ಬದರಿನಾಥ ಧಾಮದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಒಬ್ಬನ ಬಂಧನ

ಬದರಿನಾಥ (ಉತ್ತರಾಖಂಡ) – ಬದರಿನಾಥ ಧಾಮದಲ್ಲಿ ದೇಣಿಗೆ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನ ಸಮಿತಿಯ ವೈಯಕ್ತಿಕ ಕಾರ್ಯದರ್ಶಿ ಪ್ರಮೋದ್ ನೌಟಿಯಾಲ್‌ ಅವರನ್ನು ವಿಶೇಷ ತನಿಖಾ ತಂಡವು ಬಂಧಿಸಿದೆ. ಹಾಗೆಯೇ ಸಮಿತಿಯ ಅಧ್ಯಕ್ಷರನ್ನೂ ಸಹ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಮೋದ್ ನೌಟಿಯಾಲ್‌ ಅವರಿಗೆ ದೇವಸ್ಥಾನದ ದೇಣಿಗೆಯ ಜವಾಬ್ದಾರಿಯಿತ್ತು. ಅವರು ‘ದೇಣಿಗೆ ಅಧಿಕಾರಿ’ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಬಂಧನದ ನಂತರ ಬದರಿನಾಥ ದೇವಸ್ಥಾನ ಸಮಿತಿಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೂ ಬಂಧನದ ಭೀತಿ ಎದುರಾಗಿದೆ. ಶೀಘ್ರದಲ್ಲೇ ಇನ್ನಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಸಂಪಾದಕೀಯ ನಿಲುವು

ಹಿಂದೂಗಳ ದೇವಸ್ಥಾನಗಳನ್ನು ಈಗ ಕೇವಲ ಮತ್ತು ಕೇವಲ ಭಕ್ತರ ನಿಯಂತ್ರಣಕ್ಕೆ ನೀಡುವುದನ್ನು ಬಿಟ್ಟರೆ ಬೇರೆ ಪರ್ಯಾಯವಿಲ್ಲ!