
ಶ್ರೀ ಗಣೇಶಚತುರ್ಥಿ ಈ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಶ್ರೀ ಗಣೇಶನ ಜನನದ ಬಗ್ಗೆ ಪೌರಾಣಿಕ ಮತ್ತು ಧಾರ್ಮಿಕ ಕಥೆಗಳು ಅನೇಕ ರೀತಿಯಲ್ಲಿ ಪ್ರಚಲಿತವಾಗಿವೆ. ಉತ್ತರಾಖಂಡ ರಾಜ್ಯದ ಉತ್ತರಕಾಶಿಯಲ್ಲಿನ ದೋಡಿತಾಲವನ್ನು ಶ್ರೀ ಗಣೇಶನ ಜನ್ಮಸ್ಥಳವೆಂದು ನಂಬಲಾಗುತ್ತದೆ. ದೋಡಿತಾಲದಲ್ಲಿ ಒಂದು ಸರೋವರವಿದೆ. ಈ ಸರೋವರದ ಹತ್ತಿರದ ದೇವಸ್ಥಾನವನ್ನು ಶ್ರೀ ಗಣೇಶನ ಜನ್ಮಸ್ಥಳವೆಂದು ನಂಬಲಾಗುತ್ತದೆ. ಇಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ದೇವಸ್ಥಾನವಿದೆ. ಅದರ ಬಾಗಿಲನ್ನು ಬೇಸಿಗೆ ಯಲ್ಲಿ ತೆರೆಯಲಾಗುತ್ತದೆ ಮತ್ತು ಚಳಿಗಾಲದಲ್ಲಿ ಮುಚ್ಚಲಾಗುತ್ತದೆ.
೧. ದೋಡಿತಾಲದಲ್ಲಿ ಗಣೇಶನೊಂದಿಗೆ ಮಾತಾ ಪಾರ್ವತಿಯೂ ವಿರಾಜಮಾನ
ಪೌರಾಣಿಕ ಕಥೆಗನುಸಾರ ಉತ್ತರಕಾಶಿಯ ದೋಡಿತಾಲ ದಲ್ಲಿ ಮಾತಾ ಪಾರ್ವತಿಯು ಸ್ನಾನ ಮಾಡುವ ಮೊದಲು ರಕ್ಷಣೆಗಾಗಿ ಬಾಗಿಲ ಹೊರಗೆ ತನ್ನ ಕೊಳೆಯಿಂದ ಗಣೇಶನನ್ನು ನಿರ್ಮಿಸಿದ್ದಳು. ಅಲ್ಲಿನ ದೇವಸ್ಥಾನದಲ್ಲಿ ಭಗವಾನ ಗಣೇಶನ ಮೂರ್ತಿಯೊಂದಿಗೆ ಅವನ ತಾಯಿ ಪಾರ್ವತಿಯ ಮೂರ್ತಿಯೂ ಇದೆ. ದೋಡಿತಾಲದಲ್ಲಿನ ಸ್ಥಳೀಯ ಜನರ ಆಡುಭಾಷೆಯಲ್ಲಿ ಗಣೇಶನನ್ನು ‘ದೋಡಿ ರಾಜಾ’ ಎಂದು ಕರೆಯುತ್ತಾರೆ. ಕೇದಾರಖಂಡದಲ್ಲಿನ ಗಣೇಶಜಿಯ ದುಂಡೀಸರ ಹೆಸರಿನ ಅಪವರ್ತನವಾಗಿದೆ. ಇಲ್ಲಿ ತಾಯಿ ಅನ್ನಪೂರ್ಣೇಶ್ವರಿದೇವಿಯ ಪ್ರಾಚೀನ ಮತ್ತು ಏಕೈಕ ದೇವಸ್ಥಾನವಿದೆ, ಅಲ್ಲಿ ಮಾತಾ ಪಾರ್ವತಿಯ ರೂಪದಲ್ಲಿನ ತಾಯಿ ಅನ್ನಪೂರ್ಣೇಶ್ವರಿದೇವಿಯನ್ನು ಗಣೇಶನೊಂದಿಗೆ ಪೂಜಿಸಲಾಗುತ್ತದೆ. ಈ ದೇವಸ್ಥಾನದ ಹೊರಗಿನ ಬದಿಗೆ ಒಂದು ಶಿವಮಂದಿರವಿದೆ. ದೋಡಿತಾಲದಲ್ಲಿನ ದೇವಸ್ಥಾನವು ಭಗವಾನ ಗಣೇಶನ ಪ್ರಸಿದ್ಧ ಮಂದಿರಗಳಲ್ಲಿ ಒಂದಾಗಿದೆ.
೨. ಸರೋವರ ಎಷ್ಟು ಆಳವಾಗಿದೆ ? ಒಂದು ರಹಸ್ಯ
ಸಮುದ್ರಮಟ್ಟದಿಂದ ೩ ಸಾವಿರ ೩೧೦ ಮೀಟರ್ ಎತ್ತರದಲ್ಲಿರುವ ಸುಂದರ ಪರ್ವತಗಳಿಂದ ಸುತ್ತುವರೆದಿರುವ ದೋಡಿತಾಲ ಸರೋವರದ ಆಳವು ಒಂದು ರಹಸ್ಯವಾಗಿದೆ. ದೋಡಿತಾಲವು ಒಂದರಿಂದ ಒಂದೂವರೆ ಕಿಲೋಮೀಟರ್ ವರೆಗೆ ಹರಡಿದ ಸರೋವರವಿದೆ. ಈ ಸರೋವರದಲ್ಲಿ ಇಂದಿಗೂ ಶ್ರೀ ಗಣೇಶನು ತನ್ನ ತಾಯಿಯೊಂದಿಗೆ ಉಪಸ್ಥಿತನಾಗಿರುವನೆಂದು ಭಕ್ತರ ಶ್ರದ್ಧೆಯಾಗಿದೆ. ಇಂದಿಗೂ ಈ ಸರೋವರದ ಆಳವು ಒಂದು ರಹಸ್ಯವೇ ಆಗಿದೆ. ದೋಡಿತಾಲದಲ್ಲಿನ ಸರೋವರದ ಆಳದ ಬಗ್ಗೆ ಯಾರಿಗೂ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ಆಗಾಗ ಅನೇಕ ವಿಜ್ಞಾನಿಗಳು ಮತ್ತು ಅರಣ್ಯಾಧಿಕಾರಿಗಳು ಅದರ ಅಳತೆಯನ್ನು ಮಾಡಲು ಪ್ರಯತ್ನಿಸಿದರು; ಆದರೆ ಅವರು ವಿಫಲರಾಗಿದ್ದಾರೆ. ದೋಡಿತಾಲವು ಪ್ರವಾಸಿಗರಿಗಾಗಿ ಒಂದು ಉತ್ತಮ ಪ್ರವಾಸಿಗರ ಮತ್ತು ಪರ್ವತಾರೋಹಣದ ತಾಣವಾಗಿದೆ. ಇದು ಮುಖ್ಯ ಕಚೇರಿಯಿಂದ ಅಗುಡಾ ಗ್ರಾಮದವರೆಗೆ ರಸ್ತೆಯಿಂದ ೧೮ ಕಿ.ಮೀ. ದೂರದಲ್ಲಿದೆ.
– ಹರ್ಷದಾ ಪಾಟೊಳೆ (ಸೌಜನ್ಯ : ದೈನಿಕ ‘ನವರಾಷ್ಟ್ರ’)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು