ವರ್ತಮಾನದಲ್ಲಿ ಸಂಚಾರವಾಣಿ (ಮೊಬೈಲ್) ಶಾಪವೋ ಅಥವಾ ವರದಾನವೋ ?

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯನ್ನು ಹೇಗೆ ಮಾಡಬೇಕು ? ಯೋಗ್ಯ ಸಾಧನೆಯನ್ನು ಹೇಗೆ ಮಾಡಬೇಕು ?’, ಎಂಬುದರ ಶಿಕ್ಷಣವನ್ನು ‘ಸನಾತನ ಸಂಸ್ಥೆ’ ನೀಡುತ್ತದೆ. ಇದಕ್ಕಾಗಿ ತಮ್ಮ ಹತ್ತಿರದ ಸತ್ಸಂಗಕ್ಕೆ ಭೇಟಿ ನೀಡಿ ಅಥವಾ ಸಂಚಾರವಾಣಿ ಸಂಖ್ಯೆ ೭೦೫೮೮ ೮೫೬೧೦ ಇದನ್ನು ಸಂಪರ್ಕಿಸಬೇಕು. ಈ ವಿಷಯಗಳ ಬಗ್ಗೆ ಸನಾತನವು ಗ್ರಂಥಗಳನ್ನು ಮುದ್ರಿಸಿದೆ. ಅವುಗಳು sanatanshop.com ಈ ಜಾಲತಾಣದಲ್ಲಿ ಲಭ್ಯವಿವೆ.’

– ಸದ್ಗುರು ರಾಜೇಂದ್ರ ಗಜಾನನ ಶಿಂದೆ (ವಯಸ್ಸು ೬೨ ವರ್ಷ), ಸನಾತನ ಆಶ್ರಮ, ದೇವದ, ಪನವೇಲ (೨೫.೪.೨೦೨೫)

 

– ಸದ್ಗುರು ರಾಜೇಂದ್ರ ಗಜಾನನ ಶಿಂದೆ

‘ಸದ್ಯದ ಜೀವನದಲ್ಲಿ ಸಂಚಾರವಾಣಿಯು (ಮೋಬೈಲ್) ಒಂದು ಅತಿ ಆವಶ್ಯಕ ವಿಷಯವಾಗಿದೆ. ಅದನ್ನು ನಿತ್ಯದ ಸಂಪರ್ಕ ಮತ್ತು ವ್ಯವಹಾರದ ಒಂದು ಮುಖ್ಯ ಮಾಧ್ಯಮವೆಂದು ನೋಡಲಾಗುತ್ತದೆ.ಅದರಿಂದ ಇಂತಹ ಅನೇಕ ಲಾಭಗಳು ಆಗುತ್ತಿದ್ದರೂ, ಅಷ್ಟೇ ಹಾನಿಯುಂಟು ಮಾಡುತ್ತದೆ. ಸಾಮಾನ್ಯ ವ್ಯಕ್ತಿಯು ಸಂಚಾರವಾಣಿಗೆ ವ್ಯಸನಿಯಾಗಿ ಇರುವುದರಿಂದ ಸಂಚಾರವಾಣಿ ಬಳಸುವುದರಿಂದ ಅನೇಕ ಭೀಕರ ಪರಿಣಾಮಗಳು ನೋಡಲು ಸಿಗುತ್ತಿವೆ. ಈ ಲೇಖನದಲ್ಲಿ ಅದರ ಬಗ್ಗೆ ಚರ್ಚಿಸಲಾಗಿದೆ. (ಭಾಗ ೧)

೧. ಸಂಚಾರವಾಣಿಯ ಲಾಭಗಳು

೧ ಅ. ದೈನಂದಿನ ಜೀವನದಲ್ಲಿ ಆವಶ್ಯಕವಿರುವ ಮಾಹಿತಿಯು ಕಡಿಮೆ ಅವಧಿಯಲ್ಲಿ ಸಿಗುವುದು : ಸಂಚಾರವಾಣಿಯಲ್ಲಿ ಯಾವುದೇ ವಿಷಯದ ಮಾಹಿತಿ ಸಿಗುತ್ತದೆ. ನಿಮಗೆ ಅದು ಗೂಗಲ್‌ನಲ್ಲಿ (ಜಾಲತಾಣದಲ್ಲಿ) ತಕ್ಷಣ ಸಿಗುತ್ತದೆ. ಈ ಹಿಂದೆ ಈ ಮಾಹಿತಿಗಳನ್ನು ಹುಡುಕಲು ತುಂಬಾ ಸಮಯ ಬೇಕಾಗುತ್ತಿತ್ತು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅದರಿಂದ ತುಂಬಾ ಲಾಭವಾಗುತ್ತಿದೆ. ಎಲ್ಲ ರೀತಿಯ ಮಾಹಿತಿಯು ಸಂಚಾರವಾಣಿಯಲ್ಲಿ ಕ್ಷಣಾರ್ಧದಲ್ಲಿ ಸಿಗುತ್ತದೆ, ಉದಾ. ವ್ಯಾಯಾಮದ ಪದ್ಧತಿ, ವಿವಿಧ ಯೋಗಾಸನಗಳ ಮಾಹಿತಿ, ಯಾವ ಕಾಯಿಲೆಗಾಗಿ ಯಾವ ವ್ಯಾಯಾಮ ಮಾಡಬೇಕು ? ವಿವಿಧ ತರಕಾರಿಗಳು, ಹಣ್ಣುಗಳು, ತಿಂಡಿ ತಿನಿಸುಗಳು ಇವುಗಳಲ್ಲಿನ ಪೌಷ್ಟಿಕಾಂಶಗಳ ಮಾಹಿತಿ, ಯಾವ ಪದಾರ್ಥಗಳನ್ನು ಸೇವಿಸಬೇಕು ಅಥವಾ ತಪ್ಪಿಸಬೇಕು, ಯಾವ ಪದಾರ್ಥಗಳನ್ನು ಹೇಗೆ ತಯಾರಿಸಬೇಕು ?, ಇತ್ಯಾದಿ.

೧ ಆ. ಸಂಚಾರವಾಣಿಯಿಂದಾಗಿ ಇತರ ಸಾಧನಗಳನ್ನು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ : ಸಂಚಾರವಾಣಿಯಿಂದ ನಿಮಗೆ ಪ್ರತ್ಯೇಕವಾಗಿ ಗಡಿಯಾರ, ಗಣಕಯಂತ್ರ, (ಕಂಪ್ಯೂಟರ್‌), ರೆಡಿಯೋ, ದೂರಚಿತ್ರವಾಣಿ, ದಿಶಾದರ್ಶಕ (ಕಂಪಾಸ), ಬರೆಯಲು ವಹಿ ಇತ್ಯಾದಿಗಳ ಅವಶ್ಯಕತೆ ಇಲ್ಲ. ಸಂಚಾರವಾಣಿಯಲ್ಲಿ ಈ ಎಲ್ಲ ಸೌಲಭ್ಯಗಳನ್ನು ಮಾಡಲಾಗಿದೆ.

೧ ಇ. ಮನೆಯಲ್ಲಿದ್ದು ಅನೇಕ ಕೆಲಸಗಳನ್ನು ಮಾಡಬಹುದು : ಸಂಚಾರವಾಣಿಯಿಂದ ವಿವಿಧ ವಿಷಯಗಳನ್ನು ಕಲಿಯುವುದು, ಪೇಟೆಯಲ್ಲಿ ಬಂದಿರುವ ಹೊಸ ಯಂತ್ರವನ್ನು ಖರೀದಿ, ಯಂತ್ರದ ದುರುಸ್ತಿ, ಯಂತ್ರವನ್ನು ತಯಾರಿ ಇತ್ಯಾದಿಗಳನ್ನು ಸಹಜವಾಗಿ ಕಲಿಯಲು ಸಾಧ್ಯವಾಗುತ್ತವೆ. ಪೇಟೆಗೆ ಹೋಗದೇ ಮನೆಯಲ್ಲಿದ್ದು ಯಾವುದೇ ವಸ್ತುಗಳನ್ನು ಮಾರಾಟ ಮಾಡುವುದು ಸುಲಭವಾಗಿದೆ. ‘ವಿದ್ಯುತ್‌ ಬಿಲ್, ನೀರಿನ ಬಿಲ್‌ ಮತ್ತು ಸಂಚಾರವಾಣಿಯ ಬಿಲ್ನ್ನು ತುಂಬುವುದು, ಮನೆಬಾಡಿಗೆ ತುಂಬುವುದು ಹಾಗೂ ಬ್ಯಾಂಕಿನ ಕೆಲಸಗಳನ್ನು ಮಾಡುವುದು’, ಇಂತಹ ಅನೇಕ ರೀತಿಯ ಕೆಲಸಗಳನ್ನು ಸಂಬಂಧಿಸಿದ ಕಚೇರಿಗೆ ಹೋಗದೇ ತಕ್ಷಣ ಮಾಡಲು ಸಾಧ್ಯವಾಗುತ್ತದೆ.

೨. ಸಂಚಾರವಾಣಿಯಿಂದಾಗುವ ಹಾನಿ

೨ ಅ. ಸಂಚಾರವಾಣಿಯ ವ್ಯಸನವಾಗಬಹುದು

೨ ಅ ೧. ಮನೋರಂಜನೆಗಾಗಿ ಸಂಚಾರವಾಣಿ ನೋಡುವುದು ಮತ್ತು ಅದರಲ್ಲಿ ಸಿಲುಕುವುದು : ಸದ್ಯ ಸಮಾಜದ ಜನರಿಗೆ ಸಂಚಾರವಾಣಿಯು ಮನೋರಂಜನೆಯ ಉತ್ತಮ ಸಾಧನವೆಂದು ಲಭ್ಯವಾಗಿದೆ. ಆದ್ದರಿಂದ ಜನರು ತಮ್ಮ ಬಿಡುವಿನ ಸಮಯದಲ್ಲಿ ಸಂಚಾರವಾಣಿಯನ್ನು ನೋಡುತ್ತಾರೆ. ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ, ಆ ಪ್ರತಿಯೊಂದು ವಿಷಯದ ಬಹಳಷ್ಟು ಮಾಹಿತಿಯು ಜಾಲತಾಣದಲ್ಲಿ ಲಭ್ಯವಿದೆ. ಜನರು ತಮಗೆ ಬೇಕಾಗಿದ್ದನ್ನು ನೋಡುತ್ತಿರುತ್ತಾರೆ ಮತ್ತು ಏನು ಇಷ್ಟವಾಗುವುದಿಲ್ಲವೋ, ನೋಡಬಾರದ ವಿಷಯಗಳೂ ಕಣ್ಣಿಗೆ ಬೀಳುತ್ತವೆ; ಅವುಗಳನ್ನೂ ನೋಡುತ್ತಿರುತ್ತಾರೆ. ಆದ್ದರಿಂದ ಜನರಿಗೆ ಸಂಚಾರವಾಣಿಯ ಚಟ ಅಂಟಿಕೊಂಡಿದೆ.

೨ ಅ ೨. ಕೊರೊನಾ ಮಹಾಮಾರಿಯಿಂದ ಮಕ್ಕಳಿಗೆ ಮತ್ತು ಕುಟುಂಬದವರಿಗೆ ಸಂಚಾರವಾಣಿಯ ಚಟ ಅಂಟಿಕೊಳ್ಳುವುದು : ಕೊರೊನಾ ಮಹಾಮಾರಿ ಬರುವ ಮೊದಲು ಮಕ್ಕಳಿಗೆ ಶಾಲೆಗೆ ಒಯ್ಯಲು ಅನೇಕ ತಾಯಿ-ತಂದೆಯರು ಸಂಚಾರವಾಣಿಗಳನ್ನು ಕೊಟ್ಟಿರಲಿಲ್ಲ; ಆದರೆ ಕೊರೊನಾ ಕಾಲದಲ್ಲಿ ಎಲ್ಲ ಶಾಲಾ ಶಿಕ್ಷಣ ಮತ್ತು ಅಧ್ಯಯನವನ್ನು ಮಕ್ಕಳಿಗೆ ಮನೆಯಲ್ಲಿದ್ದೇ ಸಂಚಾರವಾಣಿಯ ಮಾಧ್ಯಮದಿಂದ ಪೂರೈಸಲಾಯಿತು. ಆದ್ದರಿಂದ ತಾಯಿ-ತಂದೆಯರಿಗೆ ಮಕ್ಕಳ ಕೈಯಲ್ಲಿ ಸಂಚಾರವಾಣಿಯನ್ನು ಕೊಡಬೇಕಾಯಿತು. ಮಕ್ಕಳಿಗೆ ಸಂಚಾರವಾಣಿಯಲ್ಲಿ ಏನೆಲ್ಲ ಇರುತ್ತದೆ ಅದೆಲ್ಲವೂ ತಿಳಿಯಿತು. ಮುಂದೆ ಶಾಲೆ ಪ್ರಾರಂಭವಾದರೂ ಮಕ್ಕಳಿಗೆ ಸಂಚಾರವಾಣಿಯ ಚಟ ಬಿಡಲಿಲ್ಲ. ಮನೆಯಲ್ಲಿನ ಹಿರಿಯ ವ್ಯಕ್ತಿಗಳು ಉದಾ. ತಾಯಿ, ತಂದೆ, ಸಹೋದರ, ಸಹೋದರಿ, ಚಿಕ್ಕಪ್ಪ, ಮಾವ ಮುಂತಾದವರು ಸಂಚಾರವಾಣಿಯನ್ನು ನೋಡುವುದರಲ್ಲಿ ಮೈಮರೆತಿರುತ್ತಾರೆ. ಆದ್ದರಿಂದ ಅವರು ‘ಮಕ್ಕಳಿಗೆ ಸಂಚಾರವಾಣಿಯನ್ನು ಬಳಸಬಾರದು’, ಎಂಬ ಉಪದೇಶ ನೀಡುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ.

೨ ಆ. ಅಪರಾಧಿವೃತ್ತಿ ಹೆಚ್ಚಾಗುವುದು : ಸಂಚಾರವಾಣಿಯ ಮಾಧ್ಯಮದಿಂದ ಕಳ್ಳತನದ ಹೊಸ ವಿಧಾನಗಳು ಪ್ರಾರಂಭವಾಗಿವೆ. ಸಂಚಾರವಾಣಿಯಿಂದ ಸುಳ್ಳು ಸಂದೇಶವನ್ನು ಕಳುಹಿಸಿ ಅಥವಾ ಲಿಂಕ್‌ ಕಳುಹಿಸಿ ಬ್ಯಾಂಕ್‌ಖಾತೆಯಿಂದ ಪರಸ್ಪರ ಹಣವನ್ನು ಕದಿಯಲಾಗುತ್ತಿದೆ. ಈಗ ‘ಡಿಜಿಟಲ್‌ ಅರೆಸ್ಟ್‌’ ಎಂಬ ಹೆಸರಿನ ಹೊಸ ವಂಚನೆಗಳು ನಡೆಯುತ್ತಿವೆ. ಈ ಮೂಲಕ ಜನರಿಗೆ ಬೆದರಿಕೆ ಹಾಕಿ ಲಕ್ಷಗಟ್ಟಲೆ ರೂಪಾಯಿಗಳನ್ನು ನೀಡುವಂತೆ ಬಲವಂತ ಮಾಡಲಾಗುತ್ತಿದೆ. ಸಂಚಾರವಾಣಿಯನ್ನು ನೋಡಲು ಕೊಡದಿದ್ದರೆ ಅಥವಾ ಇಷ್ಟಪಟ್ಟ ಸಂಚಾರವಾಣಿಯನ್ನು ಕೊಡಿಸಲಿಲ್ಲವೆಂದು, ಹಿರಿಯರನ್ನು ಕೊಲ್ಲುವಷ್ಟು ಸಾಹಸ ಮಕ್ಕಳು ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನ ಮಕ್ಕಳು ಸಹ ಸಂಚಾರವಾಣಿಯಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡಿ ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರಗಳನ್ನು ಮಾಡುತ್ತಿದ್ದಾರೆ.

೨ ಇ. ಸಂಚಾರವಾಣಿಯ ಬಲೆಗೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದು : ವಿವಿಧ ವಿಡಿಯೋ ಆಟಗಳು (ಗೇಮ್ಸ್‌) ಮತ್ತು ಗಣಕೀಯ ಆಟಗಳ ಹಿಂದೆ ಬಿದ್ದು ಅನೇಕ ಜನರು ಸಾಲಗಾರರಾಗಿದ್ದಾರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ಮಾನಸಿಕ ರೋಗಿಗಳಾಗಿದ್ದಾರೆ ಹಾಗೂ ಅನೇಕ ಜನರ ಸಂಸಾರಗಳು ನಾಶವಾಗಿವೆ. ಸಂಚಾರವಾಣಿಯಲ್ಲಿನ ಜಾಹೀರಾತುಗಳ ಮೂಲಕ ಮನುಷ್ಯನಲ್ಲಿ ಅನೇಕ ರೀತಿಯ ಆಶೆಗಳನ್ನು ಹುಟ್ಟು ಹಾಕಲಾಗುತ್ತಿದೆ ಮತ್ತು ಸಮಾಜವು ಅದರಲ್ಲಿ ಸಿಕ್ಕಿಬೀಳುತ್ತಿದೆ.

೨ ಈ. ಮಹಿಳೆಯರ ಶೀಲ ಅಪಾಯದಲ್ಲಿದೆ : ಸಾಮಾಜಿಕ ಪ್ರಸಾರಮಾಧ್ಯಮಗಳ ಮೂಲಕ ಅನೇಕ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಕಾಮಾಂಧರು ಮತ್ತು ಧರ್ಮಾಂಧರ ಅಮಿಷಗಳಿಗೆ ಬಲಿಯಾಗುತ್ತಿದ್ದಾರೆ, ಅನೇಕ ಮಹಿಳೆಯರಿಗೆ ಈ ಮೂಲಕ ಬಲೆಗೆ ಬೀಳಿಸಿ ಅವರ ಚಾರಿತ್ರ್ಯವನ್ನು ಹಾಳು ಮಾಡಲಾಗುತ್ತಿದೆ. ಇದನ್ನೆಲ್ಲ ಸಹಿಸಲಾಗದೇ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

೨ ಉ. ಕೃತಕ ಬುದ್ಧಿಮತ್ತೆಯ ಹೊಸ ಸಂಕಟಗಳು ಉದ್ಭವಿಸುವುದು : ಪ್ರಸ್ತುತ ಕೃತಕ ಬುದ್ಧಿಮತ್ತೆಯ ‘ಯಾಪ್‌’ಗಳ ಮೂಲಕ ಮನುಷ್ಯನ ಮೇಲೆ ದೊಡ್ಡ ಸಂಕಟಗಳು ಎದುರಾಗಿವೆ. ‘ಯಂತ್ರಗಳು ಮನುಷ್ಯನ ಮೇಲೆ ಪ್ರಾಬಲ್ಯ ಸಾಧಿಸುತ್ತಿದೆಯೇ ?’, ಎಂದೆನಿಸುತ್ತಿದೆ. ಇನ್ನೂ ಸ್ವಲ್ಪ ದಿನಗಳ ನಂತರ ‘ಈ ಸಂಕಟಗಳು ಎಷ್ಟು ದೊಡ್ಡವಾಗಿವೆ ?’, ಎಂಬುದು ಗಮನಕ್ಕೆ ಬರುವುದು.

೨ ಊ. ಸಮಾಜ ಮತ್ತು ರಾಷ್ಟ್ರ ಹಾನಿಕರÀ ವಿಷಯಗಳಿಗೆ ಮೊಬೈಲ್‌ನ ಬಳಕೆ : ಸಮಾಜವಿರೋಧಿ ಪ್ರವೃತ್ತಿ ಹೊಂದಿರುವ ಜನರು ‘ವಾಟ್ಸ್ಪ್‌’, ‘ಟೆಲಿಗ್ರಾಮ್’ ಇತ್ಯಾದಿಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಹಾನಿಕರÀ ಕೃತ್ಯಗಳನ್ನು ಮಾಡುತ್ತಾರೆ. ಅವರ ಗುಂಪಿನಲ್ಲಿ ಹಾನಿಕರ ಸಂದೇಶಗಳನ್ನು ಕಳುಹಿಸುತ್ತಾರೆ ಮತ್ತು ಹಾನಿಕರ ಕೃತ್ಯಗಳನ್ನು ಮಾಡುತ್ತಾರೆ, ಎಂಬುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ.

೨ ಎ. ಕುಟುಂಬ, ಸಮಾಜ, ರಾಷ್ಟ್ರ ಅಥವಾ ಧರ್ಮಕ್ಕಾಗಿ ಸಮಯ ಉಳಿಯದಿರುವುದು : ಸಮಾಜವು ಸಂಚಾರವಾಣಿಯ ಬಲೆಗೆ ಎಷ್ಟೊಂದು ಬಲಿಯಾಗಿದೆಯೆಂದರೆ, ಅದಕ್ಕೆ ಮನೆಯಲ್ಲಿನ ಕೆಲಸಗಳನ್ನು ಮಾಡಲು, ಮನೆಯ ಜನರೊಂದಿಗೆ ಮಾತನಾಡಲು, ಸಂಬಂಧಿಕರ ಕಡೆಗೆ ಹೋಗಲು, ಸಮಾಜ, ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನಾದರು ಮಾಡಲು ಸಮಯವೇ ಉಳಿದಿಲ್ಲ. ಸಮಾಜ, ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನಾದರೂ ಮಾಡುವುದು, ಅಂದರೆ ಸಾಮಾಜಿಕ ಮಾಧ್ಯಮಗಳಿಂದ ಬಂದ ಸಂದೇಶವನ್ನು ಕೇವಲ ಮುಂದೆ ಕಳುಹಿಸುವುದು ಇಲ್ಲಿಯವರೆಗೆ ಸೀಮಿತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜದಲ್ಲಿನ ಪ್ರಶ್ನೆಗಳ ಬಗ್ಗೆ ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ; ಆದರೆ ಅದಕ್ಕೂ ಮುಂದೆ ಹೋಗಿ ಕೆಲವು ಪ್ರತಿಭಟನೆಗಳನ್ನು ಮಾಡುವುದು, ಸಮಾಜವನ್ನು ಕೃತಿಶೀಲ ಮಾಡುವ ಹಂತದವರೆಗೆ ಬಹಳ ಕಡಿಮೆ ಜನರು ತಲುಪುತ್ತಾರೆ.

೩. ಸಂಚಾರವಾಣಿಯ ಅತೀ ಬಳಕೆಯ ಮೇಲೆ ಪರಿಹಾರೋಪಾಯ

ಅ. ಮನೆಯಲ್ಲಿನ ಹಿರಿಯರು ಮಕ್ಕಳ ಮುಂದೆ ಸಂಚಾರವಾಣಿಯನ್ನು ಬಳಸುವುದನ್ನು ತಪ್ಪಿಸಬೇಕು ಅಥವಾ ಸೀಮಿತ ರೀತಿಯಲ್ಲಿ ಬಳಸಬೇಕು.

ಆ. ಚಿಕ್ಕಮಕ್ಕಳ ಕೈಯಲ್ಲಿ ಸಂಚಾರವಾಣಿಯನ್ನು ಕೊಡಬಾರದು.

ಇ. ತಿಂಡಿ ತಿನ್ನುವಾಗ, ಊಟ ಮಾಡುವಾಗ ಮತ್ತು ರಾತ್ರಿ ಮಲಗುವಾಗ ಕಟ್ಟುನಿಟ್ಟಾಗಿ ಸಂಚಾರವಾಣಿಯನ್ನು ದೂರವಿಡಬೇಕು.

ಈ. ಸಂಚಾರವಾಣಿಯನ್ನು ನೋಡುವ ಇಚ್ಛೆಯಾದರೆ ತನ್ನನ್ನು ಚಿವುಟಿಕೊಳ್ಳಬೇಕು. ಇದರಿಂದ ಶಿಕ್ಷೆಯ ಭಯದಿಂದ ಕ್ರಮೇಣ ಸಂಚಾರವಾಣಿಯನ್ನು ನೋಡುವ ಇಚ್ಛೆ ಕಡಿಮೆಯಾಗುವುದು.

ಉ. ವ್ಯಕ್ತಿಯು ಸಂಚಾರವಾಣಿಯ ವ್ಯಸನಿಯಾದಾಗ ಮನೋವೈದ್ಯರ ಮಾರ್ಗದರ್ಶನವನ್ನು ಪಡೆಯಬೇಕು.

ಊ. ತನ್ನಲ್ಲಿನ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸಬೇಕು.

೪. ಸಂಚಾರವಾಣಿಯ ಅತೀ ಬಳಕೆಯ ಹಿಂದಿನ ಆಧ್ಯಾತ್ಮಿಕ ಕಾರಣಗಳು

ಅ. ಸಂಚಾರವಾಣಿಯ ಮಾಧ್ಯಮದಿಂದ ಪಾತಾಳದಲ್ಲಿನ ದುಷ್ಟ ಶಕ್ತಿಗಳು ಮನಸ್ಸಿನ ಮೇಲೆ ದೊಡ್ಡ ಪ್ರಮಾಣದಲ್ಲಿ ಕಪ್ಪು ಶಕ್ತಿಯನ್ನು ಪ್ರಕ್ಷೇಪಿಸಿ ಅವನನ್ನು ನಿಷ್ಕ್ರಿಯಗೊಳಿಸುತ್ತಿವೆ ಮತ್ತು ಅವನ ಮೇಲೆ ನಿಯಂತ್ರಣವನ್ನು ಸಾಧಿಸುತ್ತಿವೆ; ಇದರ ಬಗ್ಗೆ ಸಮಾಜವು ಸಂಪೂರ್ಣ ಅಜ್ಞಾನಿ ಆಗಿದೆ.

ಆ. ಸಂಚಾರವಾಣಿಯ ಮಾಧ್ಯಮದಿಂದ ಮನುಷ್ಯನ ಮನಸ್ಸು ಮತ್ತು ಬುದ್ಧಿಯ ಮೇಲೆ ನಿಯಂತ್ರಣ ಸಾಧಿಸಿ ಅಸುರಿ ಶಕ್ತಿಗಳು ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಅಶ್ಲೀಲತೆ ಮತ್ತು ಅಪರಾಧಗಳನ್ನು ಹರಡಿಸುತ್ತಿವೆ. ಆದ್ದರಿಂದ ವ್ಯಕ್ತಿಯ ಮತ್ತು ಪ್ರತಿಯಾಗಿ ಸಮಾಜದ ನೈತಿಕತೆಯನ್ನು ಹದೆಗೆಡಿಸಿ ದೊಡ್ಡ ಪ್ರಮಾಣದಲ್ಲಿ ರಜ-ತಮ ಹೆಚ್ಚಿಸುತ್ತಿವೆ.

ಇ. ಸ್ಥೂಲ ಜಗತ್ತಿಗಿಂತ ಸೂಕ್ಷ್ಮ ಜಗತ್ತು ಒಂಬತ್ತು ಪಟ್ಟು ದೊಡ್ಡದಾಗಿದೆ. ಸೂಕ್ಷ್ಮ ಜಗತ್ತಿನಲ್ಲಿನ ಕೆಟ್ಟ ಶಕ್ತಿಗಳು ಮನುಷ್ಯನಿಗೆ ತೊಂದರೆ ಕೊಟ್ಟು ಅವನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುತ್ತವೆ. ಜನರಲ್ಲಿ ಇಂತಹ ಸತ್ಯ ವಿಷಯದಲ್ಲಿ ನಂಬಿಕೆ ಇರುವುದಿಲ್ಲ. ಆದ್ದರಿಂದ ‘ಇದಕ್ಕೆ ಏನಾದರೂ ಪರಿಹಾರವಾಗಬೇಕು ಅಥವಾ ಇದಕ್ಕೆ ಪರಿಹಾರವಿದೆಯೇ ?’, ಎಂಬ ವಿಚಾರವೇ ಅವರ ಮನಸ್ಸಿನಲ್ಲಿ ಬರುವುದಿಲ್ಲ ಮತ್ತು ಆ ದುಷ್ಟ ಶಕ್ತಿಗಳ ಬಲಿಗೆ ಬೀಳುತ್ತಿದ್ದಾರೆ. ಸಮಾಜವು ಧರ್ಮ, ಅಧ್ಯಾತ್ಮ ಮತ್ತು ಸಾಧನೆಯಿಂದ ತುಂಬಾ ದೂರ ಹೋಗಿದೆ. ಆದ್ದರಿಂದ ಸೂಕ್ಷ್ಮ ಜಗತ್ತಿನ ವಿಷಯದ ಬಗ್ಗೆ ಸಮಾಜಕ್ಕೆ ನಂಬಿಕೆ ಇಲ್ಲ.

೫. ಸಂಚಾರವಾಣಿಯ ಅತೀ ಬಳಕೆಯನ್ನು ತಪ್ಪಿಸಲು ಆಧ್ಯಾತ್ಮಿಕ ಉಪಾಯಗಳು

ಅ. ಕುಲದೇವತೆಯ ಅಥವಾ ಇಷ್ಟದೇವತೆಯ ನಾಮಜಪವನ್ನು ಹೆಚ್ಚೆಚ್ಚು ಮಾಡಬೇಕು.

ಆ. ಒಂದು ಬಕೆಟಿನಲ್ಲಿ ಪಾದದ ಕೀಲುಗಳ ಮೇಲೆ ೪ ಇಂಚು ಎತ್ತರದ ತನಕ ನೀರು ಹಾಕಿ ಅದರಲ್ಲಿ ೨ ಚಮಚ ಕಲ್ಲೂಪ್ಪು ಹಾಕಬೇಕು ಮತ್ತು ಅದರಲ್ಲಿ ಕಾಲುಗಳನ್ನು ಇಟ್ಟು ೧೫ ನಿಮಿಷಗಳ ವರೆಗೆ ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಮಾಡುತ್ತ ಕುಳಿತುಕೊಳ್ಳಬೇಕು. ನಂತರ ಆ ನೀರನ್ನು ಶೌಚಾಲಯದಲ್ಲಿ ಚೆಲ್ಲಬೇಕು.

ಇ. ಯೋಗ್ಯ ರೀತಿಯಲ್ಲಿ ಸಾಧನೆ ಮಾಡಬೇಕು. ಸಂಚಾರವಾಣಿಯಂತಹ ವಿಷಯಗಳ ಮೇಲೆ ನಿಯಂತ್ರಣವನ್ನಿಡಲು ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸಬೇಕಾಗುತ್ತದೆ; ಇಲ್ಲದಿದ್ದರೆ ಮನಸ್ಸು ಯಾವುದಾದರೂ ವಿಷಯಕ್ಕೆ ಬಲಿಯಾಗುತ್ತದೆ. ಇದಕ್ಕಾಗಿ ಮನುಷ್ಯನಲ್ಲಿನ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದರೊಂದಿಗೆ ಸಾಧನೆ ಮಾಡುವುದು ಆವಶ್ಯಕವಾಗಿದೆ.

ಜನರೇ, ಯೋಗ್ಯ ಸಾಧನೆ ಮಾಡಿ ತಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಿ ಮನಸ್ಸಿನ ಮೇಲೆ ವಿಜಯ ಸಾಧಿಸಲು ಕಲಿಯಿರಿ. ಕೆಟ್ಟ ಶಕ್ತಿಗಳು ಮನುಷ್ಯನಲ್ಲಿನ ಸ್ವಭಾವದೋಷಗಳ ದುರ್ಲಾಭ ಪಡೆದು ಸ್ವಭಾವದೋಷಗಳನ್ನು ಹೆಚ್ಚಿಸುತ್ತವೆ; ಆದ್ದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದು ಆವಶ್ಯಕವಾಗಿದೆ. ಕ್ಷಣಿಕ ಸುಖದ ಹಿಂದೆ ಹೋಗದೇ ಸಾಧನೆಯ ಮಾಧ್ಯಮದಿಂದ ಶಾಶ್ವತ ಆನಂದವನ್ನು ಅನುಭವಿಸಲು ಪ್ರಯತ್ನಿಸಿರಿ.

‘ಹೇ ಭಗವಂತಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ), ‘ಸಂಚಾರವಾಣಿಯ ಬಲೆಯಲ್ಲಿ ಸಿಲುಕಿದ ಮನುಷ್ಯನಿಗೆ ಅದರಿಂದ ಹೊರಗೆ ಬಿದ್ದು ಕ್ಷಣಿಕ ಸುಖದ ಹಿಂದೆ ಹೋಗದೆ ಶಾಶ್ವತ ಆನಂದಪ್ರಾಪ್ತಿಗಾಗಿ ಸಾಧನೆ ಮಾಡುವ ಬುದ್ಧಿಯಾಗಲಿ’, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಸುಮನ ಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿಯೇ ಅರ್ಪಿಸುತ್ತೇನೆ !

ಇದಂ ನ ಮಮ |’

– (ಸದ್ಗುರು) ರಾಜೇಂದ್ರ ಗಜಾನನ ಶಿಂದೆ (ವಯಸ್ಸು ೬೩ ವರ್ಷ), ಸನಾತನ ಆಶ್ರಮ, ದೇವದ, ಪನವೇಲ.