
ಅಸ್ಯಾಂ ತಿಥೌ ಕ್ಷಯ ಮುಪೈತಿ ಹುತಂ ನ ದತ್ತಂ |
ತೇನಾಕ್ಷಯೇತಿ ಕಥಿತಾ ಮುನಿಭಿಸ್ತ್ರತೀಯಾ | ಉದ್ದಿಶ್ಯ ದೈವತಪಿತೃಂಕ್ರಿಯತೇ ಮನುಷ್ಯೈಃ | ತಚ್ಚಾಕ್ಷಯಂ ಭವತಿ ಭಾರತ ಸರ್ವಮೇವ – ಮದನರತ್ನ
ಅರ್ಥ : (ಶ್ರೀಕೃಷ್ಣ ಹೇಳುತ್ತಾನೆ) ಹೇ ಯುಧಿಷ್ಠಿರಾ, ಈ ತಿಥಿಯಂದು ನೀಡಿದ ದಾನ ಹಾಗೂ ಮಾಡಲಾದ ಹವನವು ಕ್ಷಯವಾಗುವುದಿಲ್ಲ. ಆದುದರಿಂದ ಈ ದಿನಕ್ಕೆ ಮುನಿಗಳು ‘ಅಕ್ಷಯ ತದಿಗೆ’ ಎಂದು ಹೇಳಿ ದ್ದಾರೆ. ದೇವತೆ ಹಾಗೂ ಪಿತೃಗಳಿಗಾಗಿ ಈ ತಿಥಿಯಂದು ಯಾವ ಕರ್ಮವನ್ನು ಮಾಡ ಲಾಗುತ್ತದೆಯೋ, ಅದು ಅಕ್ಷಯ ಅಂದರೆ ಅವಿನಾಶಿಯಾಗುತ್ತದೆ.
೧ ಅ. ಅಕ್ಷಯ ತದಿಗೆ ಮೂರೂವರೆ ಮುಹೂರ್ತಗಳಲ್ಲೊಂದು
‘ಅಕ್ಷಯ ತದಿಗೆ ಮೂರೂವರೆ ಮುಹೂರ್ತಗಳ ಪೈಕಿ ಒಂದಾಗಿದೆ. ಈ ದಿನವೇ ತ್ರೇತಾಯುಗ ಪ್ರಾರಂಭವಾಯಿತು. ಈ ದಿನದಿಂದ ಒಂದು ಕಲಹಕಾಲದ ಅಂತ್ಯ ಮತ್ತು ಎರಡನೇ ಯುಗದ ಅಂದರೆ ಸತ್ಯಯುಗದ ಆರಂಭ ಇಂತಹ ಸಂಧಿಯನ್ನು ಸಾಧಿಸಿದ್ದರಿಂದ ಅಕ್ಷಯ ತದಿಗೆಯ ಸಂಪೂರ್ಣ ದಿನಕ್ಕೆ ‘ಮುಹೂರ್ತ’ವೆನ್ನುತ್ತಾರೆ. ಮುಹೂರ್ತವು ಕೇವಲ ಒಂದು ಕ್ಷಣದಷ್ಟು ಕಾಲ ಸಾಧಿಸಿದ್ದರೂ, ಸಂಧಿಕಾಲದಿಂದ ಅದರ ಪರಿಣಾಮ ೨೪ ಗಂಟೆ ಕಾರ್ಯ ನಿರತವಿರುವುದರಿಂದ ಪೂರ್ಣ ದಿನವನ್ನು ಶುಭವೆಂದು ಪರಿಗಣಿಸಲಾಗುತ್ತದೆ; ಆದುದರಿಂದ (ಅಕ್ಷಯ) ತದಿಗೆ ಈ ದಿನಕ್ಕೆ ‘ಮೂರೂವರೆ ಮುಹೂರ್ತಗಳಲ್ಲಿ ಒಂದು’ ಎಂದು ತಿಳಿಯಲಾಗುತ್ತದೆ.
೧ ಆ. ಅವತಾರ ತಾಳುವುದು
ಅಕ್ಷಯ ತದಿಗೆ ಈ ತಿಥಿಯಂದೇ ಹಯಗ್ರೀವ ಅವತಾರ, ನರನಾರಾಯಣ ಪ್ರಕಟೀಕರಣ ಮತ್ತು ಪರಶುರಾಮನ ಅವತಾರವಾಯಿತು. ಇದರಿಂದ ಅಕ್ಷಯ ತದಿಗೆಯ ಮಹತ್ವ ತಿಳಿಯುತ್ತದೆ.
೧ ಇ. ಧಾರ್ಮಿಕ ಕೃತಿಗಳಿಂದ ಹೆಚ್ಚು ಲಾಭ
‘ಈ ತಿಥಿಯಂದು ವಿಷ್ಣುಪೂಜೆ, ಜಪ, ಹೋಮ ಹವನ, ದಾನ ಮುಂತಾದ ಧಾರ್ಮಿಕ ಕೃತಿಗಳನ್ನು ಮಾಡಿದರೆ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ತಿಳಿಯಲಾಗುತ್ತದೆ.
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !