ಬೆಂಗಳೂರಿನ ಯುವ ಇಂಜಿನಿಯರ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಆದುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಮೆನ್ ಟೂ’ (ಪುರುಷರೂ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ) ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬೆಂಗಳೂರಿನ ೩೪ ವರ್ಷದ ಅತುಲ ಸುಭಾಷ ಎಂಬವರು ತಮ್ಮ ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ಅವರು ೮೦ ನಿಮಿಷಗಳ ವಿಡಿಯೋ ಮತ್ತು ೪೦ ಪುಟಗಳ ಪತ್ರವನ್ನು ಬರೆದು ಆತ್ಮಹತ್ಯೆಯ ಹಿಂದಿನ ಘಟನೆಗಳು ಮತ್ತು ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ. ತಮ್ಮ ೪ ವರ್ಷಗಳ ವೈವಾಹಿಕ ಜೀವನದಲ್ಲಿ ಪತ್ನಿ ಮತ್ತು ಮಾವನ ಕುಟುಂಬದವರಿಂದ ಅನುಭವಿಸಿದ ಕಿರುಕುಳ, ಸುಳ್ಳು ದೂರು, ನ್ಯಾಯಾಂಗ ಹೋರಾಟ ಮತ್ತು ಸಾಮಾಜಿಕ ವ್ಯವಸ್ಥೆ ಇವುಗಳಿಂದಾಗಿ ಮಾನಸಿಕವಾಗಿ ಬೇಸತ್ತ ಅತುಲ ಸುಭಾಷ ಇವರು ಆತ್ಮಹತ್ಯೆಯ ದಾರಿಯನ್ನು ಕಂಡುಕೊಂಡು ತಮ್ಮ ಜೀವನವನ್ನು ಕೊನೆಗೊಳಿಸಿದರು. ಅತುಲ ಇವರು ಸಾಯುವ ಮೊದಲು ಧ್ವನಿಮುದ್ರಣ ಮಾಡಿದ ವಿಡಿಯೋದಲ್ಲಿ, ‘ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸುತ್ತದೆ; ಏಕೆಂದರೆ ನಾನು ಗಳಿಸುತ್ತಿರುವ ಹಣ ನನ್ನ ಶತ್ರುಗಳಿಗೆ ಬಲ ನೀಡುತ್ತಿದೆ. ಅದೇ ಹಣ ನನ್ನನ್ನು ನಾಶ ಮಾಡಲು ಬಳಸಲಾಗುವುದು ಮತ್ತು ಅದು ಮುಂದುವರೆಯಲಿದೆ. ನನ್ನದೇ ತೆರಿಗೆಯ ಹಣದಿಂದ ನಡೆಯುವ ನ್ಯಾಯಾಲಯ, ಪೊಲೀಸ್ ಮತ್ತು ವ್ಯವಸ್ಥೆ ನನಗೆ, ನನ್ನ ಕುಟುಂಬದವರಿಗೆ ಮತ್ತು ನನ್ನಂತಹ ಒಳ್ಳೆಯ ಜನರಿಗೆ ತೊಂದರೆ ನೀಡುವುದಾದರೆ, ಹಣದ ಮೂಲವೇ ನಾಶವಾಗಬೇಕು’, ಎಂದು ಹೇಳಿದ್ದಾರೆ. ಸಾವಿಗೆ ಮುನ್ನ ಅತುಲ ನೀಡಿದ ಹೇಳಿಕೆಯು ಸಮಾಜ, ನ್ಯಾಯವ್ಯವಸ್ಥೆ ಮತ್ತು ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ದುರುಪಯೋಗದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮದುವೆಯ ನಂತರ ಅತುಲ ಇವರು ತಮ್ಮ ಮಾವನವರ ಕುಟುಂಬಕ್ಕೆ ಲಕ್ಷಾಂತರ ರೂಪಾಯಿಗಳ ಆರ್ಥಿಕ ನೆರವು ನೀಡಿದರು. ಪತ್ನಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಕೊಡಿಸಿದರೂ, ಅವರ ವಿರುದ್ಧ ಕೌಟುಂಬಿಕ ಹಿಂಸಾಚಾರ, ಅನೈಸರ್ಗಿಕ ಸಂಬಂಧ, ವರದಕ್ಷಿಣೆ ಕಿರುಕುಳ, ಪತ್ನಿಯ ತಂದೆಯವರ ಕೊಲೆ, ಇತ್ಯಾದಿ ಅಪರಾಧಗಳು ದಾಖಲಿಸಲಾದವು. ಅದಕ್ಕಾಗಿ ಅವರಿಗೆ ೪೦ ಬಾರಿ ಜೌನಪೂರಕ್ಕೆ (ಉತ್ತರಪ್ರದೇಶ) ಅಲೆದಾಡಬೇಕಾಯಿತು. ಕೌಟುಂಬಿಕ ನ್ಯಾಯಾಲಯವು ಅವರ ಮಗನಿಗೆ ಪ್ರತಿತಿಂಗಳು ೪೦ ಸಾವಿರ ರೂಪಾಯಿಗಳ ಜೀವನಾಂಶವನ್ನು ನೀಡಲು ಆದೇಶ ನೀಡಿತು; ಆದರೆ ಅತುಲ ಇವರಿಗೆ ತಮ್ಮ ಮಗನನ್ನು ಎಂದಿಗೂ ನೋಡಲು ಸಾಧ್ಯವಾಗಲೇ ಇಲ್ಲ, ಎಂದೂ ಹೇಳಲಾಗುತ್ತಿದೆ.
ಕಾನೂನಿನ ಏಕಪಕ್ಷೀಯ ಬಳಕೆ
ಅತುಲರ ಆತ್ಮಹತ್ಯೆಯ ಘಟನೆಯು ಕಾನೂನಿನ ಏಕಪಕ್ಷೀಯ ಬಳಕೆ ಮತ್ತು ಅದರ ದುರುಪಯೋಗವನ್ನು ಎತ್ತಿ ತೋರಿಸುತ್ತದೆ. ಮಹಿಳೆಯರನ್ನು ರಕ್ಷಿಸುವ ಕಾನೂನುಗಳು ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸಾಚಾರ ಮತ್ತು ಜೀವನಾಂಶದಂತಹ ಪ್ರಕರಣಗಳಲ್ಲಿ ಪುರುಷರ ಮೇಲೆ ಅನ್ಯಾಯ ಮಾಡಲು ಬಳಸಬಹುದಾಗಿದೆ ಎಂದು ತೋರಿಸುವ ಅನೇಕ ಘಟನೆಗಳಲ್ಲಿ ಇದೊಂದು ಘಟನೆ ಯಾಗಿದೆ. ಕಾನೂನಿನ ಇಂತಹ ಬಳಕೆ ವ್ಯಕ್ತಿಯ ವೈಯಕ್ತಿಕ ಜೀವನದೊಂದಿಗೆ ಕುಟುಂಬಗಳ ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೇಗೆ ನಾಶಮಾಡುತ್ತದೆ, ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಅತುಲರ ತಂದೆ, ‘ನ್ಯಾಯಾಲಯದ ಜನರು ಕಾನೂನಿಗನುಸಾರ ಕೆಲಸ ಮಾಡು ವುದಿಲ್ಲ ಮತ್ತು ಲಂಚ ಪಡೆಯುತ್ತಾರೆ’, ಎಂದು ಅತುಲ ಹೇಳಿದ ಬಗ್ಗೆಯೂ’ ಹೇಳಿದರು. ನ್ಯಾಯಾಲಯದಲ್ಲಿ ಲಂಚ ಪಡೆಯುವಂತಹ ಘಟನೆಗಳು ನ್ಯಾಯಾಂಗದ ನೈತಿಕತೆಯ ಬಗ್ಗೆ ಪ್ರಶ್ನೆಯನ್ನು ಮೂಡಿಸುತ್ತವೆ. ನ್ಯಾಯದ ದೇಗುಲಕ್ಕೆ ಅಂಟಿಕೊಂಡ ಭ್ರಷ್ಟಾಚಾರರೂಪಿ ಗೆದ್ದಲಿನಿಂದಾಗಿ ಜನಸಾಮಾನ್ಯರಿಗೆ ನ್ಯಾಯ ಸಿಗುವ ಭರವಸೆ ಉಳಿದಿಲ್ಲ, ಎಂದು ಅತುಲ ಇವರ ಪ್ರಕರಣದಿಂದ ಯಾರಿಗಾದರೂ ಅನಿಸಿದರೆ ತಪ್ಪೇನು ? ‘ಕೌಟುಂಬಿಕ ಹಿಂಸಾಚಾರ’, ಎಂಬ ಉಲ್ಲೇಖ ಬಂದರೆ, ತಕ್ಷಣ ಮಹಿಳೆಯ ಮೇಲೆ ಅನ್ಯಾಯ ವಾಗಿರಬಹುದು, ಎಂದು ಹೇಳಲಾಗುತ್ತದೆ, ಅದಕ್ಕೆ ಕಾರಣ ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಮಾನತೆ, ಮಹಿಳೆಯರ ಮೇಲಿನ ದಬ್ಬಾಳಿಕೆ ಈ ಪೊಳ್ಳು ಮಾತುಗಳಿಂದ ಸ್ತ್ರೀವಾದಿಗಳು ಮಾಡಿದ ಹೆಚ್ಚಿನ ದೊಡ್ಡಸ್ತಿಕೆಯಾಗಿದೆ. ‘ಮಹಿಳೆಯರ ರಕ್ಷಣೆಗಾಗಿ ಕಾನೂನುಗಳು ಆವಶ್ಯಕವಾಗಿವೆ ಮತ್ತು ಅವುಗಳ ಬಳಕೆಯಾಗಬೇಕು; ಆದರೆ ಅದರ ದುರುಪಯೋಗದಿಂದ ಅನ್ಯಾಯವಾಗುತ್ತಿದೆ’, ಇದುನಾಚಿಕೆಗೇಡಿನ ಸಂಗತಿ. ಅನೇಕ ಪುರುಷರು ಸಮಾಜದ ವಿಚಾರ ಮಾಡಿ ಇಂತಹ ಪ್ರಕರಣಗಳಲ್ಲಿ ತಮ್ಮನ್ನು ತಾವು ವ್ಯಕ್ತ ಮಾಡದ ಕಾರಣ ಈ ಪ್ರಕರಣಗಳಿಗೆ ಮೂಕ ಸಮ್ಮತಿ ಸಿಗುತ್ತಿರುತ್ತದೆ. ಈ ಎಲ್ಲವುಗಳಲ್ಲಿ ದೂರದರ್ಶನ ಮತ್ತು ಪ್ರಸಾರಮಾಧ್ಯಮಗಳು ಕೇವಲ ಮಹಿಳೆಯರ ಪಕ್ಷವನ್ನು ವಹಿಸುತ್ತವೆ ಮತ್ತು ಅಷ್ಟೊಂದು ಭೀಕರವಲ್ಲದ ಇನ್ನೊಂದು ಬದಿ ಬಹಿರಂಗವಾಗುವುದಿಲ್ಲ. ‘ಪುರುಷರು ಜೋಡಿದಾರರ ಕುಟುಂಬದ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಿ’, ಎಂದು ಸಲಹೆ ನೀಡುವ ಭ್ರಷ್ಟ ಜನರು ನ್ಯಾಯಾಂಗದಲ್ಲಿಯೇ ಕೆಲಸ ಮಾಡುತ್ತಿದ್ದಾರೆ, ಇಷ್ಟು ಈ ವ್ಯವಸ್ಥೆ ಭ್ರಷ್ಟಗೊಂಡಿದೆ. ಮಹಿಳೆ-ಪುರುಷರ ಸಮಾನತೆಯ ಬಗ್ಗೆ ಪ್ರಚಾರ-ಪ್ರಸಾರ ಮಾಡುವಾಗ ಇಬ್ಬರೊಂದಿಗೆ ಸಮಾನವಾಗಿ ನಡೆದುಕೊಳ್ಳುವುದು ಮತ್ತು ನ್ಯಾಯ ನೀಡುವುದು ಆವಶ್ಯಕವಾಗಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು.
ಕಾನೂನುಗಳ ಸಮತೋಲನ
೨೦೨೦ ರಲ್ಲಿನ ರಜನೇಶ ವಿರುದ್ಧ ನೇಹಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪು ನೀಡುವಾಗ ಜೀವನಾಂಶಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಉಲ್ಲೇಖಿಸಿತ್ತು. ಅದರಲ್ಲಿ ಜೀವನಾಂಶವನ್ನು ನೀಡುವಾಗ ಪತಿ ಮತ್ತು ಪತ್ನಿ ಇವರಿಬ್ಬರ ಆರ್ಥಿಕ ಆದಾಯ ಮತ್ತು ಅವರ ಜೀವನಶೈಲಿ, ಹಾಗೆಯೇ ಸಾಮಾಜಿಕ ಸ್ಥಾನಮಾನ, ಅವರ ವಿವಾಹದ ಕಾಲಾವಧಿ, ಮಕ್ಕಳ ಭವಿಷ್ಯದ ಆವಶ್ಯಕತೆಯನ್ನು ಪರಿಗಣಿಸಬೇಕು. ಪತಿಯ ಮೇಲಿರುವ ಜವಾಬ್ದಾರಿಗಳು ಮತ್ತು ಅವನ ಮೇಲೆ ಕುಟುಂಬದ ಇತರ ವ್ಯಕ್ತಿಗಳು ಅವಲಂಬಿಸಿರುವರೇ ಹೇಗೆ ? ಎಂಬ ಬಗ್ಗೆಯೂ ವಿಚಾರ ಮಾಡಬೇಕು, ಈ ಅಂಶಗಳು ಒಳಗೊಂಡಿದ್ದವು. ಈ ಅಂಶಗಳನ್ನು ಅಳವಡಿಸಿಕೊಂಡರೆ, ಇಂತಹ ಪ್ರಕರಣಗಳಲ್ಲಿ ಅನ್ಯಾಯದ ಸಾಧ್ಯತೆಗಳು ಕಡಿಮೆಯಾಗಬಹುದು. ಮಹಿಳಾ ಸಂರಕ್ಷಣೆಯ ಕಾನೂನುಗಳಲ್ಲಿ ತಿದ್ದುಪಡಿಯನ್ನು ಮಾಡಿ ಅವುಗಳಲ್ಲಿ ಸಮತೋಲನ ಕಾಪಾಡುವ ಸಮಯ ಈಗ ಬಂದಿದೆ. ಮಹಿಳೆಯರಿಗೆ ರಕ್ಷಣೆ ಇರುತ್ತದೆ; ಆದರೆ ಸುಳ್ಳು ದೂರು ಗಳನ್ನು ಪರಿಗಣಿಸದಂತೆ ನೋಡಿಕೊಳ್ಳಬೇಕು. ನ್ಯಾಯವ್ಯವಸ್ಥೆ ಯಲ್ಲಿ ಪಾರದರ್ಶಕತೆಯನ್ನು ತರಲು ತಂತ್ರಜ್ಞಾನದ ಬಳಕೆ ಮತ್ತು ಸುಳ್ಳು ಆರೋಪಿಸುವವರ ಮೇಲೆ ಕಠಿಣ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ. ಟೀಕೆಗೆ ಗುರಿಯಾಗಿರುವ ಕಾಯಿದೆಯ ವಿಭಾಗ ಕಲಮ್ ‘೪೯೮ ಅ’ ಕಾನೂನನ್ನು ಸರಿಯಾಗಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಅದು ಸಾಮಾಜಿಕ ಬಾಧ್ಯತೆಯ ಮೇಲೆ ತಪ್ಪು ಪರಿಣಾಮ ಬೀರಬಹುದು. ಆದುದರಿಂದ ‘೪೯೮ ಅ’ ಈ ಕಾನೂನು ಜಾಮೀನು ನೀಡುವಂತೆ ಮಾಡಬೇಕು, ಹಾಗೆಯೇ ಅದು ಲಿಂಗ ತಟಸ್ಥವಾಗಿರಬೇಕು (ಮಹಿಳೆ-ಪುರುಷ ಹೀಗೆ ಭೇದ ಮಾಡದಿರುವ) ಮತ್ತು ಇಂತಹ ಪ್ರಕರಣಗಳಲ್ಲಿ ದೂರು ಸಲ್ಲಿಸುವ ಮೊದಲು ಮಧ್ಯಸ್ಥಿಕೆ ಮಾಡುವುದು, ಅಂದರೆ ಒಟ್ಟಿಗೆ ಕುಳಿತು ಪ್ರಕರಣವನ್ನು ಪರಿಹರಿಸಲು ಪ್ರಯತ್ನಿಸುವುದು ಮುಂತಾದ ಮಾರ್ಗಗಳನ್ನು ಅವಲಂಬಿಸಬಹುದು.
ಕೌಟುಂಬಿಕ ಆರೋಗ್ಯಕ್ಕಾಗಿ ಸಾಧನೆ
ಇಂತಹ ಪ್ರಕರಣಗಳ ಕಡೆಗೆ ಧರ್ಮದ ದೃಷ್ಟಿಯಿಂದ ನೋಡು ವುದು, ಇದು ಸಮಾಜವ್ಯವಸ್ಥೆಯನ್ನು ಉತ್ತಮವಾಗಿಡಲು ಅತ್ಯಂತ ಆವಶ್ಯಕವಾಗಿದೆ. ಸದ್ಯದ ಕಾಲದಲ್ಲಿ ಜೋಡಿದಾರರು ಇಟ್ಟುಕೊಳ್ಳುವ ಅನಾವಶ್ಯಕ ಅಪೇಕ್ಷೆ, ಅವುಗಳ ಈಡೇರಿಸುವಿಕೆ, ಕುಟುಂಬ ಮಕ್ಕಳು, ಅದಕ್ಕೆ ಬೆಂಬಲವೆಂದು ‘ಕರಿಯರ್’ ಕಾಪಾಡಿಕೊಳ್ಳಲು ಮಹಿಳೆ ಮತ್ತು ಪುರುಷರು ಇವರಿಬ್ಬರೂ ಹೆಣಗಾಡುವುದು ಕಂಡು ಬರುತ್ತದೆ. ಸಂಭಾಷಣೆ, ಮಾನಸಿಕ ಬಲ, ಮನಸ್ಸಿನ ಶಾಂತಿ ಇವುಗಳಿಗಾಗಿ ಸಾಕಷ್ಟು ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬಗಳಲ್ಲಿ ವಿಚಾರವಿನಿಯಮ ಹೆಚ್ಚಿಸಲು ಮತ್ತು ಕುಟುಂಬಗಳ ಮನೋಸ್ಥೈರ್ಯವನ್ನು ಹೆಚ್ಚಿಸಲು, ಒತ್ತಡ-ಸಂಘರ್ಷಗಳಿಗೆ ಪರಿಹಾರ ಕಂಡು ಹಿಡಿಯಲು ಧರ್ಮವು ಯೋಗ್ಯ ಆಚರಣೆಯ (ಧರ್ಮಾಚರಣೆಯ) ಮಾರ್ಗವನ್ನು ಕಂಡು ಹಿಡಿದಿದೆ. ದೀರ್ಘಕಾಲದ ಪರಿಹಾರವೆಂದು ‘ಆಧ್ಯಾತ್ಮಿಕ ಸಾಧನೆ’ ಇದು ಅತ್ಯುತ್ತಮ ಮಾರ್ಗವಾಗಿದೆ. ಸಂತರು ಅಥವಾ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡಿದರೆ ವ್ಯಕ್ತಿಗೆ ಮಾನಸಿಕ ಸ್ಥಿರತೆ ಲಭಿಸುತ್ತದೆ. ಜೀವನದ ಸಮಸ್ಯೆಗಳನ್ನು ನಿವಾರಿಸಲು ಬೇಕಾದ ಆತ್ಮಬಲವನ್ನು ಪಡೆಯಲು ಆಧ್ಯಾತ್ಮಿಕ ಸಾಧನೆ ಮಾಡುವುದೇ ಇದಕ್ಕೆ ಪರ್ಯಾಯವಾಗಿದೆ !