ದೇವಸ್ಥಾನಗಳ ಮೇಲಿನ ‘ಜಿಝಿಯಾ ತೆರಿಗೆ !

ಸಂಪಾದಕೀಯ

ಯಾವ ಸ್ಥಳದಲ್ಲಿ ಭಕ್ತರು ಕೈಗಳನ್ನು ಜೋಡಿಸಿ ನತಮಸ್ತಕಾಗುತ್ತಾರೋ, ಆ ದೇವಸ್ಥಾನಗಳಿಂದ ಬಿಹಾರ ಸರಕಾರವು ಈಗ ಶೇ. ೪ ರಷ್ಟು ‘ತೆರಿಗೆಯನ್ನು ವಸೂಲು ಮಾಡಲಿದೆ, ಇದು ದೇಶದಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ. ಹಿಂದೂಗಳ ಇತಿಹಾಸದಲ್ಲಿ ಇಂದಿನವರೆಗೆ ಈ ರೀತಿ ಯಾವಾಗಲೂ ಆಗಿರಲಿಲ್ಲ. ಮೊಗಲರ, ಆಂಗ್ಲರ ಕಾಲದಲ್ಲಿಯೂ ಘಟಿಸದ್ದು, ಬಿಹಾರನ ಸಂಯುಕ್ತ ಜನತಾ ದಳ ಮತ್ತು ಭಾಜಪದ ಸಮ್ಮಿಶ್ರ ಆಡಳಿತದಲ್ಲಿ ಘಟಿಸುತ್ತಿದೆ, ಎಂಬುದು ಲಜ್ಜಾಸ್ಪದ, ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಈ ಮೊದಲೇ ದೇಶದಲ್ಲಿನ ೪ ಲಕ್ಷಗಳಿಗಿಂತ ಹೆಚ್ಚು ದೇವಸ್ಥಾನಗಳನ್ನು ಸರಕಾರಿಕರಣ ಮಾಡಿ ಅದರ ಸಂಪತ್ತನ್ನು ಇತರ ಕಾರ್ಯಗಳಿಗಾಗಿ ಖರ್ಚು ಮಾಡುತ್ತಿರುವುದು, ಹಿಂದೂಗಳ ದೇವಸ್ಥಾನಗಳ ಮೇಲೆ ಇದು ಇನ್ನೊಂದು ದಾಳಿಯಾಗಿದೆ. ಹಿಂದುತ್ವನಿಷ್ಠ ಸಂಘಟನೆಗಳು ಇದರ ವಿರುದ್ಧ ಆಂದೋಲನವನ್ನು ಮಾಡುತ್ತಿವೆ; ಆದರೆ ಅವುಗಳಿಗೆ ಎಷ್ಟು ಯಶಸ್ಸು ಸಿಗುವುದು ? ಎಂದು ಹೇಳಲು ಸಾಧ್ಯವಿಲ್ಲ.

ಚರ್ಚ್ ಮಸೀದಿ, ಗುರುದ್ವಾರ, ಬೌದ್ಧ ವಿಹಾರ ಇವುಗಳಿಗೆ ತೆರಿಗೆ ಇಲ್ಲ !

