ನೆದರಲ್ಯಾಂಡ್‍ನಲ್ಲಿ ಕೊರೊನಾ ಬಗೆಗಿನ ನಿರ್ಬಂಧದ ವಿರುದ್ಧ ನಾಗರಿಕರಿಂದ ಹಿಂಸಾತ್ಮಕ ಆಂದೋಲನ

ಪೊಲೀಸರ ಗುಂಡಿನ ದಾಳಿಯಲ್ಲಿ ಅನೇಕರು ಗಾಯಾಳು

ಆಮ್‍ಸ್ಟರಡಮ್ (ನೆದಲ್ರ್ಯಾಂಡ್) – ಕೊರೋನಾದ ಹೆಚ್ಚುತ್ತಿರುವ ಸಂಕ್ರಮಣದ ಹಿನ್ನೆಲೆಯಲ್ಲಿ ನೆದಲ್ರ್ಯಾಂಡ್‍ನಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಆದ್ದರಿಂದ ಅಲ್ಲಿಯ ನಾಗರಿಕರು ಆಂದೋಲನವನ್ನು ಆರಂಭಿಸಿದ್ದಾರೆ. ಈ ಆಂದೋಲನದ ಸಮಯದಲ್ಲಿ ಹಿಂಸಾಚಾರ ನಡೆದಿರುವುದರಿಂದ ಪೊಲೀಸರು ಆಂದೋಲನಕಾರರ ಮೇಲೆ ಗುಂಡಿನ ದಾಳಿ ನಡೆಸಿದರು. ಇದರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಈ ಹಿಂಸಾಚಾರದಲ್ಲಿ ಅಂಗಡಿಗಳು ಧ್ವಂಸ, ಕಲ್ಲುತೂರಾಟ, ಬೆಂಕಿ ಮತ್ತು ಪೊಲೀಸರ ಮೇಲೆ ದಾಳಿ ಮಾಡಲಾಯಿತು. ಈ ಪ್ರಕರಣದಲ್ಲಿ ಪೊಲೀಸರು 51 ಜನರನ್ನು ಬಂಧಿಸಿದ್ದಾರೆ.