ದಸರಾದ ದಿನದಂದು ರಾವಣ ದಹನ ಮಾಡುವುದು ಯೋಗ್ಯವೋ, ಅಯೋಗ್ಯವೋ

ತ್ರೇತಾಯುಗದಲ್ಲಿ ಅನ್ಯಾಯೀ ಮತ್ತು ಅಧರ್ಮಿ ರಾಜನಾಗಿದ್ದ ರಾವಣನನ್ನು ಪ್ರಭು ಶ್ರೀರಾಮನು ಸಂಹರಿಸಿದನು. ಈ ಐತಿಹಾಸಿಕ ಘಟನೆಯಿಂದ ಪ್ರೇರಣೆ ಸಿಗಬೇಕೆಂದು, ದುಷ್ಟ ನಾಶದ ಸಂಕೇತವೆಂದು, ರಾವಣನನ್ನು ಸುಡುವ ಸಂಪ್ರದಾಯವು ಪ್ರತಿ ವರ್ಷವೂ ಭಾರತದ ಅನೇಕ ಭಾಗಗಳಲ್ಲಿ ನೂರಾರು ವರ್ಷಗಳಿಂದ ನಿರ್ವಿಘ್ನವಾಗಿ ನಡೆದಿದೆ; ಆದರೆ ಪ್ರಸ್ತುತ ಕೆಲವು ಸಂಘಟನೆಗಳು ‘ರಾವಣ ದಹನ ತಪ್ಪು, ಅದನ್ನು ನಿಷೇಧಿಸಬೇಕು’ ಇದಕ್ಕಾಗಿ ಆಂದೋಲನ ನಡೆಸುವುದು, ಮನವಿಗಳನ್ನು ಸಲ್ಲಿಸುವುದು. ಇದರೊಂದಿಗೆ ‘ರಾವಣ ದಹನ ಆಗಲು ಬಿಡುವುದಿಲ್ಲ’ ಎಂಬಂತಹ ಆಕ್ರಮಣಕಾರಿ ನಿಲುವುಗಳನ್ನು ತಳೆಯುವುದು ಕಂಡುಬರುತ್ತಿವೆ. ಕಮ್ಯುನಿಸ್ಟ್ ವಿಚಾರಧಾರೆಯಿಂದಾಗಿ ತಪ್ಪು ಸಿದ್ಧಾಂತವನ್ನು ಹೊಂದಿರುವ ಈ ಅಜ್ಞಾನಿಗಳು ಹೇಳುತ್ತಾರೆ, ‘ರಾವಣನು ಸ್ಥಳೀಯ ಬುಡಕಟ್ಟು ಗೊಂಡ ಸಮಾಜದ ರಾಜನಾಗಿದ್ದನು ಮತ್ತು ರಾವಣ ದಹನವು ವಿದೇಶಿ ಮೂಲದ ಆರ್ಯರ ಅಂದರೆ ಹಿಂದೂಗಳ ಸಂಪ್ರದಾಯವಾಗಿದೆ,’ ನಿಜ ಹೇಳುವುದಾದರೆ ಸಂಸ್ಕ್ರತದಲ್ಲಿ ‘ಆದಿವಾಸಿ’ ಶಬ್ದವಿಲ್ಲ. ಭಾರತದಲ್ಲಿ ವನಗಳಲ್ಲಿ ವಾಸಿಸುವವರನ್ನು ‘ವನವಾಸಿ’ ಈ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಆದಿವಾಸಿ ಈ ಶಬ್ದವನ್ನು ೧೯೩೦ ರ ನಂತರ ಕ್ರೈಸ್ತ ಧರ್ಮಪ್ರಸಾರಕರು ಹರಡಿದರು. ಇತಿಹಾಸದ ದೃಷ್ಟಿಕೋನದಿಂದ, ರಾವಣನು ಪುಲಸ್ತ್ಯ ಋಷಿಯ ಮೊಮ್ಮಗ, ಹಾಗೆಯೇ ವಿಶ್ರವ ಮತ್ತು ಕೈಕಸಿಯ ಪುತ್ರನಾಗಿದ್ದಾನೆ. ರಾವಣನು ಮೂಲತಃ ಬ್ರಾಹ್ಮಣ ಕುಟುಂಬದಿಂದ ಬಂದವನು, ದೊಡ್ಡ ವಿದ್ವಾಂಸನಾಗಿದ್ದನು ಮತ್ತು ವೇದಗಳಲ್ಲಿ ಪಾರಂಗತನಾಗಿದ್ದನು. ಅವನು ಕಠೋರವಾದ ತಪಸ್ಸಿನ ಮೂಲಕ ಶಿವನನ್ನು ಪ್ರಸನ್ನಗೊಳಿಸಿದ್ದನು. ಆದರೆ ರಾಕ್ಷಸರ ವಿರುದ್ಧದ ವಿಜಯ ಎಂದು ಹಿಂದೂಗಳು ಯಾವ ರಾವಣನನ್ನು ಸುಡುತ್ತಾರೆಯೋ, ಆ ರಾವಣನು ಖಂಡಿತವಾಗಿಯೂ ಗೊಂಡ ಸಮಾಜದ ರಾಜನಲ್ಲ.

ಸೀತಾಪಹರಣದ ಹೊರತಾಗಿ,ರಾವಣನು ಅತ್ಯಂತ ಧಾರ್ಮಿಕನಾಗಿದ್ದನೇ ?

ಭಗವಾನ್‌ ರಾಮನ ಧರ್ಮಪತ್ನಿ ಸೀತಾಮಾತೆಯನ್ನು ರಾವಣನು ಅಪಹರಿಸಿದ್ದನು. ಬಲವಂತವಾಗಿ ಯಾರ ಪತ್ನಿಯನ್ನೂ ಮೋಸದಿಂದ ಅಪಹರಿಸುವುದು ಶಿಕ್ಷಾರ್ಹವೇ ಆಗಿದೆ. ಆದರೆ ಈ ಅಕ್ಷಮ್ಯ ಅಪರಾಧವನ್ನು ನಿರ್ಲಕ್ಷಿಸುವ ಹೇಳಿಕೆಗಳನ್ನು ರಾವಣನ ದಹನವನ್ನು ವಿರೋಧಿಸುವವರು ನೀಡುತ್ತಿದ್ದಾರೆ. ಸಂವಿಧಾನದ ಪ್ರಕಾರ ಈ ಘಟನೆಯನ್ನು ವಿಚಾರ ಮಾಡಿದರೂ ಪರಸ್ತ್ರೀಯನ್ನು ಅಪಹರಿಸುವುದು, ವಂಚಿಸುವುದು, ಬಂಧನದಲ್ಲಿಡುವುದು ಮುಂತಾದ ಗಂಭೀರ ಅಪರಾಧಗಳಿಗೆ ರಾವಣನಿಗೆ ಕಠಿಣ ಶಿಕ್ಷೆಯಾಗುತ್ತಿತ್ತು. ಅಂತಹ ಗಂಭೀರ ಅಪರಾಧವನ್ನು ಹೇಗೆ ಸಮರ್ಥಿಸಬಹುದು ? ಹಿಂದೂಗಳ ಮಹಾನ್‌ ಗ್ರಂಥ ರಾಮಾಯಣದಲ್ಲಿ ಉಲ್ಲೇಖಿಸಿರುವಂತೆ, ರಾವಣನು ಅನೇಕ ಋಷಿಗಳನ್ನು ಕೊಲ್ಲುವುದು, ಯಜ್ಞಗಳನ್ನು ನಾಶಪಡಿಸುವುದು, ಅನೇಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವಂತಹ ಅನೇಕ ಮಹಾಪಾಪಗಳನ್ನು ಮಾಡಿದ್ದಾನೆ.

ಗೊಂಡ ರಾಜ ರಾವಣನು ಮಹಾತ್ಮನಾಗಿದ್ದನೆಂದು ಇಂದು ಯಾವುದೇ ಉಲ್ಲೇಖಗಳು ಲಭ್ಯವಿಲ್ಲ; ಆದರೆ ಲಂಕಾಧಿಪತಿ ರಾವಣನು ಅನ್ಯಾಯಿ ಮತ್ತು ಕ್ರೂರಿಯಾಗಿದ್ದ ಎಂಬುದಕ್ಕೆ ಅನೇಕ ಉಲ್ಲೇಖಗಳಿವೆ. ಆದ್ದರಿಂದ, ರಾವಣ ದಹನ ಕಾರ್ಯಕ್ರಮಗಳಿಗೆ ಆಗುವ ವಿರೋಧವು ಅನಪೇಕ್ಷಿತ ಮತ್ತು ಅಯೋಗ್ಯವಾಗಿದೆ.

ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ಕಮ್ಯುನಿಸ್ಟ್ ಸಿದ್ಧಾಂತವು ಹಿಂದೂ ಸಮಾಜವನ್ನು ವಿಭಜಿಸುವ ಉದ್ದೇಶದಿಂದ ರಾವಣ, ಮಹಿಷಾಸುರ ಮೊದಲಾದ ರಾಕ್ಷಸರನ್ನು ‘ವನವಾಸಿ ಜಾತಿಯ ರಾಜರು’ ಎಂದು ಬಿಂಬಿಸುವ ಸಂಚು ರೂಪಿಸಿತು;  ಆದರೆ ಇದು ನಿಜವಲ್ಲ.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ.

ದುರ್ಜನ ಪ್ರವೃತ್ತಿಯನ್ನು ಸಂಹರಿಸುವ ಸಂಕೇತವೆಂದು ರಾವಣ ದಹನದ ಪರಂಪರೆ

ರಾವಣನು ಬಹುದೊಡ್ಡ ವಿದ್ವಾಂಸನಾಗಿದ್ದರೂ ಅವನನ್ನುಏಕೆ ಸಂಹರಿಸಬೇಕಾಯಿತು ? ಮತ್ತು ಅವನ ದಹನದ ಉತ್ಸವವನ್ನು ಏಕೆ ಆಚರಿಸಲಾಗುತ್ತದೆ ? ಇದರ ಕಾರಣವನ್ನುಅರ್ಥಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿ ಎಷ್ಟು ಉನ್ನತ ವಿದ್ಯಾವಂತ ನಾಗಿರಲಿ, ಶಕ್ತಿಶಾಲಿಯಾಗಿರಲಿ ಅಥವಾ ರಾಜಮನೆತನದವ ನಾಗಿರಲಿ; ಆದರೆ ಆ ವ್ಯಕ್ತಿಯು ಜನರಿಗೆ ಅನ್ಯಾಯ ಮಾಡುವವನಾಗಿದ್ದರೆ, ಋಷಿಗಳನ್ನು ಹತ್ಯೆ ಮಾಡುವವನಾಗಿದ್ದರೆ, ಕೊಂದರೆ, ಯಜ್ಞಗಳನ್ನು ನಾಶಮಾಡುವವನಾಗಿದ್ದರೆ, ಅವನು ಅಧರ್ಮಿಯೇ ಆಗಿದ್ದು,ಶಿಕ್ಷೆಗೆ ಅರ್ಹನು. ಪ್ರಭು ಶ್ರೀರಾಮನು ಅಂತಹ ರಾವಣನನ್ನು ಸಂಹರಿಸಿ ದುಷ್ಟ ಪ್ರವೃತ್ತಿಯನ್ನೇ ಸಂಹರಿಸಿದನು ಎಂಬುದರ ಸಂಕೇತವೆಂದು ರಾವಣ ದಹನ ಸಂಪ್ರದಾಯವು ಮುಂದುವರಿದಿದೆ.