರ್ಘ ಉಚ್ಛ್ವಾಸವನ್ನು ಬಿಟ್ಟರೆ ಮೂಗಿನ ಕೆಳಗಿನ ತ್ವಚೆಗೆ ಅನಪೇಕ್ಷಿತ ಬಿಸಿ ಅರಿವಾಗುವುದರ ಹಿಂದಿನ ಕಾರಣ
ಪರಾತ್ಪರ ಗುರು ಡಾಕ್ಟರ ಆಠವಲೆಯವರ ಉಚ್ಛ್ವಾಸದಿಂದ ಪ್ರಕ್ಷೇಪಿಸುವ ಮಾರಕ ಶಕ್ತಿಯು ಬಹಳಷ್ಟು ಇರುವುದರಿಂದ ಅದು ತ್ವಚೆಗೆ ಸಹನೆಯಾಗುವುದಿಲ್ಲ. ಆದುದರಿಂದ ಮೂಗಿನಿಂದ ದೀರ್ಘ ಉಚ್ಛ್ವಾಸವನ್ನು ಬಿಟ್ಟರೆ ಮೂಗಿನ ಕೆಳಗಿನ ತ್ವಚೆಗೆ ಅನಪೇಕ್ಷಿತ ಬಿಸಿಯ ಅರಿವಾಗುತ್ತದೆ.
೪. ಉಚ್ಛ್ವಾಸದಿಂದ ಬಿಸಿ ಗಾಳಿ ಹೋಗುವ ಪ್ರಮಾಣವನ್ನು ಕಡಿಮೆ ಮಾಡಲು ಮಾಡಬೇಕಾದ ಉಪಾಯಗಳು
ಅ. ಎಡ ಮೂಗಿನ ಹೊಳ್ಳೆಯಿಂದ ಉಸಿರನ್ನು ಬಿಟ್ಟರೆ ಚಂದ್ರನಾಡಿಯು ಕಾರ್ಯನಿರತವಾಗಿ ದೇಹದಲ್ಲಿ ಶೀತಲತೆ ಹರಡುತ್ತದೆ ಮತ್ತು ಉಚ್ಛ್ವಾಸದ ಮೂಲಕ ತಂಪು ಗಾಳಿಯು ಪ್ರಕ್ಷೇಪಿಸುತ್ತದೆ
ಆ. ಸೂಕ್ಷ್ಮ ಯುದ್ಧದ ತೀವ್ರತೆ ಕಡಿಮೆಯಾದ ನಂತರ ಮಾರಕ ಶಕ್ತಿ, ಪ್ರಕಟ ಶಕ್ತಿ ಮತ್ತು ಸೂಕ್ಷ್ಮ ಯುದ್ಧ ಇವುಗಳ ಪ್ರಮಾಣ ಕಡಿಮೆಯಾಗಿ ದೇಹದಲ್ಲಿ ತಾನಾಗಿಯೇ ತಾರಕ ಶಕ್ತಿಯು ಕಾರ್ಯನಿರತವಾಗಿ ದೇಹದಿಂದ ತಂಪು ಲಹರಿಗಳ ಪ್ರಕ್ಷೇಪಣೆ ಆಗುವುದು.
– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೧೦.೨೦೧೯)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. * ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |