ಉತ್ತರಪ್ರದೇಶದ ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶೇಖರ ಯಾದವ ಇವರ ಸತ್ಯವಚನಗಳ ಪ್ರತಿಧ್ವನಿ !

ನ್ಯಾಯಾಧೀಶ ಶೇಖರ ಕುಮಾರ ಯಾದವ

೧. ನಿರಪೇಕ್ಷವಾಗಿ ಹಿಂದೂಗಳ ಪರವಾಗಿ ಮಾತನಾಡಿದ ನ್ಯಾಯಾಧೀಶ ಶೇಖರ ಯಾದವ ಇವರ ವಿಷಯದಲ್ಲಿ ಪ್ರಗತಿಪರ ಕಾನೂನು ಪಂಡಿತರ ಕೂಗಾಟ !

ಇತ್ತೀಚೆಗೆ ‘ವಿಶ್ವ ಹಿಂದೂ ಪರಿಷತ್ತಿನ’ ಕಾನೂನು ವಿಭಾಗದ ಪರಿಷತ್ತು ನೆರವೇರಿತು. ಅದರಲ್ಲಿ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶೇಖರ ಕುಮಾರ ಯಾದವ ಮತ್ತು ಇನ್ನೊಬ್ಬ ನ್ಯಾಯಾಧೀಶರು ಉಪಸ್ಥಿತರಿದ್ದರು. ಈ ಪರಿಷತ್ತಿನಲ್ಲಿ ನ್ಯಾಯಾಧೀಶ ಶೇಖರ ಕುಮಾರ ಯಾದವ ಇವರು ಜನಸಂಖ್ಯೆ ಹೆಚ್ಚಳ, ದ್ವಿಪತ್ನಿತ್ವ, ಬಹುಪತ್ನಿತ್ವ ಕಾನೂನು, ಸಮಾನ ನಾಗರಿಕ ಕಾನೂನು, ಶ್ರೀರಾಮಮಂದಿರಕ್ಕಾಗಿ ಪೂರ್ವಜರ ಬಲಿದಾನ, ಹಿಂದೂಗಳು ಮಕ್ಕಳಿಗೆ ನೀಡುವ ಒಳ್ಳೆಯ ಸಂಸ್ಕಾರ ಹಾಗೂ ಮತಾಂಧರು ತಮ್ಮ ಮಕ್ಕಳ ಎದುರಿಗೇ ಪಶುಹತ್ಯೆ ಮಾಡುವುದು ಹಾಗೂ ಅದರಿಂದ ಮಕ್ಕಳ ಮೇಲಾಗುವ ಕ್ರೌರ್ಯದ ಸಂಸ್ಕಾರ ಇತ್ಯಾದಿ ವಿಷಯಗಳ ವಿಶ್ಲೇಷಣೆ ಮಾಡಿದರು.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಶೇಖರ ಯಾದವ ಇವರು ಭಾಷಣ ಮಾಡಿದ ನಂತರ ಪ್ರಗತಿಪರರು ಇಡೀ ದೇಶವನ್ನು ತಲೆಯ ಮೇಲೆತ್ತಿಕೊಂಡರು. ಮೊಟ್ಟ ಮೊದಲು ನ್ಯಾಯವಾದಿ ಪ್ರಶಾಂತ ಭೂಷಣ, ಇವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ, ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶ ಸಂಜೀವ ಖನ್ನಾ ಇವರಿಗೆ ಲಿಖಿತ ದೂರನ್ನು ನೀಡಿದರು. ರಾಜ್ಯಸಭೆಯ ಕಾಂಗ್ರೆಸ್‌ ಸಂಸದ ಕಪಿಲ ಸಿಬ್ಬಲ ಇವರು ಮಹಾಭಿಯೋಗ ಪ್ರಸ್ತಾವನೆಯ ಎಚ್ಚರಿಕೆಯನ್ನು ನೀಡಿದರು. ಉಚ್ಚ ನ್ಯಾಯಾಲಯದ ಅಥವಾ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಅವರ ಹುದ್ದೆಯಿಂದ ಹಕ್ಕುಚ್ಯುತಿ ಅಥವಾ ಮಹಾಭಿಯೋಗ ದಾಖಲಿಸಿ ಅವರನ್ನು ಮನೆಯಲ್ಲಿ ಕೂರಿಸುವುದು ಎಷ್ಟು ಕಷ್ಟವಿದೆ ಎಂಬುದು ಸಿಬ್ಬಲರಿಗೆ ತಿಳಿದಿದೆಯೆ ? ಕಳೆದ ೭೫ ವರ್ಷಗಳ ಇತಿಹಾಸದಲ್ಲಿ ಇಷ್ಟರ ವರೆಗೆ ಒಬ್ಬ ನ್ಯಾಯಾಧೀಶರು ಮಾತ್ರ ಮನೆಗೆ ಹೋಗಿದ್ದಾರೆ. ಆದ್ದರಿಂದ ಇಂತಹ ಟೊಳ್ಳು ಬೆದರಿಕೆ ನೀಡುವುದೆಂದರೆ ಮತಾಂಧರನ್ನು ನಾವು ಎಷ್ಟು ಪ್ರೀತಿಸುತ್ತೇವೆ, ಎಂಬುದನ್ನು ತೋರಿಸುವ ಪ್ರಯತ್ನವಾಗಿದೆ. ಅವರ ಜೊತೆಗೆ ಮಹಿಳಾ ನ್ಯಾಯವಾದಿ ಇಂದಿರಾ ಜಯಸಿಂಹ ಕೂಡ ನ್ಯಾಯಾಧೀಶ ಶೇಖರ ಯಾದವ ವಿರುದ್ಧ ದ್ವೇಷ ಕಾರಿದರು.

೨. ನ್ಯಾಯಾಧೀಶ ಶೇಖರ ಯಾದವ ಏನು ಹೇಳಿದರು ?

ನ್ಯಾಯಾಧೀಶ ಶೇಖರ ಯಾದವ ಇವರು, ”ಕಾಂಗ್ರೆಸ್‌ ೧೯೫೫ ರಲ್ಲಿ ದ್ವಿಪತ್ನಿತ್ವ ನಿರ್ಬಂಧ ಕಾನೂನು ಮಾಡಿತು ಹಾಗೂ ‘ಹಿಂದೂ ಕೋಡ್‌ ಬಿಲ್’ ತಂದು ಹಿಂದೂಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿತು. ಇನ್ನೊಂದು ಕಡೆಯಲ್ಲಿ ಮತಾಂಧರಿಗೆ ‘ಮುಸ್ಲಿಮ್‌ ಪರ್ಸನಲ್‌ ಲಾ’ (ಮುಸ್ಲಿಮ್‌ ವೈಯಕ್ತಿಕ ಕಾನೂನು) ಪಾಲನೆಗೆ ಅವಕಾಶ ನೀಡಿತು. ಅದರ ನೇರ ಪರಿಣಾಮ ಹೇಗಾಯಿತೆಂದರೆ, ಸಂಸ್ಕಾರಯುತ ಹಿಂದೂಗಳು ಕಾನೂನು ಪಾಲಿಸಿ ಏಕ ಪತ್ನೀವ್ರತವನ್ನು ಪಾಲಿಸುತ್ತಾ ಸುಖವಾಗಿದ್ದರು. ಮತಾಂಧರ ೪-೪ ನಿಕಾಹ ಮತ್ತು ‘ಲವ್‌ ಜಿಹಾದ್‌’ನ ಮೂಲಕ ‘ಹಮ್‌ ಪಾಂಚ್‌ ಹಮಾರೆ ಪಚ್ಚೀಸ್’ ಎನ್ನುತ್ತಾ ಭಾರತದಲ್ಲಿನ ವಿವಿಧ ರಾಜ್ಯಗಳ ‘ಡೆಮೋಗ್ರಾಫಿ’ (ಜನಸಂಖ್ಯೆಯ ಸ್ವರೂಪ) ಬದಲಾಯಿಸಿದರು. ಹಿಂದೂ ಪಾಲಕರ ಮೇಲೆ ವೇದ ಮತ್ತು ಶಾಸ್ತ್ರಗಳ ಸಂಸ್ಕಾರ ಆಗಿರುವುದರಿಂದ ಅವರು ಮಕ್ಕಳಿಗೆ ನೈತಿಕತೆ, ಪರೋಪಕಾರ ಹಾಗೂ ಸದಾಚಾರವನ್ನು ಕಲಿಸುತ್ತಾರೆ. ಮತಾಂಧರು ಮಾತ್ರ ಅವರ ಮಕ್ಕಳಿಗೆ ಪಶುಹತ್ಯೆಯನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿಸುತ್ತಾರೆ. ಅದರಿಂದ ಅವರ ಮಕ್ಕಳಲ್ಲಿ ಹುಟ್ಟಿನಿಂದಲೆ ಕ್ರೌರ್ಯ, ಕ್ರೂರತೆ ಮತ್ತು ಹಿಂಸೆ ಇತ್ಯಾದಿ ಸಂಸ್ಕಾರಗಳು ಆಗಿರುತ್ತವೆ.’’ ಹೀಗಿರುವಾಗ ಅವರ ಮಕ್ಕಳು ದಯಾಳು ಹೇಗಾಗುವರು ? ಎಂದು ಹೇಳಿದ್ದರು.

೩. ಕಾನೂನಿನ ವಿಷಯದಲ್ಲಿ ಮತಾಂಧರ ಅನುಕೂಲಕರ ನಿಲುವು

ಹಿಂದೂಗಳಲ್ಲಿ ದಂಪತಿಗಳು ವಿಭಕ್ತರಾದರೆ ಹಿಂದೂ ಪತಿ ಅವನ ಪತ್ನಿಗೆ ಜೀವನಾಂಶ ಹಾಗೂ ಅವನ ಪತ್ನಿಯಿಂದಾದ ಮಕ್ಕಳಿಗೆ ಸಂಪತ್ತಿನಲ್ಲಿ ಪಾಲು ನೀಡಬೇಕಾಗುತ್ತದೆ. ಮತಾಂಧರು ಮಾತ್ರ ‘ಪರ್ಸನಲ್‌ ಲಾ’ದ ಶಸ್ತ್ರ ಉಪಯೋಗಿಸಿ ಪತ್ನಿಯನ್ನು ಜೀನವಾಂಶದಿಂದ ವಂಚಿತಳನ್ನಾಗಿಸುತ್ತಾರೆ. ಆದ್ದರಿಂದ ನ್ಯಾಯಾಧೀಶರು ಹೇಳಿದರು, ”ಶಹಾಬಾನೋ ಖಟ್ಲೆಯ ೧೯೮೫ ರ ತೀರ್ಪು ಒಂದು ಒಳ್ಳೆಯ ತೀರ್ಪಾಗಿತ್ತು; ಏಕೆಂದರೆ ಅದರಲ್ಲಿ ಅವರಿಗೆ ‘ಪತ್ನಿಗೆ ಜೀವನಾಂಶ ನೀಡಿರಿ’, ಎಂದು ಉಲ್ಲೇಖಿಸÀಲಾಗಿದೆ.’’ ಅವರು, ”ಹಲಾಲಾ ಪದ್ಧತಿ, ಬಹುಪತ್ನಿತ್ವ ಇದು ನಿಮ್ಮ ಅಧಿಕಾರವಲ್ಲ. ಸಮಾನ ನಾಗರಿಕ ಕಾನೂನು ಮಾಡಿ ಅದನ್ನು ಅನುಷ್ಠಾನಗೊಳಿಸಲು ಹೆಚ್ಚು ಸಮಯ ಬೇಡ’’ ಎಂದಿದ್ದರು.

೪. ಶ್ರೀರಾಮಮಂದಿರಕ್ಕಾಗಿ ಹಿಂದೂಗಳ ಪೂರ್ವಜರು ಮಾಡಿದ ಹೋರಾಟದ ವಿಷಯದಲ್ಲಿ ಕೃತಜ್ಞರಾಗಿರಿ !

ನ್ಯಾಯಾಧೀಶರು ಮುಂದೆ ಮಾತನಾಡುತ್ತಾ, ”ಶ್ರೀರಾಮ ಜನ್ಮಭೂಮಿಗಾಗಿ ಅಥವಾ ರಾಮಲಲ್ಲಾನ ಮಂದಿರಕ್ಕಾಗಿ ಹಿಂದೂಗಳ ಪೂರ್ವಿಕರ ಅನೇಕ ಪೀಳಿಗೆ ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಹೋರಾಡಿತು; ಆದರೆ ಅವರು ಜೀವಂತವಿರುವಾಗ ಅವರಿಗೆ ಶ್ರೀರಾಮಮಂದಿರ ನೋಡಲು ಅಥವಾ ಅದರ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ; ಆದರೆ ಅವರು ತಮ್ಮ ಕರ್ತವ್ಯದಿಂದ ಸ್ವಲ್ಪವೂ ಹಿಂಜರಿಯಲಿಲ್ಲ. ನಮ್ಮ ಪೂರ್ವಿಕರು ನಪುಂಸಕರಾಗಿರಲಿಲ್ಲ. ಅವರು ತೋರಿಸಿದ ತಾಳ್ಮೆ ಅವರ ಸಂಸ್ಕಾರದ ಲಕ್ಷಣವಾಗಿತ್ತು. ನಾವು ಭಾಗ್ಯಶಾಲಿಗಳಾಗಿದ್ದೇವೆ, ಏಕೆಂದರೆ, ನಮಗೆ ರಾಮಲಲ್ಲಾನ ಮಂದಿರ ನಿರ್ಮಾಣವಾಗಿರುವುದು ಕಾಣಿಸುತ್ತದೆ ಹಾಗೂ ದರ್ಶನವೂ ಸಿಗುತ್ತದೆ’’ ಎಂದು ಹೇಳಿದ್ದರು.

೫. ವಿಶ್ವಕ್ಕೆ ನೇತೃತ್ವ ನೀಡುವ ಸಾಮರ್ಥ್ಯ ಕೇವಲ ಹಿಂದೂಗಳಲ್ಲಿ !

ಮುಂದೆ ಮಾತನಾಡಿದ ಅವರು, ”ನಾವು ಈ ಮೇಲಿನ ತತ್ತ್ವವನ್ನು ಶಾಶ್ವತವಾಗಿ ಗಮನದಲ್ಲಿಡಬೇಕು, ಅದರಿಂದ ನಮಗೆ ಯಾರಿಂದಲೂ ತೊಂದರೆಯಾಗಲಿಕ್ಕಿಲ್ಲ’’ ಎನ್ನುತ್ತ ಅವರು ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದರು. ಅವರ ವಾಕ್ಯವನ್ನು ಉಲ್ಲೇಖಿಸಿದ ಅವರು, ‘ವಿಶ್ವಕ್ಕೆ ದಿಕ್ಕು ತೋರಿಸುವುದು ಮತ್ತು ನೇತೃತ್ವ ನೀಡುವುದು ಕೇವಲ ಹಿಂದೂಗಳಿಂದಲೇ ಸಾಧ್ಯ ಹಾಗೂ ಅವರು ಕೇವಲ ಭಾರತೀಯರಾಗಿರಲು ಸಾಧ್ಯ’ ಎಂದಿದ್ದರು.

೬. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ರೋಹಿಂಗ್ಟನ್‌ ನರಿಮನ್‌ ಇವರ ವೈಚಾರಿಕ ಗೊಂದಲ

ಬಾಬರಿ ಪತನದ ಪೂರ್ವಸಂಧ್ಯೆಗೆ ನ್ಯಾಯಾಧೀಶ ಎ.ಎಮ್‌.ಅಹಮದಿ ಮೆಮೋರಿಯಲ್‌ನ ಕಾರ್ಯಕ್ರಮವಾಯಿತು. ಅದರಲ್ಲಿ ನ್ಯಾಯಾಧೀಶ ರೋಹಿಂಗ್ಟನ್‌ ನರಿಮನ್‌ ಉಪಸ್ಥಿತರಿದ್ದರು. ಎ.ಎಮ್. ಅಹಮ್ಮದಿ ಇವರು ಕಾಂಗ್ರೆಸ್ಸಿನ ಅಧಿಕಾರವಿರುವಾಗ ಶಾಶ್ವತವಾಗಿ ಕಾಂಗ್ರೆಸ್ಸಿಗೆ ಸಹಾಯ ಮಾಡಲು ಕಾಂಗ್ರೆಸ್‌ ಸರಕಾರ ನೇಮಿಸಿದ ಆಯೋಗದ ಸದಸ್ಯ ಅಥವಾ ಅಧ್ಯಕ್ಷರ ಪಾತ್ರವನ್ನು ನಿರ್ವಹಿಸುತ್ತಿದ್ದರು. ಎಲ್ಲ ಪ್ರಸಂಗಗಳಲ್ಲಿ ಅವರು ಕಾಂಗ್ರೆಸ್ಸನ್ನು ಉಳಿಸಿದರು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಅವರು ಕಾಂಗ್ರೆಸ್ಸಿನ ‘ಪೇ ರೋಲ್‌’ನಲ್ಲಿಯೆ (ವೇತನ ಪಡೆಯುವವರ ಪಟ್ಟಿಯಲ್ಲಿ) ಇದ್ದರು, ಎಂದು ನಾವು ಹೇಳಬಹುದು. ಇಂತಹ ವ್ಯಕ್ತಿಯ ಸ್ಮರಣೆಗಾಗಿ ಇಟ್ಟುಕೊಂಡಿರುವ ಕಾರ್ಯಕ್ರಮದಲ್ಲಿ ಬೇರೆ ಏನಾದರೂ ಕೇಳಲು ಸಿಗಬಹುದೆಂದು ಅಪೇಕ್ಷೆ ಮಾಡುವ ಹಾಗಿಲ್ಲ.

ಈ ಸಂದರ್ಭದಲ್ಲಿ ನ್ಯಾಯಾಧೀಶ ನರಿಮನ್‌ ಇವರು ಶ್ರೀರಾಮಮಂದಿರದ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ನಿರ್ಣಯವನ್ನೂ ಟೀಕಿಸಿದರು ಹಾಗೂ ಅದರಲ್ಲಿನ ಅಸಾಮನತೆಯನ್ನು ತೋರಿಸಿದರು. ಅವರು, ”ಉತ್ತರಪ್ರದೇಶದಲ್ಲಿ ಅಯೋಧ್ಯೆಯಲ್ಲಿನ ಬಾಬರಿ ಕಟ್ಟಡವನ್ನು ಕೆಡವಿದ ಪ್ರಕರಣದಲ್ಲಿ ಕರಸೇವಕರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿತ್ತು ಹಾಗೂ ಅವರ ಖಟ್ಲೆಯೂ ನಡೆಯುತ್ತಿತ್ತು. ಆ ಖಟ್ಲೆಯಲ್ಲಿನ ನ್ಯಾಯಾಧೀಶರು ನಿರ್ದೋಷತ್ವವನ್ನು ಘೋಷಿಸಿದÀರು. ಅವರನ್ನು ನೀವು ಉಪಲೋಕಾಯುಕ್ತರೆಂದು ಹೇಗೆ ನೇಮಕ ಮಾಡುತ್ತೀರಿ ?’’ಎಂದು ಪ್ರಶ್ನಿಸಿದ್ದರು. ನರಿಮನ್‌ ಮಹಾಶಯರೆ, ಇಲ್ಲಿ ನೀವು ಮರೆಯುತ್ತಿದ್ದೀರಿ, ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲಿ ಯಾರು ತುರ್ತುಪರಿಸ್ಥಿತಿಯನ್ನು ವಿರೋಧಿಸಲಿಲ್ಲವೋ, ಭೂಮಿ ಸ್ವಾಧೀನ ಪಡಿಸುವ ನಿರ್ಣಯದಲ್ಲಿ ಯಾರು ಸರಕಾರದ ಮನವೊಲಿಸಿದರೋ, ಅವರಿಗೆ ನೀವು ‘ಔಟ್‌ ಆಫ್‌ ಟರ್ನ್‌’ (ಅಡ್ಡ ಮಾರ್ಗದಲ್ಲಿ) ಮುಖ್ಯನ್ಯಾಯಾಧೀಶರ ಹುದ್ದೆಯನ್ನು ಅನುಗ್ರಹಿಸಿದ್ದೀರಿ. ಆ ಸಂದರ್ಭದಲ್ಲಿ ನಿಮ್ಮ ತಂದೆ ಅಂದರೆ ಹಿರಿಯ ಕಾನೂನು ಪಂಡಿತ ಫಲೀ ನರಿಮನ್‌ ಇವರು ವಿರೋಧಿಸಿದ್ದರು. ಆ ವಿಷಯದಲ್ಲಿ ಅಥವಾ ತುರ್ತುಪರಿಸ್ಥಿತಿಯ ವಿಷಯದಲ್ಲಿ ಇಂದಿನ ವರೆಗೆ ೫೦ ವರ್ಷಗಳಲ್ಲಿ ನೀವು ಏನೂ ಮಾತನಾಡಿಲ್ಲ. ಬಿಹಾರದ ಅಂದಿನ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಇವರನ್ನು ಕ್ರಿಮಿನಲ್‌ ಖಟ್ಲೆಯಲ್ಲಿ ನಿರ್ದೋಷಿಯಾಗಿ ಮುಕ್ತಗೊಳಿಸಿದ ಮತಾಂಧ ನ್ಯಾಯಾಧೀಶರನ್ನು ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿಸಲಾಯಿತು. ಹಿಂದೂಗಳ ವಿರುದ್ಧ ಆಡಳಿತ ಮತ್ತು ಪೊಲೀಸ್‌ ಕಾರ್ಯನಿರತ ವಾಗಿತ್ತು. ನ್ಯಾಯಾಲಯದಲ್ಲಿಯೂ ಅನೇಕ ನಿರ್ಣಯಗಳು ಹಿಂದೂಗಳ ವಿರುದ್ಧ ಬಂದಿವೆ; ಆದರೆ ನೀವು ಆ ವಿಷಯದಲ್ಲಿ ಚಕಾರವೆತ್ತಲಿಲ್ಲ. ೧೯೯೦ ರಲ್ಲಿ ನಾಲ್ಕುವರೆ ಲಕ್ಷ ಹಿಂದೂಗಳನ್ನು ಕಾಶ್ಮೀರದಿಂದ ಹೊರದಬ್ಬಲಾಯಿತು. ಆ ಬಗ್ಗೆಯೂ ನಿಮಗೆ ದುಃಖವಾಗಿರುವುದು ಕಾಣಿಸಲಿಲ್ಲ. ಕಾಶ್ಮೀರದಲ್ಲಿ ಮತಾಂಧರು ನೂರಾರು ಮಹಿಳೆಯರಿಗೆ ಲೈಂಗಿಕ ಅತ್ಯಾಚಾರ ಮಾಡಿದಾಗಲೂ ನೀವು ಮೌನವಿದ್ದೀರಿ.’

ಶ್ರೀಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೯.೧೨.೨೦೨೪)