
ಕೃಷ್ಣಾಬಾಯಿಯು ಶ್ರೀಕೃಷ್ಣನ ಅಸೀಮ ಭಕ್ತಳಾಗಿದ್ದಳು. ಅವಳು ಸತತ ಕೃಷ್ಣಭಕ್ತಿಯಲ್ಲಿ ತಲ್ಲೀನಳಾಗಿದ್ದಳು. ಅವಳು ಶ್ರೀಕೃಷ್ಣನಿಗಾಗಿ ಸುಂದರ ಹಾರಗಳನ್ನು ಮಾಡುತ್ತಿದ್ದಳು. ಜನರ ದೃಷ್ಟಿಯಲ್ಲಿ ಅವಳು ಹುಚ್ಚಿಯಾಗಿದ್ದಳು. ಒಂದು ದಿನ ಗ್ರಾಮದಲ್ಲಿ ಭೂಕಂಪ ಆಗಲಿದೆ ಎಂದು ಶ್ರೀಕೃಷ್ಣನು ಅವಳಿಗೆ ದೃಷ್ಟಾಂತ ನೀಡಿದನು. ಅವಳು ತಕ್ಷಣ ಈ ವಿಷಯದ ಬಗ್ಗೆ ಗ್ರಾಮದಲ್ಲಿ ಮನೆಮನೆಗೆ ಹೋಗಿ ಹೇಳಲು ಪ್ರಾರಂಭಿಸಿದಳು, ಆಗ ಗ್ರಾಮಸ್ಥರು ಅವಳ ಮೇಲೆ ವಿಶ್ವಾಸವಿಡಲಿಲ್ಲ ಮತ್ತು ಅವಳನ್ನು ಮತ್ತೆ ಹುಚ್ಚಿ ಎಂದು ಕರೆದರು. ಅವಳು ಗ್ರಾಮದ ಪ್ರಮುಖರಿಗೆ ಹೇಳಿ ನೋಡಿದಳು; ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಪರಿಣಾಮವಾಗಿ ಅವಳು ಶ್ರೀಕೃಷ್ಣನ ದೃಷ್ಟಾಂತವನ್ನು ಪ್ರಮಾಣವೆಂದು ಪರಿಗಣಿಸಿ ಸ್ವತಃ ಸಿದ್ಧತೆಗಳನ್ನು ಪ್ರಾರಂಭಿಸಿದಳು. ಮನೆಯಲ್ಲಿದ್ದ ಎಲ್ಲಾ ಸಾಮಾನುಗಳನ್ನು ಎತ್ತಿನಗಾಡಿಯಲ್ಲಿ ಇಟ್ಟು ಅವಳು ಗ್ರಾಮದಿಂದ ಹೊರಟಳು, ಅಷ್ಟರಲ್ಲಿ ಶ್ರೀಕೃಷ್ಣನು ಅವಳಿಗೆ ಅವಳ ಹಾರ ಮಾಡುವ ಸೂಜಿ ಮನೆಯಲ್ಲೇ ಉಳಿದಿರುವುದನ್ನು ನೆನಪಿಸಿದನು. ಆಗ ಅವಳು ಮತ್ತೆ ಮನೆಗೆ ಹಿಂದಿರುಗಿದಳು ಮತ್ತು ಸೂಜಿಯನ್ನು ತೆಗೆದುಕೊಂಡಳು ಮತ್ತು ಮತ್ತೆ ವೇಗವಾಗಿ ಎತ್ತಿನಗಾಡಿಯಲ್ಲಿ ಪ್ರಯಾಣ ಮಾಡಿದಳು. ಅವಳು ಗ್ರಾಮದ ಗಡಿಯನ್ನು ದಾಟುತ್ತಿದ್ದಂತೆಯೇ ಅಲ್ಲಿ ದೊಡ್ಡ ಭೂಕಂಪವಾಯಿತು ಮತ್ತು ಅವಳ ಇಡೀ ಗ್ರಾಮ ಭೂಮಿಯಲ್ಲಿ ಹುಗಿದುಹೋಯಿತು. ಕೃಷ್ಣಾಬಾಯಿ ಕೃಷ್ಣಭಕ್ತಿಯಲ್ಲಿ ತಲ್ಲೀನಳಾಗಿ ಶ್ರೀಕೃಷ್ಣನ ಪ್ರತಿಯೊಂದು ಆಜ್ಞೆಯನ್ನು ಶಿರೋಧಾರ್ಯವೆಂದು ಪರಿಗಣಿಸಿ ಕೃತಿ ಮಾಡಿದುದರಿಂದ ಕಾಲವೂ ಅವಳಿಗೇನೂ ಮಾಡಲು ಸಾಧ್ಯವಾಗಲಿಲ್ಲ. (ಆಧಾರ : ಜಾಲತಾಣ)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಅಡುಗೆಮನೆ
ಗಾಂಧಿವಾದದ ಮುಖವಾಡ ಕಳಚಿದ ಭಾರತ !