ಹಿಂದೂ ಮಹಿಳೆಯನ್ನು ಒತ್ತೆಯಾಳಾಗಿಟ್ಟು ಮತಾಂತರ ಮಾಡಿದ ಆರೋಪ; ದಂಪತಿ ಸೆರೆ : Forced Conversion Case

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಮುರಾದಾಬಾದ್‌ನಲ್ಲಿ ಹಿಂದೂ ಮಹಿಳೆಯೊಬ್ಬಳನ್ನು ಮನೆಗೆ ಕರೆಸಿಕೊಂಡು ಒತ್ತೆಯಾಳಾಗಿರಿಸಿ, ಪಿಸ್ತೂಲ್ ತೋರಿಸಿ ಮತಾಂತರ ಮಾಡಿದ ಮತ್ತು ಬಲವಂತವಾಗಿ ಕಲ್ಮಾ (ಅಲ್ಲಾನನ್ನು ಮಹಿಮೆಗೊಳಿಸುವ ವಾಕ್ಯಗಳು) ಓದಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಖ್ಯ ಆರೋಪಿ ಸುಲ್ತಾನ್ ಸಲಾವುದ್ದೀನ್ ಮತ್ತು ಆತನ ಪತ್ನಿ ಮೆಹನಾಮ್ ಬೇಗಂ ಎಂಬುವವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೌಲ್ವಿ (ಇಸ್ಲಾಂ ಧರ್ಮದ ಮುಖಂಡ) ಮತ್ತು ಇತರ ಇಬ್ಬರು ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.

೧. ಸಂತ್ರಸ್ತ ಮಹಿಳೆ ತನ್ನ ಪತಿಯಿಂದ ದೂರ ವಾಸಿಸುತ್ತಿದ್ದು, ಸುಮಾರು ಮೂರು ವರ್ಷಗಳ ಹಿಂದೆ ಆಕೆಗೆ ಮೆಹನಾಮ್ ಬೇಗಂ ಪರಿಚಯವಾಗಿದ್ದಳು. ಇಬ್ಬರ ನಡುವೆ ಸ್ನೇಹ ಬೆಳೆದ ನಂತರ ಆರೋಪಿಗಳು ಸಂಚು ರೂಪಿಸಿದ್ದರು. ೬ ಫೆಬ್ರವರಿ ೨೦೨೬ ರಂದು ಮೆಹನಾಮ್ ಬೇಗಂ ಮಹಿಳೆಯನ್ನು ನಂಬಿಸಿ ತನ್ನ ಮನೆಗೆ ಕರೆಸಿದ್ದಳು. ಅಲ್ಲಿ ಆಕೆಯ ಪತಿ ಸುಲ್ತಾನ್ ಸಲಾವುದ್ದೀನ್, ಒಬ್ಬ ಮೌಲ್ವಿ ಮತ್ತು ಇತರ ಇಬ್ಬರು ಮೊದಲೇ ಹಾಜರಿದ್ದರು.

೨. ಮೆಹನಾಮ್ ಮನೆಯಲ್ಲಿ ಮಹಿಳೆಯನ್ನು ಒತ್ತೆಯಾಳಾಗಿಟ್ಟು, ಪಿಸ್ತೂಲ್ ತೋರಿಸಿ ಮತಾಂತರ ಮಾಡಲಾಯಿತು ಮತ್ತು ಮೌಲ್ವಿ ಆಕೆಯಿಂದ ಕಲ್ಮಾ ಓದಿಸಿದನು ಎಂದು ಆರೋಪಿಸಲಾಗಿದೆ. ಇದರ ನಂತರ, ಸಲಾವುದ್ದೀನ್ ತನ್ನನ್ನು ನಿಕಾಹ್ (ಮದುವೆ) ಮಾಡಿಕೊಳ್ಳುವಂತೆ ಮಹಿಳೆಯ ಮೇಲೆ ಒತ್ತಡ ಹೇರಿದನು; ಆದರೆ ಆಕೆ ವಿರೋಧಿಸಿದ್ದರಿಂದ ನಿಕಾಹ್ ಆಗಲಿಲ್ಲ. ಒತ್ತೆಯಾಳಾಗಿರಿಸಿದ್ದ ವೇಳೆ ಸಲಾವುದ್ದೀನ್ ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಾನೆ ಮತ್ತು ಚುಡಾಯಿಸಿದ್ದಾನೆ ಎಂದೂ ಆರೋಪಿಸಲಾಗಿದೆ.

೩.  ಉಪಾಯ ಮಾಡಿ ಆರೋಪಿಗಳ ಕೈಯಿಂದ ಸಂತ್ರಸ್ತೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು; ಆದರೆ ಇತ್ತೀಚೆಗೆ ರಸ್ತೆಯಲ್ಲಿ ಸಿಕ್ಕಾಗ ಆರೋಪಿಗಳು ಆಕೆಗೆ ಜೀವ ಬೆದರಿಕೆ ಹಾಕಿದ್ದಾರೆ. ನಂತರ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಸಂಪಾದಕೀಯ ನಿಲುವು

ಮತಾಂಧ ಮುಸ್ಲಿಮರಿಗೆ ಕಾನೂನಿನ ಬಗ್ಗೆ ಕಿಂಚಿತ್ತೂ ಭಯವಿಲ್ಲದಿರುವುದರಿಂದಲೇ ರಾಜಾರೋಷವಾಗಿ ಹಿಂದೂಗಳನ್ನು ಮತಾಂತರ ಮಾಡಲು ಮುಂದಾಗುತ್ತಿದ್ದಾರೆ. ಸರಕಾರ, ಪೊಲೀಸ್ ಮತ್ತು ಆಡಳಿತಕ್ಕೆ ಇದು ಅತ್ಯಂತ ನಾಚಿಕೆಗೇಡಿನ ಸಂಗತಿ!