ಪಾಕಿಸ್ತಾನದಿಂದ ಅಮೆರಿಕಕ್ಕೆ ವಿಶ್ವಾಸಘಾತ!

ಇಸ್ಲಾಮಾಬಾದ (ಪಾಕಿಸ್ತಾನ) – ಇರಾನ್-ಅಮೆರಿಕ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸುವ ನೆಪದಲ್ಲಿ ಪಾಕಿಸ್ತಾನವು ಇರಾನ್ ವಿಮಾನಗಳಿಗೆ ತನ್ನ ‘ನೂರ್ ಖಾನ್’ ವಾಯುನೆಲೆಯಲ್ಲಿ ನಿಲ್ಲಲು ಅನುಮತಿ ನೀಡಿತ್ತು. ಅಮೆರಿಕವು ಈ ವಿಮಾನಗಳನ್ನು ಗುರಿಯಾಗಿಸಬಾರದು ಎಂಬ ಉದ್ದೇಶದಿಂದ ಪಾಕಿಸ್ತಾನವು ಇರಾನ್ ಗೆ ಸಹಾಯ ಮಾಡಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.
೧. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮತ್ತು ರಿಪಬ್ಲಿಕನ್ ಪಕ್ಷದ ಸಂಸದ ಲಿಂಡ್ಸೆ ಗ್ರಹಾಂ ಅವರು, ಯುದ್ಧ ತಡೆಯುವ ವಿಷಯದಲ್ಲಿ ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸುವ ಕುರಿತು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. ಅವರು, ಇಸ್ರೇಲ್ ಕುರಿತು ಪಾಕಿಸ್ತಾನಿ ರಕ್ಷಣಾ ಅಧಿಕಾರಿಗಳ ಹಳೆಯ ಹೇಳಿಕೆಗಳನ್ನು ಗಮನಿಸಿದರೆ, ಈ ಘಟನೆ ನಿಜವಾಗಿದ್ದರೆ ನನಗೆ ಅಚ್ಚರಿಯಿಲ್ಲ ಎಂದು ಅವರು ಹೇಳಿದ್ದಾರೆ.
೨. ಅಮೆರಿಕದ ಅಧಿಕಾರಿಗಳ ಪ್ರಕಾರ, ಈ ವಿಮಾನಗಳಲ್ಲಿ ಇರಾನ್ ವಾಯುಪಡೆಯ ‘RC-130’ ವಿಮಾನವೂ ಸೇರಿತ್ತು. ಈ ವಿಮಾನವನ್ನು ಬೇಹುಗಾರಿಕೆ ಮತ್ತು ರಹಸ್ಯ ಮಾಹಿತಿ ಸಂಗ್ರಹಿಸಲು ಬಳಸಲಾಗುತ್ತದೆ. ಇರಾನ್ ಅಫ್ಘಾನಿಸ್ತಾನಕ್ಕೂ ಕೆಲವು ನಾಗರಿಕ ವಿಮಾನಗಳನ್ನು ಕಳುಹಿಸಿತ್ತು; ಆದರೆ ಆ ವಿಮಾನಗಳಲ್ಲಿ ಯುದ್ಧ ವಿಮಾನಗಳು ಸೇರಿದ್ದವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
೩. ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಪಾಕಿಸ್ತಾನವು ತನ್ನ ಎರಡು ಜಲಾಂತರ್ಗಾಮಿ ನೌಕೆಗಳನ್ನು ಕರಾಚಿ ಬಂದರಿನಿಂದ ಇರಾನ್ ಗಡಿಯ ಹತ್ತಿರ ಕಳುಹಿಸಿತ್ತು. ಭಾರತದ ದಾಳಿಯಿಂದ ಜಲಾಂತರ್ಗಾಮಿಗಳನ್ನು ರಕ್ಷಿಸಲು ಪಾಕಿಸ್ತಾನವು ಹೀಗೆ ಮಾಡಿತ್ತು.
ಪಾಕಿಸ್ತಾನವು ಆರೋಪವನ್ನು ತಳ್ಳಿಹಾಕಿದೆ !
ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಈ ಆರೋಪಗಳನ್ನು ನಿರಾಕರಿಸುತ್ತಾ, ಈ ವಿಮಾನಗಳು ಇರಾನ್ ಮತ್ತು ಅಮೆರಿಕಕ್ಕೆ ಸಂಬಂಧಿಸಿದ ರಾಜತಾಂತ್ರಿಕ ಹಾಗೂ ಆಡಳಿತಾತ್ಮಕ ಅಧಿಕಾರಿಗಳದ್ದಾಗಿದ್ದು, ಅವರು ಕದನ ವಿರಾಮದ ಚರ್ಚೆಯ ಸಮಯದಲ್ಲಿ ಅಲ್ಲಿಗೆ ಬಂದಿದ್ದರು ಎಂದು ಹೇಳಿದೆ. ಈ ವಿಮಾನಗಳು ಯಾವುದೇ ಸೈನಿಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದೆ. (ಪಾಕಿಸ್ತಾನ ಎಷ್ಟೇ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದರೂ, ಅದನ್ನು ಯಾರು ನಂಬುತ್ತಾರೆ? – ಸಂಪಾದಕರು)
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು