
೧. ಧರ್ಮಸಂಸ್ಥಾಪನೆ
‘ಕೃಷ್ಣಂ ವಂದೇ ಜಗದ್ಗುರುಮ್ |’, ಎಂದು ಹೇಳುತ್ತಾರೆ; ಏಕೆಂದರೆ ಶ್ರೀಕೃಷ್ಣನು ಧರ್ಮದ ಯಾವುದೇ ಮಿತಿಯನ್ನು ದಾಟಲು ಬಾಕಿಯಿಲ್ಲ. ಅಂದರೆ ಈ ಹೇಳಿಕೆಯು ಲೌಕಿಕ ದೃಷ್ಟಿಯಿಂದಾಗಿದೆ; ಆದ್ದರಿಂದ ಸಂತ ಏಕನಾಥ ಮಹಾರಾಜರು ‘ಕೃಷ್ಣನು ಅಧರ್ಮದಿಂದ ಧರ್ಮವನ್ನು ಹೆಚ್ಚಿಸಿದನು’, ಎಂದು ಹೇಳಿದ್ದಾರೆ. ಹೆಚ್ಚಿಸಿದನು ಅಂದರೆ ಧರ್ಮಸಂಸ್ಥಾಪನೆ ಮಾಡಿದನು.
೨. ಶ್ರೀಕೃಷ್ಣನು ಯಾವ ತ್ಯಾಗವನ್ನೂ ಮಾಡದಿರುವುದು
ದ್ವಾಪರಯುಗದಲ್ಲಿ ಕೃಷ್ಣಾವತಾರವಿತ್ತು. ಇದರಲ್ಲಿ ಯುಗಮಹಿಮೆಯನ್ನೂ ಗಮನದಲ್ಲಿ ತೆಗೆದುಕೊಳ್ಳಬೇಕು. ರಾಮಾವತಾರದಲ್ಲಿ ಒಬ್ಬ ಸಾಮಾನ್ಯ ನಾಗರಿಕನಾದ, ಅಗಸನ ಸಂದೇಹದಿಂದ ಶ್ರೀರಾಮನು ಸೀತೆಯ ತ್ಯಾಗ ಮಾಡಿದನು. ರಾಮನು ಅವನಿಗೆ ಶಿಕ್ಷೆಯನ್ನು ವಿಧಿಸಬಹುದಾಗಿತ್ತು; ಆದರೆ ಅವನು ಹಾಗೆ ಮಾಡಲಿಲ್ಲ. ಶ್ರೀರಾಮನಂತೆ ಶ್ರೀಕೃಷ್ಣನು ಯಾರ ತ್ಯಾಗವನ್ನೂ ಮಾಡಲಿಲ್ಲ. ಅವನ ಪರಮಭಕ್ತರಾದ ಗೋಪಿಯರ ವಿಷಯದಲ್ಲಿ ಅವನು ದುಷ್ಟರಿಂದ ಬಹಳ ಕಳಂಕಿತನಾಗಿದ್ದನು; ಆದರೆ ಅವನು ಒಬ್ಬಳೇ ಒಬ್ಬ ಗೋಪಿಯನ್ನು ತ್ಯಾಗ ಮಾಡಲಿಲ್ಲ.
೩. ಭಕ್ತನಿಗೆ ಅಲ್ಪತ್ವ ಬರಬಾರದು ಎಂದು ಈಶ್ವರನು ತನ್ನಲ್ಲಿ ಅಲ್ಪತ್ವವನ್ನು ತೆಗೆದುಕೊಳ್ಳುವುದು
ಸೀತಾ ಮತ್ತು ರಾಮ ಇವರಿಗೆ ಅಲೌಕಿಕದೃಷ್ಟಿಯಲ್ಲಿ ಭಕ್ತ ಮತ್ತು ಈಶ್ವರನೆಂಬ ಸಂಬಂಧವಿದ್ದರೂ, ಲೌಕಿಕದೃಷ್ಟಿಯಲ್ಲಿ ಪತಿ-ಪತ್ನಿಯೆಂಬ ಸಂಬಂಧವಿತ್ತು. ಗೋಪಿ ಮತ್ತು ಕೃಷ್ಣನ ನಡುವೆ ಅಂತರಂಗದ ಶಿಷ್ಯ ಮತ್ತು ಸದ್ಗುರು ಎಂಬ ಸಂಬಂಧವಿತ್ತು, ಎಂಬುದನ್ನು ಗಮನದಲ್ಲಿ ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಭಕ್ತನಿಗೆ ಅಲ್ಪತ್ವ ಬರಬಾರದೆಂದು ಈಶ್ವರನು ಎಷ್ಟು ಅಲ್ಪತ್ವವನ್ನು ತೆಗೆದುಕೊಳ್ಳುತ್ತಿರುತ್ತಾನೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಭೀಷ್ಮನ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು ಅವನು ತನ್ನ ಪ್ರತಿಜ್ಞೆಯನ್ನು ಮುರಿದನು; ಏಕೆಂದರೆ ಭೀಷ್ಮನು ಅವನ ಪರಮ ಭಕ್ತನಾಗಿದ್ದನು. ಶ್ರೀಕೃಷ್ಣನು ಅರ್ಜುನನ ಸಾರಥಿಯಾದನು. ಧರ್ಮರಾಜನು ಆಯೋಜಿಸಿದ್ದ ಯಜ್ಞದಲ್ಲಿ ಊಟದ ಪಂಕ್ತಿಯಲ್ಲಿ ಎಂಜಲು ಎಲೆಗಳನ್ನು ತೆಗೆದನು. ಸಂತ ಜನಾಬಾಯಿಗಾಗಿ ಬೆರಣಿಗಳನ್ನು ತಟ್ಟಿದನು. ಕಬೀರನಿಗಾಗಿ ಶಾಲು ನೇಯ್ದನು. ಇದರಿಂದ ಗುರುಪದವಿಯ ನಿಜವಾದ ಮಹತ್ವ ತಿಳಿದುಬರುತ್ತದೆ.’
– ಪ.ಪೂ. ಕಾಣೆ ಮಹಾರಾಜರು
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !