ಮನುಷ್ಯನ ಬುದ್ಧಿ ಮತ್ತು ಅದರ ನಿರ್ಣಯಗಳ ಯೋಗ್ಯಾಯೋಗ್ಯತೆ !

ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನವನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.  ಸಾಪ್ತಾಹಿಕ ಸನಾತನ ಪ್ರಭಾತದ ೨೩/೦೭ ನೇ ಸಂಚಿಕೆಯಲ್ಲಿ ‘ಮಾನವನ ಬುದ್ಧಿ ಮತ್ತು ಅದಕ್ಕಿರುವ ಮಿತಿ !’ ಈ ಬಗ್ಗೆ ಮಾಡಿದ ವಿವೇಚನೆಯನ್ನು ನೀಡಲಾಗಿತ್ತು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.     

(ಭಾಗ ೯)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/51249.html

೨೩. ಸಂಶಯಾತ್ಮಕ ಬುದ್ಧಿಯಿಂದಾಗಿ ಯೋಗ್ಯ ನಿರ್ಣಯವನ್ನು ತೆಗೆದುಕೊಳ್ಳಲು ಆಗದಿರುವುದು

‘ಮನುಷ್ಯನು ಮಾನಸಿಕ ವಾಸನೆಗಳಿಂದ ಸುತ್ತುವರಿದಿದ್ದರಿಂದ ಮನುಷ್ಯನ ಬುದ್ಧಿಯು ಸಂಶಯಾತ್ಮಕವಾಗಿರುತ್ತದೆ. ಆದುದರಿಂದ ಅವನಿಗೆ ಯಾವುದೇ ನಿಶ್ಚಯದ ವರೆಗೆ ತಲುಪುವುದು ಕಠಿಣವಾಗುತ್ತದೆ, ಹಾಗೆಯೇ ಪ್ರಾರಬ್ಧಕರ್ಮಗಳ ಪ್ರಭಾವದಿಂದ ಬುದ್ಧಿಗೆ ಯೋಗ್ಯ ನಿರ್ಣಯವನ್ನು ತೆಗೆದುಕೊಳ್ಳುವುದು ಕಠಿಣವಾಗುತ್ತದೆ.

೨೪. ಮನುಷ್ಯನು ನಿರ್ಣಯ ತೆಗೆದುಕೊಳ್ಳಲು ಅಸಮರ್ಥನಾಗಿರುವುದು

ಮನುಷ್ಯನು ಹೆಚ್ಚಾಗಿ ತಾನು ತೆಗೆದುಕೊಂಡ ನಿರ್ಣಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಾನೆ ಅಥವಾ ಕೆಲವು ಸಮಯ ಕಳೆದ ನಂತರ ಅವನಿಗೆ ತನ್ನ ಹಳೆಯ ನಿರ್ಣಯಗಳು ಅಯೋಗ್ಯವೆನಿಸುತ್ತವೆ. ಮನುಷ್ಯನು ಹೆಚ್ಚಿನ ಬಾರಿ ಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳಲು ಅಸಮರ್ಥನಾಗಿರುತ್ತಾನೆ. ಮನುಷ್ಯನು ಸಾಮೂಹಿಕ ಸ್ವರೂಪದಲ್ಲಿ ತೆಗೆದುಕೊಂಡ ನಿರ್ಣಯಗಳೂ ಅನೇಕ ಬಾರಿ ಕೊನೆಗೆ ಅಪೂರ್ಣವಾಗಿರುವುದು ಸಿದ್ಧವಾಗುತ್ತವೆ.

೨೫. ನಿರ್ಣಯಗಳು ಎಂದಿಗೂ ಯೋಗ್ಯವಾಗಿರುವುದಿಲ್ಲ !

ಮನುಷ್ಯನು ಯಾವುದನ್ನು ತನ್ನ ಅಂತರಾತ್ಮಾ (Conscience) ಅಥವಾ ಸಾಮಾನ್ಯ ಜ್ಞಾನ (Common Sense) ಎಂದು ತಿಳಿದು ನಿರ್ಣಯಗಳನ್ನು ತೆಗೆದುಕೊಳ್ಳುತ್ತಾನೆಯೋ, ಅವು ಸಹ ಯಾವಾಗಲೂ ಯೋಗ್ಯವಾಗಿರುವುದಿಲ್ಲ.

೨೬. ವಿದ್ವಾನ ಪುರುಷರಿಗೆ ಅಥವಾ ಸಮಾಜಕ್ಕೂ ಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳುವುದು ಕಠಿಣವಾಗುವುದು

ಅನುಕೂಲ ಅಥವಾ ಪ್ರತಿಕೂಲ ಪರಿಸ್ಥಿತಿಯಲ್ಲಿ ಏನು ಮಾಡಿದರೆ ಲಾಭದಾಯಕ ಮತ್ತು ಕಲ್ಯಾಣಕಾರಿಯಾಗಿದೆ ? ಎಂಬ ನಿರ್ಣಯವನ್ನು ತೆಗೆದುಕೊಳ್ಳುವುದು ಮನುಷ್ಯರಿಗೆ ಹಾಗೂ ಸಮಾಜಕ್ಕೆ ಕಠಿಣವಾಗಿರುತ್ತದೆ. ಆಧುನಿಕ ಜೀವನದಲ್ಲಿನ ಅತ್ಯಂತ ವಿದ್ವಾನ ಪುರುಷರಿಗೆ ಅಥವಾ ಸಮಾಜಕ್ಕೂ ಬಹಳಷ್ಟು ಸಮಸ್ಯೆಗಳಲ್ಲಿ ಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳುವುದು ಕಠಿಣವಾಗಿರುತ್ತದೆ.

೨೭. ಪ್ರತ್ಯಕ್ಷ ಘಟನೆಯನ್ನು ನೋಡುವ ವ್ಯಕ್ತಿಗೂ ಘಟನೆಯ ಬಗ್ಗೆ ತಪ್ಪುಗಳಿಲ್ಲದೇ ವರ್ಣನೆಯನ್ನು ಮಾಡುವುದು ಕಠಿಣವಾಗುತ್ತದೆ

ವ್ಯಕ್ತಿಗೆ ಯಾವುದೇ ಘಟನೆಯನ್ನು ಪ್ರತ್ಯಕ್ಷ ನೋಡುತ್ತಿರುವ ಅದನ್ನು ವರ್ಣಿಸಲು ಹೇಳಿದರೆ, ಆ ವ್ಯಕ್ತಿಯು ಆ ಘಟನೆಯ ಬಗ್ಗೆ ತನ್ನ ಭಾವನೆಗಳಿಗನುಸಾರ ವ್ಯಕ್ತ ಮಾಡುತ್ತಾನೆ. ಇದರಿಂದ ಬಹಳಷ್ಟು ಬಾರಿ ಘಟನೆಯ ಸತ್ಯ ವಿಷಯದ ವರ್ಣನೆಯನ್ನು ತಪ್ಪಾಗಿ ಮಾಡಲಾಗುತ್ತದೆ. ಮನೋವೈಜ್ಞಾನಿಕ ಸಮೀಕ್ಷೆಯ ಮೂಲಕ ಇದು ಗಮನಕ್ಕೆ ಬಂದಿದೆ.

೨೮. ತಪ್ಪುಗಳನ್ನು ಮಾಡುವವನೇ ಮನುಷ್ಯ !

ಆಂಗ್ಲ ಭಾಷೆಯಲ್ಲಿ ಒಂದು ವಚನ ಪ್ರಸಿದ್ಧವಾಗಿದೆ, ‘To err is human’. ಅಂದರೆ, ತಪ್ಪುಗಳನ್ನು ಮಾಡುವುದು ಮನುಷ್ಯಸ್ವಭಾವ ! ಮನುಷ್ಯನ ಬುದ್ಧಿಯು ಯಾವುದೇ ಕಾರ್ಯವನ್ನು ಮಾಡುವಾಗ ಅನೇಕ ತಪ್ಪುಗಳನ್ನು ಮಾಡುತ್ತಲೇ ಇರುತ್ತದೆ.

೨೯. ಅನುಭವದ ವಿಶ್ವಸನೀಯತೆ ಹೆಚ್ಚಿರುವುದು

ಬೌದ್ಧಿಕ ತರ್ಕದ ಮೂಲಕ ಪ್ರತಿಪಾದಿಸಿದ ಜ್ಞಾನದ ತುಲನೆಯಲ್ಲಿ ಅನುಭವಗಳ ಮೂಲಕ ಪ್ರಾಪ್ತಮಾಡಿಕೊಂಡ ಜ್ಞಾನ ಅಥವಾ ಸಹಜಜ್ಞಾನವು (ಯಾವುದು ಸಂತರ ಬಳಿ ಅಥವಾ ಮಹಾತ್ಮರ ಬಳಿ ಇರುತ್ತದೆಯೋ ಅದು) ಹೆಚ್ಚು ವಿಶ್ವಸನೀಯ ಮತ್ತು ಪ್ರಭಾವಪೂರ್ಣವಾಗಿರುತ್ತದೆ. ಅನುಭವಿ ಸಾಂಸಾರಿಕ ಜನರ ಅಥವಾ ಸಂತ-ಮಹಾತ್ಮರ ಮಾರ್ಗದರ್ಶನವನ್ನು ಜನರು ಹೆಚ್ಚು ಒಪ್ಪಿಕೊಳ್ಳುತ್ತಾರೆ. ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು, ಶಿರ್ಡಿಯ ಸಾಯೀಬಾಬಾ ಇವರ ಬಳಿಯೂ ಬಹಳಷ್ಟು ಬುದ್ಧಿಜೀವಿ ವ್ಯಕ್ತಿಗಳು ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳಲು ಹೋಗುತ್ತಿದ್ದರು.

೩೦. ಜನರಲ್ಲಿ ಯಾವುದಾದರೊಂದು ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿರುವುದರಿಂದ ನಿರ್ಣಯಗಳನ್ನು ತೆಗೆದುಕೊಳ್ಳಲು ಕಠಿಣವಾಗುವುದು

ಯಾವುದಾದರೊಂದು ವಿಷಯವನ್ನು ನಿಶ್ಚಯಿಸಲು ಹೇಳಿದರೆ, ಅನೇಕ ಬಾರಿ ವಿವಿಧ ಜನರು ತಮ್ಮ ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇದರಿಂದ ಅದರ ಬಗ್ಗೆ ಯೋಗ್ಯ ನಿರ್ಣಯವನ್ನು ತೆಗೆದುಕೊಳ್ಳುವುದು ಕಠಿಣವಾಗುತ್ತದೆ.

೩೧. ಮನಸ್ಸಿನ ಸ್ಥಿತಿಯು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ

ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಮನಸ್ಸಿಗೆ ನನಗೆ ಎಲ್ಲವೂ ಗೊತ್ತಿದೆ ಎಂದು ಅನಿಸುತ್ತದೆ, ಆದರೆ ಮನಸ್ಸಿನ ಸ್ಥಿತಿಯು ಕ್ಷಣಕ್ಷಣಕ್ಕೂ ಬದಲಾಗುತ್ತಿರುವಾಗ, ಅದು ಹೇಗೆ ಸತ್ಯವಾಗಬಹುದು –  (ವಿವೇಕಚೂಡಾಮಣಿ ಶ್ಲೋಕ ೨೯೩)

೩೨ ಇತರರ ಬುದ್ಧಿಯ ಮೇಲೆ ವಿಶ್ವಾಸ ಇಲ್ಲದಿರುವುದು

ಜನರು ಇತರರ ಬುದ್ಧಿಯ ಮೇಲೆ ವಿಶ್ವಾಸವನ್ನಿಡುವುದಿಲ್ಲ. ಆದುದರಿಂದಲೇ ಒಂದು ಕಂಪನಿಯು ತಯಾರಿಸಿದ ವಸ್ತುಗಳ ದುರುಸ್ತಿಯನ್ನು ಅದೇ ಕಂಪನಿಯ ಕೆಲಸಗಾರರಿಂದ ಮಾಡಿಸಿಕೊಳ್ಳಲು ಪ್ರೋತ್ಸಾಹವನ್ನು ನೀಡಲಾಗುತ್ತದೆ.

 (ಮುಂದುವರಿಯುವುದು)

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು (ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’)