ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಜಿಹಾದಿ ದಾಳಿಯ ವಿರುದ್ಧ ಭಾರತ ಮತ್ತು ಬಾಂಗ್ಲಾದೇಶದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನಗಳನ್ನು ನಡೆಸಿದವು. ಇದರಲ್ಲಿ ಜಿಹಾದಿ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಯಾಗಬೇಕು, ಎಂಬ ಬೇಡಿಕೆಗಾಗಿ ಬಾಂಗ್ಲಾದೇಶ, ಅದೇರೀತಿ ಭಾರತದ ನವದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಗೋವಾ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮಗಳಲ್ಲಿ ಬಂಗಾಳ, ಮೇಘಾಲಯ, ಅಸ್ಸಾಂ ಮತ್ತು ತ್ರಿಪುರಾ, ಒಡಿಶಾ ಈ 15 ರಾಜ್ಯಗಳಲ್ಲಿನ ಹಿಂದೂಗಳು ಭಾಗವಹಿಸಿದ್ದರು. ಅಲ್ಲದೆ, ಈ ಆಂದೋಲನದ ಒಂದು ಭಾಗವಾಗಿ, 25 ಸ್ಥಳಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ 112 ಸ್ಥಳಗಳಲ್ಲಿ ಆನ್‍ಲೈನ್ ಮೂಲಕ ಭಾರತದ ಪ್ರಧಾನಮಂತ್ರಿ ಮಾನ್ಯ ಶ್ರೀ. ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಶ್ರೀ. ಜೈಶಂಕರ ಇವರಿಗೆ ಮನವಿಯನ್ನು ಕಳುಹಿಸಲಾಗಿದೆ. ಇದರಲ್ಲಿ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ದೇಶದಾದ್ಯಂತದ 37 ಕ್ಕೂ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಹಿಂದೂ ಧರ್ಮಾಭಿಮಾನಿಗಳು ಆಂದೋಲನದಲ್ಲಿ ಭಾಗಿಯಾಗಿದ್ದರು.
‘ಟ್ವಿಟರ್’ನಲ್ಲೂ ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದಾಳಿಗೆ ತೀವ್ರ ವಿರೋಧ !
ಜಿಹಾದಿಗಳಿಂದ ಬಾಂಗ್ಲಾದೇಶಿ ಹಿಂದೂಗಳ ಮೇಲಾದ ದಾಳಿಯ ಬಗ್ಗೆ ‘ಟ್ವಿಟರ್’ನಲ್ಲಿ ವ್ಯಾಪಕವಾಗಿ ವಿರೋಧವಾಗಿರುವುದು ಗಮನಕ್ಕೆ ಬಂದಿತು. ಈ ಸಮಯದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಹಿಂದೂಗಳು ಸ್ವಯಂಪ್ರೇರಿತವಾಗಿ ಭಾಗವಹಿಸಿದರು. ಈ ಸಮಯದಲ್ಲಿ #SaveBangladeshiHindus ಈ ‘ಹ್ಯಾಶ್‍ಟ್ಯಾಗ್’ನ ಮೂಲಕ ಸಾವಿರಾರು ಹಿಂದೂಗಳು ಟ್ವೀಟ್ ಮಾಡಿದ್ದಾರೆ.
ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಧ್ವನಿ ಎತ್ತುವುದು ಅಗತ್ಯ ! – ಶ್ರೀ. ತಥಾಗತ ರಾಯ್, ಮಾಜಿ ರಾಜ್ಯಪಾಲರು, ತ್ರಿಪುರಾ ಮತ್ತು ಮೇಘಾಲಯ
ಯಾವ ಭೂಭಾಗವನ್ನು ಬಾಂಗ್ಲಾದೇಶ ಎಂದು ಗುರುತಿಸಲಾಗುತ್ತದೆಯೋ, ಅಲ್ಲಿ ಹಿಂದೂಗಳ ಜನಸಂಖ್ಯೆಯು 1941 ರಲ್ಲಿ ಶೇ. 29 ರಿಂದ 1951 ರಲ್ಲಿ ಶೇ. 22 ರಷ್ಟಾಯಿತು. 1971 ರಲ್ಲಿ ಬಾಂಗ್ಲಾದೇಶ ರಚನೆಯಾಗುವ ಹೊತ್ತಿಗೆ, ಹಿಂದೂಗಳ ಜನಸಂಖ್ಯೆಯು ಶೇ. 18 ಕ್ಕೆ ಕುಸಿಯಿತು ಮತ್ತು ಈಗ ಕೇವಲ ಶೇ. 8 ರಷ್ಟು ಹಿಂದೂಗಳು ಮಾತ್ರ ಉಳಿದಿದ್ದಾರೆ. ಉಳಿದ ಹಿಂದೂಗಳು ಎಲ್ಲಿಗೆ ಹೋದರು ? 1971 ರ ನಂತರ ಬಾಂಗ್ಲಾದೇಶ ರಚನೆಯಾದಾಗ, ಹಿಂದೂಗಳು ತಮ್ಮ ಮೇಲಿನ ದೌರ್ಜನ್ಯಗಳು ನಿಲ್ಲುತ್ತವೆ ಎಂದು ಭಾವಿಸಿದ್ದರು; ಆದರೆ ಅದು ಆಗಲಿಲ್ಲ. ಪ್ರಸ್ತುತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನವರಾತ್ರಿಯಂದು ದಾಳಿಗಳಾದವು, ಆದರೆ ಇದು ಹೊಸದೇನಲ್ಲ. ಏನಾದರೂ ಕಾರಣಗಳನ್ನು ಹುಡುಕಿ ಅಲ್ಲಿಯ ಹಿಂದೂಗಳ ಮೇಲೆ ಯಾವಾಗಲೂ ದಾಳಿಗಳನ್ನು ನಡೆಸಲಾಗುತ್ತದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಸುರಕ್ಷತೆಗಾಗಿ, ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಧ್ವನಿ ಎತ್ತುವುದು ಅಗತ್ಯವಾಗಿದೆ. ಭಾರತ ಸರಕಾರವೂ ಕೂಡ ಹಿಂದೂಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು ಎಂದು ತ್ರಿಪುರಾ ಮತ್ತು ಮೇಘಾಲಯದ ಮಾಜಿ ರಾಜ್ಯಪಾಲ ಶ್ರೀ. ತಥಾಗತ ರಾಯ್ ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಬಾಂಗ್ಲಾದೇಶಿ ಹಿಂದೂಗಳ ಮೇಲೆ ಜಿಹಾದಿ ದಾಳಿ !’ ಎಂಬ ವಿಷಯದ ಕುರಿತು ಆಯೋಜಿಸಿದ್ದ ಆನ್‍ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧದ ವಿರುದ್ಧ ಭಾರತದ ಬಾಂಗ್ಲಾದೇಶ ರಾಯಭಾರ ಕಚೇರಿಯಲ್ಲಿ ಹಿಂದೂಗಳು ದೂರು ನೀಡಬೇಕು ಮತ್ತು ಪ್ರತಿಭಟನೆ ಮೂಲಕ ಒತ್ತಡವನ್ನು ಹೇರಬೇಕು. ಕಾಶ್ಮೀರದಲ್ಲಿ ಮುಸಲ್ಮಾನರಿಗಾಗಿ ಹೋಗುವ ‘ವಿಶ್ವಸಂಸ್ಥೆ’ಯ ಪ್ರತಿನಿಧಿಗಳು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಇಣುಕಿ ಸಹ ನೋಡುವುದಿಲ್ಲ. ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಅತ್ಯಾಚಾರ ಬಗ್ಗೆ ನಿಷ್ಪಕ್ಷಪಾತ ತನಿಖೆಗಾಗಿ ಭಾರತ ಸರಕಾರವು ತಮ್ಮ ನಿಯೋಗವನ್ನು ಕಳುಹಿಸಿ ಅದರ ವರದಿಯನ್ನು ಬಿಡುಗಡೆ ಮಾಡಬೇಕು. ಅಸ್ಸಾಂನಲ್ಲಿ 6,652 ಚದರ ಕಿಲೋಮೀಟರ್ ಭೂಮಿಯನ್ನು ಅತಿಕ್ರಮಿಸಿರುವ ಬಾಂಗ್ಲಾದೇಶದ ಮುಸಲ್ಮಾನರನ್ನು ಹೊರದಬ್ಬಬೇಕು. ‘ಬಾಂಗ್ಲಾದೇಶ ಮೈನಾರಟಿ ವಾಚ್’ ನ ನ್ಯಾಯವಾದಿ ಪೂ. ರವೀಂದ್ರ ಘೋಷ, ‘ಇಶಿತ್ವ ಫೌಂಡೇಶನ್’ನ ನಿರ್ದೇಶಕಿ ಆರತಿ ಅಗ್ರವಾಲ ಮತ್ತು ಇತರ ಗಣ್ಯರು ಬಾಂಗ್ಲಾದೇಶದ ಹಿಂದೂಗಳ ದುಃಸ್ಥಿತಿಯ ಕುರಿತು ಮಾತನಾಡಿದರು.
ತಮ್ಮ ವಿಶ್ವಾಸಿ
ಶ್ರೀ ಗುರುಪ್ರಸಾದ ಗೌಡ
ಹಿಂದೂ ಜನಜಾಗೃತಿ ಸಮಿತಿ