Bangladesh Against Hindus : ಬಾಂಗ್ಲಾದೇಶದಲ್ಲಿ ‘ಇಸ್ಕಾನ್’ನ ಕಾರ್ಯದರ್ಶಿ ಸಹಿತ ೧೮ ಹಿಂದೂ ಸಂಘಟನೆಗಳ ಮೇಲೆ ದೇಶದ್ರೋಹದ ಅಪರಾಧ ದಾಖಲು !

  • ಬಾಂಗ್ಲಾದೇಶದ ಧ್ವಜದ ಮೇಲೆ ಇಸ್ಕಾನೀನ್ ಕೇಸರಿ ಧ್ವಜ ಹಾರಾಟದ ಆರೋಪ !

  • ಚಿತಗಾವದಲ್ಲಿ ಹಿಂದುತ್ವನಿಷ್ಠರ ಮೇಲೆ ಕ್ರಮ ಕೈಗೊಂಡಿರುವುದರಿಂದ ಹಿಂದುಗಳಿಂದ ಬಲವಾಗಿ ಪ್ರತಿಭಟನೆ !

ಢಾಕಾ (ಬಾಂಗ್ಲಾದೇಶ) – ಕೆಲವು ವಾರಗಳ ಹಿಂದೆ ಬಾಂಗ್ಲಾದೇಶದಲ್ಲಿನ ಹಿಂದೂ ನಾಯಕರಿಂದ ‘ಸನಾತನ ಪ್ರಭಾತ’ ಕ್ಕೆ, ಇಲ್ಲಿಯ ಮುಸಲ್ಮಾನರಷ್ಟೇ ಅಲ್ಲದೆ, ಸೈನ್ಯ, ಸರಕಾರ ಹಾಗೂ ಆಡಳಿತದವರು ಹಿಂದೂಗಳನ್ನು ನಾಶ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಇದು ಈಗ ಅರಿವಿಗೆ ಬರುತ್ತಿದೆ. ‘ಇಸ್ಕಾನ್’ನ ಬಾಂಗ್ಲಾದೇಶದ ಮುಖ್ಯಸ್ಥರಲ್ಲಿ ಒಬ್ಬರಾದ ಚಿತೆಗಾವನ ಇಸ್ಕಾನ್‌ನ ಬಾಂಗ್ಲಾದೇಶದಲ್ಲಿನ ಕಾರ್ಯದರ್ಶಿ ಚಿನ್ಮಯ ದಾಸ ಬ್ರಹ್ಮಚಾರಿ ಇವರ ವಿರುದ್ಧ ದೇಶದ್ರೋಹದ ದೂರು ದಾಖಲಿಸಲಾಗಿದೆ. ಅವರೊಬ್ಬರೇ ಅಲ್ಲದೆ, ಇನ್ನು ೧೮ ಇತರ ಹಿಂದುತ್ವನಿಷ್ಠ ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಕೂಡ ದೂರು ದಾಖಲಿಸಲಾಗಿದೆ. ಸರಕಾರದಿಂದ ಕೈಗೊಳ್ಳಲಾದ ಕಾರ್ಯಾಚರಣೆಯ ವಿರುದ್ಧ ನವಂಬರ್ ೧ ರಿಂದ ಹಿಂದುಗಳು ಪ್ರತಿಭಟಿಸುತ್ತಿದ್ದಾರೆ.

ಚಿನ್ಮಯ ದಾಸ್ ಇವರು ಅಕ್ಟೋಬರ್ ೨೫ ರಂದು ಚಿತಗಾವದಲ್ಲಿ ಒಂದು ಮೋರ್ಚಾದ ಆಯೋಜನೆ ಮಾಡಿದ್ದರು. ಆ ಸಮಯದಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜದ ಮೇಲೆ ‘ಇಸ್ಕಾನ್’ ನ ಕೇಸರಿ ಧ್ವಜ ಹಾರಿಸಿರುವುದಾಗಿ ಸುಳ್ಳು ಆರೋಪಿಸಲಾಗಿದೆ. ಇದರಿಂದ ಈ ದ್ವಜ ಕೀಳಾಗಿ ನೋಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ೨ ಜನರನ್ನು ಬಂಧಿಸಲಾಗಿದೆ. ದಾಸ್ ಹಿಂದುಗಳ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದಕ್ಕಾಗಿ ಸತತವಾಗಿ ಆಂದೋಲನ ಮತ್ತು ಪ್ರತಿಭಟನೆ ಮಾಡುತ್ತಾರೆ.

ಚಂದ್ರ ಮತ್ತು ನಕ್ಷತ್ರ ಇರುವ ಧ್ವಜ ಬಾಂಗ್ಲಾದೇಶದ ರಾಷ್ಟ್ರಧ್ವಜವಲ್ಲ ! – ಚಿನ್ಮಯ ದಾಸ

ದಾಸ್ ಇವರ ವಿರುದ್ಧ ನಡೆದಿರುವ ಕಾರ್ಯಾಚರಣೆಯ ಕುರಿತು ಅವರು, ಆಂದೋಲನದ ದಿನದಂದು ಕೆಲವು ಜನರು ಚಂದ್ರ ಮತ್ತು ನಕ್ಷತ್ರ ಇರುವ ಧ್ವಜದ ಮೇಲೆ ಕೇಸರಿ ಧ್ವಜ ಹಾರಿಸಿದ್ದರು. ಚಂದ್ರ ಮತ್ತು ನಕ್ಷತ್ರ ಇರುವ ಧ್ವಜ ಬಾಂಗ್ಲಾದೇಶದ ರಾಷ್ಟ್ರಧ್ವಜವಲ್ಲ. ಧ್ವಜ ಹಾರಿಸಿದವರು ಯಾರು, ಇದು ನನಗೆ ತಿಳಿದಿಲ್ಲ; ಆದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಸ್ಲಾಮಿ ಬಾಂಗ್ಲಾದೇಶ ಸರಕಾರದಿಂದ ಹಿಂದುತ್ವನಿಷ್ಠರನ್ನು ಸಿಲುಕಿಸುವ ಪ್ರಯತ್ನ ಮಾಡುವುದು, ಇದರಲ್ಲಿ ಆಶ್ಚರ್ಯವೇನು ?