|

ಮುಂಬಯಿ – ಸಧ್ಯ ಇಡೀ ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಉತ್ಸಾಹ ಮತ್ತು ಚೈತನ್ಯದ ವಾತಾವರಣವಿದೆ. ಎಲ್ಲೆಡೆ ಖರೀದಿಯ ಸಿದ್ಧತೆಗಳು ನಡೆಯುತ್ತಿದ್ದು, ಗಣೇಶನ ಸ್ವಾಗತಕ್ಕಾಗಿ ಗಣೇಶೋತ್ಸವ ಮಂಡಳಿಗಳು ಸಿದ್ಧವಾಗಿವೆ. ಅಲ್ಲಲ್ಲಿ ಪೊಲೀಸ್ ಆಡಳಿತವು ಬಿಗಿ ಬಂದೋಬಸ್ತ್ ನಿಯೋಜಿಸಿದೆ. 17 ಸಾವಿರದ 600 ಕ್ಕಿಂತ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಯಲ್ಲಿ ಕುದುರೆ ಸವಾರ ಪೊಲೀಸರು, ಡ್ರೋನ್, ಹಾಗೆಯೇ ಸಾಮಾನ್ಯ ಉಡುಪಿನಲ್ಲಿರುವ ಪೊಲೀಸರೂ ಸೇರಿದ್ದಾರೆ. ಮುಂಬಯಿಯ ‘ಮೆಟ್ರೋ ಲೈನ್ 2A’ ಮತ್ತು ‘7’ರ ಸಮಯವನ್ನು ಹೆಚ್ಚಿಸಲಾಗಿದೆ. ಗಣೇಶೋತ್ಸವದ ನಿಮಿತ್ತ ಕೆಲವು ಕಡೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ರೈಲು ನಿಲ್ದಾಣಗಳು, ಹಾಗೆಯೇ ಬಸ್ ನಿಲ್ದಾಣಗಳಲ್ಲಿ ಗಣೇಶ ಭಕ್ತರ ದೊಡ್ಡ ಜನಸಂದಣಿ ಕಂಡುಬರುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಕೂಡ 380 ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಇತರೆ ವಿಶಿಷ್ಟ ಬೆಳವಣಿಗೆಗಳು!
1. ನಾಸಿಕ್ ಮಹಾನಗರ ಪಾಲಿಕೆಯು ನಗರದ 385 ಗಣೇಶೋತ್ಸವ ಮಂಡಳಿಗಳಿಗೆ ಉತ್ಸವಕ್ಕೆ ಅನುಮತಿ ನೀಡಿದೆ. ಅದರಲ್ಲಿ ಪಂಚವಟಿ ವಿಭಾಗದಲ್ಲಿ ಅತಿ ಹೆಚ್ಚು 97 ಮಂಡಳಿಗಳು ಸೇರಿವೆ.
2. ನಂದೂರಬಾರ್ ಜಿಲ್ಲೆಯಲ್ಲಿ ಗಣೇಶೋತ್ಸವದ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಲಾಲ್ ಬಳಸಲಾಗುತ್ತದೆ. ಈ ಬಾರಿ 1 ಸಾವಿರ ಟನ್ ಗಿಂತ ಹೆಚ್ಚು ಗುಲಾಲ್ ಬೇಕಾಗಿದೆ. ಇಲ್ಲಿಯವರೆಗೆ 400 ಟನ್ ಗುಲಾಲ್ ಮಾರಾಟವಾಗಿದೆ. ಇದರಿಂದ ಕೋಟಿಗಟ್ಟಲೆ ವಹಿವಾಟು ನಡೆಯುವ ಸಾಧ್ಯತೆ ಇದೆ.
3. ಮುಂಬಯಿಯ ಲಾಲಬಾಗ್ ನ ರಾಜಾ ಸೇರಿದಂತೆ ಎಲ್ಲ ಪ್ರಮುಖ ಗಣೇಶೋತ್ಸವ ಮಂಡಳಿಗಳಿಗೆ ಭದ್ರತೆ ಒದಗಿಸಲಾಗಿದ್ದು, ಈ ವರ್ಷ ಲಾಲಬಾಗ್ ನ ರಾಜಾನಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ‘ಎಐ’ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಬಳಸಲಾಗಿದೆ.
4. ಪುಣೆ ನಗರದಲ್ಲಿ ಒಟ್ಟು 3 ಸಾವಿರದ 959 ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿವೆ. ಪುಣೆ ಪೊಲೀಸರು ಒಟ್ಟು 82 ಸಭೆಗಳನ್ನು ನಡೆಸಿದ್ದಾರೆ. ಪ್ರತಿಯೊಂದು ಪ್ರಮುಖ ವೃತ್ತಗಳಲ್ಲಿ ‘ಎಐ’ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಕ್ತರ ಭದ್ರತೆಗಾಗಿ ಮತ್ತು ಒಡವೆ ಹಾಗೂ ಮೊಬೈಲ್ ಕದಿಯುವವರ ಮೇಲೆ ನಿಗಾ ಇಡಲು ಸರಗಳ್ಳತನ ನಿಗ್ರಹ ತಂಡವನ್ನು ನಿಯೋಜಿಸಲಾಗಿದೆ. ಪುಣೆಯಲ್ಲಿ 7 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
5. ಲಾಲ್‌ಬಾಗ್ ರಾಜಾನಿಗಾಗಿ 500 ಕ್ಕಿಂತ ಹೆಚ್ಚು ಪೊಲೀಸರ ಬಂದೋಬಸ್ತ್ ಮಾಡಲಾಗಿದೆ. ಮುಂಬಯಿಯಲ್ಲಿ 11 ಸಾವಿರ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿವೆ. ಚೌಪಾಟಿ ಮೇಲೂ ಪ್ರತ್ಯೇಕ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ 450 ಮೊಬೈಲ್ ವ್ಯಾನ್ ಗಳು, 350 ಬೀಟ್ ಮಾರ್ಷಲ್ ರವರು ಮುಂಬಯಿಯಲ್ಲಿ ಗಸ್ತು ತಿರುಗುತ್ತಿರುತ್ತಾರೆ.
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಚಿಕ್ಕಬಳ್ಳಾಪುರದಿಂದ ಇಬ್ಬರು ಪಾಕಿಸ್ತಾನಿ ನುಸುಳುಕೋರರ ಬಂಧನ
ಬದರಿನಾಥ ಧಾಮದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಒಬ್ಬನ ಬಂಧನ
ಹಿಂದೂ ಮಹಿಳೆಯನ್ನು ಒತ್ತೆಯಾಳಾಗಿಟ್ಟು ಮತಾಂತರ ಮಾಡಿದ ಆರೋಪ; ದಂಪತಿ ಸೆರೆ : Forced Conversion Case