ಯುದ್ಧ ಅಥವಾ ಗಡಿಯ ಕಾರ್ಯಾಚರಣೆ ಕೇವಲ ಸೇನೆಯ ಶಕ್ತಿಯ ಮೇಲೆ ಅವಲಂಬಿಸಿರುವುದಿಲ್ಲ, ಅದರ ನಿಜವಾದ ಶಕ್ತಿ ಜನರ ಬೆಂಬಲ ಮತ್ತು ರಾಷ್ಟ್ರಭಾವನೆ ಯಿಂದ ಪ್ರಭಾವಿತರಾದ ಕ್ರಿಯಾಶೀಲ ಜನರಿಂದ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಒಗ್ಗಟ್ಟನ್ನು ಉಳಿಸಿಡುವುದು ಬಹಳ ಮಹತ್ವದ್ದಾಗಿದೆ. ೧೪೦ ಕೋಟಿ ಭಾರತೀಯರು ಭಾರತೀಯ ಸೇನೆಯ ಬೆಂಬಲಕ್ಕೆ ಒಗ್ಗಟ್ಟಿನಿಂದ ನಿಂತಿದ್ದರೂ, ಕೆಲವು ವಿರೋಧಿ ಪಕ್ಷಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಪ್ರಶ್ನೆ ಗಳನ್ನು ಎತ್ತಿದರು. ‘ಭಯೋತ್ಪಾದಕರು ಧರ್ಮವನ್ನು ಕೇಳಿ ಗುಂಡು ಹಾರಿಸಲಿಲ್ಲ’, ಎಂಬ ನಿಲುವನ್ನು ಕೆಲವರು ತೆಗೆದುಕೊಂಡರು. ಭಾರತವು ೯ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿ ‘ಆಪರೇಶನ್ ಸಿಂದೂರ’ಅನ್ನು ಯಶಸ್ವಿಗೊಳಿಸಿತು. ಈ ಕಾರ್ಯಾಚರಣೆಯಲ್ಲಿ ೧೦೦ ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು. ಪಾಕಿಸ್ತಾನವು ಭಾರತದ ಮೇಲೆ ಪ್ರಯೋಗಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಿತು. ಇದರಲ್ಲಿ ಪಾಕಿಸ್ತಾನದ ವಾಯುನೆಲೆಗಳು ಮತ್ತು ಮದ್ದುಗುಂಡುಗಳ ಉಗ್ರಾಣ ಗಳಿಗೆ ಭಾರಿ ಹಾನಿಯಾಯಿತು. ಇದೇ ಕಾರಣಕ್ಕೆ ಪಾಕಿಸ್ತಾನವು ಭಾರತದ ಬಳಿ ಕದನವಿರಾಮಕ್ಕೆ ಮನವಿ ಮಾಡಿತು ಮತ್ತು ಅದು ಒಪ್ಪಿಗೆ ಪಡೆಯಿತು. ಕೆಲವು ಜನರಿಗೆ ಭಾರತ-ಪಾಕ್ ಯುದ್ಧ ಬೇಕಾಗಿತ್ತು ಮತ್ತು ಅನೇಕರು ‘ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಿರಿ’ ಎಂದು ಒತ್ತಾಯಿಸಿದ್ದರು. ಕೆಲವರು ‘ದೇಶವು ಗೆಲ್ಲದ ಯುದ್ಧದ ವಿಜಯವನ್ನು ಆಚರಿಸುತ್ತಿದೆ’, ಎಂಬ ಮೂರ್ಖತನದ ಮಾತುಗಳನ್ನಾಡಿದರು. ಪಾಕಿಸ್ತಾನವು ತನಗಾದ ಹಾನಿಯ ಬಗ್ಗೆ ವಿವರವಾದ ಪಟ್ಟಿಯನ್ನೂ ಪ್ರಕಟಿಸಿತು. ಭಾರತದ ಉದ್ದೇಶ ಈಡೇರಿತು; ಆದರೆ ಭಾರತ-ಪಾಕ್ ಯುದ್ಧದ ದಾರಿಯನ್ನು ಕಾಯುತ್ತಿರುವ ವಿರೋಧಕರ ಉದ್ದೇಶ ಈಡೇರದ ಕಾರಣ, ಅವರು ಕೇಂದ್ರ ಸರಕಾರದ ವಿರುದ್ಧ ಟೀಕೆಗಳ ಸುರಿಮಳೆಗೈದರು.

೧. ದೇಶಹಿತದ ಬಗ್ಗೆ ರಾಜಕೀಯ ಟೀಕೆ : ಕೆಲವು ಪ್ರಶ್ನೆಗಳು
ಭಾರತ ಸರಕಾರವು ಸರ್ವಪಕ್ಷ ನಿಯೋಗಗಳನ್ನು ಜಗತ್ತಿನಾದ್ಯಂತ ಕಳುಹಿಸಲು ನಿರ್ಧರಿಸಿದ್ದರೂ ಕೆಲವು ರಾಜಕೀಯ ಪಕ್ಷಗಳು ‘ಪುರಾವೆ ಒದಗಿಸಿ, ಪಾರದರ್ಶಕತೆ ಎಲ್ಲಿದೆ ?’, ಎಂಬಂತಹ ಬೇಡಿಕೆಗಳನ್ನು ಮಾಡುತ್ತಿರುವುದು ಕಂಡು ಬರುತ್ತದೆ. ದೇಶದ ಹಿತಾಸಕ್ತಿ ವಿಷಯದಲ್ಲಿ ಕಡಿಮೆ ಪಕ್ಷ ಎಲ್ಲ ಪಕ್ಷಗಳ ಒಗ್ಗಟ್ಟು ಅಪೇಕ್ಷಿತವಿರುತ್ತದೆ. ಅನೇಕರು ಕೇಳುತ್ತಾರೆ, ‘ನಾವು ಎಷ್ಟು ವಿಮಾನಗಳನ್ನು ಕಳೆದುಕೊಂಡೆವು ?’; ಆದರೆ ಅವರು ‘ಈ ಯುದ್ಧದಲ್ಲಿ ಭಾರತೀಯ ಸೇನೆಯು ಎಷ್ಟು ಪಾಕಿಸ್ತಾನಿ ವಿಮಾನಗಳನ್ನು ಹೊಡೆದುರುಳಿಸಿತು ಅಥವಾ ಎಷ್ಟು ವಿಮಾನ ನಿಲ್ದಾಣಗಳನ್ನು ನಾಶ ಮಾಡಿತು ?’ ಎಂದು ಎಂದಿಗೂ ಕೇಳುವುದಿಲ್ಲ. ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯ ಬಗ್ಗೆ ಕೆಲವರು, ‘ಸಹೋದರರ ನಡುವೆ ಜಗಳ ಹಚ್ಚಲು ಈ ಘಟನೆ ನಡೆದಿದೆ’ ಎಂದು ಹೇಳಿದರು. ಆದರೆ ‘ಯಾರು ಮತ್ತು ಯಾರ ಸಹೋದರರು ?’ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಇಂತಹ ಭಯೋತ್ಪಾದಕ ‘ಸಹೋದರ’ರಿಗೆ ನಾವು ಇನ್ನೆಷ್ಟು ಕಾಲ ಆಶ್ರಯ ನೀಡಬೇಕು ? ಕೇವಲ ಹಿಂದೂ ಎಂಬ ಕಾರಣದಿಂದ, ೨೬ ಹಿಂದೂಗಳನ್ನು ಅವರ ಪತ್ನಿ ಮತ್ತು ಚಿಕ್ಕ ಮಕ್ಕಳ ಮುಂದೆಯೇ ಭಯೋತ್ಪಾದಕರು ಕೊಂದರು. ಆ ಪುರುಷರು ಮುಸಲ್ಮಾನರೇ ? ಎಂದು ಖಚಿತಪಡಿಸಿಕೊಳ್ಳಲು ಅವರ ಪ್ಯಾಂಟುಗಳನ್ನು ಇಳಿಸಲಾಯಿತು. ಆದರೂ ಕೆಲವು ನಾಯಕರು, “ಭಯೋತ್ಪಾದಕರಿಗೆ ಧರ್ಮವನ್ನು ಕೇಳಿ ಕೊಲ್ಲುವಷ್ಟು ಸಮಯವಿರುತ್ತದೆಯೇ ? ಎಂದು ಕೇಳಿದರು. ಇದರರ್ಥ ‘ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳು ಸುಳ್ಳು ಹೇಳುತ್ತಿವೆ. ಸಂತ್ರಸ್ತರನ್ನು ಸುಳ್ಳುಗಾರರೆಂದು ಬಿಂಬಿಸಿ, ಭಯೋತ್ಪಾದಕರು ‘ಮತಾಂಧ’ರಾಗಿರಲಿಲ್ಲ ಎಂದು ಹೇಳಲು ಏಕೆ ಪ್ರಯತ್ನಿಸಿದರು ? ಓರ್ವ ಮುಖ್ಯಮಂತ್ರಿಗಳು ‘ಪಾಕಿಸ್ತಾನದೊಂದಿಗೆ ಯುದ್ಧ ಬೇಡ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪಾಕಿಸ್ತಾನದ ಮೇಲೆ ಇಷ್ಟೊಂದು ಪ್ರೀತಿಯೇಕೆ ? ಹಾಗೆಯೇ ‘ಆ ಭಯೋತ್ಪಾದಕರು ಮಹಿಳೆಯರನ್ನು ಸ್ಪರ್ಶಿಸಲೂ ಇಲ್ಲ’ ಎಂದೂ ಕೆಲವರು ಹೇಳಿದರು. ಭಯೋತ್ಪಾದಕರು ಮಹಿಳೆಯರನ್ನು ಕೊಲ್ಲದೆ, ಕೇವಲ ಹಿಂದೂ ಪುರುಷರನ್ನು ಕೊಂದಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರಬೇಕೇ ? ಮತಗಳ ಲಾಲಸೆಗಾಗಿ ಕೆಲವು ರಾಜಕೀಯ ನಾಯಕರು ಬಾಯಿಗೆ ಬಂದ ಹೇಳಿಕೆ ನೀಡಬಹುದೇ ? ಈ ಘಟನೆಯ ನಂತರ ಒಂದು ವಿಷಯವಂತೂ ಸಾಬೀತಾಯಿತು, ದೇಶದ ಶತ್ರು ಗಡಿಯಾಚೆ ಮಾತ್ರವಲ್ಲ, ಭಾರತದ ಒಳಗಡೆಯೂ ಹೊಂಚು ಹಾಕಿ ಕುಳಿತಿದ್ದಾರೆ. ಸಮಾಜಕಾರಣ, ರಾಜಕಾರಣ ಮತ್ತು ಪ್ರಸಾರ ಮಾಧ್ಯಮಗಳಲ್ಲಿರುವ ದೇಶದಲ್ಲಿನ ಶತ್ರುಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವ ಈ ವಿಷಕಾರಿ ಹಾವುಗಳನ್ನು ಏನು ಮಾಡಬೇಕು ? ಎನ್ನುವುದೇ ಪ್ರಶ್ನೆ.
೨. ಆಂತರಿಕ ಶತ್ರುಗಳ ಮೇಲೆ ಕಠಿಣ ಕ್ರಮದ ಅವಶ್ಯಕತೆ
ಗಡಿಯಾಚೆ ಮತ್ತು ದೇಶದೊಳಗೆ ಗೃಹಯುದ್ಧವನ್ನು ಪ್ರಚೋದಿಸುವ ಇಂತಹವರ ಮೇಲೆ ಈಗ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಈ ದೇಶದ್ರೋಹಿಗಳನ್ನು ಮಟ್ಟ ಹಾಕಲೇಬೇಕು.
೩. ಭಾರತ ವಿರೋಧಿ ಪ್ರಚಾರ

ಭಾರತದಲ್ಲಿ ನಡೆಯುತ್ತಿರುವ ಭಾರತ-ವಿರೋಧಿ ಅಥವಾ ದೇಶದ್ರೋಹಿ ಪ್ರಚಾರವನ್ನು ಪಾಕಿಸ್ತಾನ ಮತ್ತು ಚೀನಾ ದೇಶಗಳು ಮಾಹಿತಿ ಯುದ್ಧದಲ್ಲಿ (Iಟಿಜಿoಡಿmಚಿಣioಟಿ Wಚಿಡಿಜಿಚಿಡಿe) ವಿಜಯ ಸಾಧಿಸಲು ಪೂರ್ಣವಾಗಿ ಬಳಸಿಕೊಂಡಿವೆ. ಪಾಕಿಸ್ತಾನಿ ಸೇನೆಯ ವಕ್ತಾರರೊಬ್ಬರು ಒಂದು ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಒಂದು ವಿಡಿಯೋವನ್ನು ತೋರಿಸಿದರು. ಅದರಲ್ಲಿ ಭಾರತದ ಪ್ರಸಿದ್ಧ ಪತ್ರಕರ್ತ ಕರಣ ಥಾಪರ್ ಇವರು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರ ಸಂದರ್ಶನವನ್ನು ನಡೆಸುತ್ತಿದ್ದರು. ಈ ಸಂದರ್ಶನದಲ್ಲಿ ಸತ್ಯಪಾಲ ಮಲಿಕ್ ಅವರು, ‘ಪುಲ್ವಾಮಾದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಅಖPಈ) ಸೈನಿಕರನ್ನು ಪಾಕಿಸ್ತಾನಿ ಭಯೋತ್ಪಾದಕರಲ್ಲ, ಬದಲಾಗಿ ಭಾರತವೇ ಕೊಂದು ಪಾಕಿಸ್ತಾನದ ಮೇಲೆ ಸುಳ್ಳು ಆರೋಪ ಮಾಡಿದೆ’ ಎಂದು ಹೇಳಿದ್ದರು. ಪುಲ್ವಾಮಾ ದಾಳಿ ನಡೆದಾಗ ಸತ್ಯಪಾಲ ಮಲಿಕ್ ಇವರು ಕಾಶ್ಮೀರದ ರಾಜ್ಯಪಾಲ ರಾಗಿದ್ದರಿಂದ ಅವರ ಹೇಳಿಕೆಗೆ ಮಹತ್ವ ನೀಡಲಾಗುತ್ತದೆ. ಪಾಕಿಸ್ತಾನವು ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ೧೦೦ ಕ್ಕೂ ಹೆಚ್ಚು ಭಾರತೀಯರ ವಿಡಿಯೋಗಳನ್ನು ತೋರಿಸಿತು, ಇದರಲ್ಲಿ ಈ ಭಾರತೀಯರು ಭಾರತ-ವಿರೋಧಿ ಭಾಷೆಯನ್ನು ಬಳಸುತ್ತಿದ್ದರು ಮತ್ತು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದರು. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಈ ಭಾರತೀಯರು ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ‘ಪಾಕಿಸ್ತಾನದ ವಕ್ತಾರ’ರಾಗಿ ಕೆಲಸ ಮಾಡುತ್ತಿದ್ದರು ಮತ್ತು ಭಾರತ ಅಥವಾ ಭಾರತೀಯ ವಕ್ತಾರರು ನೀಡಿದ ಮಾಹಿತಿಯು ತಪ್ಪಾಗಿತ್ತು ಹಾಗೂ ಪಾಕಿಸ್ತಾನ ಹೇಳುತ್ತಿರುವುದು ಸರಿ ಇತ್ತು ಎಂದು ಸಾಬೀತುಪಡಿಸುತ್ತಿದ್ದರು.
೪. ಪಾಕಿಸ್ತಾನಕ್ಕೆ ಸಿಕ್ಕ ‘ಮಾನಸಿಕ ವಿಜಯ’
ಈ ಯುದ್ಧದಲ್ಲಿ ಪಾಕಿಸ್ತಾನವು ದೊಡ್ಡ ಮಾನಸಿಕ ವಿಜಯವನ್ನು ಸಾಧಿಸಿತೇ ? ಪಾಕಿಸ್ತಾನವು ಜಗತ್ತಿನ ಗಮನವನ್ನು ಭಯೋತ್ಪಾದನೆ ಅಥವಾ ಭಯೋತ್ಪಾದಕ ದಾಳಿಗಳಿಂದ ಬೇರೆಡೆಗೆ ಸೆಳೆದು ಮತ್ತು ‘ಭಾರತ ತನ್ನ ನಾಗರಿಕರನ್ನು ಕಾಶ್ಮೀರದಲ್ಲಿ ರಕ್ಷಿಸಲು ವಿಫಲವಾಗಿದೆ. ಪಾಕಿಸ್ತಾನವು ಭಾರತದ ಬಹಳಷ್ಟು ಸೇನಾ ಹಾನಿಯನ್ನುಂಟು ಮಾಡಿದೆ. ಯುದ್ಧದಲ್ಲಿ ಭಾರತವು ಸೋತಿದೆ ಮತ್ತು ಪಾಕಿಸ್ತಾನದ ಸೇನೆಯು ಉತ್ತಮ ಪ್ರದರ್ಶನ ನೀಡಿದೆ’ ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಿತು. ಇದರ ಪರಿಣಾಮವೆಂದು, ಪಾಶ್ಚಿಮಾತ್ಯ ಮಾಧ್ಯಮಗಳು ಬರೆದ ಲೇಖನಗಳು ಅಥವಾ ಸಂಪಾದಕೀಯಗಳು ಹೆಚ್ಚಿನ ಬಾರಿ ಭಾರತದ ವಿರುದ್ಧ ಮತ್ತು ಪಾಕಿಸ್ತಾನದ ಪರವಾಗಿದ್ದವು.
