ದಿವ್ಯತ್ವದ ಅನುಭೂತಿ…!

ಜೂನ್‌ ೧೨ ರಂದು ಕರ್ಣಾವತಿಯಲ್ಲಿ ವಿಮಾನ ಅಪಘಾತ ಸಂಭವಿಸಿತು. ಇದು ಅತ್ಯಂತ ಹೃದಯ ಕಲಕುವ ಘಟನೆಯಾಗಿತ್ತು. ಅನಂತರ, ಅಲ್ಲಿನ ಪರಿಸ್ಥಿತಿಯು ವಿವಿಧ ವಿಡಿಯೊಗಳು, ಸುದ್ದಿಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಹೊರಬಿದ್ದಿತು. ಅವುಗಳಲ್ಲಿ ಒಂದು ವಿಡಿಯೊ ಅಂದರೆ ‘ಎಲ್ಲವೂ ಬೆಂಕಿಗೆ ಆಹುತಿಯಾಗಿರುವಾಗ ‘ಶ್ರೀಮದ್ಭಗವದ್ಗೀತೆ’ಯ ಗ್ರಂಥ ಇದ್ದ ಹಾಗೆ ಇತ್ತು’ ಎಂಬುದು. ಈ ಘಟನೆಯಿಂದ ನಮಗೆ ಭಗವಂತನ ಅಸ್ತಿತ್ವದ ಅನುಭೂತಿ ಪಡೆಯುವ ಅವಕಾಶ ಸಿಕ್ಕಿತು. ಇದರಿಂದ ಸಾತ್ತ್ವಿಕತೆ ಮತ್ತು ಹಿಂದೂಗಳ ಧರ್ಮಗ್ರಂಥಗಳ ಮಹತ್ವವು ತಿಳಿಯುತ್ತದೆ. ಕಳೆದ ವರ್ಷವೂ ಒಂದು ಊರಿನಲ್ಲಿ ನೆರೆಯ ನೀರು ಹರಿದು ಹೋದ ನಂತರ ಭಗವದ್ಗೀತೆಯ ಪುಟಗಳು ನೀರಿನಲ್ಲಿ ಹಾಗೆಯೇ ಇದ್ದವು, ಎಂಬಂತಹ ಚಿತ್ರೀಕರಣ ವನ್ನು ಮಾಧ್ಯಮಗಳಲ್ಲಿ ತೋರಿಸಲಾಗಿತ್ತು. ‘ಜಗದ್ಗುರು ಸಂತ ತುಕಾರಾಮ ಮಹಾರಾಜರ ಕಥನಕಾವ್ಯಗಳನ್ನು ಕರ್ಮನಿಷ್ಠರು ಮುಳುಗಿಸಿದಾಗಲೂ ಅದು ಹೇಗೆ ತೇಲಿರ ಬಹುದು ?’ ಇದರ ಹಿಂದಿನ ತತ್ತ್ವವೂ ಇದರಿಂದ ಸ್ಪಷ್ಟವಾಗುತ್ತದೆ.

೧ ಸಾವಿರ ಡಿಗ್ರಿ ತಾಪಮಾನದಲ್ಲಿ ಭಗವದ್ಗೀತೆ ಇದ್ದ ಹಾಗೆ ಉಳಿಯುವುದು, ಈ ಘಟನೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯನ್ನೂ ಮೀರಿದ ಅಧ್ಯಾತ್ಮದ, ಭಗವಂತನ ಅನುಭೂತಿಯನ್ನು ನೀಡುವಂತಹದ್ದಾಗಿದೆ. ಕಬ್ಬಿಣವೂ ಕರಗಿದ ಸ್ಥಳದಲ್ಲಿ, ಕಾಗದದ ಭಗವದ್ಗೀತೆಯ ಪುಟಗಳಿಗೆ ಬೆಂಕಿಯ ತಾಪವೂ ತಲುಪಲಿಲ್ಲ ಎನ್ನುವುದು ಆಶ್ಚರ್ಯವೇ ಅಲ್ಲವೇ ? ಇಂತಹ ಕೆಲವು ಘಟನೆಗಳು ನಮ್ಮ ಅಕ್ಕಪಕ್ಕದಲ್ಲಿ ನಡೆಯುವುದು ಕಂಡು ಬರುತ್ತದೆ. ಒಂದು ಕಟ್ಟಡ ಕುಸಿದಾಗ ಅದರ ಅಡಿಯಲ್ಲಿ ಆರು ತಿಂಗಳ ಮಗು ಕೆಲವು ಗಂಟೆಗಳು ಉರುಳಿದರೂ ನಗುತ್ತಾ ಮತ್ತು ಸುರಕ್ಷಿತವಾಗಿತ್ತು. ಇನ್ನೊಂದು ಸ್ಥಳದಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಗೋಮಾತೆಯ ಎಚ್ಚರಿಕೆಯಿಂದ ಇಡೀ ಗ್ರಾಮವು ಅವಶೇಷಗಳ ಅಡಿಯಲ್ಲಿ ಸಿಲುಕಿದರೂ ಕುಟುಂಬವು ಸುರಕ್ಷಿತವಾಗಿತ್ತು. ಇಂತಹ ದೊಡ್ಡ-ಸಣ್ಣ, ಕಲ್ಪನೆಗೂ ಮೀರಿದ ಪ್ರಸಂಗಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎಂದಾದರೂಮ್ಮೆ ಅನುಭವಿಸುತ್ತಾರೆ; ಆದರೆ ಆ ಬಗ್ಗೆ ವಿಚಾರ ಮಾಡಲಾಗುವುದಿಲ್ಲ.

ಭಾರತದ ಎಲ್ಲಾ ಸಂತರು ತಮ್ಮ ಚರಿತ್ರೆಯ ಮೂಲಕ ಭಗವಂತನ ಅಸ್ತಿತ್ವದ ಅನೇಕ ಉದಾಹರಣೆಗಳನ್ನು ನೀಡಿ ಇಲ್ಲಿ ಭಾವಭಕ್ತಿಯ ಬೀಜವನ್ನು ಬಿತ್ತಿದ್ದಾರೆ. ಇದರಿಂದ ಜೀವನ ಸುಗಮವಾಗಿದೆ. ಭಗವಂತನ ಬಗ್ಗೆ ಸಂತರಿಗಿರುವ ನಿಷ್ಠೆ, ಪ್ರೀತಿ, ದೃಢ ನಂಬಿಕೆಯಿಂದಾಗಿ ಭಗವಂತನು ಅವರ ಮೊರೆಗೆ ‘ಓ’ಗೊಡಲೇಬೇಕಾಗುತ್ತದೆ. ಈಗ ಕಲಿಯುಗಾಂತರ್ಗತ ಕಲಿಯುಗವು ನಡೆಯುತ್ತಿದೆ. ಅನೇಕ ಸಂತರು, ಭಾರತೀಯ ಮತ್ತು ದೇಶಿ-ವಿದೇಶಿ ಭವಿಷ್ಯಕಾರರು ಮಾಡಿದ ಭವಿಷ್ಯವಾಣಿಗನುಸಾರ ಜಗತ್ತು ಮೂರನೇ ಮಹಾಯುದ್ಧದ ಹೊಸ್ತಿಲಿನಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಭಗವಂತನು ಮಾತ್ರ ರಕ್ಷಿಸಬಲ್ಲನು. ಇಡೀ ವಿಮಾನವು ಭಸ್ಮವಾದರೂ ಕಾಗದದ ಭಗವದ್ಗೀತೆ ಸುರಕ್ಷಿತವಾಗಿರುವುದು, ಇದು ಭಗವಂತನು ಭಕ್ತರಿಗೆ ನೀಡಿದ ತನ್ನ ಅಸ್ತಿತ್ವದ ಅನುಭೂತಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ಆಪತ್ಕಾಲದಲ್ಲಿ ನಮ್ಮನ್ನು ರಕ್ಷಿಸುವ ಭಗವದ್ಭಕ್ತಿಯ ಮಹತ್ವವನ್ನು ಎಲ್ಲರೂ ಗಮನಕ್ಕೆ ತೆಗೆದುಕೊಳ್ಳಬೇಕು !

– ಸೌ. ಸ್ನೇಹಾ ತಾಮ್ಹಣಕರ್, ರತ್ನಾಗಿರಿ