
ಅ. ಕುಂಕುಮ, ಮಂಗಳಸೂತ್ರ, ಬಳೆ, ಕಾಲುಂಗುರ ಮುಂತಾದ ಘಟಕಗಳ ಸಹಾಯದಿಂದ ಹಾಗೂ ರಜೋಗುಣದ ಸಾಮರ್ಥ್ಯದಿಂದ ವಿವಾಹಿತ ಸ್ತ್ರೀಯು ಕಡಿಮೆ ಕಾಲಾವಧಿಯಲ್ಲಿ ಪುರುಷ ಪ್ರಧಾನ ಶಿವಸ್ವರೂಪ ಕರ್ತೃತ್ವಸ್ವರೂಪದೊಂದಿಗೆ ಏಕರೂಪವಾಗಬಲ್ಲಳು; ಆದುದರಿಂದ ಸ್ತ್ರೀಯಲ್ಲಿರುವ ಕ್ರಿಯಾಶೀಲತೆಯನ್ನು ಜಾಗೃತ ಗೊಳಿಸಿ, ಪತಿಯ ಕರ್ತವ್ಯಗಳಲ್ಲಿ ಅವನಿಗೆ ಸಂಪೂರ್ಣ ಸಹಾಯ ಮಾಡಿ, ರಜೋಗುಣದ ಸಹಾಯದಿಂದ ಕೃತಿ ಮತ್ತು ಕರ್ಮಗಳ ಯೋಗ್ಯ ಹೊಂದಾಣಿಕೆ ಮಾಡಲು ವಿವಾಹಿತ ಸ್ತ್ರೀಯರಿಗೆ ಆಯಾ ಆಭರಣಗಳ ಕರ್ಮಬಂಧನವನ್ನು ಹಾಕಲಾಗಿದೆ.
ಆ. ಸೌಭಾಗ್ಯಾಲಂಕಾರಗಳ ತೇಜದಾಯಕ ಲಹರಿಗಳ ಸ್ಪರ್ಶದಿಂದ ಸ್ತ್ರೀಯರಿಗೆ ಅವರ ಪಾತಿವ್ರತ್ಯದ ಅರಿವನ್ನು ಮಾಡಿಕೊಡುವ ಆಯೋಜನೆಯನ್ನು ಮಾಡಲಾಗಿದೆ.
ಇ. ಸೌಭಾಗ್ಯಾಲಂಕಾರಗಳ ಬಾಹ್ಯ ಅರಿವಿನಿಂದ ಸಮಾಜವು ಏಕಪತ್ನಿತ್ವ ಮತ್ತು ಪಾತಿವ್ರತ್ಯದ ಜೋಪಾಸನೆಯನ್ನು ಮಾಡಿ ಸ್ವೇಚ್ಛಾಚಾರದಿಂದ ದೂರವಿರಬೇಕೆಂಬ ಯೋಜನೆಯನ್ನು ಮಾಡುವುದು ಕಲಿಯುಗದಲ್ಲಿ ಅನಿವಾರ್ಯವಾಗಿತ್ತು.
ಈ. ಸೌಭಾಗ್ಯಾಲಂಕಾರಗಳೆಂದರೆ ಅಸುರೀ ಶಕ್ತಿಗಳ ಭೋಗದ ಕಣ್ಣುಗಳಿಂದ ರಕ್ಷಣೆಯನ್ನು ಪಡೆಯಲು ಮಾಡಿದಂತಹ ಒಂದು ಪ್ರಯತ್ನವಾಗಿದೆ : ಕಲಿಯುಗವು ರಜ-ತಮ ಪ್ರಧಾನ ವಾಗಿರುವುದ ರಿಂದ ಸ್ವೇಚ್ಛಾಚಾರಕ್ಕೆ ಅನುಕೂಲ ಮತ್ತು ಸಾಧನೆಗೆ ಪ್ರತಿಕೂಲವಾಗಿದೆ. ಈ ಯುಗದಲ್ಲಿ ಸ್ತ್ರೀರೂಪಿ ಪಾತಿವ್ರತ್ಯಕ್ಕೆ ಅಥವಾ ಸೌಭಾಗ್ಯದ ಶೀಲಕ್ಕೆ ಆಭರಣಗಳ ತೇಜದ ಬೇಲಿಯನ್ನು ಹಾಕಲಾಗಿದೆ. ಈ ತೇಜದ ಬಲದಿಂದ ಅವಳ ಶೀಲದ ರಕ್ಷಣೆಯಾಗುತ್ತದೆ. ಸೌಭಾಗ್ಯವತಿ ಸ್ತ್ರೀಯನ್ನು ಮಂಗಳಸೂತ್ರ, ಬಳೆ ಹಾಗೂ ಕುಂಕುಮ ಈ ಸೌಭಾಗ್ಯಾಲಂಕಾರಗಳಿಂದ ರಕ್ಷಿಸಿರುವುದರಿಂದ ಒಂದು ರೀತಿಯಲ್ಲಿ ಅವಳನ್ನು ಆಸುರೀ ಶಕ್ತಿಗಳ ಭೋಗದ ಕಣ್ಣುಗಳಿಂದ ದೂರವಿಡಲು ಕಲಿಯುಗದಲ್ಲಿ ಪ್ರಯತ್ನಿಸಲಾಗಿದೆ.’
(ಸನಾತನ ನಿರ್ಮಿತ ಗ್ರಂಥ ‘ಸ್ತ್ರೀ-ಪುರುಷರ ಆಭರಣಗಳು’)
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !