ನೆರೆ, ಭೂಕಂಪ, ಗಲಭೆ, ಮಹಾಯುದ್ಧ ಇತ್ಯಾದಿ ಆಪತ್ತುಗಳ ಸಮಯದಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಯು ಉದ್ಭವಿಸುತ್ತದೆ. ಇಂತಹ ಸಮಯದಲ್ಲಿ ಎಲ್ಲೆಡೆ ವಿಧ್ವಂಸವಾಗುವುದು, ದಂಗೆಗಳಾಗುವುದು, ಬೆಂಕಿ ಹತ್ತುವುದು, ಅಲ್ಲಲ್ಲಿ ಬೀದಿಗಳಲ್ಲಿ ಮೃತದೇಹಗಳು ಬಿದ್ದಿರುವುದು ಮುಂತಾದ ಘಟನೆಗಳು ಘಟಿಸುತ್ತವೆ. ಇಂತಹ ಘಟನೆಗಳನ್ನು ನೋಡಿ ಅಥವಾ ಕೇಳಿ ಅನೇಕರ ಮನಸ್ಸು ಅಸ್ಥಿರವಾಗುವುದು, ಮನಸ್ಸಿನ ಮೇಲೆ ಒತ್ತಡ ಬರುವುದು, ಕಾಳಜಿಯಾಗುವುದು, ಭಯವಾಗುವುದು, ಪರಿಸ್ಥಿತಿಯನ್ನು ಸ್ವೀಕರಿಸಲು ಸಾಧ್ಯವಾಗದಿರುವುದು ಮುಂತಾದ ತೊಂದರೆಗಳಾಗುತ್ತವೆ. ಬಹಳಷ್ಟು ಜನರು ಸಂಬಂಧಿಕರಲ್ಲಿಯೂ ಭಾವನಾತ್ಮಕ ದೃಷ್ಟಿಯಿಂದ ಸಿಲುಕಿಕೊಳ್ಳುತ್ತಾರೆ. ಹೀಗಾದಾಗ ಮಾನಸೋಪಚಾರ ತಜ್ಞರ ಸಹಾಯ ಪಡೆಯಬೇಕು. ಇದರೊಂದಿಗೆ ಈ ರೀತಿಯ ತೊಂದರೆಗಳಾಗಬಾರದೆಂದು, ಅಂದರೆ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳದೇ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗಬೇಕೆಂದು ಮಾಡಬೇಕಾದ ಉಪಾಯ ಯೋಜನೆಗಳನ್ನು ಮುಂದೆ ಕೊಡಲಾಗಿದೆ.
ಎಲ್ಲ ಆಪತ್ಕಾಲಗಳ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ
ಅ. ಯಾವಾಗ ‘ಮುಂಬರುವ ಆಪತ್ಕಾಲದ ಸಿದ್ಧತೆ ಎಂದು ನಾನು ಸಂಗ್ರಹಿಸಿಟ್ಟ ಧಾನ್ಯ ಮತ್ತು ಔಷಧಿಗಳು ಆಪತ್ಕಾಲ ಮುಗಿಯುವ ಮೊದಲೇ ಮುಗಿಯಬಹುದು’, ಎಂಬ ವಿಚಾರಗಳಿಂದ ನನಗೆ ಕಾಳಜಿ ಆಗುವುದೋ, ಆಗ ಇಲ್ಲಿಯವರೆಗೆ ‘ಜೀವನದಲ್ಲಿ ಪ್ರತಿಯೊಂದು ಕಠಿಣ ಪ್ರಸಂಗದಲ್ಲಿ ದೇವರು ನನಗೆ ಆವಶ್ಯಕವಿರುವ ಎಲ್ಲವನ್ನು ಕೊಟ್ಟಿದ್ದಾನೆ’, ಎಂಬುದು ನನಗೆ ಅರಿವಾಗುವುದು ಮತ್ತು ನಾನು ನಿಶ್ಚಿಂತಳಾಗಿದ್ದು ಸಾಧನೆಯತ್ತ ಗಮನವನ್ನು ಕೊಡುವೆನು.
ಆ. ಯಾವಾಗ ‘ಮುಂಬರುವ ಆಪತ್ಕಾಲದ ಸಿದ್ಧತೆಯೆಂದು ಸಂಗ್ರಹಿಸಿಟ್ಟ ಧಾನ್ಯ ಮತ್ತು ಔಷಧಿಗಳು ಆಪತ್ಕಾಲ ಮುಗಿಯುವ ಮೊದಲೇ ಮುಗಿಯುವವು’, ಎಂಬ ವಿಚಾರದಿಂದ ನನಗೆ ಕಾಳಜಿ ಆಗುವುದೋ, ಆಗ ‘ಪ್ರಮುಖ ಸಾಧಕರ ಮಾರ್ಗದರ್ಶನಕ್ಕನುಸಾರ ನಾನು ಆವಶ್ಯಕವಿರುವ ಎಲ್ಲ ವಸ್ತುಗಳ ಸಾಕಷ್ಟು ಸಂಗ್ರಹವನ್ನು ಮಾಡಿದ್ದೇನೆ’, ಎಂದು ನನಗೆ ಅರಿವಾಗುವುದು ಮತ್ತು ನಾನು ಶ್ರದ್ಧೆಯಿಂದ ಇತರ ಸಕಾರಾತ್ಮಕ ಪ್ರಯತ್ನಗಳನ್ನು ಮಾಡುವೆನು / ಶ್ರದ್ಧೆಯಿಂದ ಸಾಧನೆಯ ಪ್ರಯತ್ನವನ್ನು ಮಾಡುವೆನು.
ತುರ್ತು ಪರಿಸ್ಥಿತಿಯನ್ನು ಎದುರಿಸಲು ಮನಸ್ಸಿನ ಸಿದ್ಧತೆಯನ್ನು ಮಾಡಿಕೊಳ್ಳಲು ಆ ಪ್ರಸಂಗ ಘಟಿಸುವ ಮೊದಲು ಕೊಡಬೇಕಾದ ಸ್ವಯಂಸೂಚನೆ
ಪ್ರಸಂಗ : ‘ಆಪತ್ಕಾಲದಲ್ಲಿ ನನಗೆ ಸಾಕಷ್ಟು ಆಹಾರ-ನೀರು ಸಿಗಬಹುದಲ್ಲ ?’ ಎಂದು ಕಾಳಜಿ ಆಗುವುದು
ಅ. ಯಾವಾಗ ‘ಮೂರನೇಯ ಜಾಗತಿಕ ಮಹಾಯುದ್ಧದ ಕಾಲಾವಧಿಯಲ್ಲಿ ನನ್ನ ಬಳಿ ಆವಶ್ಯಕ ಆಹಾರಧಾನ್ಯಗಳು ಮತ್ತು ನೀರು ಇರುವುದಲ್ಲ ?’, ಎಂಬ ವಿಚಾರದಿಂದ ನನಗೆ ಕಾಳಜಿ ಆಗುವುದೋ, ಆಗ ‘ಇಲ್ಲಿಯವರೆಗೆ ದೇವರೇ ನನಗೆ ಆವಶ್ಯಕವಿರುವ ಆಹಾರಧಾನ್ಯ ಮತ್ತು ನೀರನ್ನು ನೀಡಿದ್ದಾನೆ ಮತ್ತು ಇನ್ನು ಮುಂದೆಯೂ ಅವನೇ ಅವುಗಳನ್ನು ನೀಡುವವನಿದ್ದಾನೆ’, ಎಂದು ನನಗೆ ಅರಿವಾಗುವುದು ಮತ್ತು ನಾನು ಸಾಧನೆಯ ಕಡೆಗೆ ಗಮನವನ್ನು ಕೊಡುವೆನು.
ಆ. ಯಾವಾಗ ‘ಮುಂಬರುವ ಆಪತ್ಕಾಲದ ಸಿದ್ಧತೆ ಎಂದು ಸಂಗ್ರಹಿಸಿಟ್ಟ ಧಾನ್ಯ ಮತ್ತು ಔಷಧಗಳು ಆಪತ್ಕಾಲ ಮುಗಿಯುವ ಮೊದಲೇ ಮುಗಿಯಬಹುದು’, ಎಂಬ ವಿಚಾರದಿಂದ ನನಗೆ ಕಾಳಜಿ ಆಗುವುದೋ, ಆಗ ‘ನಾನು ಪ್ರಮುಖ ಸಾಧಕರ ಮಾರ್ಗದರ್ಶನ ದಂತೆ ಸ್ಥೂಲದಲ್ಲಿ ಆವಶ್ಯಕವಿರುವ ಆಯೋಜನೆಯನ್ನು ಮಾಡಿ ದ್ದೇನೆ’, ಎಂದು ನನಗೆ ಅರಿವಾಗುವುದು; ಆದರೆ ಇದಕ್ಕಿಂತಲೂ ನಾನು ಮಾಡುತ್ತಿರುವ ಸಾಧನೆ ಮತ್ತು ದೇವರ ಕೃಪೆ ಇವು ಗಳಿಂದಲೇ ನನ್ನ ರಕ್ಷಣೆಯಾಗಲಿದೆ ಮತ್ತು ಇದು ‘ನಾನು ಮಾಡುತ್ತಿರುವ ಶಾರೀರಿಕ ಮತ್ತು ಮಾನಸಿಕ ಸಿದ್ಧತೆಗಿಂತ ಹೆಚ್ಚು ಮಹತ್ವದ್ದಾಗಿದೆ, ಎಂದು ನಾನು ಗಮನದಲ್ಲಿಡುವೆನು. ಇದರಿಂದ ನಾನು ನಿಶ್ಚಿಂತನಾಗಿ ಆವಶ್ಯಕವಿರುವ ಪ್ರಯತ್ನವನ್ನು ಮಾಡುವೆನು ಮತ್ತು ಇತರ ಎಲ್ಲವನ್ನೂ ದೇವರಿಗೆ ಒಪ್ಪಿಸುವೆನು.
ಇ. ಯಾವಾಗ ‘ಮೂರನೇಯ ಜಾಗತಿಕ ಮಹಾಯುದ್ಧದ ಕಾಲದಲ್ಲಿ ನನ್ನ ಬಳಿ ಆವಶ್ಯಕ ಆಹಾರ ಮತ್ತು ನೀರು ಇರುವುದೇ ?’, ಎಂಬ ವಿಚಾರದಿಂದ ನನಗೆ ಕಾಳಜಿ ಆಗುವುದೋ, ಆಗ ‘ಅಖಿಲ ಬ್ರಹ್ಮಾಂಡದಲ್ಲಿನ ಪಂಚಮಹಾಭೂತಗಳ ಮೇಲೆ ದೇವರ ನಿಯಂತ್ರಣವಿದೆ ಮತ್ತು ದೇವರು ಸಾಧಕರ ಸಹಾಯಕ್ಕೆ ಸದಾ ಧಾವಿಸಿ ಬರುತ್ತಾನೆ’, ಎಂದು ನನಗೆ ಅರಿವಾಗುವುದು ಮತ್ತು ನಾನು ಶಾಂತವಾಗಿದ್ದು ಸಾಧನೆಯ ಕಡೆಗೆ ಗಮನ ಕೊಡುವೆನು.
ಪ್ರಸಂಗ : ‘ಆಪತ್ಕಾಲದಲ್ಲಿ ನನಗೆ ಗಂಭೀರ ರೋಗ ಆಗಲಿಕ್ಕಿಲ್ಲವಲ್ಲ ?’, ಎಂದು ಕಾಳಜಿಯಾಗುವುದು.
ಸ್ವಯಂಸೂಚನೆ : ಯಾವಾಗ ‘ಆಪತ್ಕಾಲದಲ್ಲಿ ನನಗೆ ಗಂಭೀರ ರೋಗ ಆಗುವುದಿಲ್ಲವಲ್ಲ ?’, ಎಂದು ನನಗೆ ಕಾಳಜಿಯಾಗುವುದೋ, ಆಗ ‘ದೇವರಿಗೆ ಎಲ್ಲವನ್ನೂ ಮಾಡಲು ಸಾಧ್ಯವಿರುವುದರಿಂದ ಅವನು ಮೂರನೇಯ ಮಹಾಯುದ್ಧದ ಕಾಲದಲ್ಲಿಯೂ ಗಂಭೀರ ಕಾಯಿಲೆಯಿಂದ ನನ್ನ ರಕ್ಷಣೆಯನ್ನು ಮಾಡುವನು’, ಎಂದು ನನಗೆ ಅರಿವಾಗುವುದು ಮತ್ತು ನಾನು ಶಾಂತ ರೀತಿಯಿಂದ ಸಾಧನೆಯನ್ನು ಮಾಡುವೆನು, ಔಷಧಿಗಳನ್ನು ಸಂಗ್ರಹಿಸುವೆನು ಮತ್ತು ದೇವರ ಮೇಲೆ ಶ್ರದ್ಧೆ ಇಡುವೆನು.
ಪ್ರಸಂಗ : ‘ಆಪತ್ಕಾಲದಲ್ಲಿ ನನ್ನ ಮನೆ ಬೀಳಲಿಕ್ಕಿಲ್ಲವಲ್ಲ ?’, ಎಂದು ಕಾಳಜಿ ಆಗುವುದು.
ಆಪತ್ಕಾಲದಲ್ಲಿ ಮುಂದಿನ ಸ್ವಯಂಸೂಚನೆ ನೀಡಬಹುದು !
ಸ್ವಯಂಸೂಚನೆ : ಯಾವಾಗ ‘ಆಪತ್ಕಾಲದಲ್ಲಿ ನನ್ನ ಮನೆ ಬೀಳುವುದಿಲ್ಲವಲ್ಲ ?’, ಎಂದು ನನಗೆ ಕಾಳಜಿ ಆಗುವುದೋ, ಆಗ ‘ಆಯುಷ್ಯವಿಡಿ ದೇವರು ನನ್ನ ಆಶ್ರಯದ ಕಾಳಜಿಯನ್ನು ತೆಗೆದುಕೊಂಡಿದ್ದಾನೆ. ಆದುದರಿಂದ ಯುದ್ಧದ ಸಮಯದಲ್ಲಿಯೂ ‘ನನಗೆ ಸುರಕ್ಷಿತ ಸ್ಥಳ ಸಿಗುವುದು’, ಎಂಬುದರ ಕಾಳಜಿಯನ್ನು ಅವನು ನಿಶ್ಚಿತವಾಗಿಯೂ ತೆಗೆದುಕೊಳ್ಳುವನು’, ಎಂದು ನನಗೆ ಅರಿವಾಗುವುದು. ಆದುದರಿಂದ ನಾನು ನನ್ನ ಗಮನವನ್ನು ಸಾಧನೆಯ ಮೇಲೆ ಕೇಂದ್ರೀಕರಿಸುವೆನು ಮತ್ತು ಶಾಂತವಾಗಿರುವೆನು.
ಸ್ವಯಂಸೂಚನೆ : ಯಾವಾಗ ‘ಆಪತ್ಕಾಲದಲ್ಲಿ ನನ್ನ ಮನೆ ಬೀಳುವುದಿಲ್ಲವಲ್ಲ ?’, ಎಂದು ನನಗೆ ಕಾಳಜಿ ಆಗುವುದೋ, ಆಗ, ‘ಅಕ್ಕಪಕ್ಕದವರು ಮತ್ತು ಸಾಧಕರು ಆಪತ್ಕಾಲದಲ್ಲಿ ನನಗೆ ಸಹಾಯ ಮಾಡಿದ್ದಾರೆ’, ಎಂಬುದು ಅರಿವಾಗುವುದು. ಆದ್ದರಿಂದ ನಾನು ನನ್ನ ಗಮನವನ್ನು ಸಾಧನೆಯತ್ತ ಕೇಂದ್ರೀಕರಿಸುವೆನು ಮತ್ತು ಶಾಂತವಾಗಿರುವೆನು.
ಪ್ರಸಂಗ : ಅತಿವೃಷ್ಟಿಯಿಂದ ನಗರದೆಲ್ಲೆಡೆ ನೀರು ತುಂಬಿರುವುದು.
ಸ್ವಯಂಸೂಚನೆ : ಯಾವಾಗ ಊರಲ್ಲಿನ ನೆರೆಯ ಸ್ಥಿತಿಯನ್ನು ನೋಡಿ ‘ಈಗ ನಮ್ಮ ಮತ್ತು ನಮ್ಮ ಮನೆಯ ಸ್ಥಿತಿ ಏನಾಗುವುದು ?’, ಎಂಬ ಕಾಳಜಿಯ ವಿಚಾರಗಳು ಬರುವವೋ, ಆಗ ‘ಮನೆಯಲ್ಲಿನ ಸಾಮಾನುಗಳನ್ನು ನೀರಿನಿಂದ ದೂರ ಸುರಕ್ಷಿತ ಸ್ಥಳದಲ್ಲಿಡುವುದು, ಹಾಗೆಯೇ ಕುಟುಂಬದವರಿಗೆ ಸಹಾಯ ಮಾಡುವುದು ಮತ್ತು ಅವರಿಗೆ ಆಧಾರ ಕೊಡುವುದು’, ಇದು ವರ್ತಮಾನಕಾಲದಲ್ಲಿನ ನನ್ನ ಕರ್ತವ್ಯ/ಸಾಧನೆಯಾಗಿದೆ’, ಎಂದು ನನಗೆ ಅರಿವಾಗುವುದು ಮತ್ತು ನಾನು ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆಗಾಗ ಕಲಿಯಲು ಸಿಕ್ಕಿರುವ ಅಂಶಗಳ ಆಧಾರ ಪಡೆದು ನಾಮಜಪವನ್ನು ಮಾಡುತ್ತಾ ಯೋಗ್ಯ ಕೃತಿಯನ್ನು ಮಾಡುವೆನು.
ಭಯವೆನಿಸುತ್ತಿದ್ದರೆ ಮುಂದಿನಂತೆ ಪ್ರಸಂಗದ ಅಭ್ಯಾಸ ಮಾಡುವುದು ಆವಶ್ಯಕ ! (‘ಅ ೩’ ಸ್ವಯಂಸೂಚನೆ ಪದ್ಧತಿ)
ಯಾವ ಪ್ರಸಂಗದ ಭಯವೆನಿಸುತ್ತದೆಯೋ, ಆ ಪ್ರಸಂಗವನ್ನು ಎದುರಿಸುವ ಮೊದಲು ‘ಅ ೩’ ಈ ಸ್ವಯಂಸೂಚನೆಯ ಪದ್ಧತಿಗನು ಸಾರ ಪ್ರಸಂಗದ ಅಭ್ಯಾಸ ಮಾಡಬೇಕು. ಈ ಸ್ವಯಂಸೂಚನೆಯ ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.
ಪ್ರಸಂಗ ೧ : ‘ಬಹಳಷ್ಟು ನಗರಗಳಲ್ಲಿ ನೆರೆಯ ಸ್ಥಿತಿ ಇದೆ’, ಇದರ ಬಗೆಗಿನ ವಾರ್ತೆಯನ್ನು ನಾನು ದೂರದರ್ಶನದಲ್ಲಿ ನೋಡಿದ್ದೇನೆ. ‘ನಮ್ಮ ಮನೆಯ ಬಳಿಯೂ ನದಿ ಇದೆ, ಆ ನದಿಗೂ ನೆರೆ ಬರಬಹುದು. ನೆರೆ ಬಂದರೆ ನಮಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಹೇಳುವರು. ಇತರ ಕಡೆಗೆ ಹೋಗಲು ನನಗೆ ಸಾಧ್ಯವಾಗಬಹುದೇ ?’,
ಈ ವಿಚಾರದಿಂದ ಭಯವಾಗುತ್ತಿದೆ.
೧. ನಮ್ಮ ಮನೆಯ ಬಳಿಯ ನದಿಗೆ ನೆರೆ ಬಂದುದರಿಂದ, ನಗರಪಾಲಿಕೆಯ ಸಿಬ್ಬಂದಿಗಳು ನಮಗೆ ಬೇರೆ ಕಡೆಗೆ ಹೋಗಲು ಹೇಳಿದ್ದಾರೆ.
೨. ‘ಈ ಸ್ಥಿತಿಯಿಂದ ನನ್ನನ್ನು ಸುಖವಾಗಿ ಪಾರು ಮಾಡು’, ಎಂದು ನಾನು ದೇವರಲ್ಲಿ ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ.
೩. ನಾನು ಆವಶ್ಯಕವಿರುವಷ್ಟು ಸಾಮಾನುಗಳನ್ನು ತೆಗೆದುಕೊಂಡು ಕುಟುಂಬದವರೊಂದಿಗೆ ಮನೆಯಿಂದ ಹೊರಗೆ ಹೋಗುತ್ತಿದ್ದೇನೆ.
೪. ‘ಆಪತ್ಕಾಲೀನ ಪರಿಸ್ಥಿತಿಯಿಂದ ಹೇಗೆ ಹೊರಗೆ ಬರುವುದು ?’, ಇದರ ಜ್ಞಾನವಿರುವ ಕೆಲವು ಜನರು ನನ್ನೊಂದಿಗಿದ್ದಾರೆ. ಅವರ ಸಹಾಯದಿಂದ ಮತ್ತು ಮಾರ್ಗದರ್ಶನದಿಂದ ನಾನು ಉಪಾಯ ಯೋಜನೆಯನ್ನು ಮಾಡುತ್ತಿದ್ದೇನೆ. ನಾನು ಮನಸ್ಸಿನಲ್ಲಿಯೇ ಪ್ರಾರ್ಥನೆ ಮತ್ತು ನಾಮಜಪವನ್ನು ಮಾಡುತ್ತಿದ್ದೇನೆ.
೫. ಯಾವಾಗ ನನಗೆ ಕೆಲವು ಸಮಸ್ಯೆಗಳು ಬರುತ್ತಿವೆಯೋ, ಆಗ ಸಹಾಯಕರ ಸಹಾಯವು ಲಭಿಸಿ ದೇವರ ಕೃಪೆಯನ್ನು ಅನುಭವಿಸಲು ಸಾಧ್ಯವಾಗುತ್ತಿದೆ. ಇದರಿಂದ ಮನಸ್ಸು ಸಮಾಧಾನಗೊಂಡು ನನ್ನ ದೇವರ ಮೇಲಿನ ಶ್ರದ್ಧೆಯು ಹೆಚ್ಚಾಗುತ್ತಿದೆ.
೬. ಭಗವಂತನ ಕೃಪೆಯಿಂದ ನಾನು ಸುರಕ್ಷಿತ ಸ್ಥಳಕ್ಕೆ ವ್ಯವಸ್ಥಿತವಾಗಿ ತಲುಪುತ್ತಿದ್ದೇನೆ.
೭. ದೇವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ ನಾನು ಎಲ್ಲ ಸಾಮಾನುಗಳನ್ನು ವ್ಯವಸ್ಥಿತವಾಗಿ ಇಡುತ್ತಿದ್ದೇನೆ.
ಪ್ರಸಂಗ ೨ : ದೊಡ್ಡ ನೆರೆ ಬಂದುದರಿಂದ ನಾನು ಮತ್ತು ನನ್ನ ಕುಟುಂಬದವರು ಮನೆಯಲ್ಲಿ ಸಿಕ್ಕಿಕೊಂಡಿದ್ದೇವೆ / ಅತಿವೃಷ್ಟಿಯಿಂದ ನಗರದಲ್ಲಿ ಎಲ್ಲೆಡೆ ನೀರು ತುಂಬಿಕೊಂಡಿದೆ.
ಮುಂದಿನ ಸ್ವಯಂಸೂಚನೆಯನ್ನು ಕೊಡಬೇಕು !
ಸ್ವಯಂಸೂಚನೆ ೧ : ಯಾವಾಗ ನನಗೆ ಮತ್ತು ನನ್ನ ಕುಟುಂಬದವರಿಗೆ ನೆರೆ ಬಂದುದರಿಂದ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲವೋ, ಆಗ ‘ದೇವರು ನಮ್ಮ ಕಾಳಜಿಯನ್ನು ತೆಗೆದುಕೊಳ್ಳುವವನೇ ಇದ್ದಾನೆ’, ಎಂದು ನನಗೆ ಅರಿವಾಗುವುದು ಮತ್ತು ನಾನು ಗಮನವಿಟ್ಟು ನಾಮಜಪ ಮತ್ತು ಸಾಧನೆಯ ಇತರ ಪ್ರಯತ್ನಗಳನ್ನು ಮಾಡುವೆನು.
ಸ್ವಯಂಸೂಚನೆ ೨ : ಯಾವಾಗ ನಗರದಲ್ಲಿನ ನೆರೆಯ ಸ್ಥಿತಿಯನ್ನು ನೋಡಿ ‘ಈಗ ನಮ್ಮ ಮನೆ ಮತ್ತು ನಮ್ಮದು ಏನಾಗುವುದು ?’, ಎಂಬ ಕಾಳಜಿಯ ವಿಚಾರಗಳು ನನ್ನ ಮನಸ್ಸಿನಲ್ಲಿ ಬರುವವೋ, ಆಗ ‘ನಾನು ವರ್ತಮಾನಕಾಲದಲ್ಲಿದ್ದರೆ ಈ ಸಮಸ್ಯೆಯನ್ನು ಎದುರಿಸಬಹುದು ಮತ್ತು ಇದು ನನ್ನ ಸಾಧನೆಯೂ ಆಗಿದೆ, ಭಗವಂತನಿಗೂ ಇದೇ ಇಷ್ಟವಾಗಲಿದೆ’, ಎಂಬುದು ನನಗೆ ಅರಿವಾಗುವುದು ಮತ್ತು ನಾನು ನಾಮಜಪವನ್ನು ಮಾಡುತ್ತಾ ಯೋಗ್ಯ ಕೃತಿಯನ್ನು ಮಾಡುವೆನು.
‘ಆಪತ್ಕಾಲದಲ್ಲಿ ಗಂಭೀರ ಕಾಯಿಲೆಯಾಗುವುದಿಲ್ಲವಲ್ಲ ? ತಿನ್ನಲು-ಕುಡಿಯಲು ಸಿಗುವುದಲ್ಲ ? ಮನೆಯು ಬೀಳುವುದಿಲ್ಲವಲ್ಲ ? ಇತ್ಯಾದಿಗಳ ಕಾಳಜಿ ಆಗುತ್ತಿದ್ದರೆ ಅವುಗಳನ್ನು ದೂರ ಮಾಡಲು ಸ್ವಯಂಸೂಚನೆಗಳನ್ನು ತೆಗೆದುಕೊಳ್ಳಬೇಕು !
ಪ್ರಸಂಗ ೧ : ನಾನಿರುವ ಊರಲ್ಲಿ ಭೂಕಂಪವಾಗಿದೆ.
ಸ್ವಯಂಸೂಚನೆ : ೧. ಯಾವಾಗ ನಾನು ‘ಜ್ವಾಲಾ ಮುಖಿಯ ಉದ್ರೇಕ / ಭೂಕಂಪವಾಗುತ್ತಿದೆ, ಎಂದು ಕೇಳುವೆನೋ, ಆಗ ‘ನನಗೆ ಸ್ಥಿರವಾಗಿರಲು ಸಾಧ್ಯವಾಗಬೇಕೆಂದು, ನಾನು ದೇವರಲ್ಲಿ ಪ್ರಾರ್ಥನೆ ಯನ್ನು ಮಾಡುವೆನು. ನಾನು ಶಾಂತವಾಗಿದ್ದು ಆವಶ್ಯಕವಿರುವ ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ನನ್ನ ಕುಟುಂಬದವರೊಂದಿಗೆ ನಾಮಜಪ ಮಾಡುತ್ತಾ ಸುರಕ್ಷಿತ ಸ್ಥಳಕ್ಕೆ ಹೋಗುವೆನು.
೨. ಯಾವಾಗ ನಾನು ‘ಜ್ವಾಲಾಮುಖಿಯ ಉದ್ರೇಕ / ಭೂಕಂಪವಾಗುತ್ತಿದೆ, ಎಂದು ಕೇಳುವೆನೋ, ಆಗ ‘ಜೀವನದಲ್ಲಿ ಈ ರೀತಿಯ ಪ್ರಸಂಗಗಳು ಬರುವುದು ಪ್ರಾರಬ್ಧದ ಒಂದು ಭಾಗವಾಗಿದೆ, ಎಂದು ವಿಚಾರ ಮಾಡಿ ‘ಸ್ಥಿರವಾಗಿದ್ದು ಈ ಪ್ರಸಂಗವನ್ನು ಎದುರಿಸಲು ನನಗೆ ಸಾಧ್ಯವಾಗಲಿ, ಎಂದು ನಾನು ದೇವರಲ್ಲಿ ಪ್ರಾರ್ಥನೆಯನ್ನು ಮಾಡುವೆನು.(ಮುಂದುವರಿಯುವುದು)