ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !
ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ, ಈ ಲೇಖನದಲ್ಲಿ ಭಾರತೀಯ ಕಲೆಗಳ ನಿರ್ಮಿತಿಯ ಬಗ್ಗೆ ತಿಳಿದುಕೊಳ್ಳೋಣ’ (ಲೇಖನ ಸಂಖ್ಯೆ ೧೦)
ನಾಟ್ಯಕಲೆಯ ಆಧ್ಯಾತ್ಮಿಕ ಇತಿಹಾಸ !

‘ಭಾರತೀಯ ಇತಿಹಾಸದಲ್ಲಿ, ಹಾಗೆಯೇ ೪ ವೇದ, ಉಪನಿಷತ್ತು ಮತ್ತು ಪುರಾಣಗಳಲ್ಲಿ ನಾಟ್ಯತತ್ತ್ವಗಳಿವೆ; ಏಕೆಂದರೆ ಅವುಗಳಲ್ಲಿ ಮನಸೆಳೆಯುವ ಕಥೆಗಳು, ಪ್ರಸಂಗಗಳು ಮತ್ತು ಘಟನೆಗಳಿವೆ. ಲಿಖಿತರೂಪದಲ್ಲಿನ ಕಥೆಗಳು ಮತ್ತು ಕಾವ್ಯಗಳಲ್ಲಿಯೂ ನಾಟ್ಯಮಯತೆ ಇರುತ್ತದೆ; ಆದರೆ ನಾವು ಯಾವಾಗ ಆ ಘಟನೆ ಘಟಿಸುವಾಗ ಪ್ರತ್ಯಕ್ಷ ನೋಡುತ್ತೇವೆ ಮತ್ತು ಕೇಳುತ್ತೇವೆಯೋ, ಆಗ ನಾವು ನಾಟ್ಯತತ್ತ್ವದ ಕೃತಿರೂಪವನ್ನು ಪ್ರತ್ಯಕ್ಷ ಅನುಭವಿಸುತ್ತೇವೆ. ಶ್ರೀವಿಷ್ಣುವು ದಶಾವತಾರದಲ್ಲಿ ತಾಳಿದ ಎಲ್ಲ ರೂಪಗಳೂ ಭಗವಂತನ ವಿಶ್ವಕಲ್ಯಾಣಕ್ಕಾಗಿ ಮಾಡಿದ ನಾಟ್ಯಕಲೆಯ ಸ್ವರೂಪ, ಅತಿಪ್ರಾಚೀನ ಕಾಲದಿಂದಲೂ ದೇವಸ್ಥಾನದ ವ್ಯವಸ್ಥೆಗಳಲ್ಲಿರುವ ನಾಟ್ಯಕಲೆಯ ಮಹತ್ವ, ೪ ಯುಗಗಳಲ್ಲಿನ ನಾಟ್ಯಕಲೆ’ ಇತ್ಯಾದಿಗಳನ್ನು ತಿಳಿದುಕೊಳ್ಳಲಿದ್ದೇವೆ.
ಭಾರತೀಯ ನಾಟ್ಯಕಲೆಯು ಪ್ರಾಚೀನ ಕಾಲದಿಂದ ಈಶ್ವರನ ಸಾಧನೆ, ಧರ್ಮೋಪದೇಶ ಮತ್ತು ಆಧ್ಯಾತ್ಮಿಕ ಜಾಗೃತಿ ಇವುಗಳನ್ನು ಸಾಧನವೆಂದು ಬಳಸಲಾಗಿದೆ. ನಾಟ್ಯಕಲೆಯ ಆಧ್ಯಾತ್ಮಿಕ ಪ್ರವಾಸವು ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಈ ನಾಲ್ಕೂ ಯುಗಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.
೧. ಸತ್ಯಯುಗದಲ್ಲಿ ನಾಟ್ಯಕಲೆ
ಸತ್ಯಯುಗದಲ್ಲಿ ನಾಟ್ಯ ವಿಧಗಳ ಪ್ರತ್ಯಕ್ಷ ಉಲ್ಲೇಖವು ಅಲ್ಪವಾಗಿದ್ದರೂ, ಬ್ರಹ್ಮದೇವನ ಸೃಷ್ಟಿ ನಿರ್ಮಾಣದ ಲೀಲೆಯು ನಾಟ್ಯತತ್ತ್ವವನ್ನು ದರ್ಶಿಸುತ್ತದೆ. ಸತ್ಯಯುಗದಲ್ಲಿನ ಎಲ್ಲ ಪ್ರಸಂಗಗಳಲ್ಲಿ ನಾಟ್ಯಮಯತೆ ಇರುವುದರಿಂದ ಆ ನಾಟ್ಯತತ್ತ್ವದ ಬೀಜಸ್ವರೂಪವಾಗಿವೆ, ಉದಾ. ಶ್ರೀವಿಷ್ಣುವಿನ ಮತ್ಸ್ಯಾ ವತಾರ, ಕೂರ್ಮಾವತಾರ, ವರಾಹ ಅವತಾರ ಇತ್ಯಾದಿಗಳು.
೨. ತ್ರೇತಾಯುಗದಲ್ಲಿನ ನಾಟ್ಯಕಲೆ
ತ್ರೇತಾಯುಗದಲ್ಲಿ ನಾಟ್ಯತತ್ತ್ವವನ್ನು ಆಧ್ಯಾತ್ಮಿಕ ಉಪಾಸನೆ ಎಂದು ಬಳಸಲಾಯಿತು. ಆ ಕಾಲದಲ್ಲಿ ‘ನಾಟ್ಯ’ವು ಕೇವಲ ಕಲೆಯಾಗಿರದೇ ಅದನ್ನು ದೇವರು ಮಾನವನಿಗೆ ನೀಡಿದ ಧರ್ಮದ ಬಗೆಗಿನ ಮಾರ್ಗದರ್ಶನವಾಗಿತ್ತು.
೨ ಅ. ವೇದಕಾಲದ ಯಜ್ಞಗಳಲ್ಲಿನ ನಾಟ್ಯಮಯತೆ : “ಆ ಕಾಲದಲ್ಲಿ ಋಷಿಗಳು ವೇದಗಳಲ್ಲಿನ ಸಂವಾದ ಸೂಕ್ತಗಳನ್ನು ಹೇಳುವಾಗ ಆಯಾ ವ್ಯಕ್ತಿಯ ಅಭಿನಯವನ್ನು ಮಾಡಿ ಹೇಳುತ್ತಿರಬಹುದು’, ಎಂದು ಸಂಶೋಧಕರ ಅಭಿಪ್ರಾಯವಾಗಿದೆ.’ (ಆಧಾರ : ‘ಭಾರತೀಯ ಕಲೆ : ಉದ್ಗಮ ಮತ್ತು ವಿಕಾಸ’, ಲೇಖಕರು : ಶ್ರೀ. ವಿ.ಯ. ಕುಲಕರ್ಣಿ)
ವೇದಗಳಲ್ಲಿನ ಸಂವಾದಸೂಕ್ತವನ್ನು ಹೇಳುವಾಗ ಋಷಿಗಳು ಆಯಾ ಪಾತ್ರದೊಂದಿಗೆ ಏಕರೂಪತೆಯನ್ನು ಸಾಧಿಸುತ್ತಿದ್ದರು, ಅಂದರೆ ‘ಅಭಿನಯವು ಪ್ರದರ್ಶನಕ್ಕಾಗಿ ಇರದೇ ಈಶ್ವರಪ್ರಾಪ್ತಿಗಾಗಿಯೇ ಇತ್ತು’, ಎಂಬುದು ಗಮನಕ್ಕೆ ಬರುತ್ತದೆ.
೨ ಆ. ನಾಟ್ಯಶಾಸ್ತ್ರದ ಉತ್ಪತ್ತಿ (ಪಂಚಮವೇದ) : ತ್ರೇತಾಯುಗದಲ್ಲಿ ಜನರು ಧರ್ಮದಿಂದ ದೂರ ಹೋಗತೊಡಗಿದರು. ಆಗ ಇಂದ್ರಾದಿ ದೇವತೆಗಳು ಬ್ರಹ್ಮದೇವನ ಬಳಿ ಹೋದರು ಮತ್ತು ಅವರು ಬ್ರಹ್ಮದೇವನಿಗೆ ಇದಕ್ಕೆ ಪರಿಹಾರವನ್ನು ಕೇಳಿದರು. ಆಗ ಬ್ರಹ್ಮದೇವನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದದಲ್ಲಿನ ತತ್ತ್ವಗಳನ್ನು ಒಟ್ಟಿಗೆ ಸೇರಿಸಿ ‘ನಾಟ್ಯ’, ಎಂಬ ಪಂಚಮವೇದವನ್ನು ನಿರ್ಮಿಸಿದನು. ಬ್ರಹ್ಮದೇವನು ಋಗ್ವೇದದಿಂದ ಸಂಭಾಷಣೆ, ಸಾಮವೇದದಿಂದ ಹಾಡು, ಯಜುರ್ವೇದದಿಂದ ಅಭಿನಯ ಮತ್ತು ಅಥರ್ವವೇದದಿಂದ ರಸವನ್ನು ತೆಗೆದುಕೊಂಡು ‘ನಾಟ್ಯಶಾಸ್ತ್ರ’ದ ಈ ಐದನೇ ವೇದವನ್ನು ನಿರ್ಮಿಸಿದನು. ಬ್ರಹ್ಮದೇವನು ಭರತಮುನಿಗಳಿಗೆ ನಾಟ್ಯವಿಷಯದ ಬಗ್ಗೆ ಶಿಕ್ಷಣವನ್ನು ನೀಡಿ ತನ್ನ ಪುತ್ರರೊಂದಿಗೆ ನಾಟ್ಯಪ್ರಯೋಗ ಮಾಡಲು ಆಜ್ಞಾಪಿಸಿದನು.
೨ ಆ ೧. ನಾಟ್ಯದ ಆಧ್ಯಾತ್ಮಿಕ ಅರ್ಥ : ನಾಟ್ಯಶಾಸ್ತ್ರದಲ್ಲಿ ‘ನಾಟ್ಯ’ವು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕು ಪುರುಷಾರ್ಥಗಳನ್ನು ಸಾಧಿಸುವ ಮಾಧ್ಯಮವಾಗಿದೆ’, ಎಂದು ನಾಟ್ಯದ ಆಧ್ಯಾತ್ಮಿಕ ಅರ್ಥವನ್ನು ಹೇಳಲಾಗಿದೆ.
೨ ಆ ೨. ‘ಸಮುದ್ರಮಂಥನ’ ಮತ್ತು ‘ತ್ರಿಪುರದಾಹ’, ಈ ನಾಟಕಗಳ ಪ್ರಯೋಗ : ‘ಬ್ರಹ್ಮದೇವನ ಆಜ್ಞೆಯಿಂದ ಭರತಮುನಿಗಳು ತಮ್ಮ ನೂರು ಪುತ್ರರಿಗೆ (ಶಿಷ್ಯರಿಗೆ) ನಾಟ್ಯಶಾಸ್ತ್ರದ ಶಿಕ್ಷಣವನ್ನು ನೀಡಿದರು. ಬ್ರಹ್ಮದೇವನು ಸ್ತ್ರೀಅಭಿನಯಕ್ಕಾಗಿ ಅಪ್ಸರೆಯರನ್ನು ನಿರ್ಮಿಸಿದನು. ಭರತಮುನಿಗಳು ತಮ್ಮ ೧೦೦ ಪುತ್ರರೊಂದಿಗೆ ‘ಇಂದ್ರಧ್ವಜ ಮಹೋತ್ಸವ’ದಲ್ಲಿ ದಾನವರ ನಾಶದ ಬಗ್ಗೆ ಒಂದು ನಾಟ್ಯವನ್ನು ಪ್ರಸ್ತುತಪಡಿಸಿದರು. ಅದನ್ನು ನೋಡಿ ದೈತ್ಯರಿಗೆ ಸಿಟ್ಟು ಬಂದಿತು. ಅವರು ಈ ನಾಟ್ಯಪ್ರಯೋಗದಲ್ಲಿ ವಿಘ್ನಗಳನ್ನು ಉಂಟು ಮಾಡಿದರು. ಆಗ ಬ್ರಹ್ಮದೇವನು ದೇವರ ಶಿಲ್ಪಕಾರನಾದ ವಿಶ್ವಕರ್ಮನಿಂದ ಭವ್ಯ ನಾಟ್ಯಮಂಟಪವನ್ನು ನಿರ್ಮಿಸಿದನು, ಹಾಗೆಯೇ ಅಸುರರಿಂದ ನಾಟ್ಯಮಂಟಪವನ್ನು ರಕ್ಷಿಸಲು ವಿವಿಧ ದೇವತೆಗಳನ್ನು ನೇಮಿಸಿದನು.
೨ ಆ ೨ ಅ. ಸಮುದ್ರಮಥನ : ಈಶ್ವರನ ಸಂಕಲ್ಪದಿಂದ ನಿರ್ಮಾಣವಾದ ನಾಟ್ಯಮಂಟಪದಲ್ಲಿ ಭರತಮುನಿಗಳು ‘ಸಮುದ್ರಮಂಥನ’ ಎಂಬ ಮೊದಲನೇ ನಾಟಕವನ್ನು ಪ್ರಸ್ತುತಪಡಿಸಿದರು. ಆ ಸಮಯದಲ್ಲಿ ಎಲ್ಲ ದೇವಿದೇವತೆಗಳು ಉಪಸ್ಥಿತರಿದ್ದರು.
೨ ಆ ೨ ಆ. ತ್ರಿಪುರದಾಹ : ಭಗವಾನ ಶಿವನ ಮುಂದೆ ಭರತಮುನಿಗಳು ‘ತ್ರಿಪುರದಾಹ’, ಎಂಬ ನಾಟಕದ ಪ್ರಯೋಗವನ್ನು ಮಾಡಿದರು. ಅದನ್ನು ನೋಡಿ ಭಗವಾನ ಶಿವನು ಅತ್ಯಂತ ಪ್ರಸನ್ನನಾದನು. ಅವನು ಭರತಮುನಿಗಳಿಗೆ ನಾಟ್ಯಪ್ರಯೋಗದ ಬಗ್ಗೆ ಮಾರ್ಗದರ್ಶನವನ್ನೂ ಮಾಡಿದನು. ಈ ಮಾರ್ಗದರ್ಶನಕ್ಕನುಸಾರ ನಾಟ್ಯದಲ್ಲಿ ನೃತ್ಯ, ಗಾಯನ ಮತ್ತು ವಾದನಗಳನ್ನು ಅಳವಡಿಸಲಾಯಿತು.’ (ಆಧಾರ : ಭರತಮುನಿಗಳು ರಚಿಸಿದ ‘ನಾಟ್ಯಶಾಸ್ತ್ರ’, ಮೊದಲನೇ ಅಧ್ಯಾಯ, ಅನುವಾದಕರು – ಡಾ. ಸಂಧ್ಯಾ ಪುರೆಚಾ ಮತ್ತು ಶ್ರೀಹರಿ ಗೋಕರ್ಣಕರ)
೩. ದ್ವಾಪರಯುಗದಲ್ಲಿನ ನಾಟ್ಯಕಲೆ ದ್ವಾಪರಯುಗದಲ್ಲಿನ ನಾಟ್ಯವು ಭಕ್ತಿ, ಉಪಾಸನೆ, ಧರ್ಮಶಿಕ್ಷಣ ಮತ್ತು ಆಧ್ಯಾತ್ಮಿಕ ಉಪಾಸನೆಯ ಸಾಧನವಾಗಿತ್ತು.
ಅ. ‘ಮಹಾಭಾರತ’ ಈ ಧರ್ಮಗ್ರಂಥದಲ್ಲಿ ‘ನಟ’, ‘ಸೂತ್ರಧಾರ’, ‘ರಂಗಶಾಲೆ’ಯ ಉಲ್ಲೇಖವಿರುವುದು ಕಂಡುಬರುತ್ತವೆ. ‘ಶ್ರೀಕೃಷ್ಣನ ಮಕ್ಕಳ ವಿವಾಹದ ಸಮಯದಲ್ಲಿ ‘ರಾಮಾಯಣ’, ನಾಟಕವನ್ನು ಪ್ರಸ್ತುತಪಡಿಸಲಾಯಿತು. ಕೃಷ್ಣ-ರುಕ್ಮಿಣಿ ಇವರು ಕೂಡ ಅದರಲ್ಲಿ ಪಾತ್ರವಹಿಸಿದ್ದರು’ ಎಂಬ ಉಲ್ಲೇಖವಿದೆ.’ (ಆಧಾರ : ಸಂಸ್ಕೃತನಾಟ್ಯಕೋಶ)
ಆ. ಯುದ್ಧದ ಮೊದಲು ಮಾನಸಿಕ ಶಕ್ತಿಯನ್ನು ಪಡೆಯಲು ರಾಮಾಯಣ ಮತ್ತು ಮಹಾಭಾರತದಲ್ಲಿನ ಪ್ರಸಂಗಗಳ ನಾಟಕವನ್ನು ಪ್ರಸ್ತುಪಡಿಸಲಾಗುತ್ತಿತ್ತು.
ಇ. ‘ಹರಿವಂಶದಲ್ಲಿನ ವಿಷ್ಣುಪರ್ವತದಲ್ಲಿ ಪ್ರದ್ಯುಮ್ನ, ಸಾಂಬ ಮತ್ತು ಗದ ಈ ಯದುಪುತ್ರರು ‘ರಂಭಾ-ನಲಕುಬರ’, ಎಂಬ ನಾಟಕವನ್ನು ಪ್ರಸ್ತುತಪಡಿಸಿದ್ದರು.’ (ಆಧಾರ : ‘ಭಾರತೀಯ ಕಲೆಗಳು : (ಉದ್ಗಮ ಮತ್ತು ವಿಕಾಸ’, ಲೇಖಕರು : ಶ್ರೀ. ವಿ.ಯ. ಕುಲಕರ್ಣಿ)
ಈ. ‘ಪತಂಜಲಿಯ ‘ಮಹಾಭಾಷ್ಯ’ದಲ್ಲಿ ‘ಕಂಸವಧೆ’ ಮತ್ತು ‘ವಲಿಬಂಧ’ ಎಂಬ ನಾಟಕಗಳ ಉಲ್ಲೇಖವಿದೆ.’ (ಆಧಾರ : ಸಂಸ್ಕೃತನಾಟ್ಯಕೋಶ)
೩. ಕಲಿಯುಗದಲ್ಲಿನ ನಾಟ್ಯಕಲೆ
೩ ಅ. ಪ್ರಾಚೀನ ಸಂಸ್ಕೃತ ರಂಗಭೂಮಿ : ಇದು ಭಾರತೀಯ ನಾಟ್ಯಕಲೆಯಲ್ಲಿನ ಒಂದು ಅಮೂಲ್ಯ ಆಧ್ಯಾತ್ಮಿಕ ಸಂಗ್ರಹವಾಗಿದೆ.
೩ ಅ ೧. ನಾಟಕಕಾರರಾದ ಭಾಸ ಇವರು ‘ರಾಮಾಯಣ’ ಮತ್ತು ‘ಮಹಾಭಾರತ’ ಈ ಧರ್ಮಗ್ರಂಥಗಳಿಂದ ಸ್ಫೂರ್ತಿ ಪಡೆದು ನಾಟ್ಯಕಲೆ ಮಾಡಿದರು : ಮೊದಲ ಪ್ರಾಚೀನ ನಾಟಕಕಾರರಾದ ಭಾಸ ಇವರ ೧೩ ನಾಟಕಗಳು ಲಭ್ಯವಿವೆ. ಅವುಗಳಲ್ಲಿನ ೬ ನಾಟಕಗಳು ಮಹಾಭಾರತದಲ್ಲಿನ ಮತ್ತು ೨ ನಾಟಕಗಳು ರಾಮಾಯಣದಲ್ಲಿನ ಪ್ರಸಂಗಗಳ ಮೇಲೆ ಆಧಾರಿತವಾಗಿವೆ. ‘ಭಾಸ ಇವರು ಈ ಎರಡೂ ಧರ್ಮಗ್ರಂಥಗಳಿಂದ ಪ್ರೇರಣೆ ಪಡೆದು ನಾಟ್ಯಕಲೆಯನ್ನು ಮಾಡಿದರು’, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
‘ಭಾಸ ಇವರನ್ನು ಕನ್ನಡದಲ್ಲಿನ ಖ್ಯಾತ ನಾಟಕಕಾರರು ಆದ್ಯ ರಂಗಾಚಾರ್ಯ ಎಂದು ಕರೆಯುತ್ತಾರೆ, “ಮಹಾಭಾರತವು ಯಾವ ವೈದಿಕ ಹಿಂದೂ ಸಂಸ್ಕೃತಿಯನ್ನು ಪ್ರತಿಪಾದಿಸಿದೆಯೋ, ಆ ಸಂಸ್ಕೃತಿಯ ನಾಟ್ಯರೂಪದಿಂದ ವರ್ಣಿಸುವುದು ಭಾಸ ಇವರ ಉತ್ಕೃಷ್ಟ ಉದ್ದೇಶವಾಗಿತ್ತು’, ಎಂಬುದು ಸ್ಪಷ್ಟವಾಗುತ್ತದೆ.” (ಆಧಾರ : ‘ಭಾರತೀಯ ಕಲೆ : ಉದ್ಗಮ ಮತ್ತು ವಿಕಾಸ’, ಲೇಖಕರು : ಶ್ರೀ. ವಿ.ಯ. ಕುಲಕರ್ಣಿ)
೩ ಅ ೨. ಕಾಳಿದಾಸರು ತಮ್ಮ ನಾಟಕಗಳಿಂದ ಭಾರತೀಯ ಸಂಸ್ಕೃತಿಯಲ್ಲಿನ ನೈತಿಕಮೌಲ್ಯಗಳ ದರ್ಶನವನ್ನು ಘಟಿಸುವುದು : ಸಂಸ್ಕೃತಿ ರಂಗಭೂಮಿಯಲ್ಲಿನ ಶ್ರೇಷ್ಠ ನಾಟಕಕಾರರಾದ ಕಾಳಿದಾಸರು ತಮ್ಮ ‘ವಿಕ್ರಮೋರ್ವಶೀಯ’, ‘ಮಾಲವಿಕಾಗ್ನಿಮಿತ್ರ’, ‘ಅಭಿಜ್ಞಾನ ಶಾಕುಂತಲೆ’, ಈ ನಾಟಕಗಳಿಂದ ಭಾರತೀಯ ಸಂಸ್ಕೃತಿಯಲ್ಲಿನ ನೈತಿಕಮೌಲ್ಯಗಳನ್ನು ತೋರಿಸಿದರು; ಆದ್ದರಿಂದಲೇ ಭಾರತದಲ್ಲಿಯೇ ಅಲ್ಲ, ಜಗತ್ತಿದಾದ್ಯಂತ ಇಂದಿಗೂ ಅವರ ನಾಟಕಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಅವರ ‘ಅಭಿಜ್ಞಾನ ಶಾಕುಂತಲೆ’, ಈ ಜನಪ್ರಿಯವಾಗಿರುವ ನಾಟಕವು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶೇಷ ಪ್ರಭಾವ ಬೀರಿದೆ.
ಕಾಳಿದಾಸರ ನಾಟಕಗಳ ಮಾಹಿತಿಗಳನ್ನು ನೀಡುವಾಗ ಪಂ. ಮಹಾದೇವ ಶಾಸ್ತ್ರಿ ಜೋಶಿಯವರು, “ತಪಸ್ಸು, ತಪೋವನ ಮತ್ತು ತ್ಯಾಗ’, ಇವುಗಳು ಕಾಳಿದಾಸರ ಆದರ್ಶಗಳಾಗಿವೆ. ಅವರು ತಮ್ಮ ನಾಟಕಗಳಿಂದ ದಿವ್ಯ ಜೀವನದ ಬಗೆಗಿನ ಸಂದೇಶವನ್ನು ನೀಡಿದ್ದಾರೆ” ಎಂದು ಹೇಳಿದ್ದಾರೆ.
೩ ಆ. ಭಕ್ತಿಸಂಪ್ರದಾಯ ಮತ್ತು ನಾಟ್ಯಕಲೆ : ಮುಂಬರುವ ಕಾಲದಲ್ಲಿ ಭಾರತದಲ್ಲಿ ಸಂಸ್ಕೃತ ನಾಟಕಗಳ ಪ್ರಭಾವ ಕಡಿಮೆಯಾದರೂ, ನಾಟಕಗಳು ಮಾತ್ರ ಜೀವಂತ ಉಳಿದವು. ಹತ್ತನೇ ಶತಮಾನದ ನಂತರ ಸಂತರ ಸಂಪ್ರದಾಯವು ಬೆಳೆಯತೊಡಗಿತು. ಅನೇಕ ಸಂತರು ಭಾಗವತ ಪುರಾಣದಲ್ಲಿನ ಭಕ್ತಿರಸಭರಿತ ಕಥೆಗಳ ಮೇಲೆ ಕೀರ್ತನೆ, ಹರಿಕಥೆ, ಭಾರುಡ ಇಂತಹ ಕಲಾಪ್ರಕಾರಗಳ ಮೂಲಕ ‘ಲೇಖನ, ಗಾಯನ, ವಾದನ, ನೃತ್ಯ, ನಿವೇದನೆ, ನಿರೂಪಣೆ, ಅಭಿನಯ ಮತ್ತು ವೇಶಭೂಷಣ’ಗಳಂತಹ ನಾಟಕದ ಎಲ್ಲ ಅಂಶಗಳನ್ನು ಕೌಶಲ್ಯದಿಂದ ಬಳಸಿಕೊಂಡರು ಮತ್ತು ನಾಟ್ಯಮಯ ಪದ್ಧತಿಯಿಂದ ಸಮಾಜದ ಆಧ್ಯಾತ್ಮಿಕ ಜಾಗೃತಗೊಳಿಸಿದರು. ವಿಶೇಷವಾಗಿ ಮಹಾರಾಷ್ಟ್ರವು ಈ ಪರಂಪರೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮುನ್ನಡೆಸಿತು.
೩ ಇ. ದೇವಸ್ಥಾನಗಳಲ್ಲಿನ ನಾಟ್ಯಪ್ರಸ್ತುತಿ ! : ವೈದಿಕ ಕಾಲದಲ್ಲಿ ಯಜ್ಞದ ಸಮಯದಲ್ಲಿ ನಾಟ್ಯಕಲೆಯನ್ನು ಹೇಗೆ ಪ್ರಸ್ತುತಪಡಿಸುತ್ತಿದ್ದರೋ, ಅದೇ ರೀತಿ ಮುಂದೆ ದೇವಸ್ಥಾನಗಳಲ್ಲಿ ನಾಟ್ಯಪ್ರಸ್ತುತಿಗಳು ಆರಂಭವಾದವು. ‘ದೇವಸ್ಥಾನಗಳಲ್ಲಿ ನಾಟಕದ ಮಾಧ್ಯಮದಿಂದ ಈಶ್ವರನನ್ನು ಸ್ತುತಿಸುವುದು ಮತ್ತು ಭಕ್ತಿ ಮಾಡುವುದು’ ಇವುಗಳು ಪ್ರಾಚೀನ ಕಾಲದಿಂದಲೂ ನಮ್ಮ ಪರಂಪರೆಯಾಗಿತ್ತು. ರಾಮಾಯಣ ಮತ್ತು ಮಹಾಭಾರತದಲ್ಲಿನ ಕಥೆಗಳನ್ನು ನಾಟಕದಿಂದ ಪ್ರಸ್ತುತಪಡಿಸಲಾಯಿತು. ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳ ರಚನೆಯೇ ಹೀಗಿತ್ತು, ಅಲ್ಲಿ ರಂಗಮಂಟಪಗಳಿರುತ್ತಿದ್ದವು ಮತ್ತು ಅಲ್ಲಿ ನಾಟಕಗಳ ಮಾಧ್ಯಮದಿಂದ ಧಾರ್ಮಿಕ ಕಥೆಗಳ ಆಟ ನಡೆಯುತ್ತಿದ್ದವು. ಈಗಲೂ ಮಹಾರಾಷ್ಟ್ರದಲ್ಲಿ ‘ದಶಾವತಾರ (ವಿಷ್ಣುವಿನ ಹತ್ತು ಅವತಾರಗಳ ನಾಟಕ)’ ಮತ್ತು ಕರ್ನಾಟಕದಲ್ಲಿ ‘ಯಕ್ಷಗಾನ’, ಕೇರಳದ ದೇವಸ್ಥಾನಗಳಲ್ಲಿ ‘ಕುಡಿಅಟ್ಟಮ್’ ಮತ್ತು ಆಸಾಂದಲ್ಲಿ ‘ಅಂಕಿಯಾ ನಾಟ’, ಈ ಲೋಕನಾಟ್ಯಗಳು ಪ್ರದರ್ಶಿಸಲ್ಪಡುತ್ತವೆ. ಭಾರತದಲ್ಲಿನ ವಿವಿಧ ರಾಜ್ಯಗಳಲ್ಲಿ ಈ ರೀತಿಯ ಲೋಕನಾಟ್ಯಗಳಿಂದ ಪೌರಾಣಿಕ ಕಥೆಗಳನ್ನು ಪ್ರಸ್ತುತಪಡಿಸಲಾಗುತ್ತದೆ.
೪. ಸಾರಾಂಶ
ಜಗತ್ತಿನ ಅತ್ಯಂತ ಪ್ರಾಚೀನ ಭಾರತೀಯ ನಾಟ್ಯಕಲೆಯ ಇತಿಹಾಸದಿಂದ ಗಮನಕ್ಕೆ ಬರುವುದೇನೆಂದರೆ, ಭಾರತದ ನಾಟ್ಯಕಲೆಯ ಪರಂಪರೆಯು ಕೇವಲ ಮನೋರಂಜನೆಗಾಗಿ ಆಗಿರದೇ ಅದರ ಹಿಂದೆ ಆಳವಾದ ಮತ್ತು ವ್ಯಾಪಕ ಆಧ್ಯಾತ್ಮಿಕ ಅಡಿಪಾಯವಿದೆ. ಸದ್ಯದ ಕಲಿಯುಗದಲ್ಲಿ ನಾಟ್ಯಕಲೆಯ ಸ್ಥಿತಿಯನ್ನು ನೋಡಿದರೆ ‘ಸಮಾಜ ನಾಟ್ಯಕಲೆಯ ಮೂಲ ಉದ್ದೇಶದಿಂದ ಬಹಳಷ್ಟು ದೂರ ಹೋಗಿದೆ’, ಎಂಬುದು ಕಂಡುಬರುತ್ತದೆ. ನಾಟ್ಯಕಲೆಯ ಮೂಲ ಆಧ್ಯಾತ್ಮಿಕ ಉದ್ದೇಶವನ್ನು ತಿಳಿದುಕೊಂಡು ಆ ಮಾಧ್ಯಮದಿಂದ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಸ್ಥಾಪಿಸಲಾಗಿದೆ.’
– ಸೌ. ಶುಭಾಂಗಿ ಶೆಳಕೆ (ಎಮ್.ಎ. ನಾಟ್ಯಶಾಸ್ತ್ರ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೧೧.೨೦೨೫)

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !