
‘ಈ ಲೇಖಮಾಲಿಕೆಯಲ್ಲಿನ ಮೊದಲನೇ ಎರಡು ಭಾಗಗಳಲ್ಲಿ ನಾವು ‘ಮೂರನೇ ಮಹಾಯುದ್ಧದ ಸ್ವರೂಪ, ಸ್ತರ, ಕಾಲಾವಧಿ ಮತ್ತು ಮಹಾಯುದ್ಧದ ಹಂತಕ್ಕನುಸಾರ ಅದರ ಲಕ್ಷಣಗಳು’, ಇವುಗಳನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ‘ಮೂರನೇ ಮಹಾಯುದ್ಧದ ಕಾಲಾವಧಿಯಲ್ಲಿ ಸಂಭಾವ್ಯ ಬದಲಾವಣೆ ಆಗುವುದರ ಹಿಂದಿನ ಕಾರಣಗಳು, ಮಹಾಯುದ್ಧಕ್ಕೆ ಸಂಬಂಧಿಸಿದಂತೆ ದೊಡ್ಡ ಕೆಟ್ಟ ಶಕ್ತಿಗಳ ನಿಯೋಜನೆ’, ಇವುಗಳನ್ನು ಲೇಖನದಲ್ಲಿ ತಿಳಿದುಕೊಳ್ಳುವವರಿದ್ದೇವೆ. (ಭಾಗ ೩)
೪. ಮೂರನೇ ಮಹಾಯುದ್ಧದ ಕಾಲಾವಧಿಯ ಸಂಭಾವ್ಯ ಬದಲಾವಣೆಗಳ ಹಿಂದಿನ ಕಾರಣಗಳು
ಕಳೆದ ವಾರದಲ್ಲಿದ್ದ ಕೋಷ್ಟಕದಲ್ಲಿ ನೀಡಿದ ಕಾಲಾವಧಿಯು ಈಶ್ವರೀ ಆಯೋಜನೆಯ ಪ್ರಕಾರವಾಗಿದೆ. ಹೀಗಿದ್ದರೂ, ಪಾತಾಳದ ದೊಡ್ಡ ಕೆಟ್ಟ ಶಕ್ತಿಗಳ ತೊಂದರೆ ಮತ್ತು ಸಮಷ್ಟಿಯ ಕ್ರಿಯಮಾಣ ಕರ್ಮಗಳಿಗನುಸಾರ ಅದರಲ್ಲಿ ಬದಲಾವಣೆಗಳು ಆಗಬಹುದು.
೪ ಅ. ಪಾತಾಳದಲ್ಲಿನ ಕೆಟ್ಟ ಶಕ್ತಿಗಳಿಗೆ ಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ, ಸಮಷ್ಟಿಯನ್ನು ಸಾತ್ತ್ವಿಕತೆಯಿಂದ ದೂರ ಒಯ್ಯಲು ಅವು ಆಧ್ಯಾತ್ಮಿಕ ತೊಂದರೆಯ ತೀವ್ರತೆಯನ್ನು ಹೆಚ್ಚಿಸುತ್ತವೆ : ವ್ಯಕ್ತಿಯ ಪ್ರಾರಬ್ಧ ಅಥವಾ ಈಶ್ವರೀ ನಿಯೋಜನೆ ಇವುಗಳನ್ನು, ಅಂದರೆ ಈಶ್ವರನು ನಿರ್ಧರಿಸಿದ ಕಾಲವನ್ನು ಬದಲಾಯಿಸಲು ಪಾತಾಳದ ದೊಡ್ಡ ಕೆಟ್ಟ ಶಕ್ತಿಗಳಿಗೂ ಸಾಧ್ಯವಿಲ್ಲ. ಹೀಗಿದ್ದರೂ, ವ್ಯಕ್ತಿ ಅಥವಾ ಸಮಷ್ಟಿಯನ್ನು ಸಾತ್ತ್ವಿಕತೆಯಿಂದ ದೂರ ಮಾಡಲು ಪಾತಾಳದ ಕೆಟ್ಟ ಶಕ್ತಿಗಳು ಅವರ ಆಧ್ಯಾತ್ಮಿಕ ತೊಂದರೆಗಳನ್ನು ಹೆಚ್ಚಿಗೆ ಮಾಡುತ್ತವೆ. ಈ ಆಧ್ಯಾತ್ಮಿಕ ತೊಂದರೆಯಿಂದ, ವ್ಯಕ್ತಿಯು ಪ್ರಾರಬ್ಧದ ಕಾರಣದಿಂದ ಅನುಭವಿಸಬೇಕಾದ ತೊಂದರೆ ೫೦ ರಷ್ಟಿದ್ದರೆ, ಅದರಲ್ಲಿ ಹೆಚ್ಚಳವಾಗಿ ಅದು ೮೦ ಕ್ಕೆ ಏರುತ್ತದೆ. ಇದರಿಂದಾಗಿ ಅವರು ತೊಂದರೆಯನ್ನು ಅನುಭವಿಸುವ ಕಾಲಾವಧಿಯೂ ಹೆಚ್ಚಾಗುತ್ತದೆ. ಉದಾ., ಒಬ್ಬ ವ್ಯಕ್ತಿಯ ಪ್ರಾರಬ್ಧದಂತೆ ೧ ತಿಂಗಳ ನಂತರ ಅವನ ಮರಣ ಸಂಭವಿಸುವುದಿದ್ದರೆ, ಕೆಟ್ಟ ಶಕ್ತಿಗಳು ೧ ತಿಂಗಳ ಮೊದಲೇ ಅವನ ಮೇಲೆ ತೀವ್ರ ಆಕ್ರಮಣಗಳನ್ನು ಮಾಡಿ ಅವನ ಶರೀರದಲ್ಲಿ ವಿವಿಧ ರೋಗಗಳನ್ನು ಉತ್ಪನ್ನ ಮಾಡುತ್ತವೆ. ಇದರಿಂದಾಗಿ ಆ ವ್ಯಕ್ತಿಯು ಒಂದು ತಿಂಗಳು ವಿವಿಧ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಈ ತೊಂದರೆಗಳಿಂದ ಅವನ ಸ್ವಭಾವದೋಷಗಳಲ್ಲಿ ಹೆಚ್ಚಳ ಆಗುವುದರಿಂದ, ಮರಣದ ನಂತರ ಆ ವ್ಯಕ್ತಿಯನ್ನು ತಮ್ಮ ನಿಯಂತ್ರಣದಲ್ಲಿರಿಸಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ‘ವ್ಯಕ್ತಿಯನ್ನು ಆದಷ್ಟು ಹೆಚ್ಚು ಕಾಲ ಸಾತ್ತ್ವಿಕತೆಯಿಂದ ದೂರವಿಟ್ಟು, ತಮೋಗುಣದ ಸಂಪರ್ಕದಲ್ಲಿರಿಸಿ ಅವನ ಮನಸ್ಸನ್ನು ಭಾವ-ಭಕ್ತಿರಹಿತ ಗೊಳಿಸುವುದು’, ಇದೇ ಕೆಟ್ಟ ಶಕ್ತಿಗಳ ಮುಖ್ಯ ಉದ್ದೇಶವಾಗಿರುತ್ತದೆ.
ಇದೇ ಪ್ರಕ್ರಿಯೆಯನ್ನು ಕೆಟ್ಟ ಶಕ್ತಿಗಳು ಆಪತ್ಕಾಲದಲ್ಲಿ ಆಧ್ಯಾತ್ಮಿಕ ತೊಂದರೆಗಳನ್ನು ಹೆಚ್ಚಿಸುವ ಮೂಲಕ ಸಾಧಿಸಲು ಪ್ರಯತ್ನಿಸುತ್ತವೆ. ಇದರಿಂದ ಅವುಗಳಿಗೆ ಅಸಂಖ್ಯಾತ ವ್ಯಕ್ತಿಗಳ ಲಿಂಗದೇಹಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ‘ಸಮಷ್ಟಿ ಪ್ರಾರಬ್ಧಕ್ಕನುಸಾರ ಯಾವುದಾದರೊಂದು ನಿರ್ದಿಷ್ಟ ಪ್ರದೇಶದಲ್ಲಿ ಪ್ರವಾಹ ಅಥವಾ ಮೇಘಸ್ಫೋಟ ಉಂಟಾಗಿ ೧ ತಿಂಗಳು ತೊಂದರೆಯಾಗುವುದಿದ್ದರೆ, ದೊಡ್ಡ ಕೆಟ್ಟ ಶಕ್ತಿಗಳು ಆ ತೊಂದರೆಯನ್ನು ಹೆಚ್ಚಿಸಿ ೨ ಅಥವಾ ೩ ತಿಂಗಳುಗಳ ಕಾಲ ಆ ಪ್ರದೇಶದ ಜನರಿಗೆ ಪ್ರವಾಹ ಅಥವಾ ಮೇಘಸ್ಫೋಟದ ತೊಂದರೆಯಾಗುವಂತೆ ಮಾಡುತ್ತವೆ.’ ಇದೇ ರೀತಿ ಕೆಟ್ಟ ಶಕ್ತಿಗಳು ಮೂರನೇ ಮಹಾಯುದ್ಧದ ಸಂದರ್ಭದಲ್ಲೂ ಪ್ರಯತ್ನಿಸುತ್ತಿವೆ. ಈ ಕಾರಣದಿಂದಾಗಿ, ನಿಗದಿತ ಸಮಯಕ್ಕಿಂತ ಮೊದಲು ಅಥವಾ ನಂತರವೂ ದೀರ್ಘಕಾಲದ ವರೆಗೆ ಮೂರನೇ ಮಹಾಯುದ್ಧವು ಮುಂದುವರಿಯಬಹುದು.
೪ ಆ. ಸಂತರು ಸಮಾಜದಲ್ಲಿ ಚೈತನ್ಯವನ್ನು ಪ್ರಕ್ಷೇಪಿಸಿ ಮತ್ತು ಜನರಿಗೆ ಸಾಧನೆಯನ್ನು ಕಲಿಸಿ ಸಾತ್ತ್ವಿಕತೆಯನ್ನು ಹೆಚ್ಚಿಸುವುದು ಮತ್ತು ಅದರಿಂದ ಆಧ್ಯಾತ್ಮಿಕ ತೊಂದರೆಯ ಪ್ರಮಾಣ ಕಡಿಮೆಯಾಗುವುದು : ಹೇಗೆ ದೊಡ್ಡ ಕೆಟ್ಟ ಶಕ್ತಿಗಳು ಸಮಾಜಕ್ಕೆ ತೊಂದರೆಗಳನ್ನು ನೀಡಲು ಆಪತ್ಕಾಲದಲ್ಲಿ ಆಧ್ಯಾತ್ಮಿಕ ತೊಂದರೆಯ ತೀವ್ರತೆಯನ್ನು ಹೆಚ್ಚಿಸುತ್ತವೆಯೋ, ಅದೇ ರೀತಿ ಪರಾತ್ಪರ ಗುರುಗಳು, ಸದ್ಗುರುಗಳು ಮತ್ತು ಗುರು (ಸಂತರು) ಮಟ್ಟದ ಸಂತರು ಸಮಾಜಕ್ಕೆ ಸಾಧನೆಯನ್ನು ಕಲಿಸಿ ಸಮಾಜದ ಸಾತ್ತ್ವಿಕತೆ ಹೆಚ್ಚಿಸುತ್ತಾರೆ ಮತ್ತು ‘ದೇವಸ್ಥಾನಗಳ ನಿರ್ಮಾಣ, ಯಜ್ಞ, ಸಂಕಟ ದೂರವಾಗಲು ಸಾಮೂಹಿಕ ನಾಮಜಪ’ ಇಂತಹ ವಿವಿಧ ಮಾಧ್ಯಮಗಳ ಮೂಲಕ ಸಮಾಜ ದಲ್ಲಿ ಚೈತನ್ಯವನ್ನು ಪ್ರಕ್ಷೇಪಿಸುತ್ತಾರೆ. ಇದರಿಂದ ಸಮಾಜದ ಸಾತ್ತ್ವಿಕತೆ ಹೆಚ್ಚಾಗಿ ಅವರಿಗೆ ಈಶ್ವರೀ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುವುದರಿಂದ, ಮಂದ ಮತ್ತು ಮಧ್ಯಮ ಸ್ತರದ ಸಮಷ್ಟಿ ಪ್ರಾರಬ್ಧವನ್ನು ಒಂದಷ್ಟು ಮಟ್ಟಿಗೆ ಜಯಿಸಲು ಸಾಧ್ಯವಾಗುತ್ತದೆ. ಉದಾ. ೨೦೦೫ ರಲ್ಲಿ ದೇವದ (ಪನವೇಲ್) ದಲ್ಲಿನ ಸನಾತನ ಆಶ್ರಮದ ಮುಂದಿರುವ ಗಾಢಿ ನದಿಗೆ ಪ್ರವಾಹ ಬಂದಿತ್ತು. ಆ ಸಮಯದಲ್ಲಿ ಸಂತರು ಆಶ್ರಮದಲ್ಲಿ ಮತ್ತು ಸಾಧಕರ ಮನೆಗಳಿಗೆ ನುಗ್ಗಿದ ಪ್ರವಾಹದ ನೀರಿಗೆ (ಜಲದೇವತೆಗೆ) ಉಡಿ ತುಂಬಲು ಹೇಳಿದರು. ಈ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಮಾಡಿದ್ದರಿಂದ ಪ್ರವಾಹದ ತೀವ್ರತೆ ಕಡಿಮೆಯಾದುದನ್ನು ಅನೇಕರು ಅನುಭವಿಸಿದರು.
ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಸಮಷ್ಟಿಯು ಸಂತರ ಆಜ್ಞೆಯಂತೆ ಆಚರಿಸುವುದರಿಂದ ಸಮಷ್ಟಿ ಪ್ರಾರಬ್ಧದ ತೀವ್ರತೆ ಅಥವಾ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಹೆಚ್ಚಾದ ತೊಂದರೆಯ ತೀವ್ರತೆಯು ಕಡಿಮೆಯಾಗುತ್ತದೆ. ಆದ್ದರಿಂದ ಈಶ್ವರೀ ಯೋಜನೆಯಂತೆ ಸಮಷ್ಟಿ ಪ್ರಾರಬ್ಧವನ್ನು ಅನುಭವಿಸುವ ಕಾಲವು ಹೆಚ್ಚಾಗಿದ್ದರೂ, ಸಾಧನೆ ಮಾಡುವ ಸಮಾಜವು ತಳಮಳದಿಂದ ಮತ್ತು ಸಂತರ ಮಾರ್ಗದರ್ಶನದಂತೆ ಸಾಧನೆಯ ಪ್ರಯತ್ನಗಳನ್ನು ಮಾಡಿದರೆ, ಅವರಿಗೆ ವಿವಿಧ ಕಾರಣಗಳಿಂದ ಉಂಟಾಗುವ ತೊಂದರೆಗಳ ತೀವ್ರತೆಯು ಕಡಿಮೆಯಾಗಬಹುದು.
೫. ಮೂರನೇ ಮಹಾಯುದ್ಧದ ಆರಂಭದ ಕಾಲದಲ್ಲಿ ಸಮಷ್ಟಿಗೆ ಹೆಚ್ಚೆಚ್ಚು ಆಧ್ಯಾತ್ಮಿಕ ಹಾನಿಯನ್ನುಂಟು ಮಾಡಲು ದೊಡ್ಡ ಕೆಟ್ಟ ಶಕ್ತಿಗಳು ಸೂಕ್ಷ್ಮ ಸ್ತರದಲ್ಲಿ ಪ್ರಯತ್ನಿಸಲಿವೆ
ಅಂಶ ಕ್ರಮಾಂಕ ೩ ರಲ್ಲಿ ನೀಡಲಾದ (ಕಳೆದ ವಾರದ ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟವಾದ) ಕೋಷ್ಟಕವನ್ನು ಅಭ್ಯಸಿಸಿದಾಗ ಒಂದು ಅಂಶ ಗಮನಕ್ಕೆ ಬರುತ್ತದೆ, ‘ಮೂರನೇ ಮಹಾಯುದ್ಧದ ಮೂರು ಹಂತಗಳಲ್ಲಿ ಮೊದಲನೆಯ, ಅಂದರೆ ಆರಂಭದ ಹಂತದಲ್ಲಿ ಆಧ್ಯಾತ್ಮಿಕ ತೊಂದರೆಯ ತೀವ್ರತೆಯು ಅತ್ಯಧಿಕವಾಗಿದ್ದು, ಆ ಕಾಲದ ಯುದ್ಧವು ಕೂಡ ಗರಿಷ್ಠ ಪ್ರಮಾಣದಲ್ಲಿ ನಿರ್ಗುಣ-ಸಗುಣ ಸ್ತರದಲ್ಲಿ ಹೋರಾಡಲ್ಪಡುವುದಿದೆ.’ ಇದಕ್ಕೆ ಕಾರಣವೆಂದರೆ, ‘ರಜ-ತಮಯುಕ್ತ ಕಾಲವು ನಾಶವಾಗಿ ಸತ್ತ್ವಗುಣಪ್ರಧಾನ ರಾಮ ರಾಜ್ಯ (ಹಿಂದೂ ರಾಷ್ಟ್ರ) ಸ್ಥಾಪನೆಯಾಗುವುದು’, ಈಶ್ವರನಿಂದ ನಿರ್ಧರಿಸಲ್ಪಟ್ಟ ಕಾಲದ ಬದಲಾವಣೆಯಾಗಿದ್ದು ಇದನ್ನು ತಡೆಯಲು ದೊಡ್ಡ ಕೆಟ್ಟ ಶಕ್ತಿಗಳಿಗೆ ಸಾಧ್ಯವಿಲ್ಲ. ಆದ್ದರಿಂದ ಅವು ಈ ಕಾಲದಲ್ಲಿ ನಡೆಯುವ ಸ್ಥೂಲ ಘಟನೆಗಳ ಲಾಭವನ್ನು ಪಡೆದು ಸಮಷ್ಟಿಗೆ ಹೆಚ್ಚೆಚ್ಚು ಆಧ್ಯಾತ್ಮಿಕ ಹಾನಿಯನ್ನುಂಟುಮಾಡಲು ಸೂಕ್ಷ್ಮ ಸ್ತರದಲ್ಲಿ ಪ್ರಯತ್ನಿಸುತ್ತಿರುತ್ತವೆ.
೫. ಕೆಟ್ಟ ಶಕ್ತಿಗಳಿಂದ ಮೂರನೇ ಮಹಾಯುದ್ಧದ ಸಂದರ್ಭದಲ್ಲಿನ ಪ್ರಯತ್ನ
೫ ಅ. ದೊಡ್ಡ ಕೆಟ್ಟ ಶಕ್ತಿಗಳು ಸಮಾಜದ ಸಾಧನೆಯ ಸ್ತರದಲ್ಲಿ ಆಧ್ಯಾತ್ಮಿಕ ಹಾನಿ ಮಾಡುವುದರ ಹಿಂದಿನ ಕಾರಣ : ಯಾವುದಾದರೊಬ್ಬ ವ್ಯಕ್ತಿ ಅಥವಾ ಸಮಾಜದ ಮೇಲೆ ದೊಡ್ಡ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿ ಜನರ ಅಪಮೃತ್ಯುವಿಗೆ ಕಾರಣವಾದರೆ, ಅದರಿಂದ ಸಮಾಜಕ್ಕೆ ಹೆಚ್ಚೆಂದರೆ ಶೇ. ೩೦ ರಷ್ಟು ಮಾತ್ರ ಆಧ್ಯಾತ್ಮಿಕ ಹಾನಿ ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ವಿರುದ್ಧವಾಗಿ, ವ್ಯಕ್ತಿಯನ್ನು ಸಾಧನೆಯ ತತ್ತ್ವಕ್ಕೆ ವಿರುದ್ಧವಾದ ‘ಭೋಗ, ವಾಸನೆ ಮತ್ತು ಸ್ವೇಚ್ಛಾಚಾರ’ಗಳಲ್ಲಿ ತೊಡಗಿಸಿ, ಅಂದರೆ ಅವನ ಮನಸ್ಸು, ಬುದ್ಧಿ ಮತ್ತು ಲಿಂಗದೇಹದ ಮೇಲೆ ಆಸುರಿ ಆನಂದದ ಸಂಸ್ಕಾರಗಳನ್ನು ಮಾಡುವುದರಿಂದ ವ್ಯಕ್ತಿಗೆ ಶೇ. ೭೦ ರಿಂದ ೮೦ ರಷ್ಟು ಹಾನಿಯನ್ನುಂಟು ಮಾಡಬಹುದು. ಏಕೆಂದರೆ ಆಸುರಿ ಆನಂದದಲ್ಲಿ ಮುಳುಗಿದ ಜೀವಕ್ಕೆ ತನ್ನ ಸ್ವೇಚ್ಛೆಯನ್ನು ತ್ಯಜಿಸಿ ಮತ್ತೆ ಪರೇಚ್ಛೆ ಮತ್ತು ಈಶ್ವರೇಚ್ಛೆಯ ಕಡೆಗೆ ಬರುವುದು ತುಂಬಾ ಕಷ್ಟವಾಗುತ್ತದೆ. ಅಂತಹ ಜೀವವು ತಾನೇ ಒಂದು ಕೆಟ್ಟ ಶಕ್ತಿಯಾಗುತ್ತದೆ ಅಥವಾ ಸ್ವೇಚ್ಛೆಯಿಂದ ಕೆಟ್ಟ ಶಕ್ತಿಗಳ ದಾಸವಾಗುತ್ತದೆ. ದೊಡ್ಡ ಕೆಟ್ಟ ಶಕ್ತಿಗಳು ಸಮಾಜದ ಆಧ್ಯಾತ್ಮಿಕ ಹಾನಿ ಮಾಡಿದಾಗ, ರಾಮರಾಜ್ಯ ಸ್ಥಾಪನೆಗಾಗಿ ಸಮಾಜವು ಮಾಡಬೇಕಾದ ಸಮಷ್ಟಿ ಕ್ರಿಯಮಾಣವು ತಾನಾಗಿಯೇ ಕಡಿಮೆಯಾಗುತ್ತದೆ ಮತ್ತು ಸಾತ್ತ್ವಿಕತೆಯ ನಿರ್ಮಿತಿಯು ಕುಂಠಿತಗೊಳ್ಳುತ್ತದೆ. ಇದರಿಂದ ಕೆಟ್ಟ ಶಕ್ತಿಗಳಿಗೆ ತಮ್ಮ ರಾಜ್ಯವನ್ನು ಸ್ವಲ್ಪ ಮಟ್ಟಿಗಾದರೂ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ ಎಲ್ಲಾ ಕಾಲದಲ್ಲೂ ಕೆಟ್ಟ ಶಕ್ತಿಗಳು ಸಮಾಜದ ಆಧ್ಯಾತ್ಮಿಕ ಹಾನಿಯನ್ನುಂಟು ಮಾಡಲು ಛಲಬಿಡದೆ ಪ್ರಯತ್ನಿಸುತ್ತಿರುತ್ತವೆ.
೫ ಆ. ಪ್ರತ್ಯಕ್ಷ ಯುದ್ಧಕಾಲದಲ್ಲಿ ದೊಡ್ಡ ಕೆಟ್ಟ ಶಕ್ತಿಗಳು ವಿಕಾರಗಳಿಗೆ ಪ್ರೋತ್ಸಾಹ ನೀಡಿ ಮತ್ತು ಸಮಾಜವನ್ನು ಸಾಧನೆಯಿಂದ ದೂರವಿಟ್ಟು ಗರಿಷ್ಠ ತೊಂದರೆ ನೀಡಲು ಪ್ರಯತ್ನಿಸಲಿವೆ : ೨೦೨೫ ರಿಂದ ೨೦೨೭ ರ ಅವಧಿಯಲ್ಲಿ ದೊಡ್ಡ ಕೆಟ್ಟ ಶಕ್ತಿಗಳು ಗರಿಷ್ಠ ಪ್ರಮಾಣದಲ್ಲಿ ನಿರ್ಗುಣ-ಸಗುಣ ಸ್ತರದಲ್ಲಿ ಮಾಯೆ, ಮೋಹ ಮತ್ತು ತಪ್ಪು ಸಿದ್ಧಾಂತಗಳನ್ನು ಎಷ್ಟು ಪ್ರಸಾರ ಮಾಡುತ್ತವೆ ಎಂದರೆ, ಸಮಾಜದ ಹೆಚ್ಚಿನ ಜನರಿಗೆ ದೇವರ ಭಕ್ತಿ, ಸಂಸ್ಕೃತಿ, ಧರ್ಮಾಚರಣೆ, ಅಧ್ಯಾತ್ಮ ಮುಂತಾದವುಗಳಿಗಿಂತ ಮಾನಸಿಕ ಮತ್ತು ಬೌದ್ಧಿಕ ಸ್ತರದ ಪರಿಹಾರಗಳೇ ಹೆಚ್ಚು ಪರಿಣಾಮಕಾರಿ ಎಂದು ಅನಿಸುತ್ತದೆ. ಉದಾ. ರಜ-ತಮವನ್ನು ಪ್ರಸಾರ ಮಾಡುವ ಪಟಾಕಿಗಳ ಮೇಲೆ ಪೂರ್ಣ ನಿಷೇಧ ಹೇರದೆ ‘ಗ್ರೀನ್ ಕ್ರ್ಯಾಕರ್ಸ್’ (ಇತರ ಪಟಾಕಿಗಳಿಗೆ ಹೋಲಿಸಿದರೆ ಪರಿಸರಕ್ಕೆ ಕಡಿಮೆ ಹಾನಿ ಮಾಡುವ ಪಟಾಕಿಗಳು)ಗಳಿಗೆ ಅನುಮತಿ ನೀಡುವುದು. ಈ ಅವಧಿಯಲ್ಲಿ ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಸಂತರಿಗಿಂತ ರಾಜಕಾರಣಿಗಳನ್ನು ಶ್ರೇಷ್ಠರೆಂದು ಪರಿಗಣಿಸಲಾಗುವುದು ಮತ್ತು ‘ಹಣದ ವಹಿವಾಟಿನ ಮೂಲಕ ಮಾಡುವ ಅಭಿವೃದ್ಧಿ’ಯೇ ಶ್ರೇಷ್ಠ ರಾಷ್ಟ್ರಭಕ್ತಿ ಎಂದು ನಂಬಲಾಗುವುದು ಹಾಗೂ ಚಾರಿತ್ರ್ಯಕ್ಕೆ ಗೌಣ ಸ್ಥಾನ ನೀಡಲಾಗುವುದು. ಈ ರೀತಿ ವಿಕಾರಗಳಿಗೆ ಪ್ರೋತ್ಸಾಹ ನೀಡಿ ದೊಡ್ಡ ಕೆಟ್ಟ ಶಕ್ತಿಗಳು ಸಮಾಜವನ್ನು ಧರ್ಮಾಚರಣೆ ಮತ್ತು ಸಾಧನೆಯಿಂದ, ಅಂದರೆ ಈಶ್ವರೀ ಕೃಪೆಯಿಂದ ದೂರವಿಟ್ಟು ಆಪತ್ಕಾಲದಲ್ಲಿ ಸಮಾಜಕ್ಕೆ ಗರಿಷ್ಠ ತೊಂದರೆ ನೀಡಲು ಪ್ರಯತ್ನಿಸುತ್ತವೆ. ಯಾವ ಸಾಧಕರ ವ್ಯಷ್ಟಿ ಸಾಧನೆಯು ಕಡಿಮೆ ಇರುತ್ತದೆಯೋ, ಅವರು ಕೂಡ ಈ ಸಂಚಿನಲ್ಲಿ ಸಿಲುಕಿ ಸಾಧನೆ ಬಿಟ್ಟು ವ್ಯವಹಾರ, ಉದ್ಯೋಗ, ವಿವಾಹ ಮುಂತಾದವುಗಳಲ್ಲಿ ಸಿಲುಕುತ್ತಾರೆ ಮತ್ತು ಇದರಿಂದ ಆಪತ್ಕಾಲದಲ್ಲಿ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ದೈಹಿಕ, ಮಾನಸಿಕ ಮತ್ತು ಆರ್ಥಿಕ ತೊಂದರೆ ಅನುಭವಿಸಬೇಕಾಗುತ್ತದೆ.
೫ ಇ. ಸಾಧಕರ ಮನೋಬಲವನ್ನು ಕುಗ್ಗಿಸಿ ಅವರ ಭಕ್ತಿಯನ್ನು ಕಡಿಮೆ ಮಾಡಲು ಕೆಟ್ಟ ಶಕ್ತಿಗಳು ಸಾಧಕರ ಮೇಲೆ ಸ್ಥೂಲ ಆಕ್ರಮಣಗಳನ್ನು ಹೆಚ್ಚಿಸುತ್ತಿವೆ : ಸಮಷ್ಟಿ ಸಂತರ ಮಾರ್ಗದರ್ಶನದಂತೆ ಸಾಧನೆ ಮಾಡುವ ಸಾಧಕರ ಸಾಧನೆಯಿಂದ ಸಮಾಜದಲ್ಲಿನ ರಜ-ತಮವು ಕಡಿಮೆಯಾಗುತ್ತದೆ. ಇದರಿಂದ ದೊಡ್ಡ ಕೆಟ್ಟ ಶಕ್ತಿಗಳಿಗೆ ತಮ್ಮ ಗುರಿಯನ್ನು ಸುಲಭವಾಗಿ ತಲುಪಲು ಸಾಧ್ಯವಾಗುವುದಿಲ್ಲ; ಆದ್ದರಿಂದ ಈ ಕೆಟ್ಟ ಶಕ್ತಿಗಳು ಸಮಷ್ಟಿ ಸಂತರ ಮಾರ್ಗದರ್ಶನದಂತೆ ಸಾಧನೆ ಮಾಡುವ ಸಾಧಕರಿಗೆ ತೊಂದರೆ ನೀಡಿ ಅವರನ್ನು ಸಾಧನೆಯಿಂದ ದೂರ ಸರಿಸಲು ಪ್ರಯತ್ನಿಸುತ್ತಿವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಳೆದ ೨೫ ವರ್ಷಗಳಿಂದ ಹಗಲಿರುಳು ಸೂಕ್ಷ್ಮ ಯುದ್ಧವನ್ನು ಮಾಡುತ್ತಿರುವುದರಿಂದ ಕೆಟ್ಟ ಶಕ್ತಿಗಳ ಸಾಮರ್ಥ್ಯವು ಕಡಿಮೆಯಾಗಿ ಕೇವಲ ಶೇ. ೩೦ ರಷ್ಟು ಮಾತ್ರ ಉಳಿದಿದೆ. ಆದ್ದರಿಂದ ಈಗ ದೊಡ್ಡ ಕೆಟ್ಟ ಶಕ್ತಿಗಳು ಆಧ್ಯಾತ್ಮಿಕ ಸ್ತರದಲ್ಲಿ ಆಕ್ರಮಣ ಮಾಡದೆ ಸಾಧಕರಿಗೆ ದೈಹಿಕ ಮತ್ತು ಮಾನಸಿಕ ಸ್ವರೂಪದ ತೊಂದರೆಗಳನ್ನು ನೀಡಿ ಅವರ ಭಕ್ತಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಉದಾಹರಣೆಗೆ, ಅನಿರೀಕ್ಷಿತ ಅಪಘಾತವಾಗಿ ಮೂಳೆ ಮುರಿಯುವುದು ಅಥವಾ ಪೆಟ್ಟು ಬೀಳುವುದು ಮತ್ತು ಆ ಪರಿಸ್ಥಿತಿಯಿಂದಾಗಿ ದೇವರೊಂದಿಗಿನ ಅನುಸಂಧಾನ ಕಡಿಮೆಯಾಗುವುದು.
ಹಿಂದಿನ ಕಾಲದಲ್ಲಿ ಚಂಗೇಜ್ ಖಾನ್ ಎಂಬ ಆಕ್ರಮಣಕಾರನಿದ್ದನು. ಅವನ ಸೈನ್ಯವು ಚಿಕ್ಕದಾಗಿದ್ದರಿಂದ, ಅವನು ಉಪಾಯದಿಂದ ತನ್ನ ಶತ್ರುಗಳ ಶಸ್ತ್ರಾಗಾರವನ್ನು ಲೂಟಿ ಮಾಡುತ್ತಿದ್ದನು. ಇದರಿಂದಾಗಿ ಶತ್ರು ಸೈನ್ಯವು ಶಸ್ತ್ರಹೀನವಾಗುತ್ತಿತ್ತು, ಪರಿಣಾಮವಾಗಿ ಚಂಗೇಜ್ ಖಾನ್‌ಗೆ ದೊಡ್ಡ ಮತ್ತು ಬಲಿಷ್ಠ ಶತ್ರುಗಳನ್ನು ಸಹ ಸೋಲಿಸುವುದು ಸುಲಭವಾಗುತ್ತಿತ್ತು. ಇದೇ ರಣನೀತಿಯನ್ನು ಸೂಕ್ಷ್ಮ ಜಗತ್ತಿನ ಕೆಟ್ಟ ಶಕ್ತಿಗಳು ಬಳಸುತ್ತಿವೆ. ಪ್ರಸ್ತುತ ಕಾಲದಲ್ಲಿ ಸಾಧಕರ ಭಾವ ಮತ್ತು ಭಕ್ತಿಯೇ ಅವರ ಶಸ್ತ್ರಗಳಾಗಿವೆ. ಅದರ ಮೂಲಕವೇ ಅವರಿಗೆ ದೇವರ ಕೃಪೆ ದೊರೆತು, ಸಮಷ್ಟಿಯಲ್ಲಿ ಅಧ್ಯಾತ್ಮ ಪ್ರಸಾರ ಮತ್ತು ಹಿಂದೂ ರಾಷ್ಟ್ರದ ಕುರಿತು ಜನಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಸಾಧಕರ ಈ ಶಸ್ತ್ರಗಳನ್ನೇ ನಾಶಪಡಿಸಲು, ದೊಡ್ಡ ಕೆಟ್ಟ ಶಕ್ತಿಗಳು ಸಾಧಕರಿಗೆ ಶಾರೀರಿಕ ಮತ್ತು ಮಾನಸಿಕ ಸ್ವರೂಪದ ತೊಂದರೆಗಳನ್ನು ನೀಡಿ ಅವರ ಭಕ್ತಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ.
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೩), ಫೋಂಡಾ, ಗೋವಾ. (೨೮.೯.೨೦೨೫) (ಮುಂದುವರಿಯುವುದು)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !