
ಭಾರತದ ಸಂವಿಧಾನದ ೩೭೦ ನೆಯ ವಿಧಿಯನ್ನು (ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ) ರದ್ದುಗೊಳಿಸಿ ೬ ವರ್ಷಗಳಾಗಿವೆ. ೧೫ ವರ್ಷಗಳ ವಾಸಸ್ಥಳ ನೀತಿಯ ಮೂಲಕ ಶೀಘ್ರದಲ್ಲೇ ನಡೆಯುವ ಭ್ರಷ್ಟ ಪುನರ್ವಸತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮೂರು ಪ್ರಬಲ ಜನಾದೇಶಗಳೊಂದಿಗೆ ಮೋದಿ ಸರಕಾರ ಅಧಿಕಾರ ವಹಿಸಿಕೊಂಡು ೧೧ ವರ್ಷಗಳಿ ಗಿಂತಲೂ ಹೆಚ್ಚು ಸಮಯ ಕಳೆದಿದೆ. ಕಾಶ್ಮೀರದಿಂದ ನಮ್ಮ (ಕಾಶ್ಮೀರಿ ಹಿಂದೂಗಳ) ಹಿಂಸಾತ್ಮಕ ಹೊರಹಾಕುವಿಕೆಗೆ ಈಗ ೩೬ ವರ್ಷಗಳಾಗಿವೆ. ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡ ಪ್ರಕರಣ ಇನ್ನೂ ತೆರೆದುಕೊಂಡಿಲ್ಲ.

ಆ ನರಮೇಧದ ಸಂತ್ರಸ್ತರಿಗೆ ಮತ್ತು ಬದುಕುಳಿದವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಅವರ ಬಗ್ಗೆ ಯಾವುದೇ ತನಿಖೆಯೂ ನಡೆದಿಲ್ಲ, ಯಾವುದೇ ಶ್ವೇತಪತ್ರವಿಲ್ಲ, ಪರಿಹಾರವಿಲ್ಲ, ಹಿಂತಿರುಗಿಸುವಿಕೆಯೂ ಇಲ್ಲ. ನಮ್ಮನ್ನು ಪುನಃ ಕರೆತರಲು ಯಾವುದೇ ಘೋಷಿತ ನೀತಿಯೂ ಇಲ್ಲ; ಆದರೆ, ಖಂಡಿತವಾಗಿಯೂ ಕಾಶ್ಮೀರ ಈಗ ‘ಸಂಪೂರ್ಣವಾಗಿ ಸಹಜ’ವಾಗಿದೆ. ಆಗಾಗ ನಡೆಯುವ ಪಹಲ್ಗಾಮ್ ಘಟನೆಗಳನ್ನು ಲೆಕ್ಕಿಸಬೇಡಿ. ಆದರು ಆಗಾಗ ನಡೆಯುವ ಪಹಲ್ಗಾಮ್ ಘಟನೆಗಳು ಪೂರ್ವ-ಯೋಜಿತ ಸಹಜ ಸ್ಥಿತಿಯನ್ನು ಹಾಳು ಮಾಡುವುದಿಲ್ಲ. ಹಾಗಾಗಿ, ೬ ಎನ್‌ಕೌಂಟರ್‌ಗಳೊಂದಿಗೆ ನಿರಂತರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ ಇಲ್ಲಿಯ ವರೆಗೆ ೨೧ ಜಿಹಾದಿಗಳು ಹತರಾಗಿದ್ದಾರೆ. ಇಂತಹ ಕ್ರಮಗಳನ್ನು ಪ್ರಾರಂಭಿಸಲು ಪಹಲ್ಗಾಮ್‌ನಲ್ಲಿ ಭೀಕರ ಹತ್ಯಾಕಾಂಡ ನಡೆಯಬೇಕಾಯಿತು ಎಂಬುದು ದುಃಖಕರ ಸಂಗತಿ ಆಗಿದೆ. ಇಂತಹ ಕ್ರಮಗಳನ್ನು ನಿರಂತರವಾಗಿ ಕೈಗೊಂಡಿದ್ದರೆ, ಅನೇಕ ಹತ್ಯೆಗಳು ಮತ್ತು ಗುರಿಯಾಗಿಸಿದ ಹತ್ಯೆಗಳನ್ನು ತಡೆಯಬಹುದಿತ್ತು; ಆದರೆ, ಒಂದು ಸಮಸ್ಯೆ ಇದೆ. ಇಂತಹ ಕಾರ್ಯಾಚರಣೆಗಳು ನಡೆಯುವಾಗ ಹೊರಗಿನ ಪ್ರಪಂಚದ ಮುಂದೆ ಸಹಜತೆಯ ನಟನೆಯನ್ನು ಮಾಡುವುದು ಅಸಾಧ್ಯ. ಜಿಹಾದಿಗಳಿಂದ ಬಾಧಿತವಾದ ಕಾಶ್ಮೀರಕ್ಕೆ ‘ಹೃದಯ ಮತ್ತು ಮನಸ್ಸು’ಗಳನ್ನು ಗೆಲ್ಲುವುದು ಒಂದು ತಂತ್ರವಾಗಿತ್ತು. ಹಾಗಾಗಿ, ಇದನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಯಿತು.
ಪಹಲ್ಗಾಮ್ ಆಕ್ರಮಣಕ್ಕೆ ಕೆಲವು ವಾರಗಳ ಮೊದಲು ಮಾಡಿದ ಕೆಲವು ತಪ್ಪುಗಳು:

ಬಂಕರ್‌ಗಳನ್ನು ಕೆಡವಲಾಯಿತು. ‘ಡ್ರಾಪ್ ಗೇಟ್’ ಗಳನ್ನು (ವಾಹನ ತಪಾಸಣೆ ಗಾಗಿ ರಸ್ತೆಯ ಮೇಲೆ ಅಡ್ಡವಾಗಿ ಇಳಿಸುವ ತಡೆಗಟ್ಟುವ ಪ್ರವೇಶದ್ವಾರಗಳು) ತೆಗೆದುಹಾಕಲಾಯಿತು. ತಪಾಸಣೆ ನಿಲ್ಲಿಸಲಾಯಿತು. ಗುರುತಿನ ಚೀಟಿ ಪರಿಶೀಲನೆಯನ್ನು ಕೈಬಿಡಲಾಯಿತು. ವಾಹನ ಪರಿಶೀಲನೆ ವಿರಳವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಪಹಲ್ಗಾಮ್ ಆಕ್ರಮಣಕ್ಕೆ ಕೆಲವು ವಾರಗಳ ಮೊದಲು ಇದೇ ವರ್ಷ ಮಾರ್ಚ್ ೨೫ ರಂದು, ಕೇಂದ್ರ ಗೃಹ ಸಚಿವರು, ‘ಕಾಶ್ಮೀರದಲ್ಲಿ ಪ್ರತ್ಯೇಕತಾವಾದವು ಇತಿಹಾಸವಾಗಿದೆ’ ಎಂದು ಟ್ವೀಟ್ ಮಾಡಿದ್ದರು. ಆಕಸ್ಮಿಕವಾಗಿ, ಫಾರೂಕ್ ಅಬ್ದುಲ್ಲಾ ಅವರು ಅದಕ್ಕೆ ಪ್ರತಿಕ್ರಿಯಿಸುತ್ತಾ, ‘ಭಯೋತ್ಪಾದನೆ ಇಲ್ಲಿ ಶಾಶ್ವತವಾಗಿ ಉಳಿಯಲಿದೆ’ ಎಂದು ಹೇಳಿದ್ದರು. ಹೀಗಿದ್ದರೂ, ಕಾಶ್ಮೀರದಲ್ಲಿ ಉಳಿದಿರುವ ಕೆಲವು ಹಿಂದೂಗಳು ಮತಾಂತರ ಜಿಹಾದ್ ಕಾರಣದಿಂದ ತಮ್ಮ ಹೆಣ್ಣುಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ. – ಶ್ರೀ. ಸುಶೀಲ್ ಪಂಡಿತ್, ಸಂಸ್ಥಾಪಕರು, ‘ರೂಟ್ಸ್ ಇನ್ ಕಾಶ್ಮೀರ್’
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು