ಸ್ವಾತಂತ್ರ ಸಿಕ್ಕಿದಾಗಿನಿಂದ ನಿರಂತರ ಭಾರತದ ಮೇಲೆ ಪಾಕಿಸ್ತಾನದಿಂದಾಗುತ್ತಿರುವ ದಬ್ಬಾಳಿಕೆ !

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವಿದೆ. ೧೯೪೭ ರಿಂದ ಎರಡೂ ನೆರೆಯ ರಾಷ್ಟ್ರಗಳ ನಡುವೆ ಅನೇಕ ಯುದ್ಧಗಳು ಮತ್ತು ಸಂಘರ್ಷಗಳು ನಡೆದಿವೆ; ಆದರೆ ಈಗ ನಡೆಯುತ್ತಿರುವ ಪಹಲ್ಗಾಮ ಸಂಘರ್ಷ ಕೇವಲ ೪ ದಿನಗಳು, ಅಂದರೆ ೯೬ ಗಂಟೆಗಳ ಕಾಲ ನಡೆಯಿತು. ಇದು ಅತಿ ಕಡಿಮೆ ಅವಧಿಯ ಹೋರಾಟವಾಗಿತ್ತು. ಎರಡೂ ದೇಶಗಳು ಇಷ್ಟು ಬೇಗ ಸಂಘರ್ಷವನ್ನು ನಿಲ್ಲಿಸಲು ಒಪ್ಪಿಕೊಂಡಾಗ ಇದು ಸಂಭವಿಸಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ೪ ಯುದ್ಧಗಳು ಎಷ್ಟು ಕಾಲ ನಡೆದವು ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ೧೯೪೭ ರಿಂದ ಭಾರತ ಮತ್ತು ಪಾಕಿಸ್ತಾನದಲ್ಲಿ ೪ ದೊಡ್ಡ ಯುದ್ಧಗಳು, ಹಾಗೆಯೇ ಕೆಲವು ದೊಡ್ಡ ಸೇನಾ ಸಂಘರ್ಷಗಳು ಮತ್ತು ಕಾರ್ಯಾಚರಣೆಗಳು ನಡೆದಿವೆ. ಸರ್ಜಿಕಲ್ ಸ್ಟ್ರೈಕ್ (ಸೈನ್ಯವು ತಾತ್ಕಾಲಿಕವಾಗಿ ನಡೆಸಿದ ಕಾರ್ಯಾಚರಣೆ) ಯಾವಾಗಲೂ ಕೆಲವು ಗಂಟೆಗಳ ವರೆಗೆ ಇರುತ್ತದೆ; ಆದರೆ ಯುದ್ಧಗಳು ಮತ್ತು ಸಂಘರ್ಷಗಳು ಯಾವಾಗಲೂ ದೀರ್ಘಕಾಲ ಉಳಿಯುತ್ತವೆ ಮತ್ತು ಅವುಗಳ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಇದರ ನಂತರ ಒಂದು ಒಪ್ಪಂದವಾಯಿತು. ಇದರರ್ಥ ಪ್ರತಿಯೊಂದು ಯುದ್ಧವು ಖಂಡಿತ ವಾಗಿಯೂ ಕೆಲವು ಪರಿಣಾಮಗಳನ್ನು ಬೀರಿತು.

೧. ಮೊದಲ ಯುದ್ಧ ೧೫ ತಿಂಗಳುಗಳು

ಮೊದಲ ಯುದ್ಧವು ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ೧೯೪೭-೪೮ ರಲ್ಲಿ ನಡೆಯಿತು. ಅದು ಅಕ್ಟೋಬರ್ ೧೯೪೭ ರಲ್ಲಿ ಪ್ರಾರಂಭವಾಯಿತು ಮತ್ತು ಜನವರಿ ೧೯೪೯ ರ ವರೆಗೆ ಆಗಾಗ ನಡೆಯುತ್ತಲೇ ಇತ್ತು. ಪಾಕಿಸ್ತಾನಿ ಸೈನ್ಯವು ನೇರವಾಗಿ ಇದರಲ್ಲಿ ಭಾಗವಹಿಸಲಿಲ್ಲ; ಆದರೆ ಅದರ ಕಡೆಯಿಂದ ಭಯೋತ್ಪಾದಕರಿಗೆ ತರಬೇತಿ ನೀಡಲಾಗಿತ್ತು. ಅವರು ಪಾಕಿಸ್ತಾನ ಬೆಂಬಲಿತ ಬುಡಕಟ್ಟು ಆಕ್ರಮಣಕಾರರು ಎಂದು ಹೇಳಲಾಯಿತು. ಅವರ ಆಕ್ರಮಣಗಳ ನಂತರವೇ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಲು ಸಿದ್ಧರಾದರು. ಈ ಯುದ್ಧವು ೧೫ ತಿಂಗಳುಗಳ ಕಾಲ ನಡೆಯಿತು. ಇದರ ಪರಿಣಾಮವಾಗಿ ಕಾಶ್ಮೀರದ ಒಂದು ಭಾಗವು ಪಾಕಿಸ್ತಾನದ ವಶಕ್ಕೆ ಹೋಯಿತು. ಅದನ್ನು ಪಾಕ್ ಆಕ್ರಮಿತ ಕಾಶ್ಮೀರ, ಅಂದರೆ ಪಿಒಕೆ ಎಂದು ಕರೆಯಲಾಗುತ್ತದೆ. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ಕದನ ವಿರಾಮವಾಯಿತು.

೨. ಎರಡನೇ ಯುದ್ಧ ೨೨ ದಿನಗಳು

೧೯೬೫ ರ ಎರಡನೇ ಭಾರತ-ಪಾಕಿಸ್ತಾನ ಯುದ್ಧವು ೫ ಆಗಸ್ಟ್ ೧೯೬೫ ರಂದು ಪ್ರಾರಂಭವಾಯಿತು ಮತ್ತು ೨೩ ಸೆಪ್ಟೆಂಬರ್ ೧೯೬೫ ರ ವರೆಗೆ ನಡೆಯಿತು. ಇದರಲ್ಲಿ ಭಾರತೀಯ ಸೈನ್ಯಕ್ಕೆ ದೊಡ್ಡ ಲಾಭವಾಯಿತು. ಈ ಯುದ್ಧವು ಸುಮಾರು ೨೨ ದಿನಗಳ ಕಾಲ ನಡೆಯಿತು. ‘ಆಪರೇಶನ್ ಜಿಬ್ರಾಲ್ಟರ್ ಮೂಲಕ ಪಾಕಿಸ್ತಾನವು ಮೊದಲು ಕಾಶ್ಮೀರಕ್ಕೆ ನುಸುಳಿತು ಮತ್ತು ನಂತರ ನೇರ ಯುದ್ಧ ಪ್ರಾರಂಭವಾಯಿತು. ಈ ಯುದ್ಧದಲ್ಲಿ ಭಾರತದ ಪ್ರಾಬಲ್ಯವಿತ್ತು; ಆದರೆ ಕದನ ವಿರಾಮವಾಯಿತು. ಜನವರಿ ೧೯೬೬ ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರು ಒಂದು ಒಪ್ಪಂದಕ್ಕೆ ಸಹಿ ಹಾಕಲು ತಾಷ್ಕಂದಗೆ ತೆರಳಿದರು. ನಂತರ ಎರಡೂ ದೇಶಗಳ ನಡುವಿನ ಯುದ್ಧದ ಹಿಂದಿನ ಸ್ಥಿತಿ ಮರುಸ್ಥಾಪನೆಯಾಯಿತು.

೩. ಮೂರನೇ ಯುದ್ಧ ೧೩ ದಿನಗಳು

೧೯೭೧ ರ ಮೂರನೇ ಭಾರತ-ಪಾಕಿಸ್ತಾನ ಯುದ್ಧವು ೩ ಡಿಸೆಂಬರ್ ೧೯೭೧ ರಂದು ಪ್ರಾರಂಭವಾಯಿತು. ಇದು ೧೬ ಡಿಸೆಂಬರ್ ೧೯೭೧ ರ ವರೆಗೆ ನಡೆಯಿತು. ಇದರಿಂದ ಪಾಕಿಸ್ತಾನವು ೨ ಭಾಗಗಳಾಗಿ ವಿಭಜನೆಯಾಯಿತು. ಪೂರ್ವ ಪಾಕಿಸ್ತಾನ ಭಾಗವು ಬಾಂಗ್ಲಾದೇಶ ಎಂಬ ಹೊಸ ದೇಶವಾಯಿತು. ಭಾರತವು ಹೋರಾಡಿದ ಈ ಯುದ್ಧದ ಪರಿಣಾಮದಿಂದ ಪಾಕಿಸ್ತಾನವು ಬಹುದೊಡ್ಡ ಸೋಲನ್ನು ಅನುಭವಿಸಬೇಕಾಯಿತು. ಪಾಕಿಸ್ತಾನವು ಐತಿಹಾಸಿಕ ಸೋಲನ್ನು ಅನುಭವಿಸಿತು. ೯೩ ಸಾವಿರ ಪಾಕಿಸ್ತಾನಿ ಸೈನಿಕರು ಶರಣಾದರು. ಯುದ್ಧದ ಕೆಲವು ತಿಂಗಳ ನಂತರ ಶಿಮ್ಲಾದಲ್ಲಿ ಒಂದು ಒಪ್ಪಂದವಾಯಿತು. ಇದರಲ್ಲಿ ನಿಯಂತ್ರಣ ರೇಖೆಯ ಕುರಿತು ಒಂದು ಒಪ್ಪಂದವಾಯಿತು ಮತ್ತು ಭಾರತವು ಪಾಕಿಸ್ತಾನದಿಂದ ವಶಪಡಿಸಿಕೊಂಡಿದ್ದ ದೊಡ್ಡ ಭೂಭಾಗವನ್ನು ಹಿಂತಿರುಗಿಸಿತು.

೪. ೧೯೯೯ ರ ಕಾರ್ಗಿಲ್ ಯುದ್ಧ: ೨ ತಿಂಗಳು ೨೦ ದಿನಗಳು

ಕಾರ್ಗಿಲ್ ಯುದ್ಧವು ಸುಮಾರು ೨ ತಿಂಗಳು ೨೦ ದಿನಗಳ ಕಾಲ ನಡೆಯಿತು. ಆಗ ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿದ್ದರು. ಈ ಯುದ್ಧವು ಮೇ ೧೯೯೯ ರಲ್ಲಿ ಪ್ರಾರಂಭ ವಾಯಿತು ಮತ್ತು ೨೬ ಜುಲೈ ೧೯೯೯ ರ ವರೆಗೆ ನಡೆಯಿತು. ಇದಕ್ಕೆ ಕಾರಣವೆಂದರೆ ಭಾರತೀಯ ಗಡಿಯೊಳಗಿನ ಕಾರ್ಗಿಲ್ ಬೆಟ್ಟ ಗಳಲ್ಲಿ ಪಾಕಿಸ್ತಾನಿ ಸೈನ್ಯ ಮತ್ತು ಭಯೋತ್ಪಾದಕರ ನುಸುಳುವಿಕೆ. ಭಾರತವು ಈ ಯುದ್ಧದಲ್ಲಿ ಸೇನೆ ವಿಜಯ ಸಾಧಿಸಿತು. ಭಾರತವು ಪಾಕಿಸ್ತಾನದ ವಶದಿಂದ ತನ್ನ ಪ್ರದೇಶವನ್ನು ಮುಕ್ತಗೊಳಿಸಿತು. ಇದರಿಂದ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವನ್ನು ಎದುರಿಸ ಬೇಕಾಯಿತು. ಪಾಕಿಸ್ತಾನದ ಅಂದಿನ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಅವರು ಪಾಕಿಸ್ತಾನ ದಲ್ಲಿ ಮಿಲಿಟರಿ ದಂಗೆಯನ್ನು ನಡೆಸಿ ನವಾಜ್ ಷರೀಫ್ ಅವರ ಸರಕಾರವನ್ನು ಉರುಳಿಸಿದರು.

೫. ಆಪರೇಷನ್ ಸಿಂದೂರ್: ೪ ದಿನಗಳು

೨೨ ಏಪ್ರಿಲ್ ೨೦೨೫ ರಂದು ಪಹಲ್ಗಾಮ್‌ನಲ್ಲಿ ಉಗ್ರರು ೨೮ ಭಾರತೀಯ ಪ್ರವಾಸಿಗರನ್ನು ಹತ್ಯೆ ಮಾಡಿದ ನಂತರ ಪ್ರಸ್ತುತ ಸಂಘರ್ಷ ಪ್ರಾರಂಭವಾಯಿತು. ೭ ಮೇ ೨೦೨೫ ರಂದು ಭಾರತವು ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ನಡೆಸಿತು. ನಂತರ ಪಾಕಿಸ್ತಾನವು ಭಾರತದ ಮೇಲೆ ದಾಳಿ ಪ್ರಾರಂಭಿಸಿತು. ಭಾರತೀಯ ಗಡಿಯೊಳಗೆ ಕ್ಷಿಪಣಿಗಳನ್ನು ಹಾರಿಸಲಾಯಿತು. ಡ್ರೋನ್‌ಗಳನ್ನು ಬಿಡಲಾಯಿತು. ನಿಯಂತ್ರಣ ರೇಖೆಯಲ್ಲಿ ಭಾರಿ ಗುಂಡಿನ ಚಕಮಕಿ ನಡೆಯಿತು. ಭಾರತವು ಸಹ ಇದಕ್ಕೆ ತೀವ್ರ ಪ್ರತ್ಯುತ್ತರ ನೀಡಿತು. ಇದು ಮುಂದಿನ ೪ ದಿನಗಳ ಕಾಲ ನಡೆಯಿತು. ೧೦ ಮೇ ೨೦೨೫ ರಂದು ಸಂಜೆ ೫ ಗಂಟೆಗೆ ಎರಡೂ ದೇಶಗಳ ನಡುವೆ ಕದನ ವಿರಾಮವನ್ನು ಘೋಷಿಸಲಾಯಿತು.

೬. ಇತರ ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳು

ಅ. ೧೯೬೫ ರ ಕಚ್ಛ ರಣಸಂಘರ್ಷ : ಏಪ್ರಿಲ್ ೧೯೬೫ ರಲ್ಲಿ ಗುಜರಾತಿನ ಕಚ್ಛನಲ್ಲಿ ಗಡಿ ಸಂಘರ್ಷ. ಈ ಸಂಘರ್ಷ ಸುಮಾರು ೧ ರಿಂದ ೨ ವಾರಗಳ ಕಾಲ ನಡೆಯಿತು.

ಆ. ೨೦೦೧-೨೦೦೨ ಆಪರೇಶನ್ ಪರಾಕ್ರಮ : ಸಂಸತ್ತಿನ ಮೇಲಿನ ದಾಳಿಯ ನಂತರ (೧೩ ಡಿಸೆಂಬರ್ ೨೦೦೧) ಎರಡೂ ದೇಶಗಳ ಸೈನ್ಯವು ೧೦ ತಿಂಗಳ ಕಾಲ ಭಾರತ-ಪಾಕಿಸ್ತಾನ ಗಡಿಯಲ್ಲಿ ಮುಖಾಮುಖಿಯಾಗಿ ನಿಯೋಜಿಸಲ್ಪಟ್ಟಿತು. ಯುದ್ಧ ಪ್ರಾರಂಭವಾಗಲಿಲ್ಲ; ಆದರೆ ಉದ್ವಿಗ್ನತೆಯಿಂದ ಕೂಡಿದ ಮಿಲಿಟರಿ ಚಟುವಟಿಕೆ ಮುಂದುವರೆಯಿತು.

ಇ. ಉರಿ ಸರ್ಜಿಕಲ್ ಸ್ಟ್ರೈಕ್ (೨೦೧೬) : ೧೮ ಸೆಪ್ಟೆಂಬರ್ ೨೦೧೬ ರಂದು ಉರಿ ದಾಳಿಗೆ ಪ್ರತಿಕ್ರಿಯೆಯಾಗಿ ಸೆಪ್ಟೆಂಬರ್ ೨೯ ಮತ್ತು ೩೦, ೨೦೧೬ ರಂದು ಭಾರತೀಯ ಸೈನ್ಯವು ನಿಯಂತ್ರಣ ರೇಖೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಇದು ಒಂದು ರಾತ್ರಿಯಲ್ಲಿ ಕೆಲವು ಗಂಟೆಗಳ ಕಾರ್ಯಾಚರಣೆಯಾಗಿತ್ತು.

ಈ. ಬಾಲಾಕೋಟ್ ಏರ್ ಸ್ಟ್ರೈಕ್ (ವಾಯುದಾಳಿ) (೨೦೧೯) : ೧೪ ಫೆಬ್ರವರಿ ೨೦೧೯ ರಂದು ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯ ನಂತರ ಭಾರತೀಯ ವಾಯುಸೇನೆಯು ೨೬ ಫೆಬ್ರವರಿ ೨೦೧೯ ರಂದು ವಾಯುದಾಳಿ ನಡೆಸಿತು. ಇದು ಕೆಲವು ನಿಮಿಷಗಳ ವಾಯುದಾಳಿಯಾಗಿತ್ತು.
(ಆಧಾರ: ವಿವಿಧ ಜಾಲತಾಣಗಳು)