ಆಡಳಿತಾರೂಢ ಸಂಯುಕ್ತ ಜನತಾ ದಳ ಮತ್ತು ಭಾಜಪ ರಾಜ್ಯದಲ್ಲಿನ ಚರ್ಚ್, ಮಸೀದಿ, ಗುರುದ್ವಾರ ಅಥವಾ ಬೌದ್ಧ ವಿಹಾರಗಳಿಗೆ ಇಂತಹ ತೆರಿಗೆಯನ್ನು ವಿಧಿಸಲಿಲ್ಲ, ಎಂಬುದು ವಿಶೇಷವಾಗಿ ಗಮನದಲ್ಲಿಡಬೇಕಾದ ಅಂಶವಾಗಿದೆ. ಆ ರೀತಿ ಮಾಡುವ ಧೈರ್ಯ ಅವರಲ್ಲಿಲ್ಲ. ಬಿಹಾರದಲ್ಲಿ ಸದ್ಯ ಚುನಾವಣೆ ಇಲ್ಲ, ಹಾಗಾಗಿ ಸರಕಾರವು ಹಿಂದೂಗಳ ವಿಷಯದಲ್ಲಿ ಇಂತಹ ನಿರ್ಣಯವನ್ನು ತೆಗೆದುಕೊಳ್ಳುವ ಧೈರ್ಯವನ್ನು ತೋರಿಸಿದೆ, ಎಂಬುದನ್ನು ಸಹ ಗಮನದಲ್ಲಿಡಬೇಕು. ಇಂತಹ ನಿರ್ಣಯವನ್ನು ನಾಳೆ ದೇಶದ ಇತರ ರಾಜ್ಯಗಳು ತೆಗೆದುಕೊಳ್ಳುವುದು ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ರಾಜಕಾರಣಿಗಳ ದೃಷ್ಟಿಯಲ್ಲಿ ‘ಹಿಂದೂಗಳ ದೇವಸ್ಥಾನಗಳು ಬಂಗಾರದ ಮೊಟ್ಟೆಗಳನ್ನಿಡುವ ಕೋಳಿಗಳಾಗಿವೆ. ಹಿಂದಿನ ಕಾಲದಲ್ಲಿ ಮೊಗಲರಿಗೆ, ಇಸ್ಲಾಮಿ ದಾಳಿಕೋರರಿಗೆ ದೇವಸ್ಥಾನಗಳ ಬಗ್ಗೆ ಏನು ಅನಿಸುತ್ತಿತ್ತೋ, ಅದೇ ಈಗಿನ ಆಡಳಿತಗಾರರಿಗೆ ಅನಿಸುತ್ತಿದೆ ಮತ್ತು ಅವರು ನೇರ ಕಾನೂನುಬದ್ಧವಾಗಿಯೇ ದೇವಸ್ಥಾನಗಳನ್ನು ಲೂಟಿ ಮಾಡುತ್ತಿದ್ದಾರೆ ಮತ್ತು ಹಿಂದೂಗಳು ನಿಷ್ಕ್ರಿಯ ಮತ್ತು ಜೀವಚ್ಛವವಾಗಿದ್ದಾರೆ.

‘ದೇವಧನವು ಒಂದು ವೇಳೆ ರಾಜಕೋಶದಲ್ಲಿ ಅಂದರೆ ಸರಕಾರಿ ಖಜಾನೆಯಲ್ಲಿ ಜಮೆಯಾಯಿತೆಂದರೆ ಸರಕಾರಿ ಖಜಾನೆಗಳು ಖಾಲಿಯಾಗುತ್ತವೆ, ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಸದ್ಯ ಭಾರತದ ಅನೇಕ ರಾಜ್ಯಗಳ ಆರ್ಥಿಕ ಸ್ಥಿತಿ ಕೊರೊನಾದಿಂದ ಕುಸಿದಿದೆ. ದೇಶ ಮತ್ತು ರಾಜ್ಯಗಳ ಬಳಿ ಹಣವಿಲ್ಲ. ಕೇಂದ್ರ ಸರಕಾರವು ಅನೇಕ ಸರಕಾರಿ ಕಂಪನಿಗಳನ್ನು ಮಾರಾಟ ಮಾಡುತ್ತಿದೆ. ‘ಇದು ದೇವಧನವು ರಾಜಕೋಶಕ್ಕೆ ಹೋದುದರ ಪರಿಣಾಮವಾಗಿದೆ, ಎಂದು ಹಿಂದೂಗಳಿಗೆ ಅನಿಸಿದರೆ ತಪ್ಪಾಗಲಾರದು. ಹಿಂದಿನ ಕಾಲದಲ್ಲಿ ರಾಜರು ದೇವಸ್ಥಾನಗಳಿಗೆ ಧನವನ್ನು ಅರ್ಪಿಸುತ್ತಿದ್ದರು, ದೇವಸ್ಥಾನಗಳ ಜೀರ್ಣೋದ್ಧಾರವನ್ನು ಮಾಡುತ್ತಿದ್ದರು, ಆದುದರಿಂದ ಅವರ ಖಜಾನೆಯು ಯಾವಾಗಲೂ ತುಂಬಿರುತ್ತಿತ್ತು. ಆ ರಾಜ್ಯವು ಸಮೃದ್ಧವಾಗಿರುತ್ತಿತ್ತು. ಸದ್ಯದ ಸ್ಥಿತಿ ನಿರ್ದಿಷ್ಟವಾಗಿ ವಿರುದ್ಧವಾಗಿದೆ.ತನು, ಮನ, ಧನವನ್ನು ಅರ್ಪಿಸಿ !

ಬಿಹಾರ ಪಕ್ಕದ ರಾಜ್ಯ ಉತ್ತರಪ್ರದೇಶದಲ್ಲಿನ ದೇವಸ್ಥಾನಗಳ ಬಗ್ಗೆ ಇಂತಹ ನಿಲುವನ್ನು ತಳೆಯುವ ಸಾಧ್ಯತೆ ಇಲ್ಲ. ಅಲ್ಲಿಯೂ ಭಾಜಪ ಸರಕಾರವಿದೆ; ಆದರೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮಹತ್ವಪೂರ್ಣ ದೇವಸ್ಥಾನಗಳ ಸ್ವಾಮೀಜಿಯಾಗಿದ್ದಾರೆ, ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಅವರಿಗೆ ದೇವಸ್ಥಾನಗಳ ಮಹತ್ವ ಮತ್ತು ಶಾಸ್ತ್ರವು ತಿಳಿದಿದೆ. ಅವರ ನೇತೃತ್ವದಲ್ಲಿ ಅಯೋಧ್ಯೆಯ ಶ್ರೀರಾಮ ದೇವಸ್ಥಾನದ ಕಾರ್ಯವು ನಡೆದಿದೆ. ದೇವಸ್ಥಾನಗಳ ೫ ಕಿ.ಮೀ. ಪರಿಸರದಲ್ಲಿ ಮಾಂಸ, ಸರಾಯಿ ಮಾರಾಟವನ್ನು ನಿಷೇಧಿಸಲಾಗಿದೆ. ದೇವಸ್ಥಾನಗಳ ಪಾವಿತ್ರ್ಯವನ್ನು ಸಂರಕ್ಷಿಸಲು ಪ್ರಯತ್ನಗಳಾಗುತ್ತಿವೆ. ಇದರಿಂದ, ಒಂದು ವೇಳೆ ಆಡಳಿತಗಾರರು ಧರ್ಮಾಚರಣಿಗಳಾಗಿದ್ದರೆ. ಧರ್ಮದ ರಾಜ್ಯವಿರುತ್ತದೆ ಮತ್ತು ಅವರು ಹಾಗೆ ಇರದಿದ್ದರೆ, ರಾಜ್ಯವು ತಪ್ಪು ದಾರಿಗೆ ಮಾರ್ಗಕ್ರಮಣ ಮಾಡುತ್ತದೆ. ದೇವಸ್ಥಾನಗಳ ರಕ್ಷಣೆ ಮಾಡಲು, ಧರ್ಮಶಾಸ್ತ್ರಕ್ಕನುಸಾರ ದೇವಸ್ಥಾನಗಳ ಸಂಚಾಲನೆಯಾಗಲು ಆಡಳಿತಗಾರರು ಧರ್ಮಾಚರಣಿಯಾಗಿರುವುದು ಆವಶ್ಯಕವಾಗಿದೆ. ಹಾಗೆಯೇ ದೇವಸ್ಥಾನಗಳು ಭಕ್ತರ ಸ್ವಾಧೀನದಲ್ಲಿರುವುದು ಅಷ್ಟೇ ಆವಶ್ಯಕವಾಗಿದೆ. ಇಂದಿನ ವ್ಯವಸ್ಥೆಯಲ್ಲಿ ಇಂತಹ ಸಾಧ್ಯತೆ ಅಪರೂಪವಾಗಿದೆ. ಸಂಪೂರ್ಣ ದೇಶದಲ್ಲಿ ಇಂತಹ ಆದರ್ಶ ಸ್ಥಿತಿಯನ್ನು ನಿರ್ಮಿಸಲು ಸಾಧ್ಯವಾದರೆ, ಅದಕ್ಕಾಗಿ ‘ಹಿಂದೂ ರಾಷ್ಟ್ರವನ್ನೇ ಸ್ಥಾಪಿಸಬೇಕಾಗುವುದು, ಎಂಬುದು ವಾಸ್ತವವಾಗಿದೆ. ಆದುದರಿಂದ ಶ್ರದ್ಧಾಳು ಹಿಂದೂಗಳು, ಭಕ್ತ ಹಿಂದೂಗಳು, ಧರ್ಮಾಚರಣಿ ಹಿಂದೂಗಳು, ಧರ್ಮನಿಷ್ಠ ಹಿಂದೂಗಳು ಇದಕ್ಕಾಗಿ ಈಗ ತನು, ಮನ ಮತ್ತು ಧನವನ್ನು ಅರ್ಪಿಸಿ ಮುಂದಾಳತ್ವ ವಹಿಸಬೇಕು.