ಸರ್ವೋತ್ತಮ ಶಿಕ್ಷಣ ಯಾವುದು ?
ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ’, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನವನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಪ್ತಾಹಿಕ ಸನಾತನ ಪ್ರಭಾತದ ೨೩/೦೮ ನೇ ಸಂಚಿಕೆಯಲ್ಲಿ ‘ಮನುಷ್ಯನ ಬುದ್ಧಿ ಮತ್ತು ಅದರ ನಿರ್ಣಯಗಳ ಯೋಗ್ಯಾಯೋಗ್ಯತೆ !’ ಇವುಗಳ ಕುರಿತು ಮಾಹಿತಿಯನ್ನು ಓದಿದೆವು. ಇಂದು ಮುಂದಿನ ಭಾಗವನ್ನು ನೋಡೋಣ.
(ಭಾಗ ೧೦)
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/52934.html |
೩೩. ಆಧಾರದ ಅವಶ್ಯಕತೆಯಿರುವ ಬುದ್ಧಿ !
೩೩ ಅ. ಬುದ್ಧಿಗೆ ಕರ್ಮೇಂದ್ರಿಯಗಳ ಅಥವಾ ಇತರರ (ಮನುಷ್ಯರ) ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ : ಬುದ್ಧಿಗೆ ಯಾವುದೇ ಕಾರ್ಯವನ್ನು ಮಾಡಲು ತನ್ನ ಕರ್ಮೇಂದ್ರಿಯಗಳನ್ನು ಅಥವಾ ಇತರರನ್ನು (ಮನುಷ್ಯರ) ಅವಲಂಬಿಸಬೇಕಾಗುತ್ತದೆ.
೩೩ ಆ. ಬುದ್ಧಿಗೆ ಪರಿಸ್ಥಿತಿಯನ್ನು ಸಹ ಅವಲಂಬಿಸಬೇಕಾಗುತ್ತದೆ : ಬುದ್ಧಿಗೆ ಪರಿಸ್ಥಿತಿಯನ್ನು ಸಹ ಅವಲಂಬಿಸಬೇಕಾಗುತ್ತದೆ; ಏಕೆಂದರೆ ಕೆಲವೊಮ್ಮೆ ಹೆಚ್ಚೇನೂ ಪ್ರಯತ್ನಿಸದೇ ಯಾವುದಾದರೊಂದು ವಸ್ತುವು ನಮಗೆ ಸಹಜವಾಗಿ ಸಿಗುತ್ತದೆ ಮತ್ತು ಕೆಲವೊಮ್ಮೆ ಬುದ್ಧಿಯಿಂದ ಪರಾಕಾಷ್ಟೆಯ ಪ್ರಯತ್ನಗಳಾಗಿದ್ದರೂ ಆ ವಸ್ತುವು ನಮಗೆ ಸಿಗುವುದಿಲ್ಲ ಎಂಬುದನ್ನು ಸಹ ನಾವು ಬಹಳ ಸಲ ನೋಡಿರುತ್ತೇವೆ.
೩೩ ಇ. ಬುದ್ಧಿಯು ಬಾಹ್ಯ ಅಡಚಣೆಗಳ ಮೇಲೆಯೂ ಅವಲಂಬಿಸಿರುತ್ತದೆ : ಕೆಲವೊಮ್ಮೆ ಬಾಹ್ಯ ಅಡಚಣೆಗಳು ಹೇಗೆ ಬರುತ್ತವೆ ಎಂದರೆ, ಅವುಗಳ ಬಗ್ಗೆ ನಮಗೆ ಮೊದಲೇ ಅಂದಾಜು ಮಾಡಲು ಸಹ ಆಗುವುದಿಲ್ಲ. ಆದುದರಿಂದ ಬುದ್ಧಿಯ ಮೂಲಕ ತೆಗೆದುಕೊಂಡ ನಿರ್ಣಯಗಳು ಕೆಲವೊಮ್ಮೆ ಪೂರ್ತಿಯಾಗುವುದಿಲ್ಲ.
೩೪. ಬುದ್ಧಿಯ ಮಿತಿ!
೩೪ ಅ. ಪಂಚಮಹಾಭೂತಗಳು, ಗಿಡ-ಮರಗಳು, ವನಸ್ಪತಿ (ಗಿಡಮರಗಳು) ಮತ್ತು ಸೂರ್ಯ-ಚಂದ್ರ ಇವೆಲ್ಲ ಮನುಷ್ಯನಿಗಿಂತ ಮೊದಲೇ ಉತ್ಪತ್ತಿಯಾಗಿರುವುದರಿಂದ ಮನುಷ್ಯನಿಗೆ ಅವುಗಳನ್ನು ತಯಾರಿಸಲು ಆಗುವುದಿಲ್ಲ : ಪಂಚಮಹಾಭೂತಗಳೆಂದರೆ, ಪೃಥ್ವಿ, ಜಲ, ವಾಯು, ಅಗ್ನಿ ಮತ್ತು ಆಕಾಶ ಇವುಗಳನ್ನು ತಯಾರಿಸಲು ಮನುಷ್ಯನಿಂದ ಅಸಾಧ್ಯವಾಗಿದೆ; ಏಕೆಂದರೆ ಈ ಎಲ್ಲ ವಸ್ತುಗಳು ಮನುಷ್ಯನ ಬುದ್ಧಿಯು ಉತ್ಪತ್ತಿಯಾಗುವ ಮೊದಲೇ ಅಸ್ತಿತ್ವದಲ್ಲಿದೆ. ಈ ಪಂಚಮಹಾಭೂತಗಳ ಆಧಾರದಿಂದಲೇ ಎಲ್ಲರ ಜೀವನವು ನಡೆಯುತ್ತದೆ. ಗಿಡ-ಮರಗಳು, ವನಸ್ಪತಿ ಇವೆಲ್ಲವೂ ಮನುಷ್ಯನು ಪೃಥ್ವಿಯ ಮೇಲೆ ಬರುವುದಕ್ಕಿಂತ ಮೊದಲೇ ಅಸ್ತಿತ್ವದಲ್ಲಿದೆ. ಸೂರ್ಯ, ಚಂದ್ರ, ನಕ್ಷತ್ರ ಇತ್ಯಾದಿ ಮತ್ತು ಅವುಗಳು ಆಕಾಶದಲ್ಲಿ ತಿರುಗುವ ನಿಯಮಗಳನ್ನು ತಯಾರಿಸಲು ಮನುಷ್ಯನಿಗೆ ಸಾಧ್ಯವೇ ಇಲ್ಲ. ಇವೆಲ್ಲವೂ ಮನುಷ್ಯನ ಉತ್ಪತ್ತಿಯ ಮೊದಲೇ ಇದ್ದವು.
೩೪ ಆ. ಬುದ್ಧಿಗೆ ಮೂಲಭೂತ ಪದಾರ್ಥಗಳನ್ನು ಶೋಧಿಸುವುದು ಅಸಾಧ್ಯವಾಗಿದೆ : ಬುದ್ಧಿಯು ಸ್ವತಃ ‘ಪ್ರತ್ಯಕ್ಷ ಮತ್ತು ಅನುಮಾನ’ ಇವುಗಳ ಸೀಮೆಯಲ್ಲಿರುತ್ತದೆ. ಅದು ಅವುಗಳ ಆಧಾರದ ಮೇಲೆಯೇ ಮುಂದೆ ಹೋಗುತ್ತಿರುತ್ತದೆ; ಆದುದರಿಂದ ಬುದ್ಧಿಗೆ ಸ್ವತಃ ಯಾವುದೇ ಮೂಲಭೂತ ಪದಾರ್ಥವನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ.
೩೫. ಬುದ್ಧಿಗೆ ಅಂಗೀಕರಿಸಲಾಗದ ವಿಷಯಗಳು
ಅ. ಯಾವುದೇ ವಸ್ತುವಿನ ವೇಗವು ಪ್ರಕಾಶದ ವೇಗಕ್ಕಿಂತ ಹೆಚ್ಚಿರಲು ಸಾಧ್ಯವಿಲ್ಲ, ಇದು ವಿಜ್ಞಾನದ ನಿಯಮವಾಗಿದೆ; ಆದರೆ ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು; ಅದನ್ನು ಅನುಭವಿಸುವುದು ಕಠಿಣವಾಗುತ್ತದೆ.
ಆ. ನಮಗೆ (ಬುದ್ಧಿಗೆ) ದ್ವಿತೀಯ ಉತ್ಪನ್ನ (Second Derivative) ಆಗುವುದಕ್ಕಿಂತ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ, ಉದಾ. ವೇಗವರ್ಧನೆ (Acceleration) ಮತ್ತು ವಕ್ರತೆ (Curvature) ಇವುಗಳ ಪರಿವರ್ತನೆಯನ್ನು ಅನುಭವಿಸುವುದು ಮನುಷ್ಯನಿಗೆ ಕಠಿಣವಾಗಿರುತ್ತದೆ.
ಇ. ಕೆಲವೊಮ್ಮೆ ಯಾವುದಾದರೊಂದು ವಸ್ತುವು ತಯಾರಾದುದರ ಕಾರಣವನ್ನು ಅರಿತುಕೊಳ್ಳುವ ಮೊದಲೇ ಆ ವಸ್ತು ತಯಾರಾಗಿರುತ್ತದೆ ಮತ್ತು ನಂತರ ಅದರ ತಯಾರಾದುದರ ಕಾರಣ ತಿಳಿಯುತ್ತದೆ, ಉದಾ. ಸೈಕಲ್ (ದ್ವಿಚಕ್ರ ವಾಹನ) ಮತ್ತು ವಿಮಾನದ ರೆಕ್ಕೆಗಳು.
೩೬. ಭೌತಿಕ ನಿಷ್ಕರ್ಷಗಳನ್ನು ಅರಿತುಕೊಳ್ಳುವುದರ ಮಿತಿ
ಭೌತಿಕ ವಿಜ್ಞಾನದ ಕೆಲವು ನಿಷ್ಕರ್ಷಗಳನ್ನು ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ, ಎಂಬುದನ್ನು ಶಾಲೆಯ ವಿದ್ಯಾರ್ಥಿಗಳು ಸ್ವತಃ ಅಧ್ಯಯನದ ಕೊನೆಗೆ ಅನುಭವಿಸಿರಬಹುದು.
೩೭. ಊಹಿಸುವಿಕೆ
ವಿಜ್ಞಾನದಲ್ಲಿ ಕೆಲವು ವಿಷಯಗಳನ್ನು ಅಂದಾಜು ಹಿಡಿಯಲಾಗುತ್ತದೆ (ಊಹಿಸುವುದು) (Hypothesis). ಇದರಿಂದ ಬುದ್ಧಿಗೆ ಪ್ರತ್ಯಕ್ಷ ಘಟನೆಯ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಎಂಬುದು ಗಮನಕ್ಕೆ ಬರುತ್ತದೆ.
(ಮುಂದುವರಿಯುವುದು)
– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತದ ಸಂಸ್ಕೃತಿಯ ಅಧ್ಯಯನಕಾರರು (ಆಧಾರ : ‘ಸರ್ವೊತ್ತಮ ಶಿಕ್ಷಾ ಕ್ಯಾ ಹೈ ?)