
೧. ಮೂತ್ರಪಿಂಡದಕಲ್ಲಿನ ವೇದನೆ ಆರಂಭವಾಗುವುದು ಮತ್ತು ಔಷಧೋಪಚಾರ ಮಾಡಿದರೂ ನೋವು ಕಡಿಮೆಯಾಗದಿರುವುದು
೧೦.೩.೨೦೨೩ ರಂದು ನನಗೆ ಮೂತ್ರಪಿಂಡದಕಲ್ಲಿನ ತೊಂದರೆ ಆರಂಭವಾಯಿತು. ನನ್ನ ಶರೀರದ ಬಲಬದಿಯಲ್ಲಿ ಬಹಳ ನೋವಾಗುತ್ತಿತ್ತು. ೩ ಗಂಟೆಯ ನಂತರ ನೋವು ನಿಂತಿತು. ೧೭.೩.೨೦೨೩ ರಂದು ನನಗೆ ಪುನಃ ನೋವು ಪ್ರಾರಂಭವಾಯಿತು ಮತ್ತು ಮೂತ್ರಪಿಂಡದಕಲ್ಲು ಒಂದು ಸ್ಥಳಕ್ಕೆ ಬಂದು ಸಿಕ್ಕಿಕೊಂಡಿತು. ಔಷಧೋಪಚಾರಗಳನ್ನು ಮಾಡಿದರೂ ಮೂತ್ರಪಿಂಡದಕಲ್ಲು ಅಲ್ಲಿಂದ ಮುಂದೆ ಸರಿಯುತ್ತಿರಲಿಲ್ಲ. ಅದು ಅಲ್ಲಿಯೇ ಸಿಕ್ಕಿಕೊಂಡ ಕಾರಣ ನನಗೆ ಅಸಹನೀಯ ವೇದನೆಯಾಗುತ್ತಿತ್ತು.
೨. ಸದ್ಗುರು ಡಾ. ಮುಕುಲ ಗಾಡಗೀಳ ಇವರು ಮೂತ್ರಪಿಂಡದಕಲ್ಲಿನ ತೊಂದರೆ ಕಡಿಮೆಯಾಗಲು ನಾಮಜಪಾದಿ ಉಪಾಯಗಳನ್ನು ಹೇಳುವುದು, ಅವುಗಳನ್ನು ಮಾಡಿದ ನಂತರ ಮೂತ್ರಪಿಂಡದಕಲ್ಲು ಮೂತ್ರದೊಂದಿಗೆ ಹೊರಬರುವುದು
ಮೂತ್ರಪಿಂಡದಕಲ್ಲಿನ ತೊಂದರೆ ಕಡಿಮೆಯಾಗಲು ೨೦.೩.೨೦೨೩ ರಂದು ನಾನು ಸದ್ಗುರು ಡಾ. ಮುಕುಲ ಗಾಡಗೀಳರಿಂದ ನಾಮಜಪಾದಿ ಉಪಾಯಗಳನ್ನು ಕೇಳಿಕೊಂಡೆ. ಆ ಉಪಾಯ ಆರಂಭಿಸಿದ ನಂತರ ನನಗೆ ತಕ್ಷಣ ನೋವು ಆರಂಭವಾಗಿ ಕಲ್ಲು ಕೆಳಗೆ ಸರಿಯತೊಡಗಿತು. ವಿಶೇಷವೆಂದರೆ ಅದು ೨೪ ಗಂಟೆಗಳಲ್ಲಿ ಮೂತ್ರ ಮಾರ್ಗದವರೆಗೆ ಕೆಳಗೆ ಬಂದಿತು. ನಾನು ನಾಮಜಪಾದಿ ಉಪಾಯ ಮುಂದುವರಿಸಿದ್ದೆ. ೨೪.೩.೨೦೨೩ ರಂದು ಕಲ್ಲು ಮೂತ್ರದೊಂದಿಗೆ ಹೊರಬಿತ್ತು

೩. ಆಧ್ಯಾತ್ಮಿಕ ಉಪಾಯದಲ್ಲಿರುವ ಸಾಮರ್ಥ್ಯದ ಅರಿವಾಗುವುದು
ನಾನು ಸ್ವತಃ ಒಬ್ಬ ಆಧುನಿಕ ವೈದ್ಯನಾಗಿದ್ದರೂ ‘ನಾಮಜಪಾದಿ ಉಪಾಯದ ಸಾಮರ್ಥ್ಯದಿಂದ ನಾಮಜಪ ಆರಂಭಿಸಿದ ನಂತರ ನನಗೆ ಕೂಡಲೇ ನೋವು ಪ್ರಾರಂಭವಾಯಿತು ಮತ್ತು ಅಲ್ಪ ಸಮಯದಲ್ಲಿಯೇ ಹೆಚ್ಚು ತೊಂದರೆಯಾಗದೆ ಮೂತ್ರಪಿಂಡದಕಲ್ಲು ಹೊರಬಂತು.
ಇಂತಹ ಸಾಮರ್ಥ್ಯವಿರುವ ನಾಮಜಪಾದಿ ಉಪಾಯಗಳನ್ನು ನನಗೆ ನೀಡಿದ್ದಕ್ಕಾಗಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಸದ್ಗುರು ಡಾ. ಮುಕುಲ ಗಾಡಗೀಳರ ಚರಣಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.’ – ಆಧುನಿಕ ವೈದ್ಯ ಮನೋಜ ಸೋಳಂಕಿ, ಮಡಗಾಂವ್ ಗೋವಾ. (೨೬.೩.೨೦೨೩)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !