ಅರುಣಾಚಲ ಪ್ರದೇಶದಲ್ಲಿ ಮತಾಂತರನಿಷೇಧ ಕಾನೂನಿಗೆ ಕ್ರೈಸ್ತರಿಂದ ವಿರೋಧ !

೧೯೭೮ ರಲ್ಲಿ ಅರುಣಾಚಲ ಪ್ರದೇಶದಲ್ಲಿ ಶೇ. ೧ ರಷ್ಟೇ ಕ್ರೈಸ್ತರಿದ್ದರು, ಆಗ ಮತಾಂತರವನ್ನು ತಡೆಯಲು ಕಾನೂನು ರೂಪಿಸಲಾಗಿತ್ತು, ಈಗ ಆ ಸಂಖ್ಯೆ ಶೇ. ೩೦ ರಷ್ಟಾಗಿದೆ. ಈಗ ಅಲ್ಲಿ ಮತಾಂತರನಿಷೇಧ ಕಾನೂನನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕ್ರೈಸ್ತ ಮಿಶನರಿಗಳು ಅದನ್ನು ವಿರೋಧಿಸುತ್ತಿದ್ದಾರೆ.

೧. ಕ್ರೈಸ್ತರ ಜನಸಂಖ್ಯೆ ಹೆಚ್ಚಾಗಿರುವ ಅರುಣಾಚಲ ಪ್ರದೇಶದಲ್ಲಿ ಕ್ರೈಸ್ತರಿಂದ ಮತಾಂತರ ನಿಷೇಧ ಕಾನೂನಿಗೆ ವಿರೋಧ !

ಅರುಣಾಚಲ ಪ್ರದೇಶದಲ್ಲಿ ಮತಾಂತರನಿಷೇಧ ಕಾನೂನನ್ನು ಅನುಷ್ಠಾನಗೊಳಿಸದಂತೆ ಕ್ರೈಸ್ತರು ವಿರೋಧಿಸುತ್ತಿದ್ದಾರೆ. ರಾಜ್ಯದ ಜನಸಂಖ್ಯೆಯ ಮೂರನೇ ಒಂದಾಂಶ ಜನಸಂಖ್ಯೆ ಇರುವ ಕ್ರೈಸ್ತ ಸಮೂಹದ ಅನೇಕ ಸಂಘಟನೆಗಳು ಈ ಅಂಶವನ್ನು ಎತ್ತಿ ಹಿಡಿದು ರಸ್ತೆಗಿಳಿದಿವೆ. ಈ ಕಾನೂನನ್ನು ಅರುಣಾಚಲ ಪ್ರದೇಶದ ವಿಧಾನಸಭೆ ೫೦ ವರ್ಷಗಳ ಹಿಂದೆಯೇ ಸಮ್ಮತಿಸಿತ್ತು; ಆದರೆ ಇದುವರೆಗೆ ಅದು ಅನ್ವಯವಾಗಿಲ್ಲ. ರಾಜ್ಯದಲ್ಲಿ ಕ್ರೈಸ್ತರ ಜನಸಂಖ್ಯೆ ೩೦ ಪಟ್ಟು ಹೆಚ್ಚಾಗಿದೆ; ಆದರೆ ಈಗ ಭಾಜಪ ಸರಕಾರ ಈ ಕಾನೂನನ್ನು ಅನ್ವಯಿಸಲು ಸಿದ್ಧವಾಗಿದೆ. ಗೌಹಾಟಿ ಉಚ್ಚ ನ್ಯಾಯಾಲಯದ ಆದೇಶಕ್ಕನುಸಾರ ಈ ಕೆಲಸ ನಡೆಯುತ್ತಿದೆ.

೨. ಕಾನೂನಿಗೆ ವಿರೋಧಿಸುವುದರ ಹಿಂದಿನ ಕಾರಣ

೬ ಮಾರ್ಚ್ ೨೦೨೫ ರಂದು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಲಕ್ಷಾಂತರ ಕ್ರೈಸ್ತರು ರಸ್ತೆಗಿಳಿದರು. ‘ಅರುಣಾಚಲ ಕ್ರಿಶ್ಚನ್‌ ಫೋರಮ್’ (ಎ.ಸಿ.ಎಫ್‌.) ಈ ಸಂಘಟನೆ ಅವರನ್ನು ಒಗ್ಗೂಡಿಸಿತ್ತು. ಈ ಕ್ರೈಸ್ತರು ‘ಅರುಣಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾನೂನು (ಂಫೀಖಂ) ಹಿಂಪಡೆಯಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ಅರುಣಾಚಲ ಪ್ರದೇಶದ ಆದಿವಾಸಿ ಸಮೂಹದ ರಕ್ಷಣೆಗಾಗಿ ಈ ಕಾನೂನನ್ನು ಮಾಡಲಾಗಿತ್ತು. ಕ್ರೈಸ್ತರು ಹೇಳುವುದೇನೆಂದರೆ ಈ ಕಾನೂನು ಅವರ ಧಾರ್ಮಿಕ ಅಧಿಕಾರದ ಮೇಲೆ ಆಕ್ರಮಣ ಮಾಡುತ್ತಿದೆ. ಆದ್ದರಿಂದ ಅದನ್ನು ಸರಕಾರ ಜಾರಿಗೊಳಿಸಬಾರದು. ಫೆಬ್ರವರಿ ೨೦೨೫ ರಲ್ಲಿ ಅವರು ಈ ಕಾನೂನನ್ನು ಖಂಡಿಸಿ ಉಪವಾಸವನ್ನೂ ಮಾಡಿದ್ದರು. ‘ಎ.ಸಿ.ಎಸ್‌.’ ಅರುಣಾಚಲ ಪ್ರದೇಶದಲ್ಲಿನ ಇತರ ಸಂಘಟನೆಗಳು ಕೂಡ ಈ ಕಾನೂನನ್ನು ವಿರೋಧಿಸಬೇಕೆಂದು ಹೇಳಿವೆ. ಅಲ್ಲದೇ ಇದರಿಂದ ರಾಜ್ಯದ ಸುಮಾರು ಮೂರನೇ ಒಂದಂಶ ಕ್ರೈಸ್ತರಿಗೆ ಹಾನಿಯಾಗುತ್ತದೆ ಎಂದು ಹೇಳಿದೆ. ರಾಜ್ಯದಲ್ಲಿನ ವಿಪಕ್ಷ ಕಾಂಗ್ರೆಸ್‌ ಕೂಡ ಕ್ರೈಸ್ತ ಸಂಘಟನೆಗಳಿಗೆ ಬೆಂಬಲ ನೀಡಿದೆ. ಸರಕಾರ ಈ ಕಾನೂನನ್ನು ಅನ್ವಯಿಸಿ ಬಲವಂತವಾಗಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಪಕ್ಷವು ಹೇಳಿದೆ.

೩. ಕಾನೂನಿನಂತೆ ನೀಡಿರುವ ಸ್ಥಳೀಯ ಧರ್ಮಗಳ ಸ್ಥಾನ

೧೯೭೮ ರಲ್ಲಿ ರಾಜ್ಯ ವಿಧಾನಸಭೆ ಸಮ್ಮತಿಸಿದ ‘ಅರುಣಾಚಲ ಪ್ರದೇಶ ಧಾರ್ಮಿಕಸ್ವಾತಂತ್ರ್ಯ ಕಾನೂನು’ ಅನುಷ್ಠಾನ ವಾಗಬಾರದೆಂಬುದು ಕ್ರೈಸ್ತರ ಬೇಡಿಕೆ ಯಾಗಿದೆ. ಆಮಿಷ ಅಥವಾ ಒತ್ತಡ ಹೇರಿ ಮಾಡುವ ಮತಾಂತರವನ್ನು ತಡೆಗಟ್ಟಲು ಈ ಕಾನೂನನ್ನು ಮಾಡ ಲಾಗಿತ್ತು. ಈ ಕಾನೂನಿನ ಮೂಲಕ ಬೌದ್ಧ ಧರ್ಮದವರಿಗೆ (ಮೋನಪಾ, ಮೇಮ್ಬಾ, ಶೇರಡುಕಪೇನ, ಖಾಂಬಾ, ಖಾಮ್ಪತಿ ಮತ್ತು ಸಿಂಗಫೋಸ ಈ ಉಪಜಾತಿಗಳು ಪಾಲಿಸುವ) ವೈಷ್ಣವ ಧರ್ಮ (ನೊಕ್ಠೇನಿ ಪಾಲಿಸುವ) ಆಕಾ ಮತ್ತು ನಿಸರ್ಗ (ಡೀನಿಪೋಲೋ ಉಪಸಕರು) ಇವರಿಗೆ ಸ್ಥಳೀಯ ಧರ್ಮಗಳ ಸ್ಥಾನಮಾನ ನೀಡಲಾಗಿದೆ. ಇವು ರಾಜ್ಯದಲ್ಲಿ ಮೊದಲೇ ಅಸ್ತಿತ್ವದಲ್ಲಿದ್ದ ಧರ್ಮಗಳೆಂದು ಪರಿಗಣಿಸಲಾಗುತ್ತಿತ್ತು.

೪. ಕಾನೂನು ಏನು ಹೇಳುತ್ತದೆ ?

ಕಾನೂನು ಹೇಳುತ್ತದೆ, ”ಯಾವುದೇ ವ್ಯಕ್ತಿಯು ಬಲವಂತ ವಾಗಿ, ಆಮಿಷ ತೋರಿಸಿ ಅಥವಾ ಇನ್ಯಾವುದೇ ರೀತಿಯ ಒತ್ತಡ ಹೇರಿ ಅಥವಾ ಯಾವುದೇ ಮಾರ್ಗದಿಂದ ವ್ಯಕ್ತಿಯನ್ನು ಒಂದು ಧಾರ್ಮಿಕ ಶ್ರದ್ಧೆಯಿಂದ ಇನ್ನೊಂದು ಧಾರ್ಮಿಕ ಶ್ರದ್ಧೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮತಾಂತರ ಮಾಡಬಾರದು ಅಥವಾ ಮಾಡಲು ಪ್ರಯತ್ನಿಸಬಾರದು, ಅಥವಾ ಇಂತಹ ಮತಾಂತರಕ್ಕೆ ಪ್ರೋತ್ಸಾಹ ನೀಡಬಾರದು. ಇದನ್ನು ಉಲ್ಲಂಘಿಸಿದವರಿಗೆ ೨ ವರ್ಷಗಳ ಸೆರೆಮನೆ ಅಥವಾ ೧೦ ಸಾವಿರ ರೂಪಾಯಿಗಳ ದಂಡ ವಿಧಿಸಬಹುದು.’’

೫. ೧೯೭೮ ರಲ್ಲಿ ಸಮ್ಮತವಾದ ಕಾನೂನು ೨೦೨೫ ರಲ್ಲಿ ಜ್ಯಾರಿಗೆ !

೧೯೭೮ ರಲ್ಲಿ ಸಮ್ಮತವಾದ ಕಾನೂನು ಈಗ ಜ್ಯಾರಿ ಯಾಗುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಜನತಾ ಪಕ್ಷದ ಆಡಳಿತ ದಲ್ಲಿ ೧೯೭೮ ರಲ್ಲಿ ಈ ಕಾನೂನನ್ನು ಮಾಡಲಾಗಿತ್ತು. ಆಗ ಪ್ರೇಮ ಖಂಡೂ ಥಂಗುನ ಇವರು ಮುಖ್ಯಮಂತ್ರಿ ಆಗಿದ್ದರು. ರಾಜ್ಯದಲ್ಲಿನ ಆದಿವಾಸಿ ಸಮೂಹದ ಸಂಸ್ಕೃತಿಯನ್ನು ಕಾಪಾಡಲು ಮತ್ತು ಅವರನ್ನು ಮತಾಂತರದ ಆಪತ್ತಿನಿಂದ ರಕ್ಷಿಸಲು ಅವರ ಸರಕಾರ ಈ ಕಾನೂನನ್ನು ಮಾಡಿತ್ತು; ಆದರೆ ನಂತರ ರಾಜ್ಯದಲ್ಲಿ ಬಹಳಷ್ಟು ಅವಧಿಯ ವರೆಗೆ ಕಾಂಗ್ರೆಸ್ಸಿನ ಸರಕಾರವಿದ್ದರೂ ಕಾನೂನು ಜ್ಯಾರಿಯಾಗಿರಲಿಲ್ಲ.

ಅರುಣಾಚಲ ಪ್ರದೇಶದಲ್ಲಿ ಕಾನೂನನ್ನು ತರುವ ಉದ್ದೇಶವೆಂದರೆ, ಈ ಹಿಂದೆ ಮಿಝೋರಾಮ, ಮಣಿಪುರ ಹಾಗೂ ನಾಗಾಲ್ಯಾಂಡ್‌ ನಂತಹ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಕ್ರೈಸ್ತರಾಗಿದ್ದರು. ಈ ಕಾನೂನು ೧೯೭೮ ರಲ್ಲಿ ಅನ್ವಯವಾಗಿರುವುದರಿಂದ ೨೦೨೫ ರ ವರೆಗೆ ಅನುಷ್ಠಾನವಾಗಲು ಸಾಧ್ಯವಾಗಿಲ್ಲ. ಇದರ ಹಿಂದೆ ರಾಜ್ಯದ ಕ್ರೈಸ್ತ ಸಂಘಟನೆಗಳ ಒತ್ತಡವಿತ್ತು.

೬. ಗೌಹಾಟಿ ಉಚ್ಚ ನ್ಯಾಯಾಲಯದ ಆದೇಶದ ನಂತರ ಕಾನೂನು ಜ್ಯಾರಿಗೆ ಬರುತ್ತಿದೆ

ಈಗ ಗೌಹಾಟಿ ಉಚ್ಚ ನ್ಯಾಯಾಲಯದ ಆದೇಶದ ನಂತರ ಕಾನೂನು ಅನ್ವಯವಾಗುತ್ತಿದೆ. ಸಪ್ಟೆಂಬರ್‌ ೨೦೨೪ ರಲ್ಲಿ ಉಚ್ಚ ನ್ಯಾಯಾಲಯದ ಇಟಾನಗರ ವಿಭಾಗೀಯ ಪೀಠವು ರಾಜ್ಯ ಸರಕಾರಕ್ಕೆ ಅದರ ಅನುಷ್ಠಾನಕ್ಕಾಗಿ ಮಸೂದೆ ಸಿದ್ಧಪಡಿಸಲು ಆದೇಶ ನೀಡಿತು. ಅದರ ಅಂತಿಮ ಅವಧಿ ಮಾರ್ಚ್ ನಲ್ಲಿ ಮುಗಿಯುತ್ತದೆ; ಆದ್ದರಿಂದ ರಾಜ್ಯ ಸರಕಾರ ಅದಕ್ಕಾಗಿ ಹೆಜ್ಜೆ ಇಡುತ್ತಿದೆ. ಕ್ರೈಸ್ತರು ಇದನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.

೭. ಕಾನೂನನ್ನು ಜ್ಯಾರಿಗೊಳಿಸುವ ಅವಶ್ಯಕತೆ !

ಅರುಣಾಚಲ ಪ್ರದೇಶದಲ್ಲಿ ಒಂದು ದಶಕದಿಂದ ಕ್ರೈಸ್ತರು ಈ ಕಾನೂನನ್ನು ವಿರೋಧಿಸುತ್ತಿದ್ದಾರೆ. ರಾಜ್ಯದಲ್ಲಿ ಕ್ರೈಸ್ತರ ಜನಸಂಖ್ಯೆ ಸುಮಾರು ೩೦ ಪಟ್ಟು ಹೆಚ್ಚಾಗಿದೆ. ಜನಸಂಖ್ಯೆಯ ಅಂಕಿಅಂಶ ಗಳಿಂದ, ೧೯೭೧ ರಲ್ಲಿ ರಾಜ್ಯದಲ್ಲಿ ಕೇವಲ ಶೇ. ೦.೭೯ ರಷ್ಟು ಜನರು ಕ್ರೈಸ್ತ ಪಂಥವನ್ನು ಪಾಲಿಸುತ್ತಿದ್ದರು. ೨೦೧೧ ರ ಜನಗಣನೆಯಲ್ಲಿ ಈ ಸಂಖ್ಯೆ ಶೇ. ೩೦ ಕ್ಕಿಂತಲೂ ಹೆಚ್ಚಿತ್ತು.

೧೯೭೧ ರಲ್ಲಿ ಇಂದಿರಾ ಗಾಂಧಿಯವರು ಅರುಣಾಚಲ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ಈ ಹೆಚ್ಚಳವಾಯಿತು. ರಾಜೀವ ಗಾಂಧಿಯ ಆಡಳಿತಾವಧಿಯಲ್ಲಿ ಅದನ್ನು ರಾಜ್ಯವನ್ನಾಗಿ ಮಾಡಿದಾಗ ಅದಕ್ಕೆ ಇನ್ನೂ ವೇಗ ಸಿಕ್ಕಿತು. ಇದೇ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆ ಕೇವಲ ಶೇ. ೨೨ ರಿಂದ ೨೯ ರ ವರೆಗೆ ಹೆಚ್ಚಾಗಿದೆ.

೮. ಸ್ಥಳೀಯರಿಂದ ಕಾನೂನಿಗೆ ಬೆಂಬಲ !

೧೯೭೧ ರಿಂದ ೨೦೧೧ ಈ ಅವಧಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ಬೌದ್ಧರು ಮತ್ತು ಸ್ಥಳೀಯ ಶ್ರದ್ಧೆಯನ್ನು (ಬಹಳಷ್ಟು ಡೋನೀ ಪೋಲೀ) ಪಾಲಿಸುವವರ ಸಂಖ್ಯೆ ವೇಗವಾಗಿ ಕುಸಿದಿದೆ. ಜನಸಂಖ್ಯೆಯ ವರದಿಗನುಸಾರ ೧೯೭೧ ರಲ್ಲಿ ರಾಜ್ಯದ ಜನಸಂಖ್ಯೆಯಲ್ಲಿ ಶೇ. ೬೩ ರಷ್ಟು ಸ್ಥಳೀಯ ಧರ್ಮವನ್ನು ಪಾಲಿಸುತ್ತಿದ್ದರು ಹಾಗೂ ಶೇ. ೧೩ ಕ್ಕಿಂತಲೂ ಹೆಚ್ಚು ಜನರು ಬೌದ್ಧರಿದ್ದರು. ೨೦೧೧ ರ ವರೆಗೆ ಬೌದ್ಧರ ಸಂಖ್ಯೆ ಕಡಿಮೆಯಾಗಿ ಶೇ. ೧೧ ರಷ್ಟಾಯಿತು. ಡೋನೀ ಪೋಲೊ ಈ ಜನಸಂಖ್ಯೆ ಕೇವಲ ಶೇ. ೨೬ ರ ವರೆಗೆ ಕಡಿಮೆಯಾಗಿದೆ. ರಾಜ್ಯದಲ್ಲಿ ಇನ್ನೂ ಹೆಚ್ಚುತ್ತಿರುವ ಮತಾಂತರವನ್ನು ತಡೆಗಟ್ಟಲು ಕಾನೂನನ್ನು ಅನ್ವಯಗೊಳಿಸಲಾಗುತ್ತಿದೆ ಹಾಗೂ ಕ್ರೈಸ್ತ ಸಂಘಟನೆಗಳು ಅದನ್ನು ವಿರೋಧಿಸುತ್ತಿವೆ; ಆದರೆ ಸ್ಥಳೀಯರು ಈ ಕಾನೂನನ್ನು ಬೆಂಬಲಿಸುತ್ತಿದ್ದಾರೆ.

(ಆಧಾರ : ‘ಆಪ್‌ ಇಂಡಿಯಾ’ ಜಾಲತಾಣ)