ಹಿಂದೂದ್ವೇಷಿ ಇಲ್ತಿಜಾ ಮುಫ್ತಿ !

ಇಲ್ತಿಜಾ ಮುಫ್ತಿ

ಫಾರುಕ್‌ ಅಬ್ದುಲ್ಲಾ, ಅವರ ಪುತ್ರ ಒಮರ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಇವರು ಈ ಹಿಂದೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಗಳಾಗಿದ್ದರು. ಒಮರ್‌ ಅಬ್ದುಲ್ಲಾ ಪ್ರಸ್ತುತ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾರೆ. ಫಾರುಕ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಇವರ ವಂಶದಲ್ಲಿ ಹಿಂದುತ್ವ, ಹಿಂದೂ ಮತ್ತು ಭಾರತದ ಬಗ್ಗೆ ಯಾವಾಗಲೂ ತಿರಸ್ಕಾರದಿಂದ ಮಾತನಾಡಲಾಗುತ್ತದೆ, ಹಾಗೆಯೇ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವಾಗಲೂ ಈ ಹಿಂದೂದ್ವೇಷಿ ಮುಖ್ಯಮಂತ್ರಿಗಳು ಸದಾ ಪಾಕಿಸ್ತಾನಿ ಭಯೋತ್ಪಾದಕರು ಮತ್ತು ಮುಸಲ್ಮಾನ ಪಕ್ಷ ವಹಿಸಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಬೆಂಬಲಿಸಿದ್ದಾರೆ. ಕೇಂದ್ರದಲ್ಲಿ ಭಾಜಪ ಸರಕಾರ ಬಂದ ನಂತರ ಈ ವಿಷಯ ಕ್ರಮೇಣ ಕಡಿಮೆಯಾಗುತ್ತಿದೆ; ಆದರೆ ಇವೆರಡೂ ವಂಶದವರಲ್ಲಿ ಇಂದಿಗೂ ಹಿಂದೂದ್ವೇಷದ ಕಾಮಾಲೆ ಮುಂದುವರೆದಿದೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಇವರ ಮಗಳು ಇಲ್ತಿಜಾ ಇವರು, ‘ಹಿಂದುತ್ವವು ಒಂದು ರೋಗವಾಗಿದೆ, ಇದರಿಂದಾಗಿ ಲಕ್ಷಾಂತರ ಭಾರತೀಯರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದು ದೇವರ ಹೆಸರನ್ನೂ ಕಳಂಕಿತಗೊಳಿಸುತ್ತದೆ. ‘ಜಯ ಶ್ರೀರಾಮ’ ಘೋಷಣೆ ಈಗ ರಾಮರಾಜ್ಯಕ್ಕೆ ಸೇರಿಲ್ಲ. ‘ಮಾಬ್‌ ಲಿಂಚಿಂಗ್‌’ನ ಬಳಕೆ ಮಾಡಲಾಗುತ್ತಿದೆ’, ‘ ಎಂದು ಹೇಳಿದ್ದಾರೆ. ಡಿಸೆಂಬರ್‌ ೬ ರಂದು ಒಂದು ಕಥಿತ ವಿಡಿಯೋ ಪ್ರಸಾರವಾದ ನಂತರ ಪೀಪಲ್ಸ್ ಡೆಮೊಕ್ರೆಟಿಕ್‌ ಪಕ್ಷದ ನಾಯಕನು ಈ ವಿಷಯ ಹೇಳಿದನು. ಅಪ್ರಾಪ್ತ ಮುಸಲ್ಮಾನ ಮಕ್ಕಳನ್ನು ಕೆಲವರು ಥಳಿಸುತ್ತಿರುವುದು ಕಂಡು ಬರುತ್ತಿದೆ. ಈ ಜನರು ಮಕ್ಕಳೊಂದಿಗೆ ಅಮಾನವೀಯವಾಗಿ ವರ್ತಿಸುತ್ತಾರೆ ಮತ್ತು ಅವರಿಗೆ ‘ಜಯ ಶ್ರೀರಾಮ’ ಎಂದು ಹೇಳಲು ಒತ್ತಾಯಿಸಲಾಗುತ್ತಿದೆ ಎಂಬ ಆರೋಪವಿದೆ. ಇಲ್ತಿಜಾ ಇವರು
ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಹಂಚಿಕೊಂಡಿ ದ್ದಾರೆ; ಆದರೆ ನಂತರ ಅವರು ಅದನ್ನು ತೆಗೆದು ಹಾಕಿದರು.

ಈ ವರ್ಷ ನಡೆದ ಜಮ್ಮ-ಕಾಶ್ಮೀರ ವಿಧಾನಸಭಾ ಚುನಾವಣೆ ಯಲ್ಲಿ ಮೆಹಬೂಬಾ ಮುಫ್ತಿ ಸ್ಪರ್ಧಿಸಲಿಲ್ಲ. ಅವರು ತಮ್ಮ ಮಗಳು ಇಲ್ತಿಜಾಳನ್ನು ಚುನಾವಣೆಯ ಕಣಕ್ಕೆ ಇಳಿಸಿದ್ದರು; ಆದರೆ ಇಲ್ತಿಜಾ ಅಲ್ಲಿನ ಮೊದಲ ಚುನಾವಣೆಯಲ್ಲಿ ಸೋತಿದ್ದಾರೆ. ಇಂತಹ ಹಿಂದೂದ್ವೇಷಿ ನಾಯಕರನ್ನು ಯಾರು ಆರಿಸುವರು ? ಎಂಬ ಪ್ರಶ್ನೆ ಇದೆ. ಹಿಂದುತ್ವವು ೧೯೪೦ ರ ದಶಕದಲ್ಲಿ ಸ್ವಾತಂತ್ರ್ಯವೀರ ಸಾವರಕರ ಇವರು ಪ್ರಚಾರ ಮಾಡಿದ ದ್ವೇಷದ ಸಿದ್ಧಾಂತ ವಾಗಿದೆ ಎಂದು ಹೇಳುತ್ತಾ ಇಲ್ತಿಜಾ ಇವರು ಹಿಂದುತ್ವವನ್ನು ಟೀಕಿಸಿದರು. ಇಲ್ತಿಜಾ ಇವರ ಟೀಕೆಯ ನಂತರ ಭಾಜಪದ ನಾಯಕ ರವಿಂದರ ರೈನಾ ಇವರು, ‘ಪಿಡಿಪಿ ನಾಯಕರು ಹಿಂದೂ ಧರ್ಮಕ್ಕಾಗಿ ಅತ್ಯಂತ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಅವರು ಕ್ಷಮೆ ಕೇಳಬೇಕು. ಈ ರೀತಿಯ ಭಾಷೆ ಯನ್ನು ಬಳಸಬಾರದು. ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳಿರಬಹುದು; ಆದರೆ ಅವಹೇಳನಕಾರಿ ಭಾಷೆಯನ್ನು ಬಳಸಬಾರದು’, ಎಂದು ಹೇಳಿದರು.

ಹಿಂದೂಗಳ ಮೇಲಿನ ದೌರ್ಜನ್ಯಗಳ ಬಗ್ಗೆ ಇಲ್ತಿಜಾ ಮೌನ !

ಇಡೀ ಜಗತ್ತನ್ನು ಇಸ್ಲಾಮೀಕರಣ ಮಾಡುವ ಬಗ್ಗೆ ಯಾರು ಪಣ ತೊಟ್ಟಿದ್ದಾರೆಯೋ, ಅಂತಹ ಮತಾಂಧ ಮುಸಲ್ಮಾನರೇ ಹಿಂದೂ ಮತ್ತು ಕ್ರೈಸ್ತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇದರ ಉತ್ತಮ ಉದಾಹರಣೆಯನ್ನು ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ನೀಡಬಹುದು. ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲಲಾಗುತ್ತಿದೆ, ಅಲ್ಲಿ ಹಿಂದೂಗಳನ್ನು ಒತ್ತಾಯಪೂರ್ವಕವಾಗಿ ಮತಾಂತರಿಸಿ ಅವರ ಆಸ್ತಿಯನ್ನು ಲೂಟಿ ಮಾಡಲಾಗುತ್ತಿದೆ. ಬಾಂಗ್ಲಾದೇಶವಾಗಿರಲಿ ಅಥವಾ ಭಾರತ ಈ ದೇಶಗಳಲ್ಲಿನ ಅನೇಕ ರಾಜ್ಯಗಳಲ್ಲಿ ಹಿಂದೂಗಳನ್ನು ಇಸ್ಲಾಮ್‌ ಪಂಥಕ್ಕೆ ಮತಾಂತರಿಸಲು ಹಿಂದೂಗಳ ‘ಮಾಬ್‌ ಲಿಂಚಿಂಗ್’ ಘಟನೆಗಳು ನಡೆದಿವೆ. ಹೀಗಿರುವಾಗ ಈ ಬಗ್ಗೆ ಇಲ್ತಿಜಾ ಇವರು ಬಾಯಿ ತೆರೆಯುತ್ತಿಲ್ಲ. ದೇಶದಲ್ಲಿನ ಪ್ರಗತಿಪರರು, ಸಾಮ್ಯವಾದಿಗಳು ಮತ್ತು ನಾಸ್ತಿಕ ಗುಂಪುಗಳು ಯಾರಾದರೊಬ್ಬ ಮುಸಲ್ಮಾನರ ಮೇಲೆ ದೌರ್ಜನ್ಯವಾದರೆ, ತಕ್ಷಣವೇ ಮುಸಲ್ಮಾನರ ಪರವಹಿಸಿ ‘ದೇಶದಲ್ಲಿ ಮಸಲ್ಮಾನರಿಗೆ ಅಪಾಯ ಕಾದಿದೆ’, ಎಂಬ ವದಂತಿಯನ್ನು ಹಬ್ಬಿಸುತ್ತಾರೆ; ಆದರೆ ಹಿಂದೂಗಳ ಮೇಲೆ ಇಲ್ಲಿಯವರೆಗೆ ಮಿತಿಮೀರಿದ ಅತ್ಯಾಚಾರ ನಡೆದಿರುವಾಗಲೂ ಆ ಬಗ್ಗೆ ಅವರು ಬಾಯಿಮುಚ್ಚಿಕೊಂಡಿರುತ್ತಾರೆ. ಇಲ್ತಿಜಾ ಇವರ ಹೇಳಿಕೆಯನ್ನು ಅವರು ಬೆಂಬಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ವಾತಂತ್ರ್ಯವೀರ ಸಾವರಕರ ಇವರ ಸಿದ್ಧಾಂತ ಹಿಂದೂ ರಾಷ್ಟ್ರವನ್ನು ಆಧರಿಸಿದೆ. ಇದರಲ್ಲಿ ಎಲ್ಲ ಸಮಾಜದ ಜನರ ಪ್ರಗತಿಯ ವಿಚಾರ ಮಾಡಲಾಗಿದೆ; ಆದರೆ ಇದು ಮೋಹನದಾಸ ಗಾಂಧಿ, ಪಂಡಿತ ನೆಹರು ಇವರಿಗೆ ಒಪ್ಪಿಗೆಯಾಗದ ಕಾರಣ ಅವರು ಮುಸಲ್ಮಾನರ ಓಲೈಕೆ ಮಾಡಿ ಪಾಕಿಸ್ತಾನವನ್ನು ನಿರ್ಮಿಸಿ ದೇಶವನ್ನು ವಿಭಜಿಸಿದರು. ವಿಭಜನೆಯಾಗುವಾಗ ಮತ್ತು ವಿಭಜನೆಯಾದ ನಂತರವೂ ಭಾರತ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಮಿತಿಮೀರಿದ ದೌರ್ಜನ್ಯಗಳಾಗುತ್ತಿವೆ, ಎಂಬುದನ್ನು ಇಲ್ತಿಜಾ ಇವರು ಮರೆತಿರುವರೇ ?

ಹಿಂದೂದ್ವೇಷಿಗಳನ್ನು ಭಾರತದಿಂದ ಹೊರದಬ್ಬಬೇಕು !

ಪೀಪಲ್ಸ್ ಡೆಮೊಕ್ರೆಟಿಕ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇವರು ೨೦೧೬ ರಲ್ಲಿ ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾದ ನಂತರ ೨೦೧೮ ರಲ್ಲಿ ಭಾಜಪ ತನ್ನ ಬೆಂಬಲವನ್ನು ಹಿಂಪಡೆಯಿತು. ಆದುದರಿಂದ ಅವರಿಗೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಆಗಸ್ಟ್ ೨೦೧೯ ರಲ್ಲಿ ಕೇಂದ್ರ ಸರಕಾರವು ಭಾರತೀಯ ಸಂವಿಧಾನದಲ್ಲಿನ ಕಲಮ್‌ ೩೭೦ ರದ್ದು ಪಡಿಸುವ ಮೂಲಕ ಜಮ್ಮು-ಕಾಶ್ಮೀರದ ಪ್ರತ್ಯೇಕ ರಾಜ್ಯದ ಸ್ಥಾನಮಾನ ರದ್ದುಗೊಳಿಸಿತು ಮತ್ತು ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು, ಆಗ ಕಾನೂನು ಮತ್ತು ಸುವ್ಯವಸ್ಥೆಗಾಗಿ ಮೆಹಬೂಬಾ ಮುಫ್ತಿ ಇವರನ್ನು ಬಹಳ ಕಾಲ ಗೃಹಬಂಧನದಲ್ಲಿ ಇರಿಸಲಾಗಿತ್ತು. ಇಂತಹ ಕುಟುಂಬದ ಇಲ್ತಿಜಾರಂತಹ ವ್ಯಕ್ತಿಯಿಂದ ದೇಶಪ್ರೇಮ ಎಂದಾದರೂ ವ್ಯಕ್ತ ವಾಗಬಹುದೇ ? ‘ದೇಶದಲ್ಲಿ ಹಿಂದೂಗಳ ದೇವಸ್ಥಾನಗಳು ಮತ್ತು ಧಾರ್ಮಿಕ ಮೆರವಣಿಗೆಗಳ ಮೇಲೆ ‘ಅಲ್ಲಾಹು ಅಕಬರ್‌ (ಅಲ್ಲಾ ಮಹಾನ್‌ ಇದ್ದಾನೆ) ಎಂಬ ಘೋಷಣೆ ನೀಡುತ್ತಾ ಮಸೀದಿಗಳಿಂದ ದಾಳಿಗಳಾಗುತ್ತವೆ, ಆಗ ಇಲ್ತಿಜಾ ಮುಫ್ತಿ ಅಥವಾ ಅವರಂತಹ ಹಿಂದೂದ್ವೇಷಿ ರಾಜಕೀಯ ನಾಯಕರು ಬಾಯಿ ತೆರೆಯುವುದಿಲ್ಲ ಮತ್ತು ಕಾನೂನುಮಾರ್ಗದಿಂದ ಹಿಂದೂಗಳು ‘ಜಯ ಶ್ರೀರಾಮ’ ಎಂಬ ಘೋಷಣೆಯನ್ನು ನೀಡಿದರೆ, ಅವರಿಗೆ ಹೊಟ್ಟೆ ನೋವು ಆರಂಭವಾಗುತ್ತದೆ. ಭಾರತದ ನಾಗರಿಕರು ‘ಜಯ ಶ್ರೀರಾಮ’ನ ಘೋಷಣೆಯನ್ನು ಎಲ್ಲಿ ನೀಡಬೇಕು ಮತ್ತು ಎಲ್ಲಿ ನೀಡಬಾರದು’, ಎಂದು ಹಿಂದೂಗಳಿಗೆ ಗೊತ್ತಿದೆ. ಹಿಂದುಸ್ಥಾನದಲ್ಲಿ ಹಿಂದೂಗಳು ಏನು ಮಾಡಬೇಕು ಮತ್ತು ಏನು ಮಾಡಬಾರದು ? ಎಂಬುದನ್ನು ಇಲ್ತಿಜಾ ಇವರು ಹೇಳಬಾರದು.

ಇಲ್ಲಿಯವರೆಗೆ ಭಾರತದಲ್ಲಿ ಗಲಭೆಯಾದ ನಗರಗಳಲ್ಲೆಲ್ಲ ಹಿಂದೂಗಳನ್ನು ಥಳಿಸಲಾಯಿತು, ಹಾಗೆಯೇ ಈ ಗಲಭೆಗಳಲ್ಲಿ ಹಿಂದೂಗಳ ಮನೆಗಳು ಮತ್ತು ಆಸ್ತಿಪಾಸ್ತಿ ನಾಶವಾಗಿವೆ. ಭಯೋತ್ಪಾದಕರ ಬೆದರಿಕೆಗಳಿಂದಾಗಿ ಕಾಶ್ಮೀರದಿಂದ ೪ ಲಕ್ಷದ ೫೦ ಸಾವಿರ ಹಿಂದೂಗಳು ಸ್ಥಳಾಂತರಗೊಂಡರು. ಉಳಿದ ಹಿಂದೂಗಳನ್ನು ಭಯೋತ್ಪಾದಕರು ಕೊಂದರು. ಇಂದಿಗೂ ಹಿಂದೂಗಳ ಮೇಲೆ ಹಲವಾರು ದೌರ್ಜನ್ಯಗಳಾಗುತ್ತಿವೆ. ಹೀಗಿರುವಾಗ ಈ ಬಗ್ಗೆ, ಇಲ್ತಿಜಾ ಮುಫ್ತಿ ಅಷ್ಟೇ ಅಲ್ಲ, ನಟಿ ಸ್ವರಾ ಭಾಸ್ಕರ, ನಟ ನಸರುದ್ದೀನ್‌ ಶಹಾ, ಆಮೀರಖಾನ್, ಸಲ್ಮಾನ್‌ ಖಾನ್, ಶಾಹರುಖ್‌ ಖಾನ್, ಪ್ರಕಾಶ ರಾಜ್‌ ಮತ್ತು ಕಮಲ್‌ ಹಸನ್‌ ಈ ಜನರು ಏನೂ ಮಾತನಾಡುವುದಿಲ್ಲ. ಸ್ವರಾ ಭಾಸ್ಕರ ಇವರು ಹಿಂದುತ್ವವನ್ನು ತಾಲಿಬಾನಿ ಭಯೋತ್ಪಾದನೆಗೆ ಹೋಲಿಸಿದ್ದಾರೆ. ಅರಬ್‌ ರಾಷ್ಟ್ರಗಳಲ್ಲಿ ಇಸ್ಲಾಮ್‌ ವಿರುದ್ಧ ಹೇಳಿಕೆ ನೀಡಿದರೆ, ಅವರಿಗೆ ತಕ್ಷಣ ಚಾಟಿ ಏಟು, ಬರೆ ಎಳೆಯುವುದು, ಕಲ್ಲೇಟು ಅಥವಾ ಗಲ್ಲು ಶಿಕ್ಷೆ ನೀಡಲಾಗುತ್ತದೆ; ಆದರೆ ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಇಲ್ತಿಜಾನಂತಹ ಪ್ರಗತಿಪರ ಗುಂಪುಗಳು ಸರ್ವಧರ್ಮಸಮಭಾವದ ಭಾಷೆಯನ್ನಾಡಿ ಕೇವಲ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ನಾಶದ ಸಂಚು ರೂಪಿಸುತ್ತಿವೆ. ಹಾಗಾಗಿ ಹಿಂದೂಧರ್ಮವನ್ನು ಆಕ್ಷೇಪಿಸುವವರನ್ನು ದೇಶದಿಂದ ಹೊರ ಹಾಕುವ ಸಮಯ ಬಂದಿದೆ. ಈಗ ಕೇಂದ್ರ ಸರಕಾರವೇ ಇಲ್ತಿಜಾ ಮುಫ್ತಿಯವರಂತಹ ಹಿಂದೂದ್ವೇಷಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು !