ಸಪ್ತರ್ಷಿ ಜೀವನ ನಾಡಿಪಟ್ಟಿಯ ವಾಚಕ ಪೂ. ಡಾ. ಓಂ ಉಲಗನಾಥನ್ ಮತ್ತು ಸನಾತನ ಸಂಸ್ಥೆಯ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರ ವಂದನೀಯ ಉಪಸ್ಥಿತಿ!

ಈರೋಡ್ (ತಮಿಳುನಾಡು) – ಸಪ್ತರ್ಷಿ ಜೀವನ ನಾಡಿಪಟ್ಟಿಯಲ್ಲಿ ಬಂದ ಉಲ್ಲೇಖದಂತೆ, ಈರೋಡ್‌ನ ಶ್ರೀಮಹಾವಿಷ್ಣುವಿನ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಜೂನ್ ೨೨ ರಿಂದ ೨೪, ೨೦೨೬ ರ ಅವಧಿಯಲ್ಲಿ ೩ ದಿನಗಳ ‘ಮಹಾಸುದರ್ಶನ ಯಾಗ’ವು ಭಾವಪೂರ್ಣವಾಗಿ ನೆರವೇರಿತು. ಸಪ್ತರ್ಷಿ ಜೀವನ ನಾಡಿಪಟ್ಟಿಯನ್ನು ವಾಚನ ಮಾಡುವ ಪೂ. ಡಾ. ಓಂ ಉಲಗನಾಥನ್ ಅವರ ಮಾರ್ಗದರ್ಶನದಂತೆ, ಶ್ರೀರಂಗಂನ ಪ್ರಸಿದ್ಧ ರಂಗನಾಥ ದೇವಾಲಯದಿಂದ ಆಗಮಿಸಿದ ೨೧ ವೇದಪುರೋಹಿತರು ಈ ಮಹಾಯಾಗವನ್ನು ನೆರವೇರಿಸಿದರು. ಈ ಮಹಾಯಾಗದ ಮಹಾಪೂರ್ಣಾಹುತಿಯ ಸಮಯದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಒಬ್ಬ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು, ‘ಸಂಪೂರ್ಣ ವಿಶ್ವದಲ್ಲಿ ಆದಷ್ಟು ಬೇಗನೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ದೀರ್ಘಾಯುಷ್ಯ ದೊರೆಯಲಿ ಮತ್ತು ಸಾಧಕರ ಸಾಧನೆಯಲ್ಲಿ ಬರುವ ಎಲ್ಲ ರೀತಿಯ ಅಡೆತಡೆಗಳು ದೂರವಾಗಲಿ’, ಎಂದು ಶ್ರೀಮಹಾವಿಷ್ಣುವಿನಲ್ಲಿ ಪ್ರಾರ್ಥಿಸಿದರು. ಕಸ್ತೂರಿ ರಂಗನಾಥ ದೇವಾಲಯದ ಟ್ರಸ್ಟಿ ಶ್ರೀ. ಸುಂದರರಾಜನ್ ಅವರು ಒಂದು ತಿಂಗಳ ಮೊದಲೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಈ ಮಹಾಯಾಗಕ್ಕೆ ಉಪಸ್ಥಿತರಿರಲು ಪ್ರಾರ್ಥಿಸಿದ್ದರು.

ಈರೋಡ್ ನಗರದ ಆಧ್ಯಾತ್ಮಿಕ ಮಹತ್ವ
ದುರ್ವಾಸ ಋಷಿಗಳು ತಪಸ್ಸು ಮಾಡಿ ಶ್ರೀವಿಷ್ಣುವನ್ನು ಪ್ರಾರ್ಥಿಸಿದ ಸ್ಥಳವೆಂದರೆ, ತಮಿಳುನಾಡಿನ ಕಾವೇರಿ ನದಿಯ ದಡದಲ್ಲಿರುವ ಈರೋಡ್ ನಗರ! ಮಹರ್ಷಿ ದುರ್ವಾಸರ ತಪಸ್ಸಿನಿಂದ ಸಂತುಷ್ಟನಾದ ಶ್ರೀಮಹಾವಿಷ್ಣುವು ಅವರಿಗೆ ಶೇಷಶಾಯಿ ರೂಪದಲ್ಲಿ ದರ್ಶನ ನೀಡಿದನು. ಅದೇ ಸ್ಥಳದಲ್ಲಿ ಶ್ರೀಮಹಾವಿಷ್ಣುವಿನ ಶೇಷಶಾಯಿ ರೂಪದ ಸ್ವಯಂಭೂ ಮೂರ್ತಿಯಿದೆ. ಈ ಸ್ಥಳದಲ್ಲಿರುವ ಭವ್ಯ ದೇವಾಲಯವೇ ಕಸ್ತೂರಿ ರಂಗನಾಥ ದೇವಾಲಯ! ಈ ದೇವಾಲಯದ ಸುತ್ತಲೂ ಈರೋಡ್ ನಗರ ಮತ್ತು ಈರೋಡ್ ಬಟ್ಟೆಯ ಮಾರುಕಟ್ಟೆ ನೆಲೆಗೊಂಡಿದೆ.

ಮಹಾಯಾಗದ ವೈಶಿಷ್ಟ್ಯಪೂರ್ಣ ಕ್ಷಣಗಳು೧. ಈ ಮಹಾಯಾಗದ ಸಮಯದಲ್ಲಿ ಒಟ್ಟು ೧ ಲಕ್ಷ ಸುದರ್ಶನ ಮಹಾಮಂತ್ರಗಳ ಪುರಶ್ಚರಣೆಯನ್ನು ಮಾಡಲಾಯಿತು. ೨. ತಮಿಳುನಾಡಿನ ವಿವಿಧ ಪರ್ವತಗಳಲ್ಲಿರುವ ದೈವೀ ಸಸ್ಯಗಳ ಆಹುತಿಯನ್ನು ಈ ಮಹಾಯಾಗದಲ್ಲಿ ನೀಡಲಾಯಿತು. ೩. ‘ಬರುವ ಕಾಲದಲ್ಲಿ ವಿಶ್ವದ ಮೇಲೆ ವ್ಯಾಧಿರೂಪದಲ್ಲಿ ಕಷ್ಟವಿದ್ದರೆ ಅದು ದೂರವಾಗಲಿ’, ಇದಕ್ಕಾಗಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು. ೪. ‘ಜೀವನದಲ್ಲಿ ಬರುವ ಎಲ್ಲ ಅಡೆತಡೆಗಳ ಮೇಲೆ ಜಯವನ್ನು ಸಾಧಿಸಲಿ’, ಇದಕ್ಕಾಗಿ ಸುದರ್ಶನ ಚಕ್ರದ ಶಕ್ತಿಯಾದ ಶ್ರೀ ವಿಜಯವಲ್ಲಿ ದೇವಿಯ ವಿಶೇಷ ಪೂಜೆಯನ್ನು ಮಾಡಲಾಯಿತು. |
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !