ವಂಚನೆಯಿಂದ ರೇಷನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ !

ಬೆಂಗಳೂರು – ಅಕ್ರಮವಾಗಿ ಭಾರತೀಯ ಪೌರತ್ವದ ಪ್ರಮುಖ ದಾಖಲೆಗಳನ್ನು ಪಡೆದು ರಾಜ್ಯದಲ್ಲಿ ವಾಸಿಸುತ್ತಿದ್ದ ಇಬ್ಬರು ಪಾಕಿಸ್ತಾನಿ ನುಸುಳುಕೋರರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಫರಾ ನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದಿನ್ ಎಂದು ಗುರುತಿಸಲಾಗಿದೆ. ಅವರು ತಮ್ಮ ನೈಜ ರಾಷ್ಟ್ರೀಯತೆ ಮತ್ತು ಪೌರತ್ವವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ, ವಂಚನೆಯ ಮೂಲಕ ರೇಷನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಪಡೆದಿರುವುದು ದೃಢಪಟ್ಟಿದೆ. (ಇದು ಪೊಲೀಸ್ ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು) ಜಿಲ್ಲಾಧಿಕಾರಿಗಳು ಈ ದಾಖಲೆಗಳನ್ನು ಅಕ್ರಮ ಎಂದು ಘೋಷಿಸಿ ರದ್ದುಗೊಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಗ್ರಾಹಕನಿಗೆ 40 ಸಾವಿರ ರೂಪಾಯಿ ಪರಿಹಾರ ನೀಡಿ! – ‘ಗ್ರಾಹಕ ವಿವಾದಗಳ ಪರಿಹಾರ ಆಯೋಗ’ದಿಂದ ಅಂಚೆ ಕಚೇರಿಗೆ ಆದೇಶ : Postal Parcel Stolen
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver