ಡೋನಾಲ್ಡ್ ಟ್ರಂಪ್ ಅವರ ಎಚ್ಚರಿಕೆ’ಬ್ರಿಕ್ಸ್’ ರಾಷ್ಟ್ರಗಳು ಹೊಸ ಕರೆನ್ಸಿಯನ್ನು ಪರಿಚಯಿಸಿದರೆ, ಅವುಗಳಿಗೆ ಅಮೇರಿಕಾದ ವಾಣಿಜ್ಯ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುತ್ತೇವೆ !

ವಾಷಿಂಗ್ಟನ (ಅಮೇರಿಕಾ) – ಭಾರತ ಸೇರಿದಂತೆ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇಜಿಪ್ಟ್, ಇಥಿಯೋಪಿಯಾ, ಇರಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈ ದೇಶಗಳು ಭಾಗವಹಿಸಿರುವ ಬ್ರಿಕ್ಸ್ ರಾಷ್ಟ್ರಗಳು ಹೊಸ ಕರೆನ್ಸಿಯನ್ನು ಪರಿಚಯಿಸುವ ಪ್ರಯತ್ನದಲ್ಲಿವೆ. ಈ ಕರೆನ್ಸಿ ಅಮೇರಿಕಾದ ಡಾಲರ್ ಅನ್ನು ದುರ್ಬಲಗೊಳಿಸುವ ಉದ್ದೇಶದಿಂದ ತರಲಾಗುತ್ತಿದೆಯೆನ್ನುವ ಪ್ರಸ್ತಾವನೆಯಿಂದ ಅಮೇರಿಕಾದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ ಟ್ರಂಪ ಅವರು ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ಅವರು ಪೋಸ್ಟ್ ಮಾಡಿ, “ಬ್ರಿಕ್ಸ್ ದೇಶಗಳು ಡಾಲರ್ ನಿಂದ ದೂರ‌ ಹೋಗುವ ಪ್ರಯತ್ನ ಮಾಡುತ್ತಿವೆ. ನಮಗೆ ಈ ದೇಶಗಳಿಂದ ಅವರು ಹೊಸ ‘ಬ್ರಿಕ್ಸ್’ ಕರೆನ್ಸಿಯನ್ನು ರೂಪಿಸುವುದಿಲ್ಲವೆನ್ನುವ ಅಥವಾ ಅವರು ಶಕ್ತಿಶಾಲಿ ಅಮೇರಿಕಾದ ಡಾಲರ ಸ್ಥಾನದಲ್ಲಿ ಇತರೆ ಯಾವುದೇ ಕರೆನ್ಸಿಯನ್ನು ಬೆಂಬಲಿಸುವುದಿಲ್ಲ ಎನ್ನುವ ಆಶ್ವಾಸನೆ ಬೇಕಾಗಿದೆ. ಇಲ್ಲವಾದರೆ ಅವರಿಗೆ ಶೇ.100 ರಷ್ಟು ಆದಾಯ ತೆರಿಗೆಯನ್ನು ಎದುರಿಸಬೇಕಾಗುವುದು ಅಥವಾ ಅವರ ಉತ್ಪನ್ನಗಳನ್ನು ಅಮೇರಿಕಾದ ವಾಣಿಜ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಮರೆಯಬೇಕಾಗಬಹುದು” ಎಂದು ಹೇಳಿದ್ದಾರೆ.೧. ಅಮೇರಿಕಾದ ಡಾಲರ್ ಜಾಗತಿಕ ವ್ಯಾಪಾರದಲ್ಲಿ ಇಲ್ಲಿಯವರೆಗೆ ಅತ್ಯಂತ ಹೆಚ್ಚು ಬಳಸಲಾಗುತ್ತಿರುವ ಕರೆನ್ಸಿಯಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು, ಅವರು ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಅಮೇರಿಕಾದ ಪ್ರಭುತ್ವಕ್ಕೆ ಬೇಸರಗೊಂಡಿದ್ದಾರೆ. ಅಮೇರಿಕಾದ ಡಾಲರ ಮತ್ತು ಯುರೋಪಿನ `ಯುರೋ’ ಈ ಕರೆನ್ಸಿಯ ಮೇಲಿನ ಜಾಗತಿಕ ಅವಲಂಬನೆಯನ್ನು ಕಡಿಮೆಗೊಳಿಸಿ ಬ್ರಿಕ್ಸ ದೇಶಗಳಿಗೆ ಅವರ ಆರ್ಥಿಕ ಹಿತವನ್ನು ಹೆಚ್ಚು ಉತ್ತಮ ಪದ್ಧತಿಯಿಂದ ಮುಂದುವರಿಸಲು ಇಚ್ಛೆಪಡುತ್ತಿವೆ’ ಎಂದು ಹೇಳಿಕೆಯಾಗಿದೆ.೨. ಕಳೆದ ವರ್ಷ ನಡೆದ ‘ಬ್ರಿಕ್ಸ್’ ಪರಿಷತ್ತಿನಲ್ಲಿ ಭಾಗವಹಿಸಿದ ದೇಶಗಳು ತಮ್ಮ ಕರೆನ್ಸಿಯನ್ನು ಆರಂಭಿಸಬೇಕೆಂದು ಚರ್ಚೆಯೊಂದಿಗೆ ಈ ಪರಿಷತ್ತಿನ ದೇಶಕ್ಕಾಗಿ ಪರಸ್ಪರ ವ್ಯಾಪಾರ ಮತ್ತು ಹೂಡಿಕೆಗಾಗಿ ಒಂದು ಸಮಾನ ಕರೆನ್ಸಿ ನಿರ್ಮಾಣ ಮಾಡುವ ಪ್ರಸ್ತಾವನೆ ನೀಡಿತ್ತು.

‘ಬ್ರಿಕ್ಸ್’ ಕರೆನ್ಸಿಗಾಗಿ ಯಾವುದೇ ಯೋಜನೆ ಇಲ್ಲ ! – ಡಾ. ಜೈಶಂಕರ್

ಡಾ. ಜೈಶಂಕರ್

ಅವರ ಸ್ಪಷ್ಟನೆಡೊನಾಲ್ಡ ಟ್ರಂಪ್ ಅವರ ಬ್ರಿಕ್ಸ ಕರೆನ್ಸಿಯ ಬಗ್ಗೆ ಭಾರತದ ಯಾವುದೇ ಯೋಜನೆಯಿಲ್ಲವೆಂದು ಭಾರತದ ವಿದೇಶಾಂಗ ಸಚಿವರಾದ ಡಾ. ಜೈಶಂಕರ ಇವರು ಸ್ಪಷ್ಟಪಡಿಸಿದ್ದಾರೆ.ಡೋನಾಲ್ಡ್ ಟ್ರಂಪ್ ಅವರ ಎಚ್ಚರಿಕೆಡೊನಾಲ್ಡ ಟ್ರಂಪ್ ಅವರ ಬ್ರಿಕ್ಸ ಕರೆನ್ಸಿಯ ಬಗ್ಗೆ ಭಾರತದ ಯಾವುದೇ ಯೋಜನೆಯಿಲ್ಲವೆಂದು ಭಾರತದ ವಿದೇಶಾಂಗ ಸಚಿವರಾದ ಡಾ. ಜೈಶಂಕರ ಇವರು ಸ್ಪಷ್ಟಪಡಿಸಿದ್ದಾರೆ.

ಸಂಪಾದಕೀಯ ನಿಲುವು

(ಬ್ರಿಕ್ಸ್ ಎಂದರೆ ಭಾರತ ಸೇರಿದಂತೆ 9 ದೇಶಗಳ ಸಂಘಟನೆ)ಯಾವ ದೇಶ ಅಥವಾ ಜಾಗತಿಕ ಸಂಘಟನೆ ಅಮೇರಿಕಾಗೆ ಅದರ ಪ್ರತಿಸ್ಪರ್ಧಿಯೆಂದು ಅನಿಸುತ್ತದೆಯೋ, ಅದನ್ನು ಮುಗಿಸಲು ಅಥವಾ ಅದರ ಕತ್ತು ಹಿಸುಕಲು ಅಮೇರಿಕಾ ವಿವಿಧ ಕ್ರಮಗಳನ್ನು ಕೈಕೊಳ್ಳುತ್ತದೆ. ಟ್ರಂಪ ಅವರು ನೀಡಿರುವ ಎಚ್ಚರಿಕೆಯಿಂದ ಇದು ಸ್ಪಷ್ಟವಾಗಿ ಕಾಣುತ್ತದೆ. ಇಂತಹ ದೇಶ ಎಂದಾದರೂ ಭಾರತದ ಮಿತ್ರನಾಗಬಹುದೇ ?