
೧. ‘ಹನುಮಂತನಂತೆ ಭಕ್ತಿಭಾವದಿಂದ ಸೇವೆ ಮಾಡುವ ಪೂ. (ನ್ಯಾಯವಾದಿ) ಹರಿ ಶಂಕರ ಜೈನ ಇವರನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಶ್ರೀರಾಮನ ರೂಪದಲ್ಲಿ ಆಲಿಂಗಿಸುತ್ತಿದ್ದಾರೆ’, ಎಂದು ಅನಿಸಿತು
ಹನುಮಂತನಂತೆ ಸೇವೆ ಮಾಡುವ ಪೂ. (ನ್ಯಾಯವಾದಿ) ಹರಿ ಶಂಕರ ಜೈನ ಇವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ಮುಕ್ತಿಗಾಗಿ ಹೋರಾಡಿದ್ದರು ಮತ್ತು ಆ ಹೋರಾಟದಲ್ಲಿ ಅವರು ಗೆದ್ದಿದ್ದರು. ‘ಸನಾತನ ಪ್ರಭಾತ’ ದಿನಪತ್ರಿಕೆಯಲ್ಲಿ ಅವರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಪೂ. (ನ್ಯಾಯವಾದಿ) ಹರಿ ಶಂಕರ ಜೈನ ಇವರ) ಭೇಟಿಯ ಛಾಯಾಚಿತ್ರವನ್ನು ನೋಡಿ ‘ಹನುಮಂತನು ಶ್ರೀರಾಮನ ಕಾರ್ಯವನ್ನು ಪೂರ್ಣಗೊಳಿಸಿ ವಿಜಯಶಾಲಿಯಾಗಿ ಬಂದಿದ್ದಾರೆ ಮತ್ತು ಅವರಿಗೆ ಶ್ರೀರಾಮನ ರೂಪದಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಆಲಿಂಗನ ನೀಡಿದ್ದಾರೆ’, ಎಂದು ನನಗೆ ಅನಿಸಿತು. ಗುರುದೇವರು ಅವರನ್ನು ಪ್ರೀತಿಯಿಂದ ಹೃದಯಕ್ಕೆ ಹತ್ತಿರವಾಗಿ ಹಿಡಿದುಕೊಳ್ಳುತ್ತಿರುವುದನ್ನು ನೋಡಿ ‘ಗುರುದೇವರು ಪೂ. ಜೈನ ಅವರಲ್ಲಿ ವಿಜಯಶಾಲಿಯಾದ ಮತ್ತು ಭಕ್ತಿಭಾವವುಳ್ಳ ಹನುಮಂತನೇ ಕಾಣಿಸಿರ ಬೇಕು’, ಎಂದು ನನಗೆ ಅನಿಸಿತು.
೧೧.೦೫.೨೦೨೩ ರಂದು ‘ಸನಾತನ ಪ್ರಭಾತ’ದಿನಪತ್ರಿಕೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೂ. (ನ್ಯಾಯವಾದಿ) ಹರಿ ಶಂಕರ ಜೈನ್ ಇವರನ್ನು ಆಲಂಗಿಸುತ್ತಿರುವ ಛಾಯಾಚಿತ್ರ ಪ್ರಕಟವಾಗಿತ್ತು. ಅದನ್ನು ನೋಡಿ ‘ಕಲಿಯುಗದಲ್ಲಿ ಶ್ರೀರಾಮ ಮತ್ತು ಶ್ರೀ ಹನುಮಾನ ಒಬ್ಬರನ್ನೊಬ್ಬರು ಆಲಿಂಗಿಸುತ್ತಿದ್ದಾರೆ’, ಎಂದು ಅನಿಸಿತು. ಆಗ ನನಗೆ ತಿಳಿದ ವೈಶಿಷ್ಟ್ಯಪೂರ್ಣ ಅಂಶಗಳನ್ನು ಇಲ್ಲಿ ನೀಡಲಾಗಿದೆ.
(‘ಪ್ರತಿ ವರ್ಷ ಅಖಿಲ ಭಾರತೀಯ ಹಿಂದೂ ಅಧಿವೇಶನಕ್ಕೆ ಉಪಸ್ಥಿತ ಇರುವುದರಿಂದ ಪೂ. ಜೈನ ಅವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ಅಪಾರ ಶ್ರದ್ಧೆ ಮತ್ತು ಅನನ್ಯ ಭಕ್ತಿ ಇದೆ ಅವರಿಗೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸದಾ ಅವರೊಂದಿಗೆ ಇದ್ದಾರೆ’, ಎಂದು ಅನಿಸುತ್ತದೆ. ಹಿಂದೂ ರಾಷ್ಟ್ರದ (ರಾಮರಾಜ್ಯದ) ಪ್ರವರ್ತಕರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರನ್ನು ಸ್ಮರಿಸಿ ಮತ್ತು ಅವರ ಮೇಲಿರುವ ಶ್ರದ್ಧೆಯಿಂದ ಪೂ. (ನ್ಯಾಯವಾದಿ) ಹರಿ ಶಂಕರ ಜೈನ ಅವರು ಆ ಹೋರಾಟವನ್ನು ಹೋರಾಡಿದ್ದರು. ಸ್ಥೂಲದಿಂದ ಅವರು ಹೋರಾಡಿದರು ಮತ್ತು ಅದರಲ್ಲಿನ ಸೂಕ್ಷ್ಮದ ಕಾರ್ಯವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಮಾಡಿದರು, ಎಂದು ಪೂ. ಜೈನ ಅವರಿಗೆ ನಂಬಿಕೆ ಇದೆ.’ – ಸಂಕಲನಕಾರರು)
೨. ಪೂ. ಹರಿ ಶಂಕರ ಜೈನ ಅವರ ಮನಸ್ಸಿನಲ್ಲಿ ಪರಾತ್ಪರ ಗುರು ಡಾಕ್ಟರರ ಬಗ್ಗೆ ಹನುಮಂತನಂತೆ ಅತ್ಯುನ್ನತ ಭಕ್ತಿಭಾವ ಇರುವುದು
ತ್ರೇತಾಯುಗದಲ್ಲಿಯೂ ಹನುಮಂತನು ಶ್ರೀರಾಮನ ಕಾರ್ಯವನ್ನು ಮಾಡಲು ಹಗಲು ರಾತ್ರಿ ಶ್ರಮಿಸಿದ್ದನು. ಅವನ ಮನಸ್ಸಿನಲ್ಲಿಯೂ ಪ್ರಭು ಶ್ರೀರಾಮನ ಬಗ್ಗೆ ಅತ್ಯುನ್ನತ ಭಕ್ತಿ ಇತ್ತು; ಆದ್ದರಿಂದಲೇ ಅವನು ಪ್ರತಿಯೊಂದು ಸಲವೂ ಶ್ರೀರಾಮನ ಕಾರ್ಯದಲ್ಲಿ ವಿಜಯಿಯಾದನು ಮತ್ತು ಅವನು ಪ್ರಭುವಿನ ಮನಸ್ಸನ್ನು ಗೆದ್ದನು. ‘ಅದೇ ಭಾವ ಪೂ. ಹರಿ ಶಂಕರ ಜೈನ ಅವರಿಗೆ ಗುರುದೇವರ ಬಗ್ಗೆ ಇದೆ’, ಎಂದು ನನಗೆ ಅನಿಸಿತು.
೩. ಹನುಮಂತನ ದಾಸ್ಯಭಕ್ತಿ, ನಿಷ್ಠ, ತಳಮಳ, ಸಮರ್ಪಣಾಭಾವ ಇವುಗಳಿಂದ ಅವನಿಗೆ ಪ್ರಭುವಿನ ಕಾರ್ಯವನ್ನು ಕೌಶಲ್ಯದಿಂದ ಮಾಡಲು ಸಾಧ್ಯವಾಯಿತು, ಹಾಗೆಯೇ ಪೂ. ಜೈನ ಅವರ ಬಗ್ಗೆ ಅನಿಸುತ್ತದೆ.
೪. ಪೂ. ಜೈನ ಅವರು ಹನುಮಂತನಂತೆ ರಾಮಜನ್ಮ ಭೂಮಿ ಹೋರಾಟದ ಕಾರ್ಯದಲ್ಲಿ ಕೈಜೋಡಿಸಿರುವುದು.
ಮಹರ್ಷಿಗಳು ಹೇಳಿದಂತೆ ಗುರುದೇವರು ಸದ್ಯದ ಕಲಿಯುಗದ ಶ್ರೀ ವಿಷ್ಣುವಿನ ಜಯಂತಾವತಾರವಾಗಿದ್ದಾರೆ. ತ್ರೇತಾಯುಗದಲ್ಲಿ ಹನುಮಂತನು ಶ್ರೀರಾಮನ ಕಾರ್ಯದಲ್ಲಿ ಕೈಜೋಡಿಸಿದ್ದನು. ಅದೇ ರೀತಿ ಕಲಿಯುಗದಲ್ಲಿಯೂ ಪೂ. ಜೈನ ಅವರು ಕಠಿಣ ಮತ್ತು ಬಹುತೇಕ ಅಸಾಧ್ಯವೇ ಆಗಿದ್ದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಗಾಗಿ ಹೋರಾಟ ಮಾಡಿ ಯಶಸ್ವಿಯಾದರು.
೫. ಪೂ. ಜೈನ ಅವರ ಮನಸ್ಸಿನಲ್ಲಿ ಶ್ರೀರಾಮನ ಸ್ವರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಅನನ್ಯ ಭಾವ ಇರುವುದು
ಈ ಕಾರ್ಯವು ಕೇವಲ ಶ್ರೀರಾಮನ ಅಖಂಡ ಕೃಪೆ, ಶ್ರೀರಾಮನ ಅಪಾರ ಆಶೀರ್ವಾದ, ಈಶ್ವರನ ಬಗ್ಗೆ ಭಕ್ತಿ ಇರುವ ವ್ಯಕ್ತಿ ಮಾತ್ರ ಮಾಡಲು ಸಾಧ್ಯ. ಪೂ. ಜೈನ ಅವರ ಮನಸ್ಸಿನಲ್ಲಿ ಶ್ರೀರಾಮ ಸ್ವರೂಪವಾಗಿರುವ ಗುರುದೇವರ ಬಗ್ಗೆ ಅನನ್ಯ ಭಾವ ಇದೆ. ಇದರಿಂದಲೇ ಅವರು ವಿಜಯಿಯಾದರು ಮತ್ತು ಇಡೀ ಜಗತ್ತಿಗೆ ಇಂದು ಈ ಸುವರ್ಣ ದಿನವನ್ನು ನೋಡಲು ಸಿಗುತ್ತಿದೆ.’
– ಸೌ. ವೇದಶ್ರೀ ಹರ್ಷದ ಖಾನವಿಲಕರ, ಫೋಂಡಾ, ಗೋವಾ. (೧೨.೨.೨೦೨೪)