ಯಾವಾಗಲೂ ಭಾರತದ ವಿರುದ್ಧ ವಿಷಕಾರುವ ಖಲಿಸ್ತಾನಿಗಳು ಪಾಕಿಸ್ತಾನದಲ್ಲಿನ ಈ ಕೃತ್ಯದ ವಿರುದ್ಧ ಚಕಾರವನ್ನೂ ಎತ್ತಿ ವಿರೋಧ ವ್ಯಕ್ತಪಡಿಸುವುದಿಲ್ಲ, ಇದನ್ನು ತಿಳಿದುಕೊಳ್ಳಿ ! ಇದರಿಂದ ‘ಖಲಿಸ್ತಾನಿಗಳಿಗೆ ಜಿಹಾದಿ ಪಾಕಿಸ್ತಾನದಿಂದಾಗುವ ಸಿಕ್ಖ್ ಪಂಥದ ದ್ವೇಷವು ಒಪ್ಪಿಗೆಯಿದೆ’, ಹೀಗೆ ಅನ್ನಬಹುದೇ ?- ಸಂಪಾದಕರು
ನವದೆಹಲಿ – ಪಾಕಿಸ್ತಾನದ ಪಂಜಾಬ ಪ್ರಾಂತದಲ್ಲಿರುವ `ಕರ್ತಾರಪೂರ ಗುರುದ್ವಾರ ದರಬಾರ ಸಾಹಿಬ್’ನ ಪ್ರಸಾದ ನೀಡಲು ಸಿಗರೇಟಿನ ಮೇಲಿನ ಕಾಗದವನ್ನು ಬಳಸಿದ ಖೇದಕರ ಘಟನೆಯು ಬೆಳಕಿಗೆ ಬಂದಿದೆ. ಓರ್ವ ಭಕ್ತನು ಪ್ರಸಾದದ ಮೇಲುಹೊದಿಕೆ ತೆಗೆದನಂತರ ಅದರ ಒಳಭಾಗದಲ್ಲಿ ‘ಗೋಲ್ಡ್ ಸ್ಟ್ರೀಟ್ ಇಂಟನ್ರ್ಯಾಷನಲ್’ ಹೆಸರಿನ ಸಿಗರೇಟ್ ಕಂಪನಿ ಜಾಹೀರಾತು ಮುದ್ರಿಸಿರುವುದು ಗಮನಕ್ಕೆ ಬಂದಿದೆ. ಸಿಕ್ಖ್ ಪಂಥದ ಪ್ರಕಾರ ಸಿಗರೇಟ್, ತಂಬಾಕು ಈ ರೀತಿಯ ಪದಾರ್ಥಗಳು ನಿಷಿದ್ಧ ಎಂದು ಹೇಳಲಾಗಿದೆ. ಆದ್ದರಿಂದ ಈ ಘಟನೆಯ ಬಗ್ಗೆ ಸಿಕ್ಖ್ ಸಮುದಾಯದಿಂದ ದೊಡ್ಡ ಪ್ರಮಾಣದಲ್ಲಿ ವಿರೋಧವಾಗುತ್ತಿದೆ.
Cigarette packaging used for distributing prasad at Kartarpur & Nankana Sahib in Pakistan https://t.co/9vqdy4sTHK
— Republic (@republic) December 17, 2021
ಇದರ ವಿರುದ್ಧ ‘ದೆಹಲಿ ಸಿಕ್ಖ್ ಗುರುದ್ವಾರ ಪ್ರಬಂಧಕ ಸಮಿತಿ’ನ ಅಧ್ಯಕ್ಷ ಮತ್ತು ಭಾಜಪದ ನಾಯಕ ಮಜಿಂದರ್ ಸಿಂಹ ಸಿರಸಾ ಇವರು ಟ್ವೀಟ್ ಮಾಡಿ ಈ ಕೃತ್ಯವನ್ನೂ ಖಂಡಿಸಿದ್ದಾರೆ. ಅವರು, “ಪಾಕಿಸ್ತಾನದಲ್ಲಿ ಸಿಕ್ಖ್‍ರ ಧಾರ್ಮಿಕ ಭಾವನೆಯನ್ನು ಆಗಾಗ ನೋಯಿಸಲಾಗುತ್ತಿದೆ. ಈ ಮೂಲಕ ಸಿಕ್ಖ್‍ರ ವಿರೋಧದ ಅಭಿಯಾನ ನಡೆಸುವ ಷಡ್ಯಂತ್ರದ ಅನುಮಾನ ಬರುತ್ತಿದೆ.” ಎಂದು ಹೇಳಿದರು.
ಕಳೆದ ತಿಂಗಳಿನಲ್ಲಿ `ಕರ್ತಾರಪೂರ ಗುರುದ್ವಾರ ದರ್ಬಾರ ಸಾಹಿಬ’ ಪರಿಸರದಲ್ಲಿ ತಲೆಯ ಮೇಲೆ ಯಾವುದೇ ಬಟ್ಟೆ ಇರದೆ ಒಬ್ಬ `ಮಾಡೆಲ್’ (ಕಲಾವಿಧ) ಅನೇಕ ಛಾಯಾಚಿತ್ರಗಳು ‘ಮನ್ನತ್’ ಎಂಬ ಬಟ್ಟೆ ವ್ಯಾಪಾರ ಮಾಡುವ `ಆನ್‍ಲೈನ್ ಪಾಕಿಸ್ತಾನಿ ಕಂಪನಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಸಿಕ್ಖ್ ಧರ್ಮದ ಪ್ರಕಾರ ಗುರುದ್ವಾರದಲ್ಲಿ ತಲೆಯ ಮೇಲೆ ಬಟ್ಟೆ ಹಾಕಿಕೊಂಡೇ ದರ್ಶನ ಪಡೆಯುವ ಪರಂಪರೆಯಿದೆ.