ಸಂಸ್ಕೃತ : ಮೃತವಲ್ಲ, ಅಮರ ಭಾಷೆ !

ದೇವವಾಣಿ ಸಂಸ್ಕೃತ ಭಾಷೆಯ ಅದ್ವಿತೀಯತೆ !

೧. ‘ಸಂಸ್ಕೃತವು ಭಾರತದ ಶಾಸ್ತ್ರೀಯ ಭಾಷೆಯಾಗಿದೆ. ಇದು ಜಗತ್ತಿನಲ್ಲಿನ ಅತ್ಯಂತ ಪ್ರಾಚೀನ ಲಿಖಿತ ಭಾಷೆಗಳಲ್ಲಿ ಒಂದಾಗಿದೆ. ಸಂಸ್ಕೃತವು ಹಿಂದಿ-ಯುರೋಪಿಯನ್‌ ಭಾಷೆಗಳ ಪರಿವಾರದ ಮುಖ್ಯ ಶಾಖೆ ಹಾಗೂ ಹಿಂದಿ-ಇರಾನಿ ಭಾಷೆಯ ಹಿಂದಿ-ಆರ್ಯ ಈ ಉಪಶಾಖೆಯ ಮುಖ್ಯ ಭಾಷೆಯೂ ಆಗಿದೆ.

೨. ಆಧುನಿಕ ಭಾರತೀಯ ಭಾಷೆಗಳಾದ ಹಿಂದಿ, ಮರಾಠಿ, ಸಿಂಧಿ, ಪಂಜಾಬಿ, ಬಾಂಗಲಾ, ಉಡಿಯಾ, ನೇಪಾಳ, ಕಾಶ್ಮೀರ, ಉರ್ದು ಇತ್ಯಾದಿ ಎಲ್ಲ ಭಾಷೆಗಳು ಸಂಸ್ಕೃತದಿಂದಲೇ ಬಂದಿವೆ. ಈ ಎಲ್ಲ ಭಾಷೆಗಳಲ್ಲಿ ಯುರೋಪಿಯನ್‌ ಅಲೆಮಾರಿ ಜನರ ರೋಮಾನಿ ಭಾಷೆಯೂ ಸೇರಿಕೊಂಡಿದೆ.

೩. ಹಿಂದೂ ಧರ್ಮದÀ ಎಲ್ಲ ಧರ್ಮಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ. ಈಗಲೂ ಯಜ್ಞ, ಪೂಜೆಗಳಲ್ಲಿ ಸಂಸ್ಕೃತ ಭಾಷೆಯನ್ನೇ ಬಳಸುತ್ತಾರೆ.

೪. ಆಧುನಿಕ ವಿದ್ವಾಂಸರು, ಸಂಸ್ಕೃತ ಭಾಷೆಯು ೫ ಸಾವಿರ ವರ್ಷಗಳ ಇತಿಹಾಸವಾಗಿದೆ, ಎಂದು ಹೇಳುತ್ತಾರೆ. ಭಾರತದಲ್ಲಿ ಈ ಆರ್ಯಭಾಷೆಯು ಅತ್ಯಂತ ಮಹತ್ವಪೂರ್ಣ, ವ್ಯಾಪಕ ಮತ್ತು ಸಮೃದ್ಧವಾಗಿದೆ. ಈ ಭಾಷೆಯಲ್ಲಿ ಭಾರತದಲ್ಲಿನ ಅತ್ಯುತ್ತಮ ಪ್ರತಿಭೆ, ಅಮೂಲ್ಯ ಚಿಂತನ, ಮನನ, ವಿವೇಕ, ರಚನಾತ್ಮಕ, ಸೃಜನಶೀಲ ಮತ್ತು ವೈಚಾರಿಕ ಜ್ಞಾನವು ವ್ಯಕ್ತವಾಗಿದೆ.

೫. ಇಂದಿಗೂ ಎಲ್ಲ ಕ್ಷೇತ್ರಗಳಲ್ಲಿ ಈ ಭಾಷೆಯಲ್ಲಿ ಪುಸ್ತಕಗಳ ರಚನಾಕಾರ್ಯವು ನಿರಂತರವಾಗಿ ನಡೆದಿದೆ. ೨೦೦೧ ರ ಭಾಷಾವಾರು ಜನಗಣತಿಯ ಪ್ರಕಾರ ೧೪ ಸಾವಿರ ೧೩೫ ಜನರು ಸಂಸ್ಕೃತವನ್ನು ತಮ್ಮ ಮೂಲ ಭಾಷೆಯೆಂದು ನೋಂದಾಯಿಸಿದ್ದಾರೆ.

೬. ಇಂದು ಭಾರತದಲ್ಲಿ ಕೆಲವೊಂದು ಕಡೆಗಳಲ್ಲಿ ಸಂಸ್ಕೃತ ಭಾಷೆಯನ್ನು ಮಾತನಾಡುತ್ತಾರೆ, ಓದುತ್ತಾರೆ ಮತ್ತು ಬರೆಯುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಎಲ್ಲ ವ್ಯವಹಾರವು ಸಂಸ್ಕೃತದಲ್ಲಿ ನಡೆಯುತ್ತವೆ. ಆ ಸ್ಥಳಗಳು ಮುಂದಿನಂತಿವೆ

ಅ. ಮತ್ತೂರು, ಶಿವಮೊಗ್ಗ ಜಿಲ್ಲೆ, ಕರ್ನಾಟಕ

ಆ. ಜಿರಿ, ರಾಜಗಢ ಜಿಲ್ಲೆ, ಮಧ್ಯಪ್ರದೇಶ

ಇ. ಗನೋಡಾ, ಬನಸ್ವರ ಜಿಲ್ಲೆ, ರಾಜಸ್ಥಾನ

ಈ. ಶ್ಯಾಮಸುಂದರಪುರ, ಕೆಂದುಝರ ಜಿಲ್ಲೆ, ಓರಿಸಾ ಇವುಗಳ ಹೊರತು ಮಹೊಡ, ಮಧ್ಯಪ್ರದೇಶ; ಬುಂದಿ, ಖಾಡ, ರಾಜಸ್ಥಾನ ಮತ್ತು ಬೆವಾಲಿ, ಉತ್ತರಪ್ರದೇಶ.

೭. ಸಂಸ್ಕೃತದಲ್ಲಿ ವ್ಯಾಖ್ಯಾನವಾಗುತ್ತವೆ ಮತ್ತು ಭಾರತದ ವಿವಿಧ ಪ್ರಾದೇಶಿಕ ಜನರು ಒಟ್ಟಿಗೆ ಸೇರಿದಾಗ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಂದಿಗೂ ಸಂಸ್ಕೃತವೇ ಉಪಯುಕ್ತವಾಗುತ್ತದೆ; ಆದ್ದರಿಂದ ಗ್ರೀಕ್‌ ಮತ್ತು ಲ್ಯಾಟಿನ್‌ ಇತ್ಯಾದಿ ಪ್ರಾಚೀನ ಮೃತಭಾಷೆಗಳಂತೆ ಸಂಸ್ಕೃತದ ಸ್ಥಿತಿ ಇಲ್ಲ. ಅವುಗಳಿಗಿಂತ ಸಂಪೂರ್ಣ ವಿಭಿನ್ನವಾಗಿದ್ದು ಅದು ಅಮರ ಭಾಷೆಯಾಗಿದೆ.

– ಲೇಖಕರು : ಡಾ. ನಿಲೇಶ ಜೋಶಿ (ಆಧಾರ : ಮಾಸಿಕ ‘ಧರ್ಮಭಾಸ್ಕರ’, ಮಾರ್ಚ್ ೨೦೧೫)