ಮಹಾರಾಜರು ಧರ್ಮದ ಹಾಗೂ ವೇದಗಳ ರಕ್ಷಣೆ ಮಾಡಿದ್ದಾರೆ, ಇದನ್ನು ಹೇಳುವ ಮೊದಲ ಕವಿ ಭೂಷಣ ಇವರಾಗಿದ್ದಾರೆ. ಕವಿ ಭೂಷಣರು ಹೇಳುತ್ತಾರೆ ‘ಶಿವಾಜಿ ಮಹಾರಾಜರು ವೇದಪುರಾಣಗಳನ್ನು ರಕ್ಷಿಸಿದ್ದಾರೆ’. ನಾಲಿಗೆಯಲ್ಲಿ ದೇವಿಯ ನಾಮ ಸದಾ ಇತ್ತು. ಹೆಗಲಿನಲ್ಲಿ ಜನಿವಾರದ ಹಾಗೂ ಕೊರಳಿನ ಹಾರದ ರಕ್ಷಣೆ ಮಾಡಿದರು. ಮೊಗಲರನ್ನು ಸದೆಬಡಿದು ಬಾದಶಾಹನಲ್ಲಿ ಭಯ ಹುಟ್ಟಿಸಿದರು. ಶತ್ರುಗಳನ್ನು ಕೈಕೈಹಿಸುಕಿಕೊಳ್ಳುವಂತೆ ಮಾಡಿದರು. ತಮ್ಮ ಗಡಿಯ ರಕ್ಷಣೆ ಮಾಡಿದರು. ಮಹಾರಾಜರು ತಮ್ಮ ಖಡ್ಗದ ಬಲದಲ್ಲಿ ದೇವರು, ದೇಶ ಹಾಗೂ ಸ್ವಧರ್ಮದ ರಕ್ಷಣೆಯನ್ನು ಮಾಡಿದರು.