ಎಲ್ಲಾ ರೀತಿಯ ಕೊಡು-ಕೊಳ್ಳುವ ಲೆಕ್ಕಾಚಾರಗಳಿಂದ ಮುಕ್ತವಾಗಿರಲು ತೀವ್ರ ಸಾಧನೆ ಮಾಡುವ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪರಾತ್ಪರ ಗುರು ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆ ಇವರ ಕೃಪೆಯಿಂದ ಶ್ರೀಚಿತ್‌ಶಕ್ತಿ (ಶ್ರೀಮತಿ) ಅಂಜಲಿ ಮುಕುಲ ಗಾಡಗೀಳ ಇವರ ಸೂಕ್ಷ್ಮ ಜಗತ್ತಿನ ವಿಷಯದ ಕುರಿತು ಅನುಭವಗಳನ್ನು ಈ ಲೇಖನಮಾಲೆಯಲ್ಲಿ ನಾವು ನೋಡುತ್ತಿದ್ದೇವೆ. ಕಳೆದ ವಾರದ ಸಂಚಿಕೆಯಲ್ಲಿ ನಾವು ಈ ಲೇಖನದ ಕೆಲವು ಭಾಗವನ್ನು ನೋಡಿದ್ದೇವೆ. ಈ ವಾರದ ಸಂಚಿಕೆಯಲ್ಲಿ ಮುಂದಿನ ಭಾಗವನ್ನು ನೋಡೋಣ.                         (ಭಾಗ ೧೬)

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/127813.html
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಗುರುದೇವರು ‘ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪಡೆದ ಸಾಧಕರಿಗೆ ಪುನಃ ಜನ್ಮ ಪಡೆಯಬೇಕಾಗಿಲ್ಲ’ ಎಂದು ಹೇಳಿರುವುದರಿಂದ ಆಧ್ಯಾತ್ಮಿಕ ಮಟ್ಟವನ್ನು ಹೆಚ್ಚಿಸುವುದರ ಮಹತ್ವವು ಗಮನಕ್ಕೆ ಬರುವುದು

ಶ್ರೀಮತಿ ಮಂಜು ಸಿಂಗ್‌ ಅವರ ನಿಧನದ ನಂತರ, ಅವರ ಲಿಂಗದೇಹವನ್ನು ಪರೀಕ್ಷಿಸುವಾಗ ನಾನು ಗುರುದೇವರಿಗೆ ಕೇಳಿದೆ, ‘ಈಗ ಶ್ರೀಮತಿ ಮಂಜು ಮರಳಿ ಭೂಮಿಗೆ ಜನ್ಮ ಪಡೆಯುತ್ತಾರಾ ? ಅದಕ್ಕೆ ಪರಾತ್ಪರ ಗುರು ಡಾಕ್ಟರರು ಹೇಳಿದರು, ‘ಅವಳು ಪುನಃ ಜನ್ಮ ಪಡೆಯುವರು; ಏಕೆಂದರೆ ಆಕೆಯ ಸಾಧನೆ ಅಪೂರ್ಣವಾಗಿ ಉಳಿದುಕೊಂಡಿದೆ. ಮೃತ್ಯುವಿನ ಸಮಯದಲ್ಲಿ ಆಕೆಯ ಆಧ್ಯಾತ್ಮಿಕ ಮಟ್ಟವು ಶೇ. ೫೦-೫೧ ರಷ್ಟಿತ್ತು. ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪಡೆದ ಸಾಧಕರಿಗೆ ಪುನಃ ಜನ್ಮ ಪಡೆಯಬೇಕಾಗಿಲ್ಲ.’ ಇದರಿಂದ ಉನ್ನತ ಆಧ್ಯಾತ್ಮಿಕ ಮಟ್ಟವನ್ನು ಪಡೆಯುವುದರ ಮಹತ್ವವು ನನ್ನ ಗಮನಕ್ಕೆ ಬಂದಿತು. ನಾವು ಈ ಜನ್ಮದಲ್ಲಿ ಸಾಧನೆ ಮಾಡುವ ಮೂಲಕ ಮಾನವ ಯೋನಿಯಿಂದ ಮುಕ್ತವಾಗಬೇಕು’, ಎಂದು ಅನಿಸಿತು.

೨. ‘ನಿಧನದ ನಂತರ ಶ್ರೀಮತಿ ಮಂಜು ಇವರ ಕೊಡು-ಕೊಳ್ಳುವ ಲೆಕ್ಕಾಚಾರ ಮತ್ತು ಪುನರ್ಜನ್ಮ,’ ಇದರ ಬಗ್ಗೆ ಗುರುದೇವರು ಹೇಳಿದ ಅಂಶಗಳು

‘ಮಂಜು ಇವರ ಜನ್ಮ ಸಾಮಾನ್ಯವಾಗಿ ಯಾವ ಅವಧಿಯಲ್ಲಿ ಆಗುವುದು ?’ ಎಂದು ನಾನು ಗುರುದೇವರಿಗೆ ಕೇಳಿದಾಗ, ”ಪತ್ನಿಯ ಕೊಡು-ಕೊಳ್ಳುವ ಲೆಕ್ಕಾಚಾರವು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಪತಿಯೊಂದಿಗೆ ಇರುತ್ತದೆ. ಈಗ ಪತಿಯು ಜನ್ಮಕ್ಕೆ ಬಂದ ನಂತರವೆ ಅವಳು ಜನ್ಮಕ್ಕೆ ಬರುತ್ತಾಳೆ; ಏಕೆಂದರೆ ನಾವು ಕೊಡು-ಕೊಳ್ಳುವ ಲೆಕ್ಕಾಚಾರವನ್ನು ತೀರಿಸಲು ಮಾತ್ರ ಜನ್ಮಕ್ಕೆ ಬರುತ್ತೇವೆ; ಪತಿ ಜನ್ಮಕ್ಕೆ ಬರುವವರೆಗೂ ಕಾಯಬೇಕು”, ಎಂದರು. ನಾನು, ”ಅಂದರೆ ಇದು ತುಂಬಾ ಕಠಿಣವಿದೆ; ಏಕೆಂದರೆ ಮಂಜು ಇವರ ಪತಿ ಇನ್ನೂ ಬದುಕಿದ್ದಾರೆ ಮತ್ತು ಚಿಕ್ಕವನಾಗಿದ್ದಾರೆ”, ಎಂದೆನು. ಅದಕ್ಕೆ ಗುರುದೇವರು, ‘ಅಷ್ಟೇ ಅವಧಿಯಲ್ಲಿ ಮಂಜು ಅವರು ನಿಧನದ ನಂತರವೂ ಒಳ್ಳೆಯ ಸಾಧನೆಯನ್ನು ಮಾಡಿದರೆ, ದೇವರ ಕೃಪೆಯಿಂದ ಅವಳಿಗೆ ಪುನಃ ಜನ್ಮಕ್ಕೆ ಬರುವ ಅಗತ್ಯವಿಲ್ಲ; ಏಕೆಂದರೆ ಅವಳು ಸ್ವಂತ ಸಾಧನೆಯ ಮೂಲಕ ಪತಿಯೊಂದಿಗೆ ಕೊಡುಕೊಳ್ಳುವ ಲೆಕ್ಕಾಚಾರಗಳಿಂದ ಮುಕ್ತವಾಗಿರುತ್ತಾಳೆ’’, ಎಂದರು. ಇದರಿಂದ ಸಾಧನೆಯ ಮಹತ್ವ ಗಮನಕ್ಕೆ ಬರುತ್ತದೆ.

೩. ಕೊಡು-ಕೊಳ್ಳುವ ಲೆಕ್ಕಾಚಾರದಿಂದ ಮುಕ್ತವಾಗಲು ದೇವರೊಂದಿಗೆ ಅನುಸಂಧಾನ ಹೆಚ್ಚಿಸುವುದು ಆವಶ್ಯಕ

ಗುರುದೇವರು ಹೇಳಿದರು, ”ಮಗಳ ಕೊಡು-ಕೊಳ್ಳುವ ಲೆಕ್ಕಾಚಾರವು ಮೊದಲು ತನ್ನ ತಂದೆ-ತಾಯಿರೊಂದಿಗೆ ಹೆಚ್ಚಿರುತ್ತದೆ. ಅವಳು ಮದುವೆಯಾದ ನಂತರ ಅವಳ ಹೆಚ್ಚಿನ ಕೊಡು-ಕೊಳ್ಳುವ ಲೆಕ್ಕಾಚಾರವು ತನ್ನ ಪತಿ ಮತ್ತು ಮಕ್ಕಳಾದ ನಂತರ ತನ್ನ ಮಕ್ಕಳೊಂದಿಗೆ ಇರುತ್ತದೆ.’’ ಇದರಿಂದ ನಾನು ತಿಳಿದ ಅಂಶವೆಂದರೆ, ‘ಬದುಕಿರುವಾಗಲೇ ಸಾಧನೆ ಮಾಡುವ ಮೂಲಕ ನಮ್ಮ ಮಕ್ಕಳು ಮತ್ತು ಪತಿ ಇವರ ಸಂದರ್ಭದ ಇಚ್ಛೆ ಆಕಾಂಕ್ಷೆಗಳು ಕೊನೆಗೊಳ್ಳಬೇಕು’.

ತೀವ್ರ ಸಾಧನೆ ಮಾಡುವ ಮೂಲಕವೇ ನಾವು ಸಂಬಂಧಿಕರು ಮತ್ತು ಸ್ನೇಹಿತರೊಂದಿಗಿನ ಕೊಡು-ಕೊಳ್ಳುವ ಲೆಕ್ಕಾಚಾರದಿಂದ ಮುಕ್ತರಾಗುತ್ತೇವೆ. ಇದಕ್ಕೆ ಗುರುಕೃಪೆ ಬೇಕು. ಗುರುವಿನ ಕೃಪೆಯಿಂದ ಜೀವನದ ಕಡೆಗೆ ನೋಡುವ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ಜೀವನದ ಬಗ್ಗೆ ನಮ್ಮ ನಿರೀಕ್ಷೆಗಳು ಮುಗಿದರೆ, ನಮ್ಮ ಜೀವನವು ದೈವೀ ಆಗುತ್ತದೆ. ದೇವರು ಕೊಡು-ಕೊಳ್ಳುವ ಲೆಕ್ಕಾಚಾರವನ್ನು ಮೀರಿ ಇರುವುದರಿಂದ ದೇವರೊಂದಿಗೆ ನಮ್ಮ  ಅನುಸಂಧಾನವು ಹೆಚ್ಚಾದಂತೆ, ನಾವು ಅವನ ಕೃಪೆಯ ವರದಹಸ್ತವನ್ನು ಪಡೆಯುತ್ತೇವೆ ಮತ್ತು ನಮ್ಮ ಜೀವನವು ಮಾಯೆಯ ಕೊಡು-ಕೊಳ್ಳುವ ಲೆಕ್ಕಾಚಾರದಿಂದ ಮುಕ್ತವಾಗುತ್ತದೆ, ಅಂದರೆ ನಿಜವಾದ ಅರ್ಥದಲ್ಲಿ ಯಶಸ್ವಿಯಾಗುತ್ತದೆ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಬೆಂಗಳೂರು. (೨೭.೨.೨೦೨೨)