ಇಂತಹ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ ? ಪೊಲೀಸರು ಸ್ವತಃ ಏಕೆ ಕ್ರಮ ಕೈಗೊಳ್ಳುವುದಿಲ್ಲ ? – ಸಂಪಾದಕರು
ಭೋಪಾಲ್ : ಆಗಸ್ಟ್ 15 ರಂದು ಇಂದೋರನ ನೇತಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತು ಉಜ್ಜಯಿನಿಯಲ್ಲಿ ಮೊಹರ್ರಂ ಆಚರಿಸುವ ಸಮಯದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಯನ್ನು ಕೂಗಲಾಯಿತು. ಇದು ತುಂಬಾ ಗಂಭೀರವಾಗಿದೆ ಮತ್ತು ದೇಶದ ಆಂತರಿಕ ಭದ್ರತೆ ಮತ್ತು ಮಧ್ಯಪ್ರದೇಶದ ಶಾಂತಿಗೆ ಅಪಾಯಕಾರಿಯಾಗಿದೆ. ಉಜ್ಜಯಿನಿ ಪ್ರಕರಣದಲ್ಲಿ 11 ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ, ಆದರೆ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಆದ್ದರಿಂದ ಅವರನ್ನು ತಕ್ಷಣ ಬಂಧಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಒತ್ತಾಯಿಸಿದೆ.
ಹಿಂದೂ ಜನಜಾಗೃತಿ ಸಮಿತಿಯ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯ ಸಂಯೋಜಕರಾದ ಶ್ರೀ. ಆನಂದ ಜಖೋಟಿಯಾ ಇವರು ಪತ್ರಿಕಾ ಪ್ರಕಟಣೆಯಲ್ಲಿ, ಉಜ್ಜಯಿನಿ ಹಿಂದೂಗಳ ಪುರಾತನ ನಗರವಾಗಿದ್ದು, ಅಲ್ಲಿ ವಿಶ್ವವಿಖ್ಯಾತ ಶ್ರೀ ಮಹಾಕಾಲನ ದರ್ಶನಕ್ಕೆ ದೇಶ-ವಿದೇಶಗಳಿಂದ ಭಕ್ತರು ಬರುತ್ತಾರೆ. ಕೋಟಿಗಟ್ಟಲೆ ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಭಗವಾನ್ ಮಹಾಕಾಲನ ನಗರದಲ್ಲಿ, ಇಂತಹ ಘೋಷಣೆಗಳನ್ನು ನೀಡುವ ಮೂಲಕ ಹಿಂದೂಗಳ ಶ್ರದ್ಧೆಯನ್ನು ಉದ್ದೇಶಪೂರ್ವಕವಾಗಿ ನೋಯಿಸಲಾಗಿದೆ. ‘ಒಂದುಕಡೆ ಕೊರೊನಾ ಮಹಾಮಾರಿಯ ಹೆಸರಿನಲ್ಲಿ ಹಿಂದುಗಳ ಧಾರ್ಮಿಕ ಹಬ್ಬಗಳನ್ನು ಆಚರಿಸುವುದನ್ನು ನಿಷೇಧಿಸಲಾಗಿದೆ, ಮತ್ತೊಂದೆಡೆ, ಅಲ್ಪಸಂಖ್ಯಾತರಿಗೆ ತಮ್ಮ ಹಬ್ಬಗಳನ್ನು ಆಚರಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ಏಕೆ ನೀಡಲಾಗುತ್ತಿದೆ ?’ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಕೇರಳದಲ್ಲಿ ಈದ್ ಸಮಯದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸುವುದರಿಂದ ಕೊರೊನಾ ರೋಗಿಗಳ ಸಂಖ್ಯೆ ಅನೇಕ ಪಟ್ಟುಗಳಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ‘ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಉಜ್ಜಯಿನಿಯಲ್ಲಿ ಮೊಹರಂನ ವತಿಯಿಂದ ಮೆರವಣಿಗೆ ನಡೆಸಲು ಸಂಬಂಧಪಟ್ಟವರು ಅನುಮತಿ ಪಡೆದಿದ್ದಾರೆಯೇ ?’ ಎಂಬ ಬಗ್ಗೆಯೂ ತನಿಖೆ ನಡೆಸಬೇಕು.