ವಾಸ್ತವದಲ್ಲಿ, ಪಾಶ್ಚಿಮಾತ್ಯ ಮಾಧ್ಯಮಗಳು ಭಾರತವನ್ನು ಬೆಂಬಲಿಸಬೇಕಿತ್ತು; ಏಕೆಂದರೆ ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ; ಆದರೆ, ಅವರು ‘ಪಾಕಿಸ್ತಾನಿ ಸೇನೆಯ ಕೈಗೊಂಬೆ ಯಾಗಿರುವ ಪಾಕಿಸ್ತಾನದ ವಾದವೇ ಸರಿ’ ಎಂದು ಹೇಳಿದರು. ಪಾಶ್ಚಿಮಾತ್ಯ ಮಾಧ್ಯಮಗಳು ಈ ರೀತಿಯ ಅಭಿಪ್ರಾಯವನ್ನು ರೂಪಿಸಲು, ಭಾರತದೊಳಗಿನ ಭಾರತೀಯರು ಮಾಡಿದ ದೇಶ-ವಿರೋಧಿ ಹೇಳಿಕೆಗಳನ್ನು ಪೂರ್ಣ ಬಳಸಿಕೊಂಡವು. ಸಂಕ್ಷಿಪ್ತವಾಗಿ, ಮಾಹಿತಿ ಯುದ್ಧದಲ್ಲಿ ಅಥವಾ ಮಾನಸಿಕ ಯುದ್ಧದಲ್ಲಿ ಭಾರತವು ಬಹಳಷ್ಟು ಹಿಂದೆ ಬಿದ್ದಿತು. ಪಾಕಿಸ್ತಾನವು ಈ ಮಾನಸಿಕ ಯುದ್ಧವನ್ನು ಗೆಲ್ಲಲು ಸಹಾಯ ಮಾಡಿದವರ ವಿರುದ್ಧ ದೇಶದೊಳಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಭಾರತೀಯರೇ ನಿರ್ಧರಿಸಬೇಕು.
೫. ದೇಶ-ವಿರೋಧಿ ಪ್ರಚಾರದ ಕಡಿವಾಣಕ್ಕೆ ಉಪಾಯಗಳು
ವಿದೇಶಿ ವಾರ್ತಾಪತ್ರಿಕೆಗಳಲ್ಲಿ ಭಾರತದ ವಿರುದ್ಧ ಬರೆಯುವ ಅನೇಕ ಪತ್ರಕರ್ತರನ್ನು ಗುರುತಿಸಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ, ಉದಾ. ಅವರನ್ನು ಭಾರತದಲ್ಲಿ ಬಹಿಷ್ಕರಿಸಬಹುದು. ಅವರಿಗೆ ಭಾರತಕ್ಕೆ ಬರಲು ‘ವೀಸಾ’ ನೀಡುವುದನ್ನು ನಿಲ್ಲಿಸಬಹುದು. ಅಷ್ಟೇ ಅಲ್ಲ, ಅವರು ಬರೆಯುವ ಪತ್ರಿಕೆಯ ಮೇಲೂ ಬಹಿಷ್ಕಾರ ಹಾಕಬಹುದು ಅಥವಾ ಅವುಗಳನ್ನು ಭಾರತದೊಳಗೆ ‘ಬ್ಲಾಕ್’ (ನಿರ್ಬಂಧ) ಮಾಡಬಹುದು. ‘ಆಪರೇಷನ್ ಸಿಂದೂರ’ ಮುಗಿದು ಹಲವು ದಿನಗಳಾಗಿವೆ; ಆದರೆ ಈಗಲೂ ಈ ಅಪಪ್ರಚಾರ ಯುದ್ಧ, ದುಷ್ಪ್ರಚಾರ ಯುದ್ಧ ಅಥವಾ ಮಾನಸಿಕ ಯುದ್ಧ ಮುಂದುವರಿದೇ ಇದೆ.
೬. ನಾಗರಿಕರಾಗಿ ನಮ್ಮ ಜವಾಬ್ದಾರಿ ಎಂದರೆ ‘ಮಾಹಿತಿ ಯೋಧ’ರಾಗಬೇಕು !
ಇಂತಹ ಯುದ್ಧದಲ್ಲಿ ದೇಶಭಕ್ತ ನಾಗರಿಕರು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಬಹುದು. ವಿದೇಶದಲ್ಲಿನ ಸಾಮಾಜಿಕ ಮಾಧ್ಯಮ ಗಳು, ಪ್ರಿಂಟ್ ಮಿಡಿಯಾ (ವಾರ್ತಾಪತ್ರಿಕೆಗಳು, ಮಾಸಿಕಗಳು) ಅಥವಾ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಮಾಧ್ಯಮಗಳಲ್ಲಿ ಯಾವಾಗೆಲ್ಲಾ ಭಾರತದ ವಿರುದ್ಧ ಏನಾದರೂ ಹೇಳಲಾಗು ತ್ತದೆಯೋ ಅಥವಾ ಬರೆಯಲಾಗುತ್ತದೆಯೋ, ಅದಕ್ಕೆ ಆಯಾ ಮಾಧ್ಯಮಗಳಲ್ಲೇ ತಕ್ಷಣವೇ ಪ್ರತ್ಯುತ್ತರ ನೀಡುವುದು ಅವಶ್ಯಕವಾಗಿದೆ. ಉದಾ, ‘ನ್ಯೂಯಾರ್ಕ್ ಟೈಮ್ಸ್’ ಒಂದು ಭಾರತ-ವಿರೋಧಿ ಲೇಖನವನ್ನು ಬರೆದರೆ, ‘ನ್ಯೂಯಾರ್ಕ್ ಟೈಮ್ಸ್’ಗೆ ಇ-ಮೆಲ್ ಕಳುಹಿಸಿ ಲೇಖನದಲ್ಲಿ ನೀಡಿದ ಮಾಹಿತಿಯನ್ನು ಖಂಡಿಸಬೇಕು ಮತ್ತು ಅವರು ಬರೆದ ಲೇಖನವು ಸಂಪೂರ್ಣ ತಪ್ಪಾಗಿದೆ ಎಂದು ತೋರಿಸಿಕೊಡಬೇಕು. ಅಂತಾರಾಷ್ಟ್ರೀಯ ಮಾಧ್ಯಮಗಳ ವ್ಯಾಪ್ತಿ ಅಗಾಧವಾಗಿದೆ; ಆದ್ದರಿಂದ ಪ್ರತಿಯೊಬ್ಬ ಸುಶಿಕ್ಷಿತ ಭಾರತೀಯನು ‘ಮಾಹಿತಿ ಯೋಧ’ನಾಗಿ ಇಂತಹ ಭಾರತವಿರೋಧಿ ಬರಹಗಳ ಮೇಲೆ ನಿಗಾ ಇಟ್ಟು ಅದಕ್ಕೆ ಪ್ರತ್ಯುತ್ತರ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಈ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆಯೇ ? – ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಪುಣೆ.
‘ಆಪರೇಶನ್ ಸಿಂದೂರ’ ಅಂದರೆ ಪಾಕ್‌ನೊಂದಿಗೆ ರಾಷ್ಟ್ರದ್ರೋಹಿ ಶಕ್ತಿಗಳಿಗೆ ನೀಡಿದ ಒಂದು ನಿರ್ಣಾಯಕ ಸಂದೇಶ !
‘ಆಪರೇಶನ್ ಸಿಂದೂರ’ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾಗಿ ಭಯೋತ್ಪಾದಕರಿಗೆ, ಪಾಕಿಸ್ತಾನಕ್ಕೆ ಮತ್ತು ದೇಶದೊಳಗೆ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರದ್ರೋಹಿ ಶಕ್ತಿಗಳಿಗೆ ನೀಡಿದ ನಿರ್ಣಾಯಕ ಎಚ್ಚರಿಕೆ ಯಾಗಿದೆ. ಭಾರತ ಇನ್ನು ಮುಂದೆ ಕೇವಲ ಪ್ರತಿಕ್ರ್ರಿಯಿಸುವ ರಾಷ್ಟ್ರವಾಗಿರದೇ ಅದು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವ ಮತ್ತು ಜವಾಬ್ದಾರಿಯುತ ವಾಗಿ ಕಾರ್ಯನಿರ್ವಹಿಸುವ ದೇಶವೆಂದು ಜಾಗತಿಕ ಮಟ್ಟ |

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಭಾರತದಿಂದ ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ರಫ್ತು ! : India’s Defence Exports