ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಶಿವಮೊಗ್ಗದ ಕುಮಾರ ಶ್ರೀಸಾತ್ತ್ವಿಕ (ವಯಸ್ಸು ೧೨ ವರ್ಷಗಳು) ಇವನ ತಾಯಿಗೆ ಅರಿವಾದ ಅವನ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.
(೨೦೧೫ ರಲ್ಲಿ ಚಿ. ಶ್ರೀಸಾತ್ತ್ವಿಕ ಇವನ ಆಧ್ಯಾತ್ಮಿಕ ಮಟ್ಟವು ಶೇ. ೫೧ ರಷ್ಟಿತ್ತು. ೨೦೨೪ ರಲ್ಲಿ ಅದು ಹೆಚ್ಚಾಗಿ ಶೇ. ೫೨ ರಷ್ಟಾಗಿದೆ. – ಸಂಕಲನಕಾರರು)
‘೨೦೧೫ ರಲ್ಲಿ ‘ಕು. ಶ್ರೀಸಾತ್ತ್ವಿಕ ಇವನು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿದ್ದು ಅವನ ಆಧ್ಯಾತ್ಮಿಕ ಮಟ್ಟ ಶೇ. ೫೧ ರಷ್ಟಿದೆ’, ಎಂದು ಘೋಷಿಸಲಾಗಿತ್ತು. ೨೦೨೪ ರಲ್ಲಿ ಅವನ ಆಧ್ಯಾತ್ಮಿಕ ಮಟ್ಟವು ಶೇ. ೫೨ರಷ್ಟಾಗಿದೆ. ಅವನ ಮೇಲೆ ಪಾಲಕರು ಮಾಡಿದ ಯೋಗ್ಯ ಸಂಸ್ಕಾರ, ಅವನ ಸಾಧನೆಯ ತಳಮಳ ಮತ್ತು ಅವನಲ್ಲಿನ ಭಾವದಿಂದಾಗಿ ಈಗ ಅವನ ಸಾಧನೆಯಲ್ಲಿ ಪ್ರಗತಿಯಾಗುತ್ತಿದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೮.೧೦.೨೦೨೪) |
೧. ನಮ್ರತೆ
‘ನಮ್ಮ ಮನೆಗೆ ಯಾರೇ ಬಂದರೂ, ಶ್ರೀಸಾತ್ತ್ವಿಕನು ಅವರಿಗೆ ಕೂಡಲೇ ನಮಸ್ಕಾರ ಮಾಡುತ್ತಾನೆ. ಅವನು ಅವರೊಂದಿಗೆ ನಮ್ರತೆಯಿಂದ ನಡೆದುಕೊಳ್ಳುತ್ತಾನೆ.
೨. ಪ್ರೇಮಭಾವ
ಅವನು ಸಾಧಕರ ಮಕ್ಕಳೊಂದಿಗೆ ಹೊಂದಿಕೊಳ್ಳುತ್ತಾನೆ ಮತ್ತು ಅವರೊಂದಿಗೆ ಆಡುತ್ತಾನೆ. ಅವನು ಅವರಿಗೆ ತನ್ನ ಪಾಲಿನ ತಿಂಡಿಯನ್ನು ಕೊಡುತ್ತಾನೆ.
೪. ಸೇವೆಯ ಬಗ್ಗೆ ಒಲವು
ಅವನು ತನ್ನ ತಾಯಿಗೆ ಸೇವೆಯಲ್ಲಿ ಸಹಾಯ ಮಾಡುತ್ತಾನೆ. ಅವನಿಗೆ ಸೇವೆಯ ಬಗ್ಗೆ ಒಲವಿದೆ.
೩. ವ್ಯಷ್ಟಿ ಸಾಧನೆ
ಅವನ ನಾಮಜಪವನ್ನು ಭಾವಪೂರ್ಣವಾಗಿ ಮಾಡುತ್ತಾನೆ ಹಾಗೂ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತಾನೆ. ಅವನು ರಾಮರಕ್ಷಾ ಸ್ತೋತ್ರ ಮತ್ತು ಹನುಮಾನ ಚಾಲಿಸಾವನ್ನು ತಪ್ಪಿಲ್ಲದೇ ಹೇಳುತ್ತಾನೆ. ಅವನು ಸತ್ಸಂಗದಲ್ಲಿ ಆನಂದದಿಂದ ಭಾಗವಹಿಸುತ್ತಾನೆ.
೫. ತಪ್ಪುಗಳ ಬಗ್ಗೆ ಸಂವೇದನಶೀಲತೆ
ಒಂದು ಪ್ರಸಂಗದಲ್ಲಿ ಅವನು ಸುಳ್ಳು ಮಾತನಾಡಿದ್ದನು. ಅವನಿಗೆ ಆ ಬಗ್ಗೆ ಅರಿವು ಮಾಡಿಕೊಟ್ಟಾಗ ಅವನಿಗೆ ಬಹಳ ದುಃಖವಾಯಿತು. ಅವನು ಆ ತಪ್ಪಿಗಾಗಿ ಕ್ಷಮಾಯಾಚನೆ ಮಾಡಿ ಪ್ರಾಯಶ್ಚಿತ್ತವನ್ನು ತೆಗೆದುಕೊಂಡನು. ಅವನು ತಪ್ಪನ್ನು ತಕ್ಷಣ ಸ್ವೀಕರಿಸಿ ಸುಧಾರಣೆ ಮಾಡಿಕೊಳ್ಳುತ್ತಾನೆ, ಹಾಗೆಯೇ ಇತರ ಯಾರಿಂದಾದರೂ ತಪ್ಪಾದರೆ ಅದನ್ನು ಅವರಿಗೆ ನಿರ್ಭಯದಿಂದ ಹೇಳುತ್ತಾನೆ.
೬. ಧರ್ಮಾಚರಣೆಯ ಕೃತಿ
ಅವನು ಪ್ರತಿದಿನ ತಿಲಕವನ್ನು ಹಚ್ಚಿಕೊಳ್ಳುತ್ತಾನೆ. ಎಂದಾದರೂ ನಾನು ಅವನಿಗೆ ಹೇಳಲು ಮರೆತರೂ ಅವನು ನೆನಪಿನಿಂದ ತಿಲಕವನ್ನು ಹಚ್ಚಿಕೊಳ್ಳುತ್ತಾನೆ. ಅವನು ಆರತಿ ಮತ್ತು ನಮಸ್ಕಾರವನ್ನು ಯೋಗ್ಯ ಪದ್ಧತಿಯಲ್ಲಿ ಮಾಡುತ್ತಾನೆ.
೭. ಗುರುಗಳ ಬಗ್ಗೆ ಭಾವ
ಒಮ್ಮೆ ಅವನಿಗೆ ಅನಾರೋಗ್ಯವಿರುವಾಗ ನನಗೆ ಅವನ ಬಗ್ಗೆ ಕಾಳಜಿಯಾಗುತ್ತಿತ್ತು. ಆ ಸಮಯದಲ್ಲಿ ಅವನು ‘ಗುರುದೇವರಿದ್ದಾರೆ, ಅವರು ಎಲ್ಲವನ್ನೂ ನೋಡಿಕೊಳ್ಳುವರು’, ಎಂದು ಹೇಳುತ್ತಿದ್ದನು. ಅವನಿಗೆ ಆಪತ್ಕಾಲದ ಬಗ್ಗೆ ಹೇಳಿದಾಗ ‘ಗುರುದೇವರೇ ನೋಡಿಕೊಳ್ಳುತ್ತಾರೆ’, ಎಂದು ಅವನು ಹೇಳುತ್ತಾನೆ. ಅವನು ಮಾನಸ ಪೂಜೆಯನ್ನು ಮಾಡುವಾಗ ಸಾಕ್ಷಾತ್ ಗುರುದೇವರು ದರ್ಶನ ನೀಡಿರುವುದರ ಅನುಭೂತಿ ಅವನಿಗೆ ಬಂದಿದೆ.
– ಸೌ. ಬನಶಂಕರಿ (ತಾಯಿ), ಅಶೋಕ ನಗರ, ಶಿವಮೊಗ್ಗ. (೨೪.೫.೨೦೨೪)