
ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು
1. ಪೂ. ಡಾ. ಶಿವಕುಮಾರ ಓಝಾ ಅವರ ಪರಿಚಯ
ಪೂ. ಡಾ. ಶಿವಕುಮಾರ ಓಝಾ ಅವರು 23 ನವೆಂಬರ್ 1933 ರಂದು ಇಟಾವಾ (ಉತ್ತರ ಪ್ರದೇಶ) ಜಿಲ್ಲೆಯ ಬೋಝಾ ಗ್ರಾಮದಲ್ಲಿ ಜನಿಸಿದರು. ಲಕ್ನೋ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎಸ್ಸಿ. ಪದವಿ ಪಡೆದ ನಂತರ ಅವರು ‘ಐ.ಐ.ಎಸ್ಸಿ., ಬೆಂಗಳೂರು’ ಇಲ್ಲಿನ ‘ಏರೋಸ್ಪೇಸ್’ (ಬಾಹ್ಯಾಕಾಶ) ಇಂಜಿನಿಯರಿಂಗ ವಿಭಾಗದಿಂದ ‘ಏರೋಡೈನಾಮಿಕ್ಸ್’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದರು, ಅಲ್ಲಿ ಅವರನ್ನು ಉಪನ್ಯಾಸಕರಾಗಿ ನೇಮಿಸಲಾಯಿತು.

1967 ರಲ್ಲಿ ಅವರು ‘ಐಐಟಿ, ಮುಂಬಯಿ’ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಭಾರತೀಯ ತಂತ್ರಜ್ಞಾನ ಸಂಸ್ಥೆ) ಇಲ್ಲಿನ ‘ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗ’ಕ್ಕೆ ಸೇರಿದರು ಮತ್ತು ಅಲ್ಲಿ ಪ್ರಾಧ್ಯಾಪಕರಾಗಿ ಮುಂದುವರೆದರು. ಆ ಸಮಯದಲ್ಲಿ ಅವರು ‘ಏರೋಡೈನಾಮಿಕ್ಸ್’ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಅಧ್ಯಯನ ಮತ್ತು ಬೋಧನೆ ಮಾಡಿದರು, ವಿವಿಧ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದರು. ಅನೇಕ ಸಂಶೋಧನೆ ಮತ್ತು ಯೋಜನೆಗಳಿಗೆ ಮಾರ್ಗದರ್ಶನ ನೀಡಿದರು, ಅನೇಕ ಸಂಶೋಧನಾ ಪತ್ರಗಳನ್ನು ಪ್ರಕಟಿಸಿದರು, ವಿದೇಶಗಳಲ್ಲಿ ಶೈಕ್ಷಣಿಕ ಪ್ರವಾಸಗಳನ್ನು ಮಾಡಿದರು ಮತ್ತು ‘ಫ್ಲೈಟ್ ಪರ್ಫಾರ್ಮೆನ್ಸ್ ಆಫ್ ಏರ್ ಕ್ರಾಫ್ಟ್’ ಎಂಬ ಪುಸ್ತಕವನ್ನು ಬರೆದರು, ಅದು ಅಮೇರಿಕದಲ್ಲಿ ಪ್ರಕಟವಾಯಿತು.
ಕಲಿಯುಗದ ಮೊದಲ ವೇದಋಷಿ ಪೂ. ಡಾ. ಶಿವಕುಮಾರ ಓಝಾ!

‘ನಾನು ವೈದ್ಯನೆಂದರೆ ವಿಜ್ಞಾನ ಶಾಖೆಯ ಪದವೀಧರನಾಗಿದ್ದೇನೆ. ಆದ್ದರಿಂದ ನನಗೆ ಎಂದಿಗೂ ಸಂಸ್ಕೃತ, ರಾಷ್ಟ್ರಭಾಷೆ ಹಿಂದಿ ಅಥವಾ ನನ್ನ ಮಾತೃಭಾಷೆ ಮರಾಠಿ ಅಭ್ಯಾಸದ ಬಗ್ಗೆ ಒಲವು ಇರಲಿಲ್ಲ. ಇದಕ್ಕೆ ವಿರುದ್ಧವಾಗಿ ಪೂ. ಡಾ. ಶಿವಕುಮಾರ ಓಝಾ ವಿಜ್ಞಾನದ ಪ್ರಸಿದ್ಧ ಸಂಶೋಧಕರಾಗಿದ್ದರೂ ಅವರು ಸಂಸ್ಕೃತ, ಹಿಂದಿ, ಅಧ್ಯಾತ್ಮಶಾಸ್ತ್ರ, ಭಾರತೀಯ ಸಂಸ್ಕೃತಿ ಈ ವಿಷಯಗಳ ಮೇಲೆ ಅನೇಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅವರ ಗ್ರಂಥದ ಪ್ರತಿಯೊಂದು ಸಾಲು ಅತ್ಯಂತ ಮಹತ್ವದ್ದಾಗಿದೆ. ಇದರಿಂದ ‘ಅವರು ಕಲಿಯುಗದ ಮೊದಲ ವೇದಋಷಿ’ ಎಂಬುದು ನನಗೆ ತೀವ್ರವಾಗಿ ಅರಿವಾಯಿತು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
2. ‘ಐಐಟಿ, ಮುಂಬಯಿ’ಯಲ್ಲಿ ‘ಭಾರತೀಯ ಸಂಸ್ಕೃತಿ’ ವಿಷಯವನ್ನು ಕಲಿಸಲು ಮಾಡಿದ ಪ್ರಯತ್ನಗಳು
ಸೇವಾನಿವೃತ್ತಿಯ ನಂತರ ಪೂ. ಡಾ. ಓಝಾ ಅವರಿಗೆ ‘ಭಾರತೀಯ ಸಂಸ್ಕೃತಿ’ಯನ್ನು ತಿಳಿದುಕೊಳ್ಳುವ ಬಗ್ಗೆ ವಿಶೇಷ ಆಸಕ್ತಿ ಹೆಚ್ಚಾಯಿತು. ನಂತರ ಭಾರತೀಯ ಸಂಸ್ಕೃತಿಯೇ ಅವರ ಅಧ್ಯಯನ ಮತ್ತು ಬೋಧನೆಯ ಕ್ಷೇತ್ರವಾಯಿತು. ಅವರ ವಿಶೇಷ ಪ್ರಯತ್ನಗಳಿಂದ ‘ಭಾರತೀಯ ಸಂಸ್ಕೃತಿ’ ಎಂಬ ವಿಷಯವು ‘ಐಐಟಿ, ಮುಂಬಯಿ’ಯನಲ್ಲಿ ಕಲಿಸಲಾಗುತ್ತಿದೆ, ಹಾಗೂ ಈ ವಿಷಯದ ಬಗ್ಗೆ ಸ್ವತಃ ಬೋಧನೆ ಮಾಡಿ ಅಲ್ಲಿನ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಆಸಕ್ತಿಯನ್ನು ಮೂಡಿಸಿದರು. ಪೂ. ಓಝಾ ಅವರು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದಷ್ಟು ಕಾಲ ‘ಭಾರತೀಯ ಸಂಸ್ಕೃತಿ’ ವಿಷಯವನ್ನು ಕಲಿಯುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಲೇ ಇತ್ತು.
ಹಿಂದೂಗಳಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇರಬೇಕು!

ಹಿಂದಿ ಸೇರಿದಂತೆ ಅನೇಕ ಭಾಷೆಗಳನ್ನು ಪ್ರಚಾರ ಮಾಡಲಾಗುತ್ತದೆ; ಆದರೆ ಪ್ರಚಾರಕರಿಗೆ ತಮ್ಮ ಭಾಷೆಗಳ ಅನೇಕ ಗುಣಗಳನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಮಕ್ಕಳಿಗೆ ಹಿಂದಿ ಭಾಷೆಯ ವೈಶಿಷ್ಟ್ಯವನ್ನು ಕಲಿಸಬೇಕು. ಭಾಷೆಯ ಗುಣಧರ್ಮಗಳು ತಿಳಿದ ನಂತರ ಅವರಿಗೆ ಭಾಷೆಯ ಬಗ್ಗೆ ಹೆಮ್ಮೆ ಉಂಟಾಗುತ್ತದೆ. ಹಿಂದೂ ಸಂಸ್ಕೃತಿ ಎಂದರೇನು ಎಂಬುದನ್ನು ವಿವರಿಸಲು ಮುಖ್ಯ ಮಾಧ್ಯಮವೆಂದರೆ ಭಾಷೆಯಾಗಿದೆ ಮತ್ತು ಈ ಮಾಧ್ಯಮವು ಶಕ್ತಿಯುತವಾಗಿರಬೇಕು. ‘ಸಂಭವತಃ’ ಅಥವಾ ‘ಬಹುಶಃ’ ಎಂಬಂತಹ ಪದಗಳ ಬಳಕೆಯು ನಮ್ಮ ಪ್ರಾಚೀನ ಧರ್ಮಗ್ರಂಥಗಳಲ್ಲಿಯೂ ಹೆಚ್ಚಾಗಿ ಕಂಡುಬರುವುದಿಲ್ಲ; ಏಕೆಂದರೆ ಹಿಂದೂ ಸಂಸ್ಕೃತಿಯಲ್ಲಿ ಜ್ಞಾನವು ನಿಶ್ಚಿತವಾಗಿದೆ. ಆದರೆ ಪಾಶ್ಚಿಮಾತ್ಯ ಜನರ ಜ್ಞಾನದಲ್ಲಿ ಸಂಶಯದ ಒಂದು ಮಗ್ಗಲು ಇದೆ ಮತ್ತು ಅವರ ಪುಸ್ತಕಗಳಲ್ಲಿ ‘ಸಂಭವತಃ’ ಅಥವಾ ‘ಬಹುಶಃ’ ಎಂಬ ಪದಗಳ ಅರ್ಥವು ಕಂಡುಬರುತ್ತದೆ; ಆದ್ದರಿಂದ ಹಿಂದೂಗಳಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯೆನಿಸಬೇಕು. ಹಿಂದೂ ಸಂಸ್ಕೃತಿಯು ಜೀವನದ ಗುರಿಯನ್ನು ನಿರ್ಧರಿಸುತ್ತದೆ; ಅದು ಈ ಜಗತ್ತಿನಲ್ಲಿ ಮುಖ್ಯ ಸಿದ್ಧಾಂತಗಳೊಂದಿಗೆ ಧರ್ಮದ ಸ್ವರೂಪವನ್ನು ವಿವರಿಸುತ್ತದೆ. ಈ ಸಂಸ್ಕೃತಿಯು ಸನಾತನ ಸಿದ್ಧಾಂತಗಳ ಮೇಲೆ ಆಧಾರಿಸಿದೆ, ಅಂದರೆ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
– ಪೂ. ಡಾ. ಶಿವಕುಮಾರ ಓಝಾ

3. ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮೊದಲಾದ ವಿಷಯಗಳ ಮೇಲೆ 11 ಗ್ರಂಥಗಳ ರಚನೆ

ಭಾರತೀಯ ಸಂಸ್ಕೃತಿಯ ಆಳವಾದ ಅಧ್ಯಯನಕಾರರು ಮತ್ತು ಹಿರಿಯ ಸಂಶೋಧಕರು ಹಾಗೂ ಜ್ಞಾನಮಾರ್ಗದ ಅನುಸಾರ ಸಾಧನೆ ಮಾಡಿ ಭಾರತೀಯ ಸಂಸ್ಕೃತಿಯ ಉದ್ಧಾರಕ್ಕಾಗಿ ಸಮರ್ಪಿತ ಭಾವದಿಂದ ಅಸಾಧಾರಣ ಕಾರ್ಯ ನಿರ್ವಹಿಸಿದ ಪೂ. ಡಾ. ಓಝಾ ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮೊದಲಾದ ವಿಷಯಗಳ ಮೇಲೆ 11 ಗ್ರಂಥಗಳನ್ನು ಪ್ರಕಟಿಸಿದ್ದಾರೆ. ‘ಭಾರತೀಯ ಸಂಸ್ಕೃತಿ ಮಹಾನ ಮತ್ತು ವಿಲಕ್ಷಣ’ ಎಂಬ ಅವರ 660 ಪುಟಗಳ ಗ್ರಂಥವು ಸನಾತನ ವೈದಿಕ ಸಂಸ್ಕೃತಿಯ ಸಾರರೂಪದ ಗ್ರಂಥವಾಗಿದೆ. ಈ ಗ್ರಂಥ ಹಿಂದಿ ಭಾಷೆಯಲ್ಲಿವೆ. ಅವುಗಳನ್ನು ಮರಾಠಿಗೆ ಅನುವಾದಿಸಿ ಪ್ರಕಟಿಸಲಾಗುತ್ತಿದೆ. ‘ಪೂ. ಡಾ. ಶಿವಕುಮಾರ ಓಝಾ ಅವರು ಬರೆದ ಯಾವ ಗ್ರಂಥದಲ್ಲಿ ಯಾವ ವಿಷಯವನ್ನು ಸೇರಿಸಲಾಗಿದೆ?’ ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನಮ್ಮ ಓದುಗರಿಗಾಗಿ ನೀಡುತ್ತಿದ್ದೇವೆ.

ಅ. ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ?’, ಈ ಗ್ರಂಥದಲ್ಲಿ ‘ಆಧುನಿಕ ಶಿಕ್ಷಣದಿಂದ ಮನುಷ್ಯನು ಭೌತಿಕ ಸುಖಗಳಿಗೆ ಆಕರ್ಷಿತನಾಗುವುದರಿಂದ ಆದ ಹಾನಿಯೇನು? ‘ಶಿಕ್ಷಣ’ದ ಅರ್ಥ, ಆಂಗ್ಲ ಭಾಷೆಯ ಆಧುನಿಕ ಶಿಕ್ಷಣ ಮತ್ತು ಅದರಲ್ಲಿನ ದೋಷಗಳು, ಶಿಕ್ಷಣದಲ್ಲಿ ವಿವಿಧ ರೀತಿಯ ಪ್ರಮಾಣಗಳನ್ನು ಆಧಾರವಾಗಿ ಹೊಂದಿರುವುದು ಏಕೆ ಅವಶ್ಯಕವಾಗಿದೆ? ಅದರಿಂದಾಗುವ ಲಾಭಗಳು, ಶಿಕ್ಷಣದಲ್ಲಿ ಧರ್ಮ ಇರುವುದು ಏಕೆ ಅವಶ್ಯಕವಾಗಿದೆ? ಆಧುನಿಕ ಶಿಕ್ಷಣದಿಂದ ಯುವಕರಿಗೆ ಆಗಿರುವ ವೈಚಾರಿಕ ಹಾನಿ’ ಮುಂತಾದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.

ಆ. ‘ಭಾರತೀಯ ಸಂಸ್ಕೃತಿ ಸಮಝನಾ ಅನಿವಾರ್ಯ ಕ್ಯೋಂ?’, ಈ ಗ್ರಂಥದಲ್ಲಿ ‘ಭಾರತೀಯ ಸಂಸ್ಕೃತಿ ಎಂದರೇನು? ಭಾರತೀಯ ಸಂಸ್ಕೃತಿಯ ಕೇಂದ್ರಬಿಂದು ಯಾವುದು? ಅದನ್ನು ತಿಳಿದುಕೊಳ್ಳುವುದರಿಂದ ಯಾವ ಲಾಭಗಳಿವೆ? ಭಾರತೀಯ ಸಂಸ್ಕೃತಿಯು ಸಂಸ್ಕೃತ ಭಾಷೆಗೆ ಹೆಚ್ಚು ಮಹತ್ವವನ್ನು ಏಕೆ ನೀಡಿದೆ? ಭಾರತೀಯ ಸಂಸ್ಕೃತಿಯು ಧರ್ಮದ ಸ್ವರೂಪವನ್ನು ಹೇಗೆ ವಿವರಿಸುತ್ತದೆ? ಈ ಸಂಸ್ಕೃತಿಯನ್ನು ಪಾಲಿಸುವುದರಿಂದ ಜೀವನದ ಗುರಿಯನ್ನು ಹೇಗೆ ಸರಿಯಾಗಿ ಆಯ್ಕೆ ಮಾಡಬಹುದು? ಕರ್ಮದ ವಿಜ್ಞಾನವನ್ನು ಹೇಗೆ ವಿವರಿಸುತ್ತದೆ? ಸಂಸ್ಕೃತಿಯಲ್ಲಿ ಅಂತರಂಗ ಶುದ್ಧಿಯ ಯಾವ ಉಪಾಯಗಳಿವೆ?’ ಎಂಬುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಮತ್ತು ‘ಭೌತಿಕವಾದಿ ಸಮಾಜದ ಸ್ಥಿತಿ ಮತ್ತು ಭಾರತೀಯ ಸಂಸ್ಕೃತಿ’ ಇವುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಲಾಗಿದೆ.

ಇ. ‘ಭಾರತೀಯ ಸಂಸ್ಕೃತಿ: ಕೇಂದ್ರಬಿಂದು ಏವಂ ತತ್ತ್ವ ಕ್ಯಾ ಹೈ?’ ಈ ಗ್ರಂಥದಲ್ಲಿ ‘ಪೂಜೆ-ಪಾಠ ಮಾಡುವುದು, ಧ್ಯಾನ, ಯೋಗ, ಪ್ರಾಣಾಯಾಮ, ಮಂತ್ರ-ಜಪ, ತಂತ್ರ, ಆಧ್ಯಾತ್ಮಿಕ ಪ್ರವಚನ ಇವೆಲ್ಲವೂ ನಿಖರವಾಗಿ ಯಾವುದಕ್ಕಾಗಿ? ಈ ಎಲ್ಲದರ ಕೇಂದ್ರಬಿಂದು ಯಾವುದು? ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿರಲು ನಿಖರವಾದ ಕಾರಣಗಳು, ಭಾರತೀಯ ಸಂಸ್ಕೃತಿಯು ಜೀವನಕ್ಕೆ ಹೇಗೆ ಸ್ಥಿರತೆಯನ್ನು ನೀಡುತ್ತದೆ? ಕೇವಲ ಭೌತಿಕ ಜ್ಞಾನವನ್ನು ಪಡೆದರೆ ಆಗುವ ತೊಂದರೆಗಳು’ ಮುಂತಾದ ಇತರ ವಿಷಯಗಳ ಬಗ್ಗೆ ಪರಮಾರ್ಶೆ ಮಾಡಲಾಗಿದೆ.

ಈ. ‘ಸಂಸ್ಕೃತ-ಹಿಂದಿ ಮಹತ್ವಪೂರ್ಣ ಕ್ಯೋಂ, ಪ್ರಚಾರ ಕೈಸೆ ಹೋ?’, ಈ ಗ್ರಂಥದಲ್ಲಿ ‘ಸಂಸ್ಕೃತ ಭಾಷೆಯ ವಿಶೇಷ ಗುಣಗಳು, ಈ ಭಾಷೆಯ ಶಬ್ದ ಭಂಡಾರ; ಹಿಂದಿ ಹಾಗೂ ಇತರ ಭಾಷೆಗಳ ಪ್ರಚಾರ ಹೆಚ್ಚಾಗಲು ವಿವಿಧ ಉಪಾಯಗಳು, ಶುದ್ಧ ಉಚ್ಚಾರಣೆಯ ಮಹತ್ವ’ ಮುಂತಾದ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.

ಪೂ. ಡಾ. ಓಝಾ ಅವರ ಈ ಗ್ರಂಥಗಳು ಧರ್ಮ, ಸಂಸ್ಕೃತಿ ಮತ್ತು ಅಧ್ಯಾತ್ಮದ ಅಧ್ಯಯನಕಾರರಿಗೆ ದೇವರು ನೀಡಿದ ಅಮೂಲ್ಯ ಕೊಡುಗೆ ಮತ್ತು ಹಿಂದೂ ಸಮಾಜಕ್ಕೆ ಅದು ಅಮೂಲ್ಯ ಕೊಡುಗೆಯಾಗಿದೆ. ಈ ಗ್ರಂಥಗಳಲ್ಲಿನ ಜ್ಞಾನವು ಹಿಂದೂ ಧರ್ಮದ ಎಲ್ಲಾ ಸಾಹಿತ್ಯದ ಸಾರವಾಗಿದೆ; ಆದ್ದರಿಂದ ಈ ಗ್ರಂಥಗಳನ್ನು ಉಲ್ಲೇಖ ಗ್ರಂಥಗಳೆಂದು ಕರೆಯುವುದು ಸೂಕ್ತವಾಗಿದೆ.
4. ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಿದರೆ, ಸ್ವಭಾಷೆಯ ಬಗ್ಗೆ ಪ್ರೀತಿ ಜಾಗೃತವಾಗುತ್ತದೆ!

ಅ. ‘ನ್ಯಾಯದರ್ಶನ’ ಗ್ರಂಥದ ಹೆಸರೂ ಹೆಚ್ಚಿನ ವಕೀಲರಿಗೆ ತಿಳಿದಿಲ್ಲದಿರುವುದು: ಹಿಂದೂಗಳಲ್ಲಿ ಧರ್ಮದ ಬಗ್ಗೆ ಬಹಳಷ್ಟು ಅಜ್ಞಾನವಿದೆ. ಸರ್ವೋಚ್ಚ ನ್ಯಾಯಾಲಯವು ಸ್ವತಃ ‘ಹಿಂದೂ ಧರ್ಮವು ಜೀವನ ನಡೆಸುವ ಮಾರ್ಗವಾಗಿದೆ’ ಎಂದು ಹೇಳಿದೆ. ಇದರ ಬಗ್ಗೆ ತಿಳಿದಿರದಿದ್ದರೆ, ನ್ಯಾಯಾಲಯವು ಧರ್ಮದ ಜ್ಞಾನಿಗಳ ಅಭಿಪ್ರಾಯವನ್ನು ತಿಳಿದುಕೊಳ್ಳಬೇಕಾಗಿತ್ತು. ನ್ಯಾಯವಾದಿಗಳಿಗೂ ಧರ್ಮದ ಶಿಕ್ಷಣವಿಲ್ಲ. ಮಹರ್ಷಿ ಗೌತಮರು ರಚಿಸಿದ ‘ನ್ಯಾಯದರ್ಶನ’ ಗ್ರಂಥದಲ್ಲಿ ‘ನಿಜವಾದ ನ್ಯಾಯ ಎಂದರೇನು?’ ಎಂಬುದರ ಬಗ್ಗೆ ಬರೆಯಲಾಗಿದೆ. ಈ ಗ್ರಂಥದ ಅಧ್ಯಯನ ದೂರದ ಮಾತು, ಅದರ ಹೆಸರೂ ಹೆಚ್ಚಿನ ನ್ಯಾಯವಾದಿಗಳಿಗೆ ತಿಳಿದಿಲ್ಲ. ಇಂದು ‘ಪ್ರಮಾಣಗಳ ಆಧಾರದ ಮೇಲೆ ತೀರ್ಪು ನೀಡುವುದು’ ಇದೇ ನ್ಯಾಯದ ವ್ಯಾಖ್ಯಾನವಾಗಿದೆ.
ಜ್ಞಾನಶಕ್ತಿಯಿಂದ ಹಿಂದುತ್ವಕ್ಕಾಗಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ಪೂ. ಡಾ. ಓಝಾ ‘ಹಿಂದೂ ರಾಷ್ಟ್ರ’ದ ‘ಭಾರತರತ್ನ’ರಾಗಿದ್ದಾರೆ!

ಇಷ್ಟು ವರ್ಷಗಳ ವರೆಗೆ ಹಿಂದುತ್ವಕ್ಕಾಗಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿದ ಪೂ. ಡಾ. ಓಝಾ ‘ಹಿಂದೂ ರಾಷ್ಟ್ರ’ದ ‘ಭಾರತರತ್ನ’ರಾಗಿದ್ದಾರೆ. ಇಂದು ಅನರ್ಹ ವ್ಯಕ್ತಿಗಳಿಗೆ ‘ಭಾರತರತ್ನ’ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪೂ. ಡಾ. ಓಝಾ ಕೂಡ ಅವರಂತೆ ‘ಭಾರತರತ್ನ’ಕ್ಕೆ ಅರ್ಹರಾಗಬಲ್ಲರು. ವರ್ತಮಾನ ಕಾಲದಲ್ಲಿ ಸಮಾಜದಲ್ಲಿ ವಿಚಾರಗಳ ತಿರಸ್ಕಾರವಾಗುತ್ತಿದೆ. ‘ವಿಚಾರವಂತ’ ಎಂದರೆ ‘ಜ್ಞಾನಶಕ್ತಿ’. ಜ್ಞಾನಶಕ್ತಿಯು ಕ್ರಿಯಾಶಕ್ತಿ ಮತ್ತು ಇಚ್ಛಾಶಕ್ತಿಗಳನ್ನು ಕಾರ್ಯಗತಗೊಳಿಸುತ್ತದೆ. ಹೇಗೆ ಛತ್ರಪತಿ ಶಿವಾಜಿ ಮಹಾರಾಜರು ಕ್ರಿಯಾಶಕ್ತಿಯ ಆಧಾರದ ಮೇಲೆ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರೋ ಅವರಿಗೆ ಅವರ ಗುರು ಸಮರ್ಥ ರಾಮದಾಸ ಸ್ವಾಮಿಗಳ ಜ್ಞಾನಶಕ್ತಿಯ ಆಧಾರವಿತ್ತು. ವಿದ್ಯಾರಣ್ಯ ಸ್ವಾಮಿಗಳ ಜ್ಞಾನಶಕ್ತಿಯಿಂದ ಹರಿಹರ ಮತ್ತು ಬುಕ್ಕರಾಯ ಎಂಬ ವೀರ ಸಹೋದರರು ವಿಜಯನಗರದಲ್ಲಿ ಹಿಂದೂ ರಾಜ್ಯವನ್ನು ಸ್ಥಾಪಿಸಿದರು. ಕ್ರಿಯಾಶಕ್ತಿಯ ಪ್ರತೀಕ ಚಂದ್ರಗುಪ್ತ ಮೌರ್ಯ ಆರ್ಯ ಚಾಣಕ್ಯರ ಜ್ಞಾನಶಕ್ತಿಯಿಂದ ಮೊಟ್ಟಮೊದಲ ಬಾರಿಗೆ ಸಮ್ರಾಟನಾದನು. ಈ ಉದಾಹರಣೆಗಳಿಂದ ವಿಚಾರಗಳ ಮಹತ್ವ ತಿಳಿಯುತ್ತದೆ. ಇಂದು ಕ್ರಿಯಾಶಕ್ತಿಯಿಂದ ಕಾರ್ಯ ನಿರ್ವಹಿಸುವ ಅನೇಕರಿದ್ದಾರೆ; ಆದರೆ ರಾಷ್ಟ್ರ ಮತ್ತು ಧರ್ಮದ ರಕ್ಷಣೆ, ಹಾಗೂ ಸಂಸ್ಕೃತಿ ಸಂವರ್ಧನೆಗಾಗಿ ಜ್ಞಾನಶಕ್ತಿಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವವರು ವಿರಳರಾಗಿದ್ದಾರೆ. ಅದೇ ರೀತಿ ಪೂ. ಡಾ. ಶಿವಕುಮಾರ ಓಝಾ ಜ್ಞಾನಶಕ್ತಿಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಆ. ಸ್ವಭಾಷೆಯ ಜ್ಞಾನವಿಲ್ಲದ ಕಾರಣ ಜ್ಞಾನದ ಮಟ್ಟ ಕುಸಿಯುತ್ತಿದೆ!: ನಮ್ಮ ವಿದ್ವಾಂಸರಿಗೆ ಹಿಂದೂ ಧರ್ಮದ ಅಧ್ಯಯನವಿಲ್ಲ. ಆದ್ದರಿಂದ ಅವರ ವಿದ್ವತ್ತು ಕಡಿಮೆಯಾಗಿದೆ. ಸ್ವಭಾಷೆಯಲ್ಲಿ ಶಿಕ್ಷಣ ಪಡೆಯದ ಕಾರಣ ವಿದ್ಯಾರ್ಥಿಗಳಿಗೆ ಕಡಿಮೆ ಪ್ರಮಾಣದ ಜ್ಞಾನ ದೊರೆಯುತ್ತಿದ್ದು ಅವರ ವಿದ್ವತ್ತು ಕೂಡ ಕಡಿಮೆಯಾಗುತ್ತಿದೆ. ಸ್ವಭಾಷೆಯ ಜ್ಞಾನವಿಲ್ಲದ ಕಾರಣ ಜ್ಞಾನದ ಮಟ್ಟ ಕುಸಿಯುತ್ತಿದೆ. ಜೀವನಕ್ಕೆ ಸಂಬಂಧಿಸಿದ ಅನೇಕ ಸಂಸ್ಕೃತ ಪದಗಳ ಅರ್ಥ ತಿಳಿದಿಲ್ಲದ ಕಾರಣ ಜನರಿಗೆ ಜೀವನದ ಅರ್ಥವೂ ತಿಳಿಯುತ್ತಿಲ್ಲ. ಭಾರತೀಯ ಭಾಷೆಗಳನ್ನು ಮಾತನಾಡಲು ಮತ್ತು ಅಧ್ಯಯನ ಮಾಡಲು ಪ್ರಾರಂಭಿಸಿದರೆ, ಹೆಚ್ಚಿನ ಪ್ರಮಾಣದ ಜ್ಞಾನ ದೊರೆತು ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಿದರೆ, ಸ್ವಭಾಷೆಯ ಬಗ್ಗೆ ಪ್ರೀತಿ ಜಾಗೃತವಾಗುತ್ತದೆ. ಭಾರತೀಯ ಸಂಸ್ಕೃತಿಯನ್ನು ‘ಐಐಟಿ ಮುಂಬಯಿ’ಯಲ್ಲಿ ಅಧ್ಯಯನ ಮಾಡಬಹುದಾದರೆ, ಇತರ ಕಡೆಗಳಲ್ಲಿಯೂ ಕಲಿಸಬಹುದು. ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಿದರೆ, ತಮ್ಮ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಭಾಷೆಯು ದೇಶದ ಸಂಸ್ಕೃತಿಯನ್ನು ತೋರಿಸುತ್ತದೆ. ಸ್ವಭಾಷೆಯ ಅಕ್ಷರ ಮತ್ತು ಪದಗಳಿಗೆ ಅರ್ಥವಿದೆ. ಇಂದಿನ ಪೀಳಿಗೆಗೆ ಆಧ್ಯಾತ್ಮಿಕ ಮತ್ತು ದೈವಿಕ ವಿಷಯಗಳ ಶಿಕ್ಷಣವನ್ನು ನೀಡಬೇಕು.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