ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಗುರುದೇವರಿಗೆ ನಮನಗಳು !

ವಿಶಿಷ್ಟ ಪ್ರಸಾರ ಫಲಕ !
‘ಧರ್ಮಶಿಕ್ಷಣ ನೀಡುವುದು ಸನಾತನ ಸಂಸ್ಥೆಯ ಒಂದು ವೈಶಿಷ್ಟ್ಯವಾಗಿದೆ. ಯಜ್ಞದ ಸ್ಥಳದಲ್ಲೂ ಸಭಾಂಗಣದ ಮಂಟಪದ ಮೇಲ್ಭಾಗದಲ್ಲಿ ‘ದೇವಿಯ ಉಪಾಸನೆ ಹೇಗೆ ಮಾಡಬೇಕು ? ಎಂಬ ಬಗ್ಗೆ ವಿಶಿಷ್ಟ ಫಲಕಗಳನ್ನು ಹಾಕಿ ಧರ್ಮಪ್ರಸಾರ ಮಾಡಲಾಯಿತು !

ಹಿಂದೂ ಜನಜಾಗೃತಿ ಸಮಿತಿ ಪ್ರದರ್ಶನ ಕಕ್ಷೆ !
ಭಾರತವನ್ನು ರಾಮರಾಜ್ಯ ಸ್ಥಾಪನೆಯತ್ತ ಒಯ್ಯಲು ಶ್ರೀ ರಾಜಮಾತಂಗಿ ಮಹಾಯಜ್ಞದ ಆಯೋಜನೆ ಮತ್ತು ಅಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಟಿಬದ್ಧ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಪ್ರಸಾರ !

ಆಪತ್ಕಾಲಕ್ಕಾಗಿ ಗುರುದೇವರು ನೀಡಿದ ಗ್ರಂಥಸಂಜೀವಿನಿ !

ಮುಂಬರುವ ಆಪತ್ಕಾಲದಲ್ಲಿ ಪಾರಾಗಲು ಆಯುರ್ವೇದ ಔಷಧಗಳು ಮತ್ತು ಮನೆಯ ಹಿತ್ತಲಿನಲ್ಲಿ ನೆಟ್ಟ ಗಿಡಗಳೇ ಉಪಯುಕ್ತವಾಗಲಿವೆ. ‘ಈ ಗಿಡಗಳನ್ನು ಹೇಗೆ ನೆಡಬೇಕು ?’ ಎಂಬ ಮಾಹಿತಿಯನ್ನು ತಿಳಿಸುವ ಜ್ಞಾನವನ್ನು ಸಂಕಲನ ಮಾಡಿರುವ ಗ್ರಂಥಗಳು ಮತ್ತು ಕೆಲವು ಸಸ್ಯಗಳ ಬಗ್ಗೆ ಮಾಹಿತಿ ಪಡೆಯುತ್ತಿರುವ ಮಹಿಳಾ ಭಕ್ತರು !
‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಕಕ್ಷೆ

ಶ್ರೀ ರಾಜಮಾತಂಗಿ ಯಜ್ಞದ ಸ್ಥಳದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಕಾರ್ಯ ಮಾಡುತ್ತಿರುವ ಹಾಗೂ ಸನಾತನ ಯಜ್ಞ ಸಂಸ್ಕೃತಿಯನ್ನು ಪುರಸ್ಕರಿಸುವ ‘ಸನಾತನ ಪ್ರಭಾತ ನಿಯತಕಾಲಿಕೆಗಳ ಪ್ರಸಾರ !
ಸನಾತನ ಗ್ರಂಥಗಳ ಪ್ರದರ್ಶನ ಕಕ್ಷೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಅವರು ರಚಿಸಿದ ೩೭೦ ಕ್ಕೂ ಹೆಚ್ಚು ಗ್ರಂಥಗಳ ೧೩ ಭಾಷೆಗಳಲ್ಲಿ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶನವಾಗಿವೆ. ಆ ಗ್ರಂಥಗಳನ್ನು ವೀಕ್ಷಿಸುತ್ತಿರುವ ಜಿಜ್ಞಾಸುಗಳು !
ಸಪ್ತರ್ಷಿ ಜೀವನಾಡಿ ಪಟ್ಟಿಯಲ್ಲಿ ಶ್ರೀ ರಾಜಮಾತಂಗಿ ಮಹಾಯಜ್ಞದ ಕುರಿತು ಗೌರವವನ್ನು ವ್ಯಕ್ತಪಡಿಸಿರುವ ಉಲ್ಲೇಖ !
‘ಶಂಖನಾದ ಮಹೋತ್ಸವ’ಕ್ಕೆ ದೊರೆತಷ್ಟೇ ಫಲಿತಾಂಶವು ಮುಂಬೈಯ ಶ್ರೀ ರಾಜಮಾತಂಗಿ ಮಹಾಯಜ್ಞದಿಂದ ದೊರೆತಿದೆ

‘ಶ್ರೀಮನ್ನಾರಾಯಣಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಅವರ ಆಶೀರ್ವಾದದಿಂದ ಮತ್ತು ಶ್ರೀ ಮಹಾಲಕ್ಷ್ಮಿ ಸ್ವರೂಪರಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರ ಉಪಸ್ಥಿತಿಯಲ್ಲಿ ಮುಂಬೈನ ಶ್ರೀ ರಾಜಮಾತಂಗಿ ಮಹಾಯಜ್ಞವು ಪರಿಪೂರ್ಣವಾಯಿತು. ಇದಕ್ಕೆ ಸಾಕ್ಷಿಯೆಂದರೆ ಯಜ್ಞದ ಪೂರ್ಣಾಹುತಿಯ ನಂತರ ಗುರುದೇವರು ವಾಸವಿರುವ ರಾಮನಾಥಿ (ಗೋವಾ) ಯಲ್ಲಿನ ಸನಾತನ ಆಶ್ರಮದ ಪರಿಸರದಲ್ಲಿ ಮೋಡಗಳ ಗರ್ಜನೆ ಮತ್ತು ಮಿಂಚಿನ ಹೊಳಪಿನೊಂದಿಗೆ ಸುರಿದ ಮಳೆ ! ‘ಈ ಮಳೆ ಒಂದು ವೇಳೆ ಮುಂಬೈನ ಯಜ್ಞಸ್ಥಳದಲ್ಲಿ ಆಗಿದ್ದರೆ, ಯಜ್ಞದಲ್ಲಿ ಉಪಸ್ಥಿತರಿದ್ದವರೆಲ್ಲರಿಗೂ ಮನೆಗೆ ತಲುಪುವುದು ಕಷ್ಟವಾಗುತ್ತಿತ್ತು’ ಎಂಬುದನ್ನು ಅರಿತು ಭಗವಂತನು ಮಳೆಯ ದಿಕ್ಕನ್ನು ಬದಲಾಯಿಸಿದನು. ಮಳೆ ಬೀಳುತ್ತಿರುವಾಗ ಉಂಟಾದ ಮೋಡಗಳ ಗರ್ಜನೆ ಮತ್ತು ಮಿಂಚಿನ ಹೊಳಪು, ದೇವಲೋಕದಲ್ಲಿ ಆನಂದವಾದಾಗ ಬಾರಿಸುವ ಮಂಗಲವಾದ್ಯಗಳ ಅನುಭವವಾಗಿದೆ. ದೇವತೆಗಳು ಯಜ್ಞವನ್ನು ಸ್ವೀಕರಿಸಿದ್ದರ ಸಂಕೇತ ಇದಾಗಿದೆ. ದೇಶದ ರಕ್ಷಣೆಗಾಗಿ ಮಾಡಲಾದ ಈ ಯಜ್ಞವು ಒಂದು ರೀತಿಯಲ್ಲಿ ಮಹಾಮೃತ್ಯುಂಜಯ ಯಜ್ಞವೇ ಆಗಿತ್ತು; ಏಕೆಂದರೆ ಅದರ ಮಾಧ್ಯಮದಿಂದ ಗುರುದೇವರು ಯುದ್ಧಕಾಲಕ್ಕಾಗಿ ಸಾಧಕರಿಗೆ ಆವಶ್ಯಕವಿರುವ ಮೃತ್ಯುಂಜಯ ಕವಚವನ್ನು ನೀಡಿದರು ಮತ್ತು ರಾಷ್ಟ್ರಕ್ಕೂ ಕವಚವನ್ನು ಪ್ರದಾನ ಮಾಡಿದರು. ‘ಶಂಖನಾದ ಮಹೋತ್ಸವ’ ಮಾಡಿದಂತೆಯೇ ಫಲಿತಾಂಶ ಈ ಯಜ್ಞದಿಂದ ದೊರೆತಿದೆ.’ (ಪೂ. ಡಾ. ಓಂ ಉಲಗನಾಥನ್ ಅವರು ಮಾಡಿದ ಸಪ್ತರ್ಷಿ ಜೀವನಾಡಿ ವಾಚನ, ೧೮.೫.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !