ಹಿಂದೂಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾದರೆ ಮಾತ್ರ ವಿರೋಧಿಶಕ್ತಿಗಳ ಪರಾಭವ ಖಚಿತ ಎಂಬುದನ್ನು ಗಮನದಲ್ಲಿಡಿ  ! – ನ್ಯಾಯವಾದಿ ರಾಜೇಂದ್ರ ವರ್ಮಾ, ಸರ್ವೋಚ್ಚ ನ್ಯಾಯಾಲಯ

ಹಿಂದೂಗಳ ಸಂಸ್ಕೃತಿ ಹಾಗೂ ಧರ್ಮಗಳ ವಿರೋಧದಲ್ಲಿ ಷಡ್ಯಂತ್ರಗಳು ನಡೆಯುತ್ತಿವೆ. ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಹಾಗೂ ಕುಂಭಮೇಳ ಇವುಗಳ ಆಧ್ಯಾತ್ಮಿಕ ಮಹತ್ವವು ವಿಶ್ವದಲ್ಲಿ ಅದ್ವಿತೀಯವಾಗಿದೆ. ನಮ್ಮ ಸಂವಿಧಾನದಲ್ಲಿ ಶ್ರೀರಾಮ, ಶ್ರೀಕೃಷ್ಣ ಹಾಗೂ ಹಿಂದುತ್ವ ಇವುಗಳ ಬಗೆಗಿನ ಅನೇಕ ಚಿತ್ರಗಳಿವೆ. ಯಾರೇ ಹಿಂದೂ ದೇವರುಗಳ ವಿಡಂಬನೆ ಮಾಡಿದರೆ ಅದಕ್ಕೆ ಕಾನೂನಿನ ಮೂಲಕ ವಿರೋಧವನ್ನು ವ್ಯಕ್ತ ಮಾಡಬಹುದು. ನಾವು ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಹಾಗೂ ಹಿಂದುತ್ವದ ಬಗ್ಗೆ ಜ್ಞಾನವನ್ನು ನೀಡುತ್ತೇವೆಯೇ ? ಇದರ ಆತ್ಮಚಿಂತನೆಯನ್ನು ಮಾಡುವುದು ಆವಶ್ಯಕವಾಗಿದೆ. ಕುಂಭಮೇಳದಂತಹ ಧಾರ್ಮಿಕ ಶ್ರದ್ಧೆಗಳನ್ನು ಅವಮಾನಿಸುವವರ ವಿರುದ್ಧ ಕಾನೂನಿನ ಮೂಲಕ ಕ್ರಮಕೈಗೊಳ್ಳಬಹುದು. ಎಲ್ಲಾ ಹಿಂದೂಗಳು ಸಂಘಟಿತರಾಗಿ ಮೊದಲು ತಮ್ಮತಮ್ಮಲ್ಲಿಯ ಭಿನ್ನಾಭಿಪ್ರಾಯಗಳನ್ನು ದೂರಗೊಳಿಸಬೇಕು. ಹಿಂದೂಗಳು ಸಂಘಟಿತರಾದರೆ ನಿಶ್ಚಿತವಾಗಿಯೂ ವಿರೋಧಿಶಕ್ತಿಗಳ ಪರಾಭವವಾಗುವುದು, ಎಂಬುದನ್ನು ಗಮನದಲ್ಲಿಡಬೇಕಾಗಿದೆ.