|

ನವದೆಹಲಿ – ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತಹ ಸಾರ್ವಜನಿಕವಾಗಿ ವಿದೇಶಾಂಗ ನೀತಿಯನ್ನು ಅನುಸರಿಸುವ ಯಾವುದೇ ಅಮೇರಿಕಾದ ಅಧ್ಯಕ್ಷರನ್ನು ನಾನು ಎಂದಿಗೂ ನೋಡಿಲ್ಲ. ಈ ಬದಲಾವಣೆಯು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಅಧ್ಯಕ್ಷ ಟ್ರಂಪ್ ಅವರು ಅನ್ಯ ರಾಷ್ಟ್ರಗಳೊಂದಿಗೆ ಹಾಗೂ ತಮ್ಮ ಸ್ವಂತ ದೇಶದೊಂದಿಗೂ ವ್ಯವಹರಿಸುವ ವಿಧಾನವು ಸಾಂಪ್ರದಾಯಿಕ ವಿಧಾನಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇದು ಒಂದು ದೊಡ್ಡ ಬದಲಾವಣೆಯಾಗಿದೆ. ಕೇವಲ ವ್ಯಾಪಾರಕ್ಕಾಗಿ ಆಮದು ಸುಂಕ ವಿಧಿಸುವುದು ಸಾಮಾನ್ಯವಾಗಿದೆ. ಆದರೆ ವ್ಯಾಪಾರೇತರ ವಿಷಯಗಳ ಮೇಲೆ ಸುಂಕ ವಿಧಿಸುವುದು ಸರಿಯಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ತೀಕ್ಷ್ಣವಾಗಿ ಟೀಕಿಸಿದರು. ಭಾರತದ ಮೇಲೆ ಶೇ. 50%ರಷ್ಟು ಆಮದು ಸುಂಕ ವಿಧಿಸಿದ ಟ್ರಂಪ್ ಅವರಿಗೆ ವಿದೇಶಾಂಗ ಸಚಿವರು ನೇರವಾಗಿ ಈ ಮಾತುಗಳನ್ನು ಹೇಳಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಉಕ್ರೇನ್ ವಿರುದ್ಧ ಯುದ್ಧ ಮಾಡಲು ರಷ್ಯಾಕ್ಕೆ ಹಣಕಾಸು ಲಭಿಸುತ್ತಿದೆ ಎಂಬ ಸುಳ್ಳು ಆರೋಪದ ಮೇಲೆ ಟ್ರಂಪ್ ಭಾರತದ ಮೇಲೆ ಶೇ.50% ತೆರಿಗೆ ವಿಧಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಮಂಡಿಸಿದ ಪ್ರಮುಖ ವಿಷಯಗಳು!
1. ಪಾಕಿಸ್ತಾನದ ವಿಷಯದಲ್ಲಿ ಟ್ರಂಪ್ ಗೆ ಪ್ರತ್ಯುತ್ತರ!
ಭಾರತವು ಪಾಕಿಸ್ತಾನದ ವಿಷಯದಲ್ಲಿ ಎಂದಿಗೂ ಯಾರ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ. ಪಾಕಿಸ್ತಾನದೊಂದಿಗಿನ ಮಧ್ಯಸ್ಥಿಕೆ ಕುರಿತು ಭಾರತದ ನಿಲುವು ಯಾವಾಗಲೂ ಸ್ಪಷ್ಟವಾಗಿದೆ ಮತ್ತು ಹಾಗೆಯೇ ಇರುತ್ತದೆ. 1970ರಿಂದ ಇಲ್ಲಿಯವರೆಗಿನ 50 ವರ್ಷಗಳಲ್ಲಿ ನಾವು ಎಂದಿಗೂ ಯಾರ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ. ಡಾ. ಜೈಶಂಕರ್ ಅವರ ಈ ಹೇಳಿಕೆಯು ಟ್ರಂಪ್ ಅವರು ಪದೇ-ಪದೇ ಮಾಡುತ್ತಿರುವ ಹೇಳಿಕೆಗಳಿಗೆ ಉತ್ತರವಾಗಿದೆ. ಟ್ರಂಪ್ ಹಲವಾರು ಬಾರಿ ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತ-ಪಾಕ್ ನಡುವೆ ಕದನವಿರಾಮವನ್ನು ತಂದವರು ತಾನೇ ಎಂದು ಹೇಳುತ್ತಿದ್ದರು.
2. ರೈತರು ಮತ್ತು ಸಣ್ಣ ವ್ಯಾಪಾರಿಗಳ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಆದ್ಯತೆ!
ವ್ಯಾಪಾರ ಮತ್ತು ರೈತರ ಹಿತಾಸಕ್ತಿಯ ಪ್ರಶ್ನೆ ಬಂದಾಗ, ನಾವು ನಮ್ಮ ನೀತಿಯ ಸ್ವಾಯತ್ತತೆಯನ್ನು ಸಮರ್ಥಿಸುತ್ತೇವೆ. ಅದನ್ನು ಕಾಪಾಡಿಕೊಳ್ಳಲು ನಾವು ಏನು ಮಾಡಬೇಕಾಗಿದೆಯೋ ಅದನ್ನು ಮಾಡುತ್ತೇವೆ. ನಮ್ಮ ಸರಕಾರ ರೈತರು ಮತ್ತು ಸಣ್ಣ ವ್ಯಾಪಾರಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿದೆ. ಈ ಬಗ್ಗೆ ನಾವು ಬಹಳ ದೃಢವಾಗಿದ್ದೇವೆ. ಇದರ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ.
3. ಭಾರತ ಮಾಡುತ್ತಿರುವ ವ್ಯಾಪಾರದ ಬಗ್ಗೆ ನಾವು ದೃಢವಾಗಿದ್ದೇವೆ!
ವ್ಯಾಪಾರವನ್ನು ಸಮರ್ಥಿಸುವ ಹಾಗೂ ಅಮೇರಿಕಾದ ಪರವಾಗಿ ಕೆಲಸ ಮಾಡುವವರು ಇತರ ದೇಶಗಳ ವ್ಯಾಪಾರದ ಬಗ್ಗೆ ಆರೋಪಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಭಾರತದ ತೈಲ ಅಥವಾ ಶುದ್ಧೀಕರಿಸಿದ ಉತ್ಪನ್ನಗಳನ್ನು ಖರೀದಿಸುವುದರಿಂದ ಯಾರಿಗೆ ತೊಂದರೆಯಾಗಿದೆಯೋ ಅವರು ಅದನ್ನು ಖರೀದಿಸಬಾರದು. ಇವುಗಳನ್ನು ಖರೀದಿಸಲು ಯಾರೂ ನಿಮ್ಮನ್ನು ಒತ್ತಾಯಿಸುವುದಿಲ್ಲ. ಯುರೋಪ್ ಖರೀದಿಸುತ್ತದೆ, ಅಮೇರಿಕಾ ಖರೀದಿಸುತ್ತದೆ, ಆದರೆ ನಿಮಗೆ ಇಷ್ಟವಿಲ್ಲದಿದ್ದರೆ, ಖರೀದಿಸಬೇಡಿ.
4. ಭಾರತವು ರಷ್ಯಾಗೆ ಹೆಚ್ಚು ಮಾರುಕಟ್ಟೆ ಒದಗಿಸಲು ಬಯಸುತ್ತದೆ!
ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಭೇಟಿಯ ಕುರಿತು ವಿದೇಶಾಂಗ ಸಚಿವರು, “ನಮ್ಮಲ್ಲಿ ರಷ್ಯಾದ ಜನರೊಂದಿಗೆ ವಾರ್ಷಿಕ ಶೃಂಗಸಭೆ ನಡೆಸುವ ಸಂಪ್ರದಾಯವಿದೆ. ನಾವು ವರ್ಷಾಂತ್ಯದಲ್ಲಿ ಈ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ. ಈ ರೀತಿಯಾಗಿ ಸಂಬಂಧಗಳು ಹೆಚ್ಚುತ್ತವೆ. ನನ್ನ ಮಾತು ಸೇನಾ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳ ಬಗ್ಗೆ ಆಗಿದೆ. ರಕ್ಷಣಾ ಸಚಿವರು ಸೇನಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ನಾವು ರಷ್ಯಾಗೆ ಹೆಚ್ಚು ಮಾರುಕಟ್ಟೆ ಒದಗಿಸಲು ಬಯಸುತ್ತೇವೆ” ಎಂದರು.
5. ರಷ್ಯಾ-ಉಕ್ರೇನ್ ಸಂಘರ್ಷ ಆದಷ್ಟು ಬೇಗ ಕೊನೆಗೊಳ್ಳಬೇಕು!
ಅಲಾಸ್ಕಾದಿಂದ ಹಿಂದಿರುಗಿದ ನಂತರ, ಅಲ್ಲಿ ನಡೆದ ಘಟನೆಗಳ ಬಗ್ಗೆ ಪುಟಿನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಮ್ಮ ನಿಲುವು ಮೊದಲಿನಿಂದಲೂ ಸ್ಪಷ್ಟವಾಗಿದೆ, ನಮಗೆ ರಷ್ಯಾ-ಉಕ್ರೇನ್ ಸಂಘರ್ಷ ಆದಷ್ಟು ಬೇಗ ಕೊನೆಗೊಳ್ಳಬೇಕು ಎಂದು ಅನಿಸುತ್ತದೆ. ಯಾವುದೇ ಸಂಘರ್ಷವನ್ನು ಪರಿಹರಿಸುವುದು ಸಂಬಂಧಪಟ್ಟ ಪಕ್ಷಗಳ ಕೆಲಸ ಎಂದು ನಾವು ಭಾವಿಸುತ್ತೇವೆ. ಈ ಬದಲಾವಣೆಯನ್ನು ತರಬಲ್ಲ ಯಾವುದೇ ಪ್ರಯತ್ನಗಳಿಗೆ ನಾವು ಬೆಂಬಲ ನೀಡುತ್ತೇವೆ.
6. ಅಮೇರಿಕಾ ಕಾರಣದಿಂದ ಚೀನಾದೊಂದಿಗೆ ಸಂಬಂಧಗಳು ಗಟ್ಟಿಯಾಗಿದೆ ಎಂದೇನಿಲ್ಲ!
ಭಾರತ-ಚೀನಾ ಸಂಬಂಧಗಳ ಕುರಿತು ವಿದೇಶಾಂಗ ಸಚಿವರು ಮಾತನಾಡಿ, “ಅಮೇರಿಕಾದಲ್ಲಿ ಏನಾದರೂ ನಡೆದರೆ, ತಕ್ಷಣವೇ ಚೀನಾದಲ್ಲಿ ಏನಾದರೂ ನಡೆದಿದೆ ಎಂದು ಅರ್ಥವಲ್ಲ. ವಿವಿಧ ಸಮಸ್ಯೆಗಳಿಗೆ ವಿಭಿನ್ನ ಸಮಯಗಳಿರುತ್ತವೆ. ಎಲ್ಲವನ್ನೂ ಒಗ್ಗೂಡಿಸಿ ಒಂದು ವಿಶಿಷ್ಟ ಪರಿಸ್ಥಿತಿಗೆ ಒಟ್ಟಾಗಿ ಪ್ರತಿಕ್ರಿಯಿಸಲು ಪ್ರಯತ್ನಿಸುವುದು ತಪ್ಪಾಗಿದೆ. ಇಂದು ಖಂಡಿತವಾಗಿಯೂ ಒಂದು ಜಾಗತಿಕ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ವಿಕಾಸವಾಗಿದೆ ಎಂದು ನಾನು ನಿಮಗೆ ತಿಳಿಸಿ ಹೇಳಲು ಬಯಸುತ್ತೇನೆ. ಈ ಸಂಬಂಧಕ್ಕೆ ಒಂದು ಹರಿವು ಇದೆ, ಆದರೆ ಈ ಸಂಬಂಧವನ್ನು ಅಷ್ಟು ಆಳವಾಗಿಸಬೇಡಿ. ಇದು ವಾಸ್ತವವಲ್ಲ” ಎಂದರು.
7. ಆತ್ಮನಿರ್ಭರತೆಯ ಮೇಲೆ ಒತ್ತು ನೀಡಲು ಕಾರಣ ಸ್ಪಷ್ಟಪಡಿಸಿದರು!
ಇತ್ತೀಚಿನ ಅನುಭವವು ಯಾವುದೇ ಒಂದು ದೇಶದ ಯಾವುದೇ ಒಂದು ಪೂರೈಕೆ ಸರಪಳಿ ಅಥವಾ ಮೂಲದ ಮೇಲೆ ಹೆಚ್ಚು ಅವಲಂಬಿತವಾಗಬಾರದು ಎಂದು ನಮಗೆ ಪಾಠ ಕಲಿಸಿದೆ. ಯಾವುದೇ ಒಂದು ಮಾರುಕಟ್ಟೆಯನ್ನು ಅವಲಂಬಿಸಬೇಡಿ. ಕೇವಲ ಮೂಲದಿಂದ ಉತ್ಪನ್ನದವರೆಗೆ ಮಾತ್ರವಲ್ಲ, ಉತ್ಪನ್ನದಿಂದ ಮಾರುಕಟ್ಟೆಯವರೆಗೂ ಈ ಅವಲಂಬನೆ ಇದೆ. ಇದರ ಅರ್ಥ ನೀವು ವೈವಿಧ್ಯತೆಯನ್ನು ತರುತ್ತೀರಿ. ನೀವು ಮನೆಯಲ್ಲೇ ಹೆಚ್ಚು ಕೆಲಸ ಮಾಡಬೇಕು ಎಂಬುದು ಸರಕಾರದ ನಿರಂತರ ಸಂದೇಶವಾಗಿದೆ. ಇದು ಕಷ್ಟ, ಮತ್ತು ಸಂಕೀರ್ಣವೂ ಆಗಿದೆ. ಇದಕ್ಕೆ ಒಂದು ವಿಭಿನ್ನ ರೀತಿಯ ಪ್ರಯತ್ನದ ಆವಶ್ಯಕತೆಯಿದೆ. ಇದಕ್ಕಾಗಿಯೇ ಆತ್ಮನಿರ್ಭರತೆಯ ಮೇಲೆ ಒತ್ತು ನೀಡಲಾಗುತ್ತಿದೆ ಎಂದು ಜೈಶಂಕರ್ ಸ್ಪಷ್ಟಪಡಿಸಿದರು.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !