ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಗ್ರಂಥ ಲೇಖನದ ಕಾರ್ಯದ ಹಿಂದಿರುವ ವ್ಯಾಪಕ ದೃಷ್ಟಿಕೋನ !ಪರಾತ್ಪರ ಗುರು ಡಾ. ಆಠವಲೆಯವರು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯ ಹಾಗೂ ಲೇಖನವನ್ನು ಮಾಡಲು ಪ್ರಾಧಾನ್ಯತೆ ನೀಡುವುದರ ಕಾರಣ ‘ನನಗೆ ವಯಸ್ಸಿನ ಕಾರಣ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶಾರೀರಿಕ ಸ್ತರದಲ್ಲಿ ಕಾರ್ಯ ಮಾಡುವುದು ಅಸಾಧ್ಯವಾಗಿದೆ. ನಾನು ಕೇವಲ ಬರೆಯಬಹುದು ಹಾಗೂ ಅದೇ ರೀತಿ ಕಾಲಮಹಿಮೆಗನುಸಾರ ಯಾವ ಸೇವೆ ಮಾಡುವುದು ಅಗತ್ಯವಿದೆಯೋ ಆ ಸೇವೆಯನ್ನು ಮಾಡುತ್ತೇನೆ. ಈಗ ಕೆಲವು ವರ್ಷಗಳ ಬಳಿಕ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದರಿಂದ ನಾನು ಅದಕ್ಕಾಗಿ ಏನಾದರೂ ಮಾಡುವುದರ ಅಗತ್ಯವಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಯ ಬೀಜವನ್ನು ನಾನು ೧೦-೧೫ ವರ್ಷಗಳ ಹಿಂದೆಯೇ ಸಾಧಕರ ಮನಸ್ಸಿನಲ್ಲಿ ಬಿತ್ತಿರುವುದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯ ಮಾಡಲು ಸಾಧಕರು ಹಾಗೂ ಸಂತರು ತಯಾರಾಗಿದ್ದಾರೆ. ಹಿಂದೂ ರಾಷ್ಟ್ರದ ಸ್ಥಾಪನೆಯಾದ ಬಳಿಕ ಸಂಪೂರ್ಣ ಮನುಕುಲವು ಸಾಧನೆ ಮಾಡಿ ಪ್ರಗತಿ ಮಾಡಿಕೊಳ್ಳಲು ಆಧುನಿಕ ವೈಜ್ಞಾನಿಕ ಭಾಷೆಯ ಆಧ್ಯಾತ್ಮಿಕ ಗ್ರಂಥಗಳು ಆವಶ್ಯಕವಾಗಿವೆ. ಫೆಬ್ರವರಿ ೨೦೨೦ ರವರೆಗೂ ಸನಾತನದ ೩೨೩ ಗ್ರಂಥಗಳು ಮರಾಠಿ, ಹಿಂದಿ, ಗುಜರಾತಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಲಿ, ಒರಿಯಾ, ಅಸ್ಸಾಮಿ ಹಾಗೂ ಗುರುಮುಖಿ ಹೀಗೆ ೧೧ ಭಾರತೀಯ ಹಾಗೂ ಆಂಗ್ಲ, ಸರ್ಬಿಯನ್, ಜರ್ಮನ್, ಸ್ಪ್ಯಾನಿಷ್, ಫ್ರೆಂಚ್ ಹಾಗೂ ನೇಪಾಳಿ ಹೀಗೆ ೬ ವಿದೇಶಿ ಭಾಷೆಗಳಲ್ಲಿ ಒಟ್ಟು ೧೭ ಭಾಷೆಗಳಲ್ಲಿ ೭೯ ಲಕ್ಷ ೨೬ ಸಾವಿರ ಗ್ರಂಥಗಳು ಪ್ರಕಟಣೆಯಾಗಿದೆ. ನಾನು ಗ್ರಂಥಲೇಖನದ ಕಾರ್ಯ ಮಾಡಲು ಮತ್ತೊಂದು ಕಾರಣ ಹೀಗಿದೆ – ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವು ಸ್ಥೂಲದಲ್ಲಿ ಹಾಗೂ ತಾತ್ಕಾಲಿಕ ಹಾಗೂ ಸಂತರು ಹಾಗೂ ನಾಡಿಪಟ್ಟಿಯ ಹೇಳಿಕೆಯಂತೆ ಹಿಂದೂ ಧರ್ಮ ಪುನಃಸ್ಥಾಪನೆಯಾದ ಬಳಿಕ ಹಿಂದೂ ಧರ್ಮವು ಮಾನವನಿಗೆ ಸಾವಿರಾರು ವರ್ಷ ಮಾರ್ಗದರ್ಶನ ಮಾಡಲಿದೆ. ಅದಕ್ಕಾಗಿ ಗ್ರಂಥ-ಲೇಖನ ಮಹತ್ವದ್ದಾಗಿದೆ; ಆದ್ದರಿಂದ ನಾನು ಆ ಕಾರ್ಯವನ್ನು ಮಾಡುತ್ತಿದ್ದೇನೆ. – (ಪರಾತ್ಪರ ಗುರು) ಡಾ. ಆಠವಲೆ ೧ ಅ. ಪರಾತ್ಪರ ಗುರು ಡಾ. ಆಠವಲೆಯವರು ಬೇರೆ ಕಾರ್ಯಕ್ಕಿಂತ ಗ್ರಂಥ ಕಾರ್ಯವನ್ನು ಮಾಡಲು ಹೆಚ್ಚು ಪ್ರಾಧಾನ್ಯತೆ ನೀಡಲು ಈಶ್ವರೀ ಜ್ಞಾನದ ಮಾಧ್ಯಮದಿಂದ ಪುಷ್ಟಿ ಸಿಗುವುದು : ನನ್ನಿಂದ ಬೇರೆ ಕಾರ್ಯಕ್ಕಿಂತ ಗ್ರಂಥದ ಕಾರ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವುದು ಸರಿಯಾಗಿದೆ, ಎಂಬುದಕ್ಕೆ ಈಶ್ವರನು ಸಾಧಕರಿಗೆ ಸಿಗುವ ಈಶ್ವರೀಯ ಜ್ಞಾನದ ಮಾಧ್ಯಮದಿಂದ ಪಾವತಿಯನ್ನು ಈ ಕೆಳಗಿನಂತೆ ನೀಡಿದರು. ‘ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಸನಾತನದ ಗ್ರಂಥ ಸಂಪತ್ತು ಎಷ್ಟು ಅಪಾರವಾಗಿದೆ ಅಂದರೆ ಪರಾತ್ಪರ ಗುರು ಡಾ. ಆಠವಲೆಯವರು ಒಂದೇ ಜನ್ಮದಲ್ಲಿ ಎಲ್ಲ ಗ್ರಂಥಗಳ ಲೇಖನ ಪೂರ್ಣ ಮಾಡುವುದು ಅಸಾಧ್ಯವಾಗಿದೆ. ಆದ್ದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಮುಂದಿನ ಜನ್ಮದಲ್ಲಿ ಉಳಿದ ಗ್ರಂಥಗಳ ಲೇಖನವನ್ನು ಪೂರ್ಣಗೊಳಿಸಲಿದ್ದಾರೆ. – ಕು. ಮಧುರಾ ಭೋಸಲೆ (ಸೂಕ್ಷ್ಮದಲ್ಲಿ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ (೨೩.೧೨.೨೦೧೮, ರಾತ್ರಿ ೧೧.೫೦) |
ಸದ್ಯದ ಸ್ಥಿತಿಯಲ್ಲಿ ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಧರ್ಮಸಂಸ್ಥಾಪನೆ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಆವಶ್ಯಕತೆಯನ್ನು ಹೇಳಿ ಅದಕ್ಕಾಗಿ ಹಗಲಿರುಳು ಕಾರ್ಯನಿರತರಾಗಿರುವ ವಿಭೂತಿಯೆಂದರೆ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆ ! ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಎಲ್ಲ ಸಂತರ ಬೆಂಬಲ ಮತ್ತು ಸಹಾಯ ಆವಶ್ಯಕವಾಗಿದೆ ಎಂಬುದನ್ನು ಅರಿತುಕೊಂಡು ಪರಾತ್ಪರ ಗುರು ಡಾ. ಆಠವಲೆಯವರು ೧೯೯೬ ನೇ ಇಸವಿಯಿಂದಲೇ ಸಂತರ ಸಂಘಟನೆಯ ಕಾರ್ಯವನ್ನು ಮಾಡಲು ಆರಂಭಿಸಿದ್ದರು. ಪರಾತ್ಪರ ಗುರು ಡಾಕ್ಟರರಲ್ಲಿನ ಸಂತರ ಬಗೆಗಿನ ಭಾವ, ಕಲಿಯುವ ವೃತ್ತಿ, ನಮ್ರತೆ, ಪ್ರೇಮಭಾವ ಮುಂತಾದ ಗುಣಗಳಿಂದ ಅನೇಕ ಸಂತರು ಅವರಿಗೆ ಆತ್ಮೀಯರಾದರು ಮತ್ತು ಆ ಸಂತರು ಸನಾತನ ಸಂಸ್ಥೆಯ ಕಾರ್ಯದಲ್ಲಿ ಭಾಗಿಯಾದರು. ಮುಂದೆ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಿಂದಾಗಿ ರಾಷ್ಟ್ರ ಮತ್ತು ಧರ್ಮ ಕಾರ್ಯವನ್ನು ಮಾಡುವ ಸನಾತನದ ಅನೇಕ ಸಂತರು ಮತ್ತು ಸಾಧಕರು ತಯಾರಾದರು.
ಆಪಣಾಸಾರಖೆ ಕರಿತೀ ತಾತ್ಕಾಳ | ನಾಹೀ ಕಾಳವೇಳ ತಯಾ ಲಾಗಿ || ಗುರುಮಹಿಮೆ, ಎಂಬ ಮರಾಠಿ ನಾಣ್ನುಡಿ ಇದೆ. (ಭಾವಾರ್ಥ : ‘ತಮ್ಮಂತೆ ಮಾಡಿಕೊಳ್ಳುವರು ಕೂಡಲೇ | ಅದಕ್ಕೆ ಕಾಲಸಮಯ ತಗಲಲಾರದು || ಹೀಗಿದೆ ಗುರುಮಹಿಮೆ), ಪರಾತ್ಪರ ಗುರು ಡಾಕ್ಟರರ ಕೃಪೆ ಮತ್ತು ಬೋಧನೆಯಿಂದ ಸನಾತನದ ಸಂತರಲ್ಲಿ ಮತ್ತು ಸಾಧಕರಲ್ಲಿಯೂ ಅವರಂತಹ ಗುಣಗಳೇ ನಿರ್ಮಾಣವಾಗಿವೆ. ಈ ಗುಣಗಳಿಂದಾಗಿ ಈಗ ಸಮಾಜದಲ್ಲಿನ ಸಂತರೊಂದಿಗೆ ಸಂಬಂಧಿಕರಂತಹ ಆತ್ಮೀಯತೆ ಮತ್ತು ಸಂಬಂಧಗಳು ನಿರ್ಮಾಣವಾಗುತ್ತಿವೆ. ಪರಾತ್ಪರ ಗುರು ಡಾಕ್ಟರರು ಕಲಿಸಿದ ಯೋಗ್ಯ ಸಾಧನೆಯನ್ನು ಮಾಡಿದುದರಿಂದ ಸಾಧಕರಲ್ಲಿ ನಿರ್ಮಾಣವಾದ ಸಾಧಕತ್ವವನ್ನು ನೋಡಿ
ಸಮಾಜದಲ್ಲಿನ ಸಂತರು ಪ್ರಭಾವಿತರಾಗುತ್ತಾರೆ. ಜಗದ್‌ವ್ಯಾಪಿ ಹಿಂದೂ ಸಂಘಟನೆ ಮತ್ತು ಧರ್ಮಪ್ರಸಾರ, ಹಾಗೆಯೇ ವಿಶ್ವಶಾಂತಿಗಾಗಿ ಹಿಂದೂ ರಾಷ್ಟ್ರ ಸ್ಥಾಪನೆ, ಈ ಸನಾತನ ಸಂಸ್ಥೆಯ ಶ್ರೇಷ್ಠ ಧ್ಯೇಯಗಳಿಂದ ಸಮಾಜದಲ್ಲಿನ ಸಂತರಿಗೆ ಸಂಸ್ಥೆಯ ಕಾರ್ಯವು ಪ್ರಶಂಸನೀಯವೆನಿಸುತ್ತದೆ. ಹಾಗಾಗಿ ಎಲ್ಲ ಸಂತರಿಗೆ ಸನಾತನ ಸಂಸ್ಥೆ ‘ತಮ್ಮದೆಂದು ಅನಿಸುತ್ತದೆ ಮತ್ತು ಅವರು ಸನಾತನದ ಕಾರ್ಯದಲ್ಲಿ ಸಹಭಾಗಿಯಾಗುತ್ತಿದ್ದಾರೆ. ಇದರ ಬಗೆಗಿನ ಕೆಲವು ಅಂಶಗಳನ್ನು ನಾವು ೨೩/೧ ಈ ಸಂಚಿಕೆಯಲ್ಲಿ ನೋಡಿದೆವು. ಈ ವಾರ ನಾವು ಇತರ ಕೆಲವು ಅಂಶಗಳನ್ನು ನೋಡೋಣ.
೧. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡಿದುದರಿಂದ ಸನಾತನದ ಸಾಧಕರ ಸಾಧನೆಯಲ್ಲಾದ ಪ್ರಗತಿಯನ್ನು ನೋಡಿ ಸಮಾಜದಲ್ಲಿನ ಸಂತರು ಪ್ರಭಾವಿತರಾಗುವುದು
೧ ಅ. ಸನಾತನದ ಶ್ರೀ. ರಾಮ ಹೊನಪ ಇವರು ಓರ್ವ ಸಂತರ ಆದೇಶದಂತೆ ಕೆಲವು ಘಟನೆಗಳ ಸೂಕ್ಷ್ಮಪರೀಕ್ಷಣೆಯನ್ನು ಚಾಚೂ ತಪ್ಪದೇ ಮಾಡಿದಾಗ ಅವರ ಸೂಕ್ಷ್ಮ-ಜ್ಞಾನ ದೊರಕುವ ಕ್ಷಮತೆಯನ್ನು ನೋಡಿ ಆ ಸಂತರು ಪ್ರಭಾವಿತರಾಗುವುದು : ‘ಸನಾತನದ ಸೂಕ್ಷ್ಮ-ಜ್ಞಾನಪ್ರಾಪ್ತ ಮಾಡಿಕೊಳ್ಳುವ ಸಾಧಕ ಶ್ರೀ. ರಾಮ ಹೊನಪ ಇವರು ಓರ್ವ ಸಂತರ ಭೇಟಿಗಾಗಿ ಹೋದಾಗ ಸಂತರು ಅವರಿಗೆ ಕೆಲವು ಘಟನೆಗಳ ಸೂಕ್ಷ್ಮಪರೀಕ್ಷೆಯನ್ನು ಮಾಡಲು ಹೇಳಿದರು. ನಂತರ ಆ ಸಂತರು ಸಂಚಾರವಾಣಿ ಕರೆ ಮಾಡಿ ಆ ಸೂಕ್ಷ್ಮ ಪರೀಕ್ಷೆಯ ಬಗ್ಗೆ ತಮ್ಮ ಗುರುಗಳಿಗೆ ಹೇಳಿದರು. ಆಗ ಗುರುಗಳು ‘ಆ ಸೂಕ್ಷ್ಮಪರೀಕ್ಷೆ ಯೋಗ್ಯವಾಗಿದೆ’, ಎಂದು ಹೇಳಿದರು. ಆಗ ಶ್ರೀ. ರಾಮ ಹೊನಪ ಇವರ ಸೂಕ್ಷ್ಮ-ಜ್ಞಾನ ದೊರಕುವ ಕ್ಷಮತೆಯ ಕುರಿತು ಆ ಸಂತರು ಪ್ರಸನ್ನರಾದರು. ಅವರು, ‘ಇಂತಹ ಸಾಧಕರನ್ನು ತಯಾರಿಸುವ ಸನಾತನ ಸಂಸ್ಥೆ ಮತ್ತು ಅದು (ಅವರ ಗುರುಗಳು) ಮಾಡುತ್ತಿರುವ ಮಾರ್ಗದರ್ಶನವು ಅಮೂಲ್ಯವಾಗಿದೆ”, ಎಂದು ಹೇಳಿದರು. ಈ ರೀತಿ ಆ ಸಂತರು ಸನಾತನದೊಂದಿಗೆ ಜೋಡಿಸಲ್ಪಟ್ಟರು.’ – ಶ್ರೀ. ನಿಷಾದ ದೇಶಮುಖ (ಸೂಕ್ಷ್ಮ-ಜ್ಞಾನಪ್ರಾಪ್ತ ಮಾಡಿಕೊಳ್ಳುವ ಸಾಧಕ), ಸನಾತನ ಆಶ್ರಮ, ರಾಮನಾಥಿ, ಗೋವಾ.
೧. ಆ. ಕರ್ನಾಟದ ಓರ್ವ ಸಂತರ ಬಳಿ ಹೋದ ಸನಾತನದ ಸಾಧಕರನ್ನು ಸಂತರು ಭೇಟಿಯಾಗುವ ಮೊದಲೇ ‘ಅವರ ನಾಮಸಾಧನೆ ನಡೆದಿದೆ’, ಎಂದು ಗುರುತಿಸುವುದು ಮತ್ತು ಸಾಧಕರನ್ನು ಹತ್ತಿರ ಕರೆದು ಅವರೊಂದಿಗೆ ಮಾತನಾಡುವುದು : ‘ನಾನು ಇಬ್ಬರು ಸಾಧಕರೊಂದಿಗೆ ಕರ್ನಾಟಕದ ಓರ್ವ ಸಂತರ ಭೇಟಿಗಾಗಿ ಹೋಗಿದ್ದೆನು. ಅಲ್ಲಿನ ಸಭಾಗೃಹದಲ್ಲಿ ಸಂತರನ್ನು ಭೇಟಿಯಾಗಲು ಬಂದ ಜನರ ಬಹಳ ಜನಸಂದಣಿಯಿತ್ತು. ಆದುದರಿಂದ ನಾವು ಅಲ್ಲಿಯೇ ಒಂದು ಕಡೆ ಪಕ್ಕದಲ್ಲಿ ಕುಳಿತೆವು. ಅಲ್ಲಿ ಬಂದ ಜನರು ಸಂತರಿಗೆ ಮಾಯೆಯಲ್ಲಿನ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸುಮಾರು ಒಂದು ಗಂಟೆಯ ನಂತರ ಆ ಸಂತರು, “ನೀವೆಲ್ಲರೂ ಮಾಯೆಯ ವಿಚಾರಗಳಲ್ಲಿ ಸಿಕ್ಕಿರುವಿರಿ ಮತ್ತು ಪಕ್ಕದಲ್ಲಿ ಕುಳಿತ ಈ ಮೂವರೂ (ಸಾಧಕರು) ಮಾತ್ರ ಶ್ರೀಕೃಷ್ಣನ ನಾಮದಲ್ಲಿ ತಲ್ಲೀನರಾಗಿದ್ದಾರೆ”, ಎಂದು ಹೇಳಿದರು. ‘ನಮ್ಮೆಲ್ಲ ಸಾಧಕರ ನಾಮಸಾಧನೆ ನಡೆದಿದೆ’, ಎಂಬುದನ್ನು ಆ ಸಂತರು ಗುರುತಿಸಿದರು ಮತ್ತು ಜನಸಂದಣಿಯಿಂದ ನಮ್ಮನ್ನು ತಮ್ಮ ಬಳಿ ಕರೆದು ನಮ್ಮೊಂದಿಗೆ ಮಾತನಾಡಿದರು.
೧ ಆ ೧. ಸಂತರು ಸನಾತನದ ಶ್ರೀ. ರಾಮ ಹೊನಪ ಇವರಿಗೆ ‘ನಿಮ್ಮ ಗುರು (ಪರಾತ್ಪರ ಗುರು ಡಾ. ಆಠವಲೆ)ಗಳು ವೈಕುಂಠದಿಂದ ಬಂದಿದ್ದಾರೆ’, ಎಂದು ಹೇಳಿ ‘ಸನಾತನದ ಮತ್ತು ದತ್ತಗುರುಗಳ ಕಾರ್ಯವು ಒಂದೇ ಆಗಿದೆ’, ಎಂದು ಹೇಳುವುದು : ಸಂತರು ನಮಗೆ, “ನೀವು ಗೋವಾದಿಂದ ಬಂದಿರುವಿರಿ. ನಿಮ್ಮ ಗುರುಗಳು ವೈಕುಂಠದಿಂದ ಬಂದಿದ್ದಾರೆ ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೆಯೋ, ಆ ಆಶ್ರಮವೂ ವೈಕುಂಠವೇ ಆಗಿದೆ. ಭಾರತದಲ್ಲಿ ಕೆಲವೊಂದು ಸಂತರು ಮಾತ್ರ ಸಮಾಜದ ಉದ್ಧಾರದ ಕಾರ್ಯವನ್ನು ಮಾಡುತ್ತಿದ್ದಾರೆ. ನಿಮ್ಮ ಗುರುಗಳು ಅವರ ಪೈಕಿ ಒಬ್ಬರಾಗಿದ್ದಾರೆ. ಸನಾತನದ ಕಾರ್ಯವೆಂದರೆ, ದತ್ತಗುರುಗಳ ಕಾರ್ಯವೇ ಆಗಿದೆ”, ಎಂದು ಹೇಳಿದರು.
ನಂತರ ಆ ಸಂತರು ನನ್ನೊಂದಿಗೆ ಪ್ರೀತಿಯಿಂದ ಮಾತನಾಡಿದರು. ‘ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಮತ್ತು ಸನಾತನ ಸಂಸ್ಥೆಯ ಮೇಲಿನ ಸಂಕಟಗಳ ನಿವಾರಣೆಯಾಗಬೇಕೆಂದು’ ಅವರು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ‘ಮಹಾರುದ್ರಯಾಗ’ವನ್ನು ಮಾಡಲು ಹೇಳಿದರು. ಅವರ ಆಜ್ಞೆಗನುಸಾರ ನವೆಂಬರ್ ೨೦೧೯ ರಲ್ಲಿ ರಾಮನಾಥಿ ಆಶ್ರಮದಲ್ಲಿ ಈ ಯಾಗವನ್ನು ಮಾಡಲಾಯಿತು.’
– ಶ್ರೀ. ರಾಮ ಹೊನಪ (ಸೂಕ್ಷ್ಮ-ಜ್ಞಾನಪ್ರಾಪ್ತ ಮಾಡಿಕೊಳ್ಳುವ ಸಾಧಕ), ಸನಾತನ ಆಶ್ರಮ, ರಾಮನಾಥಿ, ಗೋವಾ.
೨. ಸನಾತನ ಸಂಸ್ಥೆಯ ಕಾರ್ಯದಿಂದಾಗಿ ಸಮಾಜದಲ್ಲಿನ ಸಂತರು ಸನಾತನದೊಂದಿಗೆ ಜೋಡಿಸಲ್ಪಡುವುದು
೨ ಅ. ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನ ಸಂಸ್ಥೆಯ ಕಾರ್ಯವೇ, ಸಾಧಕರ ನಿಜವಾದ ಪರಿಚಯ !
‘ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನ ಸಂಸ್ಥೆಯ ಕಾರ್ಯ, ಇವುಗಳಿಂದಲೇ ಸಮಾಜದಲ್ಲಿನ ಸಂತರು ಸನಾತನದ ಸಾಧಕರನ್ನು ಸ್ವೀಕರಿಸುತ್ತಾರೆ. ನಾವು ಭಾರತದಾದ್ಯಂತ ಪ್ರವಾಸ ಮಾಡುವಾಗ ಅನೇಕ ಜನರನ್ನು ಮತ್ತು ಸಂತರನ್ನು ಭೇಟಿಯಾಗುತ್ತೇವೆ. ಆಗ ಹೆಜ್ಜೆಹೆಜ್ಜೆಗೂ ನಮಗೆ ಇದರ ಅನುಭವ ಬರುತ್ತದೆ.
೨ ಆ. ವಾರಣಾಸಿಯ ಲಿಂಗಾಯತ ಮಠದ ಶಂಕರಾಚಾರ್ಯ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು ಸನಾತನ ಸಂಸ್ಥೆಯ ಕಾರ್ಯವನ್ನು ತಿಳಿದುಕೊಂಡು ಸಕಾರಾತ್ಮಕ ವಿಶ್ವಾಸವನ್ನು ವ್ಯಕ್ತಪಡಿಸುವುದು ಮತ್ತು ಸಂಸ್ಥೆಗೆ ಆಶೀರ್ವಾದ ನೀಡುವುದು
‘ಈ ಪ್ರಸಂಗ ಸುಮಾರು ೨೦೦೦ ನೇಯ ಇಸವಿಯದ್ದಾಗಿದೆ. ವಾರಣಾಸಿಯ ಲಿಂಗಾಯತ ಮಠದ ಶಂಕರಾಚಾರ್ಯ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು ಮಿರಜನ ಸನಾತನದ ಪೂ. ಡಾ. (ಸೌ.) ಶರದಿನಿ ಕೋರೆ ಇವರ ಮನೆಗೆ ಬಂದಿದ್ದರು. ಅವರಿಗೆ ಸನಾತನ ಸಂಸ್ಥೆಯ ಕಾರ್ಯದ ಬಗ್ಗೆ ಹೇಳಿದಾಗ ಅವರು, “ಈ ಕಾರ್ಯವನ್ನು ನೋಡಿ, ‘ನೀವು ಒಳ್ಳೆಯ ಕಾರ್ಯವನ್ನೇ ಮಾಡುತ್ತಿರುವಿರಿ ಎಂದು ನನಗೆ ವಿಶ್ವಾಸವೆನಿಸುತ್ತಿದೆ. ನಿಮ್ಮ ಗುರುದೇವರ ಮಾರ್ಗದರ್ಶನವನ್ನು ಪಡೆದು ಸಾಧನೆ ಮತ್ತು ಕಾರ್ಯವನ್ನು ಮಾಡುತ್ತಿರಬೇಕು, ಎಂದು ಹೇಳಿದರು. ಅನಂತರ ಅವರು ಕಾಲಕಾಲಕ್ಕೆ ಸಂಸ್ಥೆಯ ಕಾರ್ಯಕ್ಕೆ ಆಶೀರ್ವಾದ ಮತ್ತು ಸಮರ್ಥನೆಯನ್ನು ನೀಡುತ್ತಿದ್ದರು. – (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ.
೨ ಇ. ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥಗಳಲ್ಲಿನ ಚೈತನ್ಯದಿಂದ ಸಂತರು ಸನಾತನ ಸಂಸ್ಥೆಯೊಂದಿಗೆ ಜೊತೆಗೂಡುವುದು
೨ ಇ ೧. ಶ್ರೀ ಮಹಾಮಂಡಲೇಶ್ವರ ಶ್ರೀ ಶ್ರೀ ೧೦೦೮ ಮಹಂತ ಗೋಪಾಲದಾಸ ಮಹಾರಾಜರು, ಜಮ್ಮು : ಸನಾತನದ ಸಾಧಕರು ಮಹಾರಾಜರನ್ನು ಭೇಟಿಯಾದರು ಮತ್ತು ಅವರಿಗೆ ಸನಾತನದ ಗ್ರಂಥಗಳನ್ನು ತೋರಿಸಿದರು. ಆಗ ಮಹಾರಾಜರು ಸಾಧಕರಿಗೆ, “ನನಗೆ ಸನಾತನದ ಗ್ರಂಥಗಳನ್ನು ನೋಡಿ ಬಹಳ ಒಳ್ಳೆಯದೆನಿಸಿತು. ನಾನು ನಿಮಗೆ ಪೂರ್ಣ ಸಹಕಾರ ನೀಡುತ್ತೇನೆ. ಜಮ್ಮುವಿನಲ್ಲಿ ನಮ್ಮ ೩ ಆಶ್ರಮಗಳಿವೆ. ನೀವು ಆಶ್ರಮಕ್ಕೆ ಭೇಟಿ ನೀಡಿರಿ. ಅಲ್ಲಿ ನಿಮಗೆ ಇರಲು ಪೂರ್ಣ ವ್ಯವಸ್ಥೆಯನ್ನು ಮಾಡುವೆನು, ಎಂದು ಹೇಳಿದರು. (ದೈನಿಕ ‘ಸನಾತನ ಪ್ರಭಾತ, ೧೯.೧.೨೦೧೯)
೨ ಈ. ‘ಸನಾತನ ಪ್ರಭಾತ’ದಲ್ಲಿನ ಧರ್ಮಜಾಗೃತಿಯ ಬಗೆಗಿನ ನಿರ್ಭಯ ಬರವಣಿಗೆ ಮತ್ತು ಚೈತನ್ಯದಿಂದ ಸಂತರು ಪ್ರಭಾವಿತರಾಗುವುದು
ಸನಾತನದ ರಾಷ್ಟ್ರ ಮತ್ತು ಧರ್ಮದ ವಿಚಾರಗಳನ್ನು ನಿಯತಕಾಲಿಕೆ ‘ಸನಾತನ ಪ್ರಭಾತದಲ್ಲಿ ಪ್ರಸಾರ ಮಾಡಲಾಗುತ್ತದೆ. ಈ ವಿಚಾರಗಳು ಸಮಾಜದಲ್ಲಿನ ಸಂತರು, ಧರ್ಮಪ್ರೇಮಿಗಳು ಮತ್ತು ರಾಷ್ಟ್ರಪ್ರೇಮಿಗಳಿಗೆ ಬಹಳ ಇಷ್ಟವಾಗುತ್ತವೆ. ಅವರಿಗೆ ‘ಸನಾತನ ಪ್ರಭಾತ ಸನಾತನದ ಮುಖವಾಣಿಯೇ ಆಗಿದೆ ಎಂದು ಅನಿಸುತ್ತದೆ.
೨ ಈ ೧. ಪೂ. ಚಂದ್ರಪ್ರಕಾಶ ಖೆತಾನಜೀ, ಝುಂಝುನೂ, ರಾಜಸ್ಥಾನ
೨ ಈ ೧ ಅ. ಪೂ. ಚಂದ್ರಪ್ರಕಾಶ ಖೆತಾನಜೀಯವರು ಪಾಕ್ಷಿಕ ‘ಸನಾತನ ಪ್ರಭಾತದ ಪ್ರಶಂಸೆಯನ್ನು ಮಾಡಿ ಸಾಧಕರ ನಿವಾಸವ್ಯವಸ್ಥೆಯನ್ನು ತಮ್ಮ ಆಶ್ರಮದಲ್ಲಿ ಮಾಡುವ ಸಿದ್ಧತೆಯನ್ನು ವ್ಯಕ್ತಪಡಿಸುವುದು : ‘ಝುಂಝುನೂ, ರಾಜಸ್ಥಾನದಲ್ಲಿನ ‘ಶ್ರೀ ಅರವಿಂದ ಆಶ್ರಮದ ಪೂ. ಚಂದ್ರಪ್ರಕಾಶ ಖೆತಾನಜೀ ಇವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರಿಗೆ ಪಾಕ್ಷಿಕ ‘ಸನಾತನ ಪ್ರಭಾತವನ್ನು ನೀಡಿದೆವು. ಪಾಕ್ಷಿಕವನ್ನು ನೋಡಿದ ನಂತರ ಅವರು “ಇಂದು ಹಿಂದೂ ಧರ್ಮದ ಬಗ್ಗೆ ಇಂತಹ ಶಬ್ದಗಳಲ್ಲಿ ಬರೆಯುವ ಒಂದೂ ಪಾಕ್ಷಿಕ ಇಲ್ಲ. ‘ಹಿಂದೂ ಧರ್ಮವನ್ನು ತಿಳಿದುಕೊಳ್ಳುವಂತಹ ಯಾವುದೇ ವ್ಯಕ್ತಿ ಇಲ್ಲವೇ ?, ಎಂದು ನನಗೆ ಅನಿಸುತ್ತಿತ್ತು. ಆದರೆ ನಿಮ್ಮ ಈ ಪ್ರಯತ್ನವನ್ನು ನೋಡಿ ನನಗೆ ಆನಂದವಾಯಿತು. ಈ ಪಾಕ್ಷಿಕವು ಧರ್ಮ ಪ್ರಬೋಧನೆಗಾಗಿ ಮಹತ್ವದ್ದಾಗಿದೆ ಮತ್ತು ಇದರಿಂದ ಸೂಕ್ಷ್ಮ ಸ್ತರದಲ್ಲಿ ಯಾವ ಸ್ಪಂದನಗಳು ಬರುತ್ತಿವೆಯೋ, ಅವುಗಳಿಗೂ ಬಹಳ ಮಹತ್ವವಿದೆ. ನೀವು ಯೋಗಿ ಅರವಿಂದರ ಕಾರ್ಯವನ್ನೇ ಮಾಡುತ್ತಿರುವಿರಿ. ಇನ್ನು ಮುಂದೆ ನೀವು ಯಾವಾಗ ಝುಂಝುನೂಕ್ಕೆ ಬರುವಿರೋ, ಆಗ ನಮ್ಮ ಆಶ್ರಮದಲ್ಲಿ ಉಳಿಯಲು ಬನ್ನಿರಿ. ನೀವು ಆಶ್ರಮದ ನಿಯಮಗಳನ್ನು ಪಾಲಿಸದಿದ್ದರೂ ನಡೆದೀತು. ನಿಮಗೆ ನಮ್ಮಿಂದ ಯಾವುದೇ ಅನಾನುಕೂಲತೆಗಳಾದರೆ, ನಮಗೆ ಹೇಳಿರಿ, ಎಂದು ಹೇಳಿದರು. ಆಗ ಅವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕಾಗಿ ತಕ್ಷಣ ಅರ್ಪಣೆಯನ್ನು ನೀಡಲು ಒಪ್ಪಿಕೊಂಡರು.
೨ ಈ ೧ ಆ. ಪೂ. ಚಂದ್ರಪ್ರಕಾಶ ಖೆತಾನಜೀ ಇವರು ಸನಾತನಕ್ಕೆ ಮಾಡಿದ ಇತರ ಸಹಾಯ
೧. ಪೂ. ಖೆತಾನಜೀ ಇವರು ಸಾಧಕರಿಗಾಗಿ ಆಯುರ್ವೇದಿಕ ಔಷಧಿಗಳನ್ನು ಕೊಟ್ಟರು.
೨. ದೆಹಲಿಯಲ್ಲಿ ನಡೆಯುವ ‘ಉತ್ತರ ಭಾರತ ಹಿಂದೂ ರಾಷ್ಟ್ರ ಅಧಿವೇಶನದ ಸೇವೆಗಾಗಿ ಬರುವ ಸಾಧಕರ ನಿವಾಸದ ವ್ಯವಸ್ಥೆಯನ್ನು ಅವರು ದೆಹಲಿಯ ‘ಶ್ರೀ ಅರವಿಂದ ಆಶ್ರಮದಲ್ಲಿ ಮಾಡಿದರು.
೩. ಅವರು ಹರಿದ್ವಾರಕ್ಕೆ ಪ್ರಚಾರಕ್ಕೆ ಹೋಗುವ ಸಾಧಕರ ನಿವಾಸ ಮತ್ತು ಭೋಜನದ ವ್ಯವಸ್ಥೆಯನ್ನು ಹರಿದ್ವಾರದಲ್ಲಿನ ತಮ್ಮ ಆಶ್ರಮದಲ್ಲಿ ಮಾಡುತ್ತಾರೆ.
೪. ಅವರು ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳಕ್ಕಾಗಿ ಸಹಾಯ ಮಾಡಿದರು.
– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ.
೨ ಉ. ಸನಾತನ ಸಂಸ್ಥೆಯ ಗ್ರಂಥಗಳನ್ನು ಮತ್ತು ಧರ್ಮಶಿಕ್ಷಣದ ಫಲಕಗಳ ಪ್ರದರ್ಶನವನ್ನು ನೋಡಿ ಸನಾತನಕ್ಕೆ ಸಹಾಯ ಮಾಡುವ ಸಿದ್ಧತೆಯನ್ನು ತೋರಿಸುವ ಸಂತರು
೨ ಉ ೧. ಮಹಂತ ವಿನೋದಗಿರಿಜೀ ಮಹಾರಾಜರು, ಹರಿದ್ವಾರ : ‘ಸನಾತನ ಸಂಸ್ಥೆಯು ಏರ್ಪಡಿಸಿದ ಪ್ರದರ್ಶನವನ್ನು ನೋಡಿ ಮಹಂತ ವಿನೋದಗಿರಿಜೀ ಮಹಾರಾಜರು ತುಂಬಾ ಪ್ರಭಾವಿತರಾದರು. ಅವರು ಸನಾತನದ ಸಾಧಕರಿಗೆ, “ನಾವು ರಾಷ್ಟ್ರ ಮತ್ತು ಧರ್ಮಕ್ಕಾಗಿ ತನು-ಮನ-ಧನವನ್ನು ಅರ್ಪಿಸಲು ಸದಾ ಸಿದ್ಧರಿದ್ದೇವೆ. ನೀವು ಹರಿದ್ವಾರಕ್ಕೆ ಬನ್ನಿರಿ. ಅಲ್ಲಿ ನಾವು ಸನಾತನದ ಕೇಂದ್ರವನ್ನು ಪ್ರಾರಂಭಿಸೋಣ, ಎಂದು ಹೇಳಿದರು. (ದೈನಿಕ ‘ಸನಾತನ ಪ್ರಭಾತ ರತ್ನಾಗಿರಿ ಆವೃತ್ತಿ (೧೨.೩.೨೦೧೩) – ಸದ್ಗುರು (ಕು.) ಸ್ವಾತಿ ಖಾಡ್ಯೆ
೨ ಉ ೨. ಮಹಂತ ಗ್ಯಾನದಾಸ ಮಹಾರಾಜರು, ನಾಸಿಕ : ‘ಸನಾತನ ಸಂಸ್ಥೆಯು ನಾಸಿಕನಲ್ಲಿ ಏರ್ಪಡಿಸಿದ ಪ್ರದರ್ಶನವನ್ನು ನೋಡಲು ಮಹಂತ ಗ್ಯಾನದಾಸ ಮಹಾರಾಜರು ಬಂದಿದ್ದರು. ಅವರು ಸನಾತನದ ಸಾಧಕರಿಗೆ,
ನಿಮ್ಮ ಗುರುಗಳನ್ನು ನಾನು ನೋಡಿಲ್ಲ; ಆದರೆ ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ. ನಿಜ ವಾಗಿಯೂ ಇಂದು ತಾವು ಯಾವ ಕಾರ್ಯವನ್ನು ಮಾಡು ತ್ತಿರುವಿರೋ, ಆ ಕಾರ್ಯವನ್ನು ಶಂಕರಾಚಾರ್ಯರು ಮಾಡಬೇಕು, ಆದರೆ ನಿಮ್ಮ ಬಳಿ ಹಣವಿಲ್ಲದಿರುವಾಗಲೂ ನೀವೆಲ್ಲರೂ ನಿಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡು ಈ ಕಾರ್ಯವನ್ನು ಮಾಡುತ್ತಿರುವಿರಿ. ಈ ಕಾರ್ಯಕ್ಕೆ ನನ್ನ ಆಶೀರ್ವಾದವಿದೆ. ನಿಮಗೆ ಯಾವಾಗಲಾದರೂ ಯಾವುದೇ ಸಹಾಯ ಬೇಕಿದ್ದರೂ, ನನಗೆ ಹೇಳಿರಿ ನಾನು ಸಹಾಯ ಮಾಡುತ್ತೇನೆ, ಎಂದು ಹೇಳಿದರು. – (ಸದ್ಗುರು) ಕು. ಸ್ವಾತಿ ಖಾಡ್ಯೆ, ನಾಸಿಕ (೧೧.೯.೨೦೧೫)
೨ ಊ. ಸನಾತನದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವು ಪೂರ್ಣತ್ವಕ್ಕೆ ಹೋಗುವ ಬಗ್ಗೆ ಆಶ್ವಾಸನೆ ನೀಡುವ ಸಂತರು
೨ ಊ ೧. ಆಚಾರ್ಯ ಶ್ರೀ ಸ್ವಾಮೀ ಪ್ರಣವಾನಂದ ಸರಸ್ವತಿ, ಮಹಾಮಂಡಲೇಶ್ವರ, ಮಥುರಾ-ವೃಂದಾವನ, ಉತ್ತರಪ್ರದೇಶ : ‘ಸನಾತನ ಸಂಸ್ಥೆಯಲ್ಲಿ ಕಾರ್ಯ ಮಾಡುವ ತರುಣರು ಸಂಕಲ್ಪಬದ್ಧರಾಗಿದ್ದು ಅವರು ‘ಹಿಂದೂ ಸಮಾಜ ಮತ್ತು ‘ಹಿಂದೂ ರಾಷ್ಟ್ರದ ಶಕ್ತಿಯಾಗಿದ್ದಾರೆ. ಹಿಂದೂ ರಾಷ್ಟ್ರದ ಭವಿಷ್ಯವು ಉಜ್ವಲವಾಗಿದೆ. ಆದಷ್ಟು ಬೇಗನೆ ನಾವು ಹಿಂದೂ ರಾಷ್ಟ್ರದ ಸಂಕಲ್ಪವನ್ನು ಸಾಕಾರಗೊಳಿಸೋಣ. (ದೈನಿಕ ‘ಸನಾತನ ಪ್ರಭಾತ, ೧೬.೨.೨೦೧೯)
ಸನಾತನ ಸಂತರು ಮತ್ತು ಸಾಧಕರು ಇವರಿಗೆ ಸೂಚನೆ ಧರ್ಮ ಪ್ರಸಾರದ ಸೇವೆ ಮಾಡುವ ಸನಾತನದ ಸಂತರು ಮತ್ತು ಸಾಧಕರು ವಿವಿಧ ಸಂತರ ದರ್ಶನಕ್ಕಾಗಿ ಅಥವಾ ಅವರ ಕಾರ್ಯಕ್ರಮಕ್ಕಾಗಿ ಹೋಗುತ್ತಿರುತ್ತಾರೆ. ಇಂತಹ ಸಮಾಜದಲ್ಲಿ ಸಂತರ ಬಗ್ಗೆ ಮೇಲಿನ ಅನುಭವಕ್ಕಿಂತ ಬೇರೆ ರೀತಿಯ ಅನುಭವ ಇದ್ದರೆ ಅವರು ಅದನ್ನು ರಾಮನಾಥಿ ಆಶ್ರಮದ [email protected] ಈ ವಿ-ಅಂಚೆಯ ಮೂಲಕ ಕಳುಹಿಸಬೇಕು |
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. * ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ. |