‘ಮನುಷ್ಯನ ವಿವಿಧ ಕೃತಿಗಳು ಹೆಚ್ಚಾಗಿ ಸತ್ತ್ವ, ರಜೋ ಅಥವಾ ತಮೋ ಗುಣಿ ಇರುತ್ತವೆ. ಆಯಾ ಗುಣಗಳಂತೆ ಆಯಾ ಕೃತಿಯಿಂದ ಸ್ಪಂದನಗಳು ಪ್ರಕ್ಷೇಪಿಸುತ್ತಿರುತ್ತವೆ. ‘ಉನ್ನತ ಆಧ್ಯಾತ್ಮಿಕ ಸ್ತರದ, ಅಂದರೆ ‘ಪರಾತ್ಪರ ಗುರು’ ಮಟ್ಟದ ಸಂತರ ವಿಷಯದಲ್ಲಿ ಇದು ಹೇಗಿರುತ್ತದೆ ?’, ಎಂಬುದನ್ನು ಅಧ್ಯಯನ ಮಾಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ (ಗುರುದೇವರ)ಮುಂದಿನ ೪ ಕೃತಿಗಳ ಅಧ್ಯಯನ ಮಾಡಲಾಯಿತು. ೧. ಅವರು ಮಾರ್ಗದರ್ಶನ ಮಾಡುತ್ತಿರುವುದು ೨. ಅವರು ಮಲಗಿರುವುದು, ೩. ಅವರು ಆರತಿ ಮಾಡಿಸಿಕೊಳ್ಳುವುದು ಮತ್ತು ೪. ಅವರು ಯಾವುದೇ ಕೃತಿಯನ್ನು ಮಾಡದೇ ಇರುವುದು.

೧. ಸಾಮಾನ್ಯ ವ್ಯಕ್ತಿಯ ಮೇಲಿನ ೪ ಕೃತಿಗಳ ಸತ್ತ್ವ, ರಜ ಮತ್ತು ತಮ ಗುಣಗಳಿಗನುಗುಣವಾಗಿ ವರ್ಗೀಕರಣ
೧ ಅ. ವ್ಯಕ್ತಿ ನಿದ್ದೆ ಮಾಡುತ್ತಿರುವುದು : ಈ ಕೃತಿಯು ಸಾಮಾನ್ಯವಾಗಿ ತಮೋಗುಣ ಪ್ರಧಾನವಾಗಿರುತ್ತದೆ; ಏಕೆಂದರೆ ಸಾಮಾನ್ಯ ವ್ಯಕ್ತಿಯ ಮನಸ್ಸಿನಲ್ಲಿ ಮಾಯೆಯ ವಿಚಾರಗಳಿರುತ್ತವೆ. ಹಾಗೆಯೇ ಅವರಲ್ಲಿ ಸ್ವಭಾವದೋಷ ಮತ್ತು ಅಹಂ ಇರುತ್ತದೆ. ಆದ್ದರಿಂದ ಅವರು ಮಲಗಿದ್ದರೂ ಅವರ ಮನಸ್ಸಿನ ವಿಚಾರಗಳು ಮತ್ತು ಸ್ವಭಾವದೋಷ ಹಾಗೂ ಅಹಂನಂತೆ ಕನಸು ಬೀಳುತ್ತಿರುತ್ತವೆ.

೧ ಆ. ವ್ಯಕ್ತಿಯು ಇತರರಿಗೆ ಏನಾದರೂ ಹೇಳುವುದು : ಸಾಮಾನ್ಯ ವ್ಯಕ್ತಿಯ ಈ ಕೃತಿ ಸಾಮಾನ್ಯವಾಗಿ ರಜೋಗುಣದ್ದಾಗಿರುತ್ತದೆ.
೧ ಇ. ವ್ಯಕ್ತಿಯು ಆರತಿಯನ್ನು ಮಾಡಿಸಿಕೊಳ್ಳುವುದು : ಈ ಕೃತಿಯು ಅವರಲ್ಲಿನ ಉದ್ದೇಶಕ್ಕನುಸಾರ ಸತ್ತ್ವಗುಣ ವನ್ನು ಪ್ರಕ್ಷೇಪಿಸುತ್ತದೆ.
೧ ಈ. ವ್ಯಕ್ತಿಯು ಏನೂ ಮಾಡದಿರುವುದು (ಸಹಜಸ್ಥಿತಿ) : ಸಾಮಾನ್ಯ ವ್ಯಕ್ತಿಯು ಸುಮ್ಮನೆ ಕುಳಿತಿದ್ದರೂ ಅವನ ಮನಸ್ಸಿನಲ್ಲಿ ಮಾಯೆಯ ವಿಚಾರಗಳು ನಡೆಯುತ್ತಿರುತ್ತವೆ. ಆಗ ಅವನಿಂದ ರಜೋಗುಣವು ಪ್ರಕ್ಷೇಪಿತವಾಗುತ್ತಿರುತ್ತದೆ.
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಮೇಲಿನ ೪ ಕೃತಿಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಮೇಲಿನ ೪ ಕೃತಿಗಳಿಂದ ಪ್ರಕ್ಷೇಪಿಸುವ ಸ್ಪಂದನಗಳನ್ನು ತೋರಿಸುವ ಪಕ್ಕದಲ್ಲಿನ ಕೋಷ್ಟಕವನ್ನು ನೋಡಿರಿ ಮತ್ತು ನಂತರವೇ ಮುಂದಿನ ಭಾಗವನ್ನು ಓದಿರಿ

೨ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಿದ್ದೆ ಮಾಡುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಕೃತಿಯು ಸಾಮಾನ್ಯ ವ್ಯಕ್ತಿಯಂತೆ ತಮೋಗುಣ ಪ್ರಧಾನವಾಗಿರದೆ ಸತ್ತ್ವಗುಣ ಪ್ರಧಾನವಾಗಿದೆ. ಮುಂಚಿನ ಕೋಷ್ಟಕದಿಂದ ಇದು ಗಮನಕ್ಕೆ ಬರುತ್ತದೆ. ಅವರ ಆಧ್ಯಾತ್ಮಿಕ ಮಟ್ಟದ ಕಾರಣದಿಂದ ಅವರು ನಿದ್ದೆಯನ್ನು ಮಾಡುತ್ತಿದ್ದರೂ ಅವರ ಮೂಲಕ ಸೂಕ್ಷ್ಮದಲ್ಲಿನ ಸತ್ತ್ವಗುಣಿ ಕಾರ್ಯವು ನಡೆಯುತ್ತಿರುತ್ತದೆ. ‘ಸಮಷ್ಟಿ ಸಾಧನೆ ಎಂದು ಈ ಪೃಥ್ವಿಯಲ್ಲಿ ರಾಮರಾಜ್ಯವನ್ನು ಸ್ಥಾಪಿಸುವುದು’, ಇದು ಅವರ ಧ್ಯೇಯವಾಗಿದೆ. ಅವರು ನಿದ್ದೆ ಮಾಡುತ್ತಿರುವಾಗ ಈ ಕಾರ್ಯವನ್ನು ನಿರ್ಗುಣದಲ್ಲಿದ್ದುಕೊಂಡು ಮಾಡುತ್ತಾರೆ. ಆಗ ಅವರ ಮೂಲಕ ತಾರಕ-ಮಾರಕ ಕಾರ್ಯವು ನಡೆಯುತ್ತಿರುತ್ತದೆ. ಆಗ ಅವರ ಶಕ್ತಿಯು ಕಾರ್ಯನಿರತವಾಗಿರುತ್ತದೆ.

೨ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾರ್ಗದರ್ಶನ ಮಾಡುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಕೃತಿಯು ಸ್ವಲ್ಪ ಹೆಚ್ಚು ಸತ್ತ್ವಗುಣದಿಂದ ಕೂಡಿದ್ದು, ಅದರಲ್ಲಿ ತಮೋಗುಣ ಸ್ವಲ್ಪವೂ ಇರುವುದಿಲ್ಲ; ಏಕೆಂದರೆ ಅವರ ಮಾರ್ಗದರ್ಶನವು ಮಾಯೆಯ ವಿಷಯಗಳ ಬಗ್ಗೆ ಇರದೆ ವ್ಯಷ್ಟಿ ಸಾಧನೆ, ರಾಷ್ಟ್ರ-ಧರ್ಮದ ಬಗ್ಗೆ ಮಾಡಬೇಕಾದ ಸಮಷ್ಟಿ ಸಾಧನೆ ಮತ್ತು ಈಶ್ವರಪ್ರಾಪ್ತಿಯ ಬಗ್ಗೆಯೇ ಇರುತ್ತದೆ. ಈ ವಿಷಯಗಳು ಶಾಶ್ವತ ಸತ್ಯವಾಗಿವೆ. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸತ್ತ್ವ ಗುಣವಿದೆ. ಹಾಗೆಯೇ ಈ ಮಾರ್ಗದರ್ಶನವು ಹೆಚ್ಚು ತಾರಕ ತತ್ತ್ವದ್ದಾಗಿದೆ. ಈ ಮಾರ್ಗದರ್ಶನ ಮಾಡುವಾಗ ಅವರ ಮೂಲಕ ಹೆಚ್ಚು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿಸುತ್ತದೆ.

೨ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಆರತಿ ಬೆಳಗುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಕೃತಿಯು ಎಲ್ಲಕ್ಕಿಂತ ಸತ್ವಗುಣಿ ಆಗಿತ್ತು. ಯಾರಿಗೆ ನಾವು ಆರತಿ ಮಾಡುತ್ತೇವೆಯೋ, ಅವರ ಬಳಿ ಈಶ್ವರೀಯ ತತ್ತ್ವವು ಬರುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಹಾಗೆಯೇ ಆರತಿ ಮಾಡಿದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಲ್ಲಿನ ಸಗುಣತತ್ತ್ವ ಮತ್ತು ತಾರಕತತ್ತ್ವವು ಅತ್ಯಧಿಕವಾಯಿತು. ಅವರಲ್ಲಿನ ಅನುಭೂತಿಜನ್ಯ ಸ್ಪಂದನಗಳ ಪೈಕಿ ಆನಂದ ಮತ್ತು ಶಾಂತಿಯ ಪ್ರಮಾಣವು ಆರತಿ ಮಾಡಿದ್ದರಿಂದಾಗಿ ಹೆಚ್ಚಾಯಿತು.

೨ ಈ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಏನನ್ನೂ ಮಾಡದಿರುವುದು (ಸಹಜಸ್ಥಿತಿ) : ಈ ಸ್ಥಿತಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಸತ್ತ್ವ-ರಜ-ತಮ ಸ್ಪಂದನಗಳು ಅವರು ನಿದ್ರಿಸುವಾಗ ಅವರಲ್ಲಿನ ಸತ್ತ್ವ-ರಜ-ತಮ ಸ್ಪಂದನಗಳಂತೆಯೇ ಇರುತ್ತವೆ. ಅಂದರೆ ಅವರು ನಿದ್ರಿಸುತ್ತಿದ್ದರೂ ಅವರಲ್ಲಿನ ಸತ್ತ್ವಗುಣವು ಕಡಿಮೆಯಾಗುವುದಿಲ್ಲ. ಮತ್ತೊಂದು ಗಮನಾರ್ಹ ವಿಷಯವೆಂದರೆ, ಅವರು ಯಾವುದೇ ಕೃತಿಯನ್ನು ಮಾಡದಿದ್ದರೂ ಅವರಲ್ಲಿ ಆನಂದದ ಸ್ಪಂದನಗಳು ಹೆಚ್ಚಿರುತ್ತವೆ. ಅವರು ಸಹಜಸ್ಥಿತಿಯಲ್ಲೂ ಆನಂದಾವಸ್ಥೆಯಲ್ಲಿರುತ್ತಾರೆ.
೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ (ಗುರುದೇವರ) ವಿವಿಧ ಕೃತಿಗಳ ಛಾಯಾಚಿತ್ರಗಳ ಲೋಲಕದ ಪರೀಕ್ಷೆಯ ಮೂಲಕ ದಾಖಲಾದ ಅಂಶಗಳು ಮತ್ತು ಅವುಗಳ ವಿವೇಚನೆ

‘ಗುರುದೇವರ ಛಾಯಾಚಿತ್ರಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ಈ ಛಾಯಾಚಿತ್ರಗಳಲ್ಲಿನ ಸಕಾರಾತ್ಮಕ ಶಕ್ತಿಯ ದಾಖಲೆಗಳು ಈ ಕೆಳಗಿನಂತಿವೆ :

ಮೇಲಿನ ಕೋಷ್ಟಕದಿಂದ ತಿಳಿಯುವುದೇನೆಂದರೆ, ಗುರುದೇವರಲ್ಲಿ ಮೂಲತಃ ಬಹಳ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿದೆ. ಗುರುಪೂರ್ಣಿಮೆಯ ದಿನದಂದು ವಿವಿಧ ಕೃತಿಗಳನ್ನು ಮಾಡುವಾಗ ಅವರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣವು ಬೇರೆ ಬೇರೆಯಾಗಿರುತ್ತದೆ.
೩ ಅ. ವಿಶ್ಲೇಷಣೆ : ಸಾಮಾನ್ಯ ವ್ಯಕ್ತಿಯಲ್ಲಿ ಸಕಾರಾತ್ಮಕ ಊರ್ಜೆ ಇದ್ದೇ ಇರುತ್ತದೆಯೆಂದೇನಿಲ್ಲ. ಸಕಾರಾತ್ಮಕ ಊರ್ಜೆಯನ್ನು ಚೈತನ್ಯ ಎಂದೂ ತಿಳಿಯಬಹುದು. ಪ್ರಸ್ತುತ ಕಲಿಯುಗದಲ್ಲಿ ಬಹಳಷ್ಟು ಜನರಲ್ಲಿ ನಕಾರಾತ್ಮಕ ಶಕ್ತಿಯೂ ಇರುತ್ತದೆ. ಸಾಧನೆ ಮಾಡುವ ವ್ಯಕ್ತಿಯ ಸಕಾರಾತ್ಮಕ ಶಕ್ತಿಯ ಪ್ರಭಾವಲಯವು ಸಾಧಾರಣವಾಗಿ ೧ ರಿಂದ ೨ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿರಬಹುದು. ಇದರ ಪ್ರಮಾಣವು ಆಕೆಯ/ಆತನ ಸಾಧನೆಯನ್ನು ಅವಲಂಬಿಸಿರುತ್ತದೆ. ಗುರುದೇವರು ಅಧ್ಯಾತ್ಮದ ಅತ್ಯುನ್ನತ ಸ್ಥಿತಿಯಲ್ಲಿದ್ದಾರೆ. ಆದುದರಿಂದ ಅವರಲ್ಲಿ ಮೂಲತಃ ಸಾಕಷ್ಟು ಪ್ರಮಾಣದಲ್ಲಿ ಚೈತನ್ಯವಿದೆ. ಅವರಲ್ಲಿರುವ ಸಕಾರಾತ್ಮಕ ಶಕ್ತಿಯ ಪ್ರಭಾವಲಯವು ಸಾವಿರಾರು ಕಿಲೋಮೀಟರ್‌ಗಳಷ್ಟಿದೆ. ಗುರುಪೂರ್ಣಿಮೆಯ ದಿನದಂದು ವಿವಿಧ ಕೃತಿಗಳನ್ನು ಮಾಡುವಾಗ ಅವರಲ್ಲಿನ ಸಕಾರಾತ್ಮಕ ಶಕ್ತಿಯ ಪ್ರಮಾಣವು ಬೇರೆ ಬೇರೆಯಾಗಿರುತ್ತದೆ. ಇದಕ್ಕೆ ಕಾರಣವೆಂದರೆ, ಅವರಿಂದ ಸಮಷ್ಟಿಯ ಕಲ್ಯಾಣಕ್ಕಾಗಿ ನಿರಂತರವಾಗಿ ಚೈತನ್ಯವು ಪ್ರಕ್ಷೇಪಿತವಾಗುತ್ತಿರುತ್ತದೆ. ಕಾರ್ಯಕ್ಕನುಗುಣವಾಗಿ ಅವರಿಂದ ಪ್ರಕ್ಷೇಪಿತವಾಗುವ ಚೈತನ್ಯದ ಸ್ತರವು ಬದಲಾಗುತ್ತಿರುತ್ತದೆ. ಇದರಿಂದಾಗಿ ಅವರಲ್ಲಿನ ಸಗುಣತತ್ತ್ವ ಮತ್ತು ನಿರ್ಗುಣತತ್ತ್ವಗಳ ಪ್ರಮಾಣ ಹಾಗೂ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿಯಂತಹ ಸ್ಪಂದನಗಳ ಪ್ರಮಾಣವೂ ಬದಲಾಗುತ್ತಿರುತ್ತದೆ. ಉದಾಹರಣೆಗೆ, ಅವರು ನಿದ್ರಿಸುವಾಗ ಇತರ ಸ್ಪಂದನಗಳ ತುಲನೆಯಲ್ಲಿ ಅವರಿಂದ ನಿರ್ಗುಣ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತವೆ. ಇದರಿಂದಾಗಿ ನಿರ್ಗುಣ ತತ್ತ್ವದ ಪ್ರಮಾಣವು ಹೆಚ್ಚಿದೆ. ತದ್ವಿರುದ್ದ ಆರತಿಯ ಸಮಯದಲ್ಲಿ ಅವರಿಂದ ಭಾವ, ಚೈತನ್ಯ ಮತ್ತು ಆನಂದದ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿವೆ. ಇದರಿಂದಾಗಿ ಸಗುಣ ತತ್ತ್ವದ ಪ್ರಮಾಣವು ಹೆಚ್ಚಾಗಿದೆ. ಗುರುದೇವರ ೪ ಛಾಯಾಚಿತ್ರಗಳ ಪೈಕಿ ಅವರ ಆರತಿಯ ಸಮಯದ ಛಾಯಾಚಿತ್ರದ ಸಕಾರಾತ್ಮಕ ಶಕ್ತಿಯು ಅತ್ಯಧಿಕವಾಗಿದೆ. ಇದಕ್ಕೆ ಕಾರಣವು ಗುರುದೇವರ ಸ್ಪಂದನಗಳಿಂದ ಗಮನಕ್ಕೆ ಬರುತ್ತದೆ. ಆ ಸಮಯದಲ್ಲಿ ಗುರುದೇವರ ಸತ್ತ್ವಗುಣವು ಅತ್ಯಧಿಕವಾಗಿದೆ !
– (ಸದ್ಗುರು) ಡಾ. ಮುಕುಲ ಗಾಡಗೀಳ (ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ.) ಮತ್ತು ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೧೨.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !