ಸಪ್ತರ್ಷಿಗಳನ್ನು ಪ್ರಳಯದಲ್ಲಿಯೂ ರಕ್ಷಿಸಿದ ಮತ್ಸ್ಯಾವತಾರ !

ಭಗವಾನ್ ಶ್ರೀವಿಷ್ಣುವಿನ ಪ್ರಥಮ ಅವತಾರವೇ ಮತ್ಸ್ಯ ಅವತಾರ ! ಮಹಾಪ್ರಳಯ ಬಂದಾಗ ಆ ಸಮಯದಲ್ಲಿ ಎಲ್ಲವೂ ನಾಶವಾಯಿತು. ಎಲ್ಲೆಡೆ ನೀರೇ ನೀರಾಗಿತ್ತು. ಮೂರೂ ಲೋಕಗಳು ಆ ನೀರಿನಲ್ಲಿ ಮುಳುಗಿದವು. ಸಪ್ತರ್ಷಿಗಳು ಮತ್ತು ಸತ್ಯವ್ರತ ಮನು ಮಾತ್ರ ಉಳಿದಿದ್ದರು ! ಅವರ ರಕ್ಷಣೆಗಾಗಿ ಭಗವಂತನು ಒಂದು ವಿಶಾಲವಾದ ನೌಕೆಯನ್ನು ಕಳುಹಿಸಿದ್ದನು. ಸತ್ಯವ್ರತ ಮನು ಮತ್ತು ಸಪ್ತರ್ಷಿಗಳ ಬಳಿಯೇ ನಿರ್ಮಾಣದ ಎಲ್ಲ ಬೀಜಗಳಿದ್ದವು. ಪ್ರಾಣಿ, ಪಕ್ಷಿ, ವನಸ್ಪತಿ, ಧಾನ್ಯ ಹೀಗೆ ಭಗವಂತನ ಸೃಷ್ಟಿಯ ಪ್ರತಿಯೊಂದು ಘಟಕದ ಬೀಜಗಳು ಅವರ ಬಳಿ ಇದ್ದವು. ಸಾಕ್ಷಾತ್ ಭಗವಂತನ ವಿಶಾಲ ಮತ್ಸ್ಯಾವತಾರವು ಸಪ್ತರ್ಷಿಗಳನ್ನು ಮತ್ತು ಮನುವನ್ನು ಪ್ರಳಯಕಾಲದಲ್ಲಿ ಆ ವಿಶಾಲ ನೌಕೆಯಲ್ಲಿ ವಿಹಾರ ಮಾಡಿಸಿ ಅವರನ್ನು ರಕ್ಷಿಸಿತು. ಪ್ರಳಯ ಮುಗಿದ ನಂತರ ಅದೇ ಸೃಷ್ಟಿಯ ಬೀಜಗಳ ಆಧಾರದಲ್ಲಿ ಸಪ್ತರ್ಷಿಗಳು ಮತ್ತು ಮನು ಪುನಃ ಸೃಷ್ಟಿಯನ್ನು ವಿಸ್ತರಿಸಿದರು.