ಸಾಮಾಜಿಕ ಮಾಧ್ಯಮಗಳೆಂದರೆ ಮೋಹದ ಪಂಜರದಲ್ಲಿ ಸಿಲುಕುವುದು‘ಯಾವುದೇ ಊರಿಗೆ ಹುಲಿಗಳಂತಹ ಕಾಡು ಪ್ರಾಣಿಗಳಿಂದ ತೊಂದರೆಯಾಗುತ್ತಿದ್ದರೆ ಅರಣ್ಯ ಇಲಾಖೆಯು ಹುಲಿಯನ್ನು ಹಿಡಿಯಲು ಒಂದು ದೊಡ್ಡ ಪಂಜರವನ್ನು ಇಡುತ್ತಾರೆ. ಅವರು ಆ ಪಂಜರದಲ್ಲಿ ಮಾಂಸವನ್ನು ಇಡುತ್ತಾರೆ. ಹುಲಿ ಮಾಂಸದ ವಾಸನೆಯಿಂದ ಮತ್ತು ಆಸೆಯಿಂದ ಪಂಜರದತ್ತ ಆಕರ್ಷಿತಗೊಳ್ಳುತ್ತದೆ ಮತ್ತು ಹುಲಿ ಮಾಂಸವನ್ನು ತಿನ್ನಲು ಪಂಜರದಲ್ಲಿ ಹೋದನಂತರ ಪಂಜರದ ಬಾಗಿಲನ್ನು ಮುಚ್ಚಿ ಅದರಲ್ಲಿ ಹುಲಿಯನ್ನು ಸಿಲುಕಿಸುತ್ತಾರೆ. ಸಾಮಾಜಿಕ ಮಾಧ್ಯಮಗಳು ಸಹ ಅದೇರೀತಿಯದ್ದಾಗಿವೆ. ನಿಮಗೆ ಏನು ಇಷ್ಟವಾಗುತ್ತದೆಯೋ, ಅದೆಲ್ಲವೂ ಅದರಲ್ಲಿದೆ. ಒಮ್ಮೆ ನೀವು ಅದನ್ನು ನೋಡಲು ಪ್ರಾರಂಭಿಸಿದರೆ, ಅದರಲ್ಲಿ ಸಿಕ್ಕಿಬೀಳುತ್ತೀರಿ ಮತ್ತು ನಂತರ ಅದನ್ನು ತೆಗೆದುಹಾಕಲು ಕಷ್ಟವಾಗುತ್ತದೆ. – (ಸದ್ಗುರು) ರಾಜೇಂದ್ರ ಗಜಾನನ ಶಿಂದೆ |
ಸಾಧಕರ ದೃಷ್ಟಿಯಲ್ಲಿ ಸಂಚಾರವಾಣಿಯ ಪರಿಣಾಮ !
‘ಸಾಧಕರು ತಮ್ಮ ಕ್ಷಮತೆಗನುಸಾರ ಪ್ರತಿದಿನ ಅಷ್ಟಾಂಗ ಸಾಧನೆಗನುಸಾರ ಸಾಧನೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಇದರ ಅಂತರ್ಗತ ೧. ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣ-ಸಂವರ್ಧನೆ, ೨. ಅಹಂ-ನಿರ್ಮೂಲನೆ, ೩. ನಾಮಜಪ, ೪. ಭಾವಜಾಗೃತಿ, ೫. ಸತ್ಸಂಗ, ೬. ಸತ್ಸೇವೆ, ೭. ತ್ಯಾಗ ಮತ್ತು ೮. ಪ್ರೀತಿ (ಇತರರ ಬಗ್ಗೆ ನಿರಪೇಕ್ಷ ಪ್ರೇಮ) ಇವುಗಳ ಬಗ್ಗೆ ಪ್ರಯತ್ನಿಸುತ್ತಾರೆ. ಇದರಿಂದ ಅವರ ಸಾತ್ತ್ವಿಕತೆ ಹೆಚ್ಚಾಗುತ್ತ ಹೋಗುತ್ತದೆ. ಅವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಿರುವುದರಿಂದ ಅವರ ಚಿತ್ತದ ಮೇಲಿನ ಸಂಸ್ಕಾರಗಳು ಕಡಿಮೆಯಾಗುತ್ತವೆ. ಸಾಧಕರು ಸಂಚಾರವಾಣಿಯ ಮಾಯಾವಿ ಜಗತ್ತಿಗೆ ಮರುಳಾಗುತ್ತಾರೆ ಅಥವಾ ಕೆಲವು ಸಾಧಕರು ಸಂಚಾರವಾಣಿಯನ್ನು ನೋಡುವುದರಲ್ಲಿ ಸಿಲುಕುತ್ತಿದ್ದಾರೆ. ಇದರಿಂದ ಅವರ ಸಾಧನೆಯ ಮೇಲೆ ಗಂಭೀರ ಪರಿಣಾಮವಾಗಿ ಅವರ ಅವನತಿಯಾಗುತ್ತದೆ. ‘ಸಂಚಾರವಾಣಿಯಿಂದ (ಮೋಬೈಲ್‌ನಿಂದ) ಸಾಧನೆಯ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ ?,ಎಂಬುದನ್ನು ಈ ಲೇಖನದಲ್ಲಿ ನೋಡಲಿದ್ದೇವೆ. (ಭಾಗ ೨)

೧. ಸಂಚಾರವಾಣಿಯನ್ನು ಆನಗತ್ಯ ಬಳಸುವುದರಿಂದ ಆಗುವ ದುಷ್ಪರಿಣಾಮಗಳು
೧ ಅ. ಚಿತ್ತದ ಮೇಲೆ ಸಂಚಾರವಾಣಿ ನೋಡುವ ಸಂಸ್ಕಾರವಾಗುವುದು ಮತ್ತು ಆ ಸಂಸ್ಕಾರವನ್ನು ತೆಗೆದುಹಾಕಲು ಪುನಃ ಸಾಧನೆ ಮಾಡಬೇಕಾಗುವುದು : ಯಾವ ಸಾಧಕರಿಗೆ ಖಾಲಿ ಸಮಯದಲ್ಲಿ ಸಂಚಾರವಾಣಿಯನ್ನು ನೋಡುವ ಅಭ್ಯಾಸವಾಗಿದೆಯೋ, ಆ ಸಾಧಕರ ಅಂತರ್ಮನಸ್ಸಿನಲ್ಲಿ ಒಂದು ಹೊಸ ಸಂಸ್ಕಾರ ಕೇಂದ್ರ ನಿರ್ಮಾಣವಾಗಿರುತ್ತದೆ. ಆದ್ದರಿಂದ ಯಾವಾಗ ಅವನಿಗೆ ಖಾಲಿ ಸಮಯ ಸಿಗುತ್ತದೆಯೋ, ಆಗ ಅವನಿಗೆ ಸಂಚಾರವಾಣಿಯನ್ನು ನೋಡುವ ಇಚ್ಛೆಯಾಗುತ್ತದೆ ಮತ್ತು ಅವನು ಸಂಚಾರವಾಣಿಯನ್ನು ನೋಡುತ್ತಾನೆ. ಹೀಗೆ ಸತತವಾಗಿ ಆಗತೊಡಗಿದರೆ ಚಿತ್ತದ ಮೇಲಿನ ಸಂಚಾರವಾಣಿಯನ್ನು ನೋಡುವ ಸಂಸ್ಕಾರ ದೃಢವಾಗುತ್ತಾ ಹೋಗುತ್ತದೆ ಸಂಚಾರವಾಣಿಯನ್ನು ನೋಡುವುದರಿಂದ ಎಷ್ಟೋ ಹೊಸ ಅಯೋಗ್ಯ ಸಂಸ್ಕಾರಗಳು ಆಗುತ್ತಿರುತ್ತವೆ. ಸಾಧನೆಯ ಪ್ರವಾಸ ಚಿತ್ತದ ಮೇಲಿನ ಲಕ್ಷಾವಧಿ ಸಂಸ್ಕಾರಗಳು ಮತ್ತು ಅದರಿಂದ ನಿರ್ಮಾಣವಾಗುವ ವಿಚಾರಗಳು ಕಡಿಮೆಯಾಗಿ ಮನಸ್ಸು ನಿರ್ವಿಚಾರ ಸ್ಥಿತಿಗೆ ಹೋಗುವುದಿರುತ್ತದೆ. ಸಂಚಾರವಾಣಿಯ ಬಳಕೆಯಿಂದ ಆದ ಅನೇಕ ರೀತಿಯ ಹೊಸ ಸಂಸ್ಕಾರಗಳು ಅನೇಕ ಹೊಸ ವಿಚಾರಗಳಿಗೆ ಜನ್ಮ ನೀಡುತ್ತವೆ. ‘ತಮ್ಮ ಮೇಲೆ ಅಯೋಗ್ಯ ಸಂಸ್ಕಾರಗಳು ಆಗದಂತೆ ಸಾಧಕರು ಕಾಳಜಿ ವಹಿಸುವುದು ಆವಶ್ಯಕವಾಗಿದೆ.
೧ ಆ. ನಾಮಜಪ, ಸೇವೆ ಇತ್ಯಾದಿಗಳ ಗುಣಮಟ್ಟದಲ್ಲಿ ಕುಸಿತ : ಸಂಚಾರವಾಣಿಯಲ್ಲಿ ಏನು ನೋಡುತ್ತೇವೆಯೋ ಅಥವಾ ಕೇಳುತ್ತೇವೆಯೋ, ಅವುಗಳ ಸಂಸ್ಕಾರಗಳೂ ಅಂತರ್ಮನಸ್ಸಿನ ಮೇಲೆ ಸತತವಾಗಿ ಆಗುತ್ತಿರುತ್ತವೆ. ಯಾವಾಗ ಸಾಧಕನು ನಾಮಜಪ, ಭಾವಜಾಗೃತಿಯ ಪ್ರಯೋಗ ಅಥವಾ ಸೇವೆಯನ್ನು ಮಾಡುತ್ತಾನೆಯೋ, ಆಗ ಅವನ ಅಂತರ್ಮನಸ್ಸಿನಲ್ಲಿ ಆಗಿರುವ ಹೊಸ ಸಂಸ್ಕಾರಗಳಿಗನುಸಾರ ಮನಸ್ಸಿನಲ್ಲಿ ವಿಚಾರಗಳು ಬರುತ್ತಿರುತ್ತವೆ. ಇದರಿಂದ ನಾಮಜಪ, ಸೇವೆ ಇತ್ಯಾದಿಗಳ ಗುಣಮಟ್ಟವು ಕುಸಿಯುತ್ತದೆ.
೧ ಇ. ಸಂಚಾರವಾಣಿಯಲ್ಲಿ ಸ್ಫೂರ್ತಿದಾಯಕ ಚಲನಚಿತ್ರಗಳನ್ನು ನೋಡುವುದರಲ್ಲಿ ಸಾಧಕರ ಅಮೂಲ್ಯ ಸಮಯ ಹೋಗುತ್ತದೆ : ಕೆಲವು ಸಾಧಕರು, “ನಾವು ಖಾಲಿ ಸಮಯದಲ್ಲಿ ರಾಮಾಯಣ, ಮಹಾಭಾರತದಂತಹ ಪೌರಾಣಿಕ ಚಲನಚಿತ್ರಗಳನ್ನು ನೋಡುತ್ತೇವೆ. ಅವುಗಳನ್ನು ನೋಡಿ ನಮಗೆ ಒಳ್ಳೆಯದೆನಿಸುತ್ತದೆ, ಎಂದು ಹೇಳುತ್ತಾರೆ. ಈ ಚಲನಚಿತ್ರಗಳು ಸ್ಫೂರ್ತಿದಾಯಕವಾಗಿದ್ದರೂ, ಅದಕ್ಕಾಗಿ ಪ್ರತಿದಿನ ಮಧ್ಯಮಧ್ಯದಲ್ಲಿ ಸಾಧನೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಆ ಸಮಯದಲ್ಲಿ ನಾಮಜಪ ಅಥವಾ ಸಾಧನೆಯ ಇತರ ಪ್ರಯತ್ನಗಳನ್ನು ಮಾಡಿದರೆ ಆಗುವ ಲಾಭವು ಎಷ್ಟೋ ಪಟ್ಟು ಹೆಚ್ಚಾಗುತ್ತದೆ. ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ. ಅಧ್ಯಾತ್ಮದಲ್ಲಿನ ಏನಾದರೊಂದು ನೋಡುವುದು, ಓದುವುದು ಇದಕ್ಕಿಂತ ಸಾಧನೆಯ ಸಂದರ್ಭದಲ್ಲಿ ಏನು ನೋಡುತ್ತೇವೋ ಅಥವಾ ಓದುತ್ತೇವೋ, ಅವುಗಳನ್ನು ಕೃತಿಯಲ್ಲಿ ತಂದರೆ ಮಾತ್ರ ಸಾಧನೆಯಾಗುತ್ತದೆ. ಒಳ್ಳೆಯದೇನಾದರೂ ಓದಿದರೆ ಅಥವಾ ನೋಡಿದರೆ ಸುಖ ಸಿಗುತ್ತದೆ; ಆದರೆ ಸಾಧನೆಯ ಪ್ರವಾಸವು ಸುಖ-ದುಃಖದ ಆಚೆಗಿದೆ ಮತ್ತು ಅದು ಸುಖಕ್ಕಿಂತ ಅನೇಕ ಪಟ್ಟು ಶ್ರೇಷ್ಠವಾಗಿರುವ ಶಾಶ್ವತ ಆನಂದಪ್ರಾಪ್ತಿಯ ಕಡೆಗೆ ಒಯ್ಯುವುದಾಗಿದೆ.
೧ ಈ. ಸಂಧಿಕಾಲದಲ್ಲಿ ಸಾಧನೆಯ ವೇಗ ಹೆಚ್ಚಾಗದೇ ಕಡಿಮೆಯಾಗುವುದು : ಸದ್ಯದ ಕಾಲವು ಸಾಧನೆಗಾಗಿ ಸಂಧಿಕಾಲವಾಗಿದೆ. ಈ ಕಾಲದಲ್ಲಿ ಮಾಡಿದ ಸಾಧನೆಯ ವೇಗವು ಬಹಳ ಹೆಚ್ಚಿದೆ, ಉದಾ. ಈಗ ಮಾಡಿದ ಸಾಧನೆಯ ಫಲವು ೫೦ ಪಟ್ಟು ಇದೆ, ಅಂದರೆ ೧ ಗಂಟೆ ಮಾಡಿದ ಸಾಧನೆಯಿಂದ ೫೦ ಗಂಟೆ ಸಾಧನೆಯಾಗುತ್ತದೆ. ಇದರ ಬದಲಾಗಿ ಯಾವಾಗ ನಾವು ಒಂದು ಗಂಟೆ ಸಾಧನೆಯ ಸಮಯವನ್ನು ವ್ಯರ್ಥಗೊಳಿಸುತ್ತೇವೋ, ಆಗ ೫೦ ಗಂಟೆ ಸಾಧನೆಯ ಸಮಯವನ್ನು ವ್ಯರ್ಥಗೊಳಿಸುತ್ತೇವೆ.
೧ ಉ. ದುಷ್ಟ ಶಕ್ತಿಗಳ ತೊಂದರೆ ಹೆಚ್ಚಾಗುವುದು : ಸಾಧಕರು ಯಾವಾಗ ಸಾಧನೆಯ ಹೊರತಾಗಿ ಸಂಚಾರವಾಣಿಯನ್ನು ನೋಡುತ್ತಿರುತ್ತಾರೆಯೋ, ಆಗ ಅನಿಷ್ಟ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ಈ ಮಾಧ್ಯಮದಿಂದ ಅವರ ಮೇಲೆ ದಾಳಿ ಮಾಡುತ್ತಿರುತ್ತವೆ. ಅದರಿಂದ ಸಾಧಕರ ಮನಸ್ಸು ಮತ್ತು ಬುದ್ಧಿಯ ಮೇಲೆ ಆವರಣ ಬಂದು, ಕಣ್ಣುನೋವು, ಅಸ್ವಸ್ಥತೆ ಅನಿಸುವುದು ಇಂತಹ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಸಾಧಕರಿಗೆ ಆ ತೊಂದರೆಗಳನ್ನು ದೂರಗೊಳಿಸಲು ಆಧ್ಯಾತ್ಮಿಕ ಪರಿಹಾರೋಪಾಯಗಳನ್ನು ಮಾಡಲು ಸಮಯ ಕೊಡಬೇಕಾಗುತ್ತದೆ. ರಾತ್ರಿ ಮಲಗುವ ಮುನ್ನ ಕೆಲವರಿಗೆ ಸಂಚಾರವಾಣಿಯನ್ನು ನೋಡುವ ಅಭ್ಯಾಸವಿರುತ್ತದೆ. ಇದರಿಂದ ದುಷ್ಟ ಶಕ್ತಿಗಳ ತೊಂದರೆದಾಯಕ ಆವರಣ ಬಂದು ಹೆಚ್ಚು ನಿದ್ರೆ ಬರುವುದು ಅಥವಾ ನಿದ್ರೆ ಬರದಿರುವುದು ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ ಹಾಗೂ ಆವರಣದ ಸ್ಥಿತಿಯಲ್ಲಿ ಮಲಗಿರುವುದರಿಂದ ಇಡೀರಾತ್ರಿ ದುಷ್ಟ ಶಕ್ತಿಗಳ ಆಕ್ರಮಣ ಆಗಿರುವುದರಿಂದ ಮರುದಿನ ಬೆಳಗ್ಗೆ ಏಳುವಾಗ ತುಂಬಾ ತೊಂದರೆಯಾಗುತ್ತದೆ.
೨. ಸಂಚಾರವಾಣಿಯನ್ನು ನೋಡುವ ಸಂಸ್ಕಾರವನ್ನು ದೂರಗೊಳಿಸಲು ಸ್ವಯಂಸೂಚನೆ
ಅ. ಯಾವಾಗ ನನಗೆ ಸಂಚಾರವಾಣಿಯಲ್ಲಿ ವಾರ್ತೆ ಅಥವಾ ಚಲನಚಿತ್ರಗಳನ್ನು ನೋಡುವ ಇಚ್ಛೆಯಾಗುತ್ತದೆಯೋ, ಆಗ ನಾನು ಸಾಧನೆಯ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತಿದ್ದೇನೆ, ಎಂದು ನನಗೆ ಅರಿವಾಗುವುದು ಮತ್ತು ನಾನು ಸಂಚಾರವಾಣಿ ಯನ್ನು ನೋಡುವುದು ತಪ್ಪಿಸಿ ನಾಮಜಪ ಮಾಡುವೆನು.
ಆ. ಯಾವಾಗ ನಾನು ಸಂಚಾರವಾಣಿಯಲ್ಲಿ ಅನಗತ್ಯ ವಾರ್ತೆ ಅಥವಾ ಚಲನಚಿತ್ರಗಳನ್ನು ನೋಡುತ್ತೇನೆಯೋ, ಆಗ ನಾನು ನನ್ನ ಅಂತರ್ಮನಸ್ಸಿನಲ್ಲಿ ಅಯೋಗ್ಯ ಸಂಸ್ಕಾರಗಳನ್ನು ಮಾಡುತ್ತಿದ್ದೇನೆ, ಎಂದು ನನಗೆ ಅರಿವಾಗುವುದು ಮತ್ತು ನಾನು ಸಂಚಾರವಾಣಿಯಲ್ಲಿ ವಾರ್ತೆ ಮತ್ತು ಚಲನಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿ ಆ ಸಮಯವನ್ನು ಸಾಧನೆಗಾಗಿ (ಟಿಪ್ಪಣಿ) ಬಳಸುವೆನು.
ಟಿಪ್ಪಣಿ – ಸಾಧನೆ ಮಾಡಲು ಸಂಚಾರವಾಣಿಯನ್ನು ನೋಡುವ ಬದಲು ನಾಮಜಪ ಮಾಡುವುದು, ಸೇವೆ ಮಾಡುವುದು, ಭಾವವೃದ್ಧಿಗಾಗಿ ಪ್ರಯತ್ನಿಸುವುದು ಇತ್ಯಾದಿ ಶಬ್ದಗಳನ್ನು ಬಳಸಬಹುದು.
‘ಹೇ ಸಚ್ಚಿದಾನಂದ ಪರಬ್ರಹ್ಮ ಗುರುದೇವಾ, ಸಂಚಾರವಾಣಿಯ ಮಾಯಾಜಾಲದಲ್ಲಿ ಸಿಲುಕಿದ ಸಾಧಕರಿಗೆ ಇದರಿಂದ ಹೊರಗೆ ಬಂದು ತಳಮಳದಿಂದ ಸಾಧನೆ ಮಾಡುವ ಬುದ್ಧಿ ಬರಲಿ, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ.
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ. (ಮುಕ್ತಾಯ)
ಇದಂ ನ ಮಮ | (ಈ ವಿಚಾರವು ನನ್ನದಲ್ಲ.)
– (ಸದ್ಗುರು) ರಾಜೇಂದ್ರ ಗಜಾನನ ಶಿಂದೆ, (ವಯಸ್ಸು ೬೩ ವರ್ಷ), ಸನಾತನ ಆಶ್ರಮ, ದೇವದ, ಪನವೇಲ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಕಾಶ್ಮೀರಿ ಯುವಕನನ್ನು ‘ಹನಿ ಟ್ರ್ಯಾಪ್’ನಲ್ಲಿ ಸಿಲುಕಿಸಿ ಆತನಿಂದ ಗೌಪ್ಯ ಮಾಹಿತಿ ಪಡೆಯುವ ಪಾಕಿಸ್ತಾನದ ಸಂಚು ವಿಫಲ ! : Pakistani HoneyTrap Failed
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !