
‘ನಾನು ಕಳೆದ ೧೫ ವರ್ಷ ಗಳಿಂದ ಸನಾತನ ಸಂಸ್ಥೆಯ ಸಂಪರ್ಕದಲ್ಲಿದ್ದೇನೆ. ಸಾಮಾನ್ಯವಾಗಿ ನಾನು ಪ್ರತಿ ವರ್ಷ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಭೇಟಿ ನೀಡುತ್ತೇನೆ, ಅದರಿಂದ (ಆಶ್ರಮದಿಂದ) ನನಗೆ ಚೈತನ್ಯ ಸಿಗುತ್ತದೆ. ನಾನು ಇನ್ನಿತರ ಅನೇಕ ಸಂಸ್ಥೆಗಳಿಗೆ ಭೇಟಿ ನೀಡುತ್ತೇನೆ. ಅವು ರಾಷ್ಟ್ರವಾದಿ ಸಂಸ್ಥೆ ಗಳಾಗಿರಲಿ, ಧಾರ್ಮಿಕ ಸಂಸ್ಥೆಗಳಾಗಿರಲಿ, ಅವುಗಳಲ್ಲಿ ನನ್ನ ಅಲ್ಪಸ್ವಲ್ಪ ಯೋಗದಾನವಿರುತ್ತದೆ. ಕಳೆದ ಒಂದುವರೆ ದಶಕದಿಂದ (೧೫ ವರ್ಷಗಳಿಂದ) ಸನಾತನ ಸಂಸ್ಥೆಯ ಸಂಪರ್ಕ ಬಂದ ನಂತರ ನನಗೆ ಒಂದು ವಿಷಯ ಸ್ಪಷ್ಟವಾಗಿ ಅರಿವಾ ಯಿತೇನೆಂದರೆ, ದೃಢನಿಷ್ಠೆ, ಯೋಗ್ಯ ಪ್ರೇರಣಾಶಕ್ತಿ ಹಾಗೂ ಇಚ್ಛಾಶಕ್ತಿ ಯಿಂದ ಹಿಂದೂರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನಿಸುವ ಸನಾತನ ಸಂಸ್ಥೆಯೇ ಹಿಂದೂ ರಾಷ್ಟ್ರ ಸ್ಥಾಪಿಸಬಹುದು.
ಸನಾತನ ಸಂಸ್ಥೆ ತನ್ನ ಧ್ಯೇಯ ಸಾಧನೆಗಾಗಿ ಮಾಡುತ್ತಿರುವ ಮಾರ್ಗಕ್ರಮಣವನ್ನು ನಾನು ಇಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ಪರಾತ್ಪರ ಗುರುದೇವರು ಭವಿಷ್ಯದಲ್ಲಿ ಏನಾಗುವುದಿದೆ ? ಸ್ವಲ್ಪ ಸಮಯದ ಕಾಲಾವಧಿಯಲ್ಲಿ ಏನಾಗಲಿಕ್ಕಿದೆ ? ಮಧ್ಯದ ಕಾಲದಲ್ಲಿ ಏನಾಗುವುದಿದೆ ? ದೀರ್ಘಕಾಲದ ನಂತರ ಏನಾಗಲಿಕ್ಕಿದೆ ? ಏನೆಲ್ಲ ಹೇಳಿದ್ದರೊ, ಅದೆಲ್ಲವನ್ನೂ ನಾವು ಈಗ ಪ್ರತ್ಯಕ್ಷ ನೋಡುತ್ತಿದ್ದೇವೆ. ಅವರು ಹೇಳಿದ್ದೆಲ್ಲವನ್ನೂ ನಾವು ಅನುಭವಿಸುತ್ತಿದ್ದೇವೆ.
೧. ಸನಾತನ ಸಂಸ್ಥೆಯ ಯಾವುದೇ ಕಾರ್ಯಕ್ರಮದಲ್ಲಿ ಅಥವಾ ಆಶ್ರಮದಲ್ಲಿ ತುಂಬಾ ಸಕಾರಾತ್ಮಕ ಸ್ಪಂದನಗಳು ಅರಿವಾಗುತ್ತವೆ !
ಸನಾತನ ಸಂಸ್ಥೆ ಮತ್ತು ಸಾಧಕರ ಸಂಪರ್ಕದಲ್ಲಿ ಬಂದ ನಂತರ ನಾನು ಎಷ್ಟು ಸಲ ರಾಮನಾಥಿ ಆಶ್ರಮಕ್ಕೆ ಹೋಗುತ್ತೇನೆಯೋ ಅಥವಾ ಗೋವಾದಲ್ಲಿ ಇರುತ್ತ್ತೆನೆಯೋ, ಅಥವಾ ಯಾವುದಾದರೂ ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆಯೋ, ಆಗ ನನ್ನ ಮನಸ್ಸಿಗೆ ಒಂದು ಒಳ್ಳೆಯ ಭಾವನೆ, ಒಂದು ರೀತಿಯ ಶಾಂತಿ ಸಮಾಧಾನ ಸಿಗುತ್ತದೆ. ಈ ಸಂಸ್ಥೆಯ ಮೂಲಕ ನನಗೆ ಇನ್ನೂ ಅನೇಕ ಜನರ ಸಂಪರ್ಕವಾಯಿತು. ಅವರೆಲ್ಲರಲ್ಲಿಯೂ ಸನಾತನ ಸಂಸ್ಥೆಯ ಬಗ್ಗೆ ಇದೇ ಅಭಿಪ್ರಾಯವಿದೆ. ಅವರಿಗೂ ನನ್ನ ಹಾಗೆಯೆ ಅನುಭವಗಳು ಬರುತ್ತವೆ. ಯಾವ ಕಾರ್ಯವನ್ನು ಸನಾತನ ಸಂಸ್ಥೆ ಇಂದಿನ ವರೆಗೆ ಮಾಡಿದೆಯೋ ಅಥವಾ ಮಾಡುತ್ತಿದೆಯೋ ಅದರ ಅವಶ್ಯಕತೆ ಕೇವಲ ಭಾರತ ದೇಶಕ್ಕಷ್ಟೆ ಅಲ್ಲ, ಸಂಪೂರ್ಣ ಜಗತ್ತಿಗೆ ಇದೆ. ಸನಾತನ ಸಂಸ್ಥೆಯ ಯಾವುದೇ ಗ್ರಂಥವನ್ನು ಓದಿರಿ, ಅವರ ಯಾವುದೇ ಕಾರ್ಯಕ್ರಮಕ್ಕೆ ಹೋಗಿ, ನಾಮಜಪ ಮಾಡಿ, ಈ ಎಲ್ಲ ಕೃತಿಗಳಿಂದ ನಿಮಗೆ ಸಕಾರಾತ್ಮಕ ಸ್ಪಂದನಗಳ ಅರಿವಾಗುತ್ತದೆ. ಬಹಳಷ್ಟು ಸಕಾರಾತ್ಮಕ ಶಕ್ತಿ ಸಿಗುತ್ತದೆ ಮತ್ತು ಆ ಸಕಾರಾತ್ಮಕ ಶಕ್ತಿಯಿಂದ ನಮ್ಮ ಶುದ್ಧೀಕರಣವಾಗುತ್ತಿರುವ ಅನುಭವವಾಗುತ್ತದೆ. ವಿಶೇಷವೆಂದರೆ, ಸನಾತನ ಸಂಸ್ಥೆಯಲ್ಲಿ ಯುವಕರು ಮತ್ತು ಹಿರಿಯ ವ್ಯಕ್ತಿಗಳನ್ನು ನಾನು ನೋಡುತ್ತಿದ್ದೇನೆ. ಅವರೆಲ್ಲರೂ ಸಂಸ್ಥೆಯೊಂದಿಗೆ ಏಕರೂಪ ಆಗಿರುವುದರಿಂದ ಸಂಸ್ಥೆಯ ಕಾರ್ಯ ಮಾಡುವುದರಲ್ಲಿ ಅವರಿಗೆ ಸಂತೋಷ ಹಾಗೂ ಸಮಾಧಾನವಿದೆ ಎಂದು ಅರಿವಾಗುತ್ತದೆ.
೨. ಜಗತ್ತನ್ನು ವ್ಯವಸ್ಥಿತ ಪಡಿಸುವಲ್ಲಿ ಸನಾತನ ಸಂಸ್ಥೆಯ ಸಿಂಹಪಾಲು !
ಇಂದು ನಮ್ಮ ದೇಶ ಮತ್ತು ಸಂಪೂರ್ಣ ಜಗತ್ತಿನ ಹದಗೆಟ್ಟಿದ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದರೂ ಸುಧಾರಿಸಲಿಕ್ಕಿದ್ದರೆ, ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಪ್ರಯತ್ನಿಸಿದರೆ ಅದು ಸಾಧ್ಯವಾಗಬಹುದು. ಇದರಿಂದ ನನಗೇನು ಅನಿಸುತ್ತದೆ ಎಂದರೆ, ಹೊಸ ಆದರ್ಶ ಜಗತ್ತಿನ ವ್ಯವಸ್ಥೆ (ನ್ಯೂ ವರ್ಲ್ಡ್ ಆರ್ಡರ್) ಮಾಡುವ ಅವಶ್ಯಕತೆಯಿದೆ. ಮುಂಬರುವ ಆಪತ್ಕಾಲದಲ್ಲಿ ಜಗತ್ತನ್ನು ಸಂತೈಸುವ ಕಾರ್ಯದಲ್ಲಿ ಸನಾತನ ಸಂಸ್ಥೆಯ ಯೋಗದಾನ ಅತ್ಯಂತ ದೊಡ್ಡದಾಗಿರುವುದು.’
೩. …ಭವಿಷ್ಯದ ಕಡೆಗೆ ಅಗ್ರೇಸರ ಆಗುವುದಿದೆ !
ಯಾವುದೇ ಸಂಸ್ಥೆಯ ೨೫ ವರ್ಷ ಪೂರ್ಣವಾದಾಗ ಅದು ತನ್ನ ಯಶಸ್ವಿ ಕಾರ್ಯದ ಒಂದು ಮೈಲುಗಲ್ಲನ್ನು ದಾಟಿರುತ್ತದೆ. ಮುಂದೆ ಪ್ರಯಾಣ ಬೆಳೆಸುವಾಗ ನಾವು ಹಿಂದೆ ತಿರುಗಿ ನೋಡುತ್ತಾ ನಮ್ಮ ೨೫ ವರ್ಷಗಳ ಅನುಭವವನ್ನು ಮೆಲುಕು ಹಾಕುತ್ತಾ ಅದರಿಂದ ಕಲಿತು ಭವಿಷ್ಯದ ಕಡೆಗೆ ಮುನ್ನಡೆಯ ಬೇಕಾಗಿರುತ್ತದೆ. ಸನಾತನ ಸಂಸ್ಥೆ, ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟಿ ರುವ ಎಲ್ಲ ಸಾಧಕರು ಮತ್ತು ಹಿತ್ತೈಷಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ‘ಸನಾತನ ಸಂಸ್ಥೆಯ ಮೂಲಕ ಪರಾತ್ಪರ ಗುರುದೇವರ ಮಾರ್ಗದರ್ಶನ ನಮ್ಮೆಲ್ಲರಿಗೂ ನಿರಂತರ ಸಿಗಲಿ, ಎಂದು ಈಶ್ವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ !’
ಪರಾತ್ಪರ ಗುರುದೇವರು ಗ್ರಂಥಗಳ ಮೂಲಕ ನೀಡಿರುವ ಜ್ಞಾನವೆಂದರೆ ಒಂದು ಪ್ರೇರಣಾ ಸ್ಥಾನ !
ಕೆಲವು ವರ್ಷಗಳ ಹಿಂದೆ ನಾನು ಗುರುದೇವರನ್ನು (ಪರಾತ್ಪರ ಗುರು ಡಾ. ಆಠವಲೆ) ಭೇಟಿಯಾದಾಗ ಅವರನ್ನು ನೋಡಿ ಅವರ ಸರಳ ಜೀವನಶೈಲಿ, ಅತ್ಯಂತ ನಮ್ರತೆ, ಯಾವುದೇ ಆಡಂಬರವಿಲ್ಲದ ವರ್ತನೆ ಇತ್ಯಾದಿ ನೋಡಿಯೆ ಜನರು ಪ್ರಭಾವಿತಗೊಳ್ಳುತ್ತಾರೆ ಹಾಗೂ ಜನರ ಜೀವನ ಪರಿವರ್ತನೆ ಯಾಗುತ್ತದೆ, ಎಂದು ನನಗೆ ಅನಿಸಿತು. ಪರಾತ್ಪರ ಗುರುದೇವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ ಹಾಗೂ ಅವುಗಳಲ್ಲಿ ಇನ್ನೂ ಅನೇಕ ಗ್ರಂಥಗಳನ್ನು ಮುದ್ರಿಸಲಿಕ್ಕಿದೆ. ಭವಿಷ್ಯದಲ್ಲಿ ಆ ಗ್ರಂಥಗಳಲ್ಲಿನ ಜ್ಞಾನ ಜನರಿಗೆ ಅನೇಕ ವರ್ಷಗಳ ವರೆಗೆ ಒಂದು ಪ್ರೇರಣಾಸ್ಥಾನವಾಗಿರುವುದು. ಆ ಗ್ರಂಥಗಳು ಜನರಿಗೆ ಯೋಗ್ಯ ಮಾರ್ಗದರ್ಶನ ಮಾಡುವವು. ಪರಾತ್ಪರ ಗುರುದೇವರು ಬರೆದಿರುವ ಗ್ರಂಥಗಳು, ಅವರ ಅಮೃತಮಯ ವಾಣಿ ಇವೆಲ್ಲವೂ ನಿರಂತರ ನಮ್ಮೆಲ್ಲ ಧರ್ಮಪ್ರೇಮಿಗಳಿಗೆ ಮತ್ತು ಸಾಧಕರಿಗೆ ಒಂದು ರೀತಿಯಲ್ಲಿ ಸ್ಫೂರ್ತಿ ನೀಡುತ್ತಿರುವವು.
-ಶ್ರೀ. ಅನೀಲ ಧೀರ, ಸಂಯೋಜಕರು, ‘ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಎಂಡ್ ಕಲ್ಚರಲ್ ಹೆರಿಟೇಜ್’, ಭುವನೇಶ್ವರ, ಒಡಿಶಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